ದರ್ಶನ್ ಥೈಲ್ಯಾಂಡ್‌ಗೆ ಹೋಗಿ ಬಂದರೆ ಎಲ್ಲಾ ಮುಗಿದಂತೆ; ಈ ವರ್ಷವೇ 'ಡೆವಿಲ್' ಎಂಟ್ರಿ ಫಿಕ್ಸ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ ರಿಲೀಸ್ ಆಗದೆ ಎರಡು ವರ್ಷ ಆಗುತ್ತಿದೆ. ಎಲ್ಲವೂ ಸರಿಯಾಗಿ ಇದ್ದಿದ್ದರೆ, ಇಷ್ಟೊತ್ತಿಗಾಗಲೇ 'ಡೆವಿಲ್' ಸಿನಿಮಾ ರಿಲೀಸ್ ಆಗಿ, ಇನ್ನೊಂದು ಸಿನಿಮಾ ಬಿಡುಗಡೆಗೆ ಸಿದ್ಧವಾಗಿರಬೇಕಿತ್ತು. ಆದರೆ, ಹಾಗಲಿಲ್ಲ. ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಎರಡನೇ ಆರೋಪಿ ಜೈಲಿ ಸೇರಿದ್ದರಿಂದ ಸಿನಿಮಾದ ಶೂಟಿಂಗ್ ಸುಮಾರು ಆರು ತಿಂಗಳ ಕಾಲ ಸ್ಥಗಿತಗೊಂಡಿತ್ತು. ರೆಗ್ಯೂಲರ್ ಜಾಮೀನಿನ ಮೇಲೆ ಹೊರ ಬರುತ್ತಿದ್ದಂತೆ ದರ್ಶನ್ ವೇಗವಾಗಿ ಶೂಟಿಂಗ್ ಮುಗಿಸುತ್ತಿದ್ದಾರೆ.

ದರ್ಶನ್ ಸಿನಿಮಾವನ್ನು ಮಿಲನ ಪ್ರಕಾಶ್ (ಪ್ರಕಾಶ್ ವೀರ್) ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಸಿನಿಮಾ ಕೆಲವು ತುಣುಕು ದರ್ಶನ್ ಅಭಿಮಾನಿಗಳ ಕುತೂಹಲವನ್ನು ದುಪ್ಪಟ್ಟು ಮಾಡಿವೆ. ಆದಷ್ಟು ಬೇಗ ಸಿನಿಮಾವನ್ನು ಕಣ್ತುಂಬಿ ಕೊಳ್ಳುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಇತ್ತ ದರ್ಶನ್ ಕೂಡ ಈ ವರ್ಷವೇ ಸಿನಿಮಾವನ್ನು ಬಿಡುಗಡೆ ಮಾಡುವುದಕ್ಕೆ ವೇಗವಾಗಿ ಶೂಟಿಂಗ್ ಮುಗಿಸುತ್ತಿದ್ದಾರೆ.

Darshan is travelling to Thailand for his Devil movie shooting as the final schedule

'ಡೆವಿಲ್' ಸಿನಿಮಾ ಕೊನೆಯ ಹಂತದ ಚಿತ್ರೀಕರಣಕ್ಕಾಗಿ ದರ್ಶನ್ ಥೈಲ್ಯಾಂಡ್ ಪ್ರವಾಸ ಮಾಡುತ್ತಿದ್ದಾರೆ. ಇಂದು (ಜುಲೈ 10) ರಾತ್ರಿಯೇ ದರ್ಶನ್ ಈ ಸಿನಿಮಾದ ಶೂಟಿಂಗ್‌ಗಾಗಿ ಥೈಲ್ಯಾಂಡ್ ಪ್ರವಾಸ ಮಾಡುತ್ತಿದ್ದಾರೆಂದು ವರದಿಗಳಾಗಿವೆ. ಇಷ್ಟೊತ್ತಿಗಾಗಲೇ ಥೈಲ್ಯಾಂಡ್‌ಗೆ ಪ್ರವಾಸ ಮಾಡಬೇಕಿತ್ತು. ವಿಚಾರಣೆ ಇದ್ದಿದ್ದರಿಂದ ದರ್ಶನ್ ಶೂಟಿಂಗ್ ಅನ್ನೂ ಮುಂದಕ್ಕೆ ಹಾಕಿದ್ದರು ಎಂದು ಹೇಳಲಾಗಿದೆ. ಹಾಗಿದ್ದರೆ, ಥೈಲ್ಯಾಂಡ್ ಸಿನಿಮಾ ಯಾವ ಭಾಗವನ್ನು ಶೂಟ್ ಮಾಡುತ್ತಾರೆ? ಎಂಬುವುದನ್ನು ತಿಳಿಯುವುದಕ್ಕೆ ಮುಂದೆ ಓದಿ.

ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಇಂದು (ಜುಲೈ 10) ವಿಚಾರಣೆ ಹಾಜರಾಗಿದ್ದರು. ಈ ಕೇಸ್‌ನಲ್ಲಿ ಆರೋಪಿಗಳಾಗಿರುವ ದರ್ಶನ್ ಹಾಗೂ ಅವರ ತಂಡದ ವಿಚಾರಣೆ ಇತ್ತು. ಹೀಗಾಗಿ ದರ್ಶನ್ 'ಡೆವಿಲ್' ಸಿನಿಮಾದ ಶೂಟಿಂಗ್ ಅನ್ನು ಮುಂದೂಡಿದ್ದರು. ಇಲ್ಲದೇ ಹೋದಲ್ಲಿ ದರ್ಶನ್ ಜುಲೈ 1 ರಂದೇ ಥೈಲ್ಯಾಂಡ್‌ಗೆ ಹಾರುತ್ತಿದ್ದರು ಎಂದು ಹೇಳಲಾಗುತ್ತಿದೆ. ಈಗ ಕೋರ್ಟ್‌ನಲ್ಲಿ ವಿಚಾರಣೆಗೆ ಹಾಜರಾದ ಬಳಿಕ ದರ್ಶನ್ ಮಧ್ಯರಾತ್ರಿ ಥೈಲ್ಯಾಂಡ್‌ಗೆ ಹಾರಲಿದ್ದಾರೆ.

ದರ್ಶನ್ 'ಡೆವಿಲ್' ಸಿನಿಮಾದ ಬಹುತೇಕ ಚಿತ್ರೀಕರಣ ಮುಗಿಸಿದ್ದಾರೆ. ಕೊನೆಯ ಹಂತದ ಶೂಟಿಂಗ್ ಅನ್ನು ಥೈಲ್ಯಾಂಡ್‌ನಲ್ಲಿ ಮಿಲನ ಪ್ರಕಾಶ್ ಇಟ್ಟುಕೊಂಡಿದ್ದರಿಂದ ವಿದೇಶಕ್ಕೆ ಪ್ರಯಾಣ ಮಾಡುತ್ತಿದ್ದಾರೆ. ವಿಚಾರಣೆಗೂ ಮುನ್ನವೇ ದರ್ಶನ್ ಥೈಲ್ಯಾಂಡ್ ಪ್ರವಾಸ ಮಾಡುವುದಕ್ಕೆ ಕೋರ್ಟ್‌ನಿಂದ ಅನುಮತಿಯನ್ನು ಪಡೆದಿದ್ದರು. ನ್ಯಾಯಾಲಯದಿಂದ ಅನುಮತಿ ಸಿಕ್ಕಿದ ಬಳಿಕ, ಜುಲೈ 10ರಂದು ಇದ್ದ ವಿಚಾರಣೆಯನ್ನು ಮುಗಿಸಿಕೊಂಡು ಪ್ರವಾಸ ಮಾಡುತ್ತಿದ್ದಾರೆ.

ಥೈಲ್ಯಾಂಡ್‌ನಲ್ಲಿ ದರ್ಶನ್ 'ಡೆವಿಲ್' ಸಿನಿಮಾದ ಹಾಡುಗಳ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಹಾಗೇ ಒಂದು ಸಾಹಸ ಸನ್ನಿವೇಶವನ್ನು ಚಿತ್ರೀಕರಣ ಮಾಡುತ್ತಿದ್ದಾರೆ. ಥೈಲ್ಯಾಂಡ್ ಶೂಟ್ ಮುಗಿದರೆ, ಬಹುತೇಕ ಚಿತ್ರೀಕರಣ ಮುಗಿದಂತೆ ಎಂದು ಹೇಳಲಾಗುತ್ತಿದೆ. ಗ್ಯಾಪ್‌ನಲ್ಲಿ ದರ್ಶನ್ ಈ ಸಿನಿಮಾ ಉಳಿದ ಕೆಲಸಗಳನ್ನು ಮುಗಿಸಿದ್ದಾರೆ ಎಂದೂ ವರದಿಯಾಗಿದೆ. ಹೀಗಾಗಿ 'ಡೆವಿಲ್' ಸಿನಿಮಾ ಇದೇ ವರ್ಷ ರಿಲೀಸ್ ಆಗೋದು ಪಕ್ಕಾ ಎಂದು ಹೇಳಲಾಗುತ್ತಿದೆ. ನಾಲ್ಕೈದು ತಿಂಗಳ ಒಳಗೆ ಸಿನಿಮಾ ಥಿಯೇಟರ್‌ಗೆ ಲಗ್ಗೆ ಇಡೋದು ಕನ್ಫರ್ಮ್ ಎನ್ನುತ್ತಿವೆ ಮೂಲಗಳು.

More from Filmibeat

Read more about: darshan actor
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X