ದರ್ಶನ್ ಆರೋಗ್ಯದ ಬಗ್ಗೆ ನಿರ್ಮಾಪಕ ಮುನಿರತ್ನ ಏನಂತಾರೆ.?
Recommended Video

ಕಾರು ಅಪಘಾತದಲ್ಲಿ ನಟ ದರ್ಶನ್, ಪ್ರಜ್ವಲ್ ದೇವರಾಜ್ ಹಾಗೂ ದೇವರಾಜ್ ಗಾಯಗೊಂಡಿದ್ದರು. ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿಕಿತ್ಸೆ ಪಡೆಯುತ್ತಿದ್ದಾರೆ. ದರ್ಶನ್ ರವರ ಕೈ ಮೂಳೆ ಮುರಿದಿದ್ದು ಶಸ್ತ್ರ ಚಿಕಿತ್ಸೆ ಮಾಡಲಾಗಿದೆ.
ಗಾಯಗೊಂಡಿದ್ದ ದೇವರಾಜ್ ಹಾಗೂ ಪ್ರಜ್ವಲ್ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದ ಕಾರಣ, ಇಬ್ಬರನ್ನೂ ಇಂದು ಸಂಜೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಯಿತು.
ಇತ್ತ ದರ್ಶನ್ ಇನ್ನೂ ಆಸ್ಪತ್ರೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ. ದರ್ಶನ್ ಆರೋಗ್ಯ ವಿಚಾರಿಸಲು ಇಂದು ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ನಿರ್ಮಾಪಕ ಮುನಿರತ್ನ ಭೇಟಿ ಕೊಟ್ಟಿದ್ದರು.

ದರ್ಶನ್ ಯೋಗಕ್ಷೇಮ ವಿಚಾರಿಸಿದ ಬಳಿಕ, ''ದರ್ಶನ್ ಈಗ ಆರಾಮಾಗಿದ್ದಾರೆ. ಕೈಗೆ ಸ್ವಲ್ಪ ಪೆಟ್ಟಾಗಿದೆ ಎಂಬುದು ಬಿಟ್ಟರೆ, ಬೇರೆ ಯಾವ ಸಮಸ್ಯೆಯೂ ಇಲ್ಲ. ಶೀಘ್ರದಲ್ಲೇ ಅವರು ಗುಣಮುಖರಾಗುತ್ತಾರೆ. 'ಕುರುಕ್ಷೇತ್ರ'ದಲ್ಲಿ ದರ್ಶನ್ ಭಾಗದ ಚಿತ್ರೀಕರಣ ಮುಗಿದಿದೆ. ಡಬ್ಬಿಂಗ್ ಸಹ ಮುಗಿಸಿಕೊಟ್ಟಿದ್ದಾರೆ. ಗ್ರಾಫಿಕ್ಸ್ ಕೆಲಸದಿಂದಾಗಿ ಬಿಡುಗಡೆ ತಡವಾಗುತ್ತಿದೆ'' ಎಂದು ಮಾಧ್ಯಮಗಳ ಮುಂದೆ ನಿರ್ಮಾಪಕ ಮುನಿರತ್ನ ಹೇಳಿದರು.


Click it and Unblock the Notifications











