"ನಮ್ಮ ಜಾಗ.. ಯಾರಿಗೋ ಹೆದರಿಕೊಂಡು ನಾವ್ಯಾಕೆ ಬರಬೇಕ್ರಿ ?": 'ಡಂಕಿ', 'ಸಲಾರ್'ಗೆ 'ಕಾಟೇರ' ಟಕ್ಕರ್!

ದರ್ಶನ್ ಸಿನಿಮಾ ರಿಲೀಸ್ ಆಗುತ್ತಿದೆ ಅಂದರೆ, ಥಿಯೇಟರ್‌ನಲ್ಲಿ ಹಬ್ಬ. ಫಸ್ಟ್ ಡೇ ಫಸ್ಟ್ ಶೋ ಚಾಲೆಂಜಿಂಗ್ ಸ್ಟಾರ್ ಸಿನಿಮಾ ನೋಡುವುದಕ್ಕೆ ನಕು ನುಗ್ಗಲು ಕಾಮನ್ ಆಗಿರುತ್ತೆ. ಕಟೌಟ್ ಅಂತೆ, ಅದಕ್ಕೆ ಹೂವಿನ ಹಾರ, ಹಾಲಿನ ಅಭಿಷೇಕ ಅಂತೆ. ಪಟಾಕಿ ಸಿಡಿಸಿ ಸಂಭ್ರಮ ಅಂತೆ ಇವೆಲ್ಲವೂ ಮಿಸ್ ಆಗುವುದಕ್ಕೆ ಸಾಧ್ಯವೇ ಇಲ್ಲ.

ಆದರೆ, ಈ ಬಾರಿ ಎಲ್ಲವೂ ಕೊಂಚ ಜಾಸ್ತಿನೇ ಇರುತ್ತೆ ಅಂತ ಅನಿಸುತ್ತಿದೆ. ಅದಕ್ಕೆ ದರ್ಶನ್ 'ಕಾಟೇರ' ಸಿನಿಮಾ ಪ್ರಚಾರದ ಮೇಲೆ ಆಡಿದ ಮಾತುಗಳು. ಡಿಸೆಂಬರ್ 16ರಂದು 'ಕಾಟೇರ' ಸಿನಿಮಾ ಟ್ರೈಲರ್ ರಿಲೀಸ್ ಆಗುತ್ತಿದೆ. ಎರಡು ವಾರಗಳ ಬಳಿಕ ಅಂದರೆ, ಡಿಸೆಂಬರ್ 29ರಂದು ಸಿನಿಮಾನೇ ರಿಲೀಸ್ ಆಗುತ್ತಿದೆ.

Darshan indirect gave answers to releasing Kaatera just after Salaar and Dunki release

'ಸಲಾರ್', 'ಡಂಕಿ' ಎರಡು ಪ್ಯಾನ್ ಇಂಡಿಯಾ ಸಿನಿಮಾಗಳ ಬಿಡುಗಡೆಯಾಗಿ ಒಂದು ವಾರದೊಳಗೆ 'ಕಾಟೇರ' ರಿಲೀಸ್ ಮಾಡೋಕೆ ಹೊರಟಿದ್ದಾರೆ. ಎರಡು ಬಿಗ್ ಸಿನಿಮಾ ಮಧ್ಯೆ 'ಕಾಟೇರ' ಬೇಡವಾಗಿತ್ತು ಅಂತ ಮಾತಾಡಿಕೊಂಡವರಿದ್ದಾರೆ. ಅಷ್ಟಾಗಿಯೂ ಡಿಸೆಂಬರ್ 29ಕ್ಕೆ ಯಾಕೆ ರಿಲೀಸ್ ಮಾಡಿದ್ದು? ಅನ್ನೋದನ್ನು ದರ್ಶನ್ ರಿವೀಲ್ ಮಾಡಿದ್ದಾರೆ.

"ಡಿಸೆಂಬರ್ 29ಕ್ಕೆ ಯಾಕೆ ರಿಲೀಸ್ ಮಾಡುತ್ತಿದ್ದೇವೆ ಅಂದ್ರೆ, ನಮ್ಮ ಸಿನಿಮಾ, ನಮ್ಮ ಜಾಗವಿದು. ಯಾರಿಗೋ ಹೆದರಿಕೊಂಡು ನಾವ್ಯಾಕೆ ಬರಬೇಕ್ರಿ. ನಮ್ಮ ಮನೆಗೆ ಬರೋಕೆ ಅವರಿಗೆ ಹೆದರಿಕೆ ಇರಬೇಕು. ನಮಗ್ಯಾಕೆ ಹೆದರಿಕೆ. ನಮ್ಮ ಕನ್ನಡ ಜನ ಇದ್ದಾರಾ ಇಲ್ಲ ಅಂತ ನಮಗೆ ಡೌಟ್ ಬಂದು ಬಿಡಬೇಕು. ಕನ್ನಡ ಸಿನಿಮಾ ಚೆನ್ನಾಗಿದ್ದಾಗ ಯಾವಾಗಲೂ ಕನ್ನಡಿಗರು ಕೈ ಹಿಡಿದೇ ಹಿಡಿಯುತ್ತಾರೆ." ಎಂದು ಆತ್ಮವಿಶ್ವಾಸದಿಂದಲೇ ದರ್ಶನ್ ಹೇಳಿದ್ದಾರೆ.

ಇಷ್ಟೇ ಅಲ್ಲದೆ 'ಕಾಟೇರ' ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ. ಇದೊಂದು ಅಪ್ಪಟ ಕನ್ನಡ ಸಿನಿಮಾ ಅಂತಾನೂ ಹೇಳಿದ್ದಾರೆ. "ನಾವು ಯಾವುದೇ ಪ್ಯಾನ್ ಇಂಡಿಯಾ ಸಿನಿಮಾ ಮಾಡಿಲ್ಲ ಸ್ವಾಮಿ. ಅಪ್ಪಟ ಕನ್ನಡ ಸಿನಿಮಾ. ಕರ್ನಾಟಕದ ಜನತೆಗೋಸ್ಕರ ಮಾಡಿದ ಸಿನಿಮಾ ಅಂತ ಹೇಳುತ್ತೇನೆ." ಎಂದು ದರ್ಶನ್ ಹೇಳಿದ್ದಾರೆ.

Darshan indirect gave answers to releasing Kaatera just after Salaar and Dunki release

ಇನ್ನು 'ಕಾಟೇರ' ಸಿನಿಮಾ ತಡವಾಗೋದಕ್ಕೆ ಕಾರಣವೇನು? ಅನ್ನೋದನ್ನು ಇದೇ ವೇಳೆ ರಿವೀಲ್ ದರ್ಶನ್ ಮಾಡಿದ್ದಾರೆ. "ನಮ್ಮ ಪ್ರಡ್ಯೂಸರ್‌ಗೆ ಥ್ಯಾಂಕ್ಸ್ ಹೇಳುತ್ತೀನಿ. ಈ ಸಿನಿಮಾ ಸುಮ್ಮನೆ, ಅವರ ಡೇಟ್ ಸಿಕ್ಕಿಲ್ಲ ಅಂತೆಲ್ಲ ತಡವಾಗಿಲ್ಲ. ಎರಡು ಹಳ್ಳಿಯನ್ನು ಕ್ರಿಯೇಟ್ ಮಾಡುವುದು ಇತ್ತಲ್ಲ. ಒಂದು ಹಳ್ಳಿ ಆದ ಕೂಡಲೇ ಅದನ್ನೇ ಬದಲಾಯಿಸಿ, ಇನ್ನೊಂದು ಹಳ್ಳಿ ಮಾಡಬಹುದಿತ್ತು. ಇಲ್ಲ ಹಂಗೆಲ್ಲ ಆಗಲ್ಲ ಅಂತ ಅದಕ್ಕೆ ಎರಡೆರಡು ತಿಂಗಳು ಕೂರಿಸಿದರು. ಎರಡು ತಿಂಗಳು ಡ್ರೈವರ್ ಆಗಿ ಆದರೂ ಇಟ್ಕೊಳ್ಳಿ ಮನೆಗೆ ಕೂರುವುದಕ್ಕೆ ಆಗೋದಿಲ್ಲ ಅಂತ. ಅದೂ ಮಾಡಲಿಲ್ಲ. ಇವರನ್ನು ಒಪ್ಪಿಸೋದಷ್ಟೇ ಕಷ್ಟ. ಒಪ್ಪಿಸಿದ ಮೇಲೆ ಸಿನಿಮಾ ಆಗೋದೇ ಗೊತ್ತಾಗಲ್ಲ" ಎಂದು ದರ್ಶನ್ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಬಗ್ಗೆ ಹೊಗಳಿ ಮಾತಾಡಿದ್ದಾರೆ.

ಅಂದ್ಹಾಗೆ ದರ್ಶನ್ ಇನ್ನೂ ಸಿನಿಮಾವನ್ನು ಪೂರ್ತಿಯಾಗಿ ನೋಡಿಲ್ಲ ಎಂದು ಹೇಳಿಕೊಂಡಿದ್ದಾರೆ. ಡಬ್ಬಿಂಗ್ ಮಾಡುವಾಗ ಸ್ವಲ್ಪ ನೋಡಿದ್ದು ಬಿಟ್ಟರೆ, ಇಡೀ ಸಿನಿಮಾ ನೋಡಿಲ್ಲ. ಡಿಸೆಂಬರ್ 29ಕ್ಕೆ ಜನರೊಂದಿಗೆ ಕೂತು ನೋಡುತ್ತೇನೆ ಎಂದಿದ್ದಾರೆ. "ಡಿಸೆಂಬರ್ 29ಕ್ಕೆ ಕಾಟೇರ ಬರುತ್ತಿದೆ. ಎಲ್ಲರೂ ನೋಡೋಣ. ನಿಮ್ಮ ಜೊತೆ ಸೇರಿಕೊಂಡು ನಾವು ನೋಡುತ್ತೇವೆ. ನಮಗೂ ಏನೂ ತೋರಿಸಿಲ್ಲ. ಅಲ್ಲಿ ಇಲ್ಲಿ ಡಬ್ಬಿಂಗ್ ಮಾಡಿ ನೋಡಿರಬಹುದು ಅಷ್ಟೇ." ಎಂದು ದರ್ಶನ್ ಸಿನಿಮಾ ನೋಡಲು ಆಹ್ವಾನ ಕೊಟ್ಟಿದ್ದಾರೆ.

More from Filmibeat

English summary
Darshan said will not fear of releasing Kaatera infront of Salaar and Dunki
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X