"ಜೈಲಿನ ಫುಡ್‌ಗೆ ಜ್ವರನೂ ಬರುತ್ತೆ.. ಲಕ್ವನೂ ಹೊಡೆಯುತ್ತೆ"; ದರ್ಶನ್ ಪಾಡೇನು?
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಸದ್ಯ ನ್ಯಾಯಾಂಗ ಬಂಧನದಲ್ಲಿರುವ ದರ್ಶನ್ ಆರೋಪಿಯಾಗಿದ್ದರೂ ಜೈಲಿನಲ್ಲಿಯೇ ಇರಬೇಕಾಗಿದೆ. ಕಳೆದ ಕೆಲವುಗಳ ಹಿಂದಷ್ಟೇ ಮನೆಯೂಟಕ್ಕೆ ನ್ಯಾಯಾಲಯದಲ್ಲಿ ಮನವಿ ಮಾಡಿಕೊಂಡಿದ್ದರು. ಆದರೆ, ಕೋರ್ಟ್ ಈ ಮನವಿಯನ್ನು ತಿರಸ್ಕರಿಸಿತ್ತು.
ದರ್ಶನ್‌ಗೆ ಜೈಲೂಟ ಹಿಡಿಸುತ್ತಿಲ್ಲ. ಜೈಲೂಟ ತಿಂದು ಅಜೀರ್ಣ ಆಗುತ್ತಿದೆ ಎಂದು ದರ್ಶನ್ ಪರ ವಕೀಲರು ವಾದ ಮಂಡಿಸಿದ್ದರು. ಆದರೆ ನಾಳೆ (ಜುಲೈ 25) ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ಮನೆಯೂಟ ನೀಡುವ ಬಗ್ಗೆ ತೀರ್ಪು ಹೊರಬೀಳಲಿದೆ. ಇದೇ ವೇಳೆ ಜೈಲಿನಲ್ಲಿ ದರ್ಶನ್ ಜೊತೆಗಿದ್ದು ಸನ್ನಡತೆಯ ಆಧಾರದ ಮೇಲೆ ಬಂದಿರುವ ಜೈಲ್‌ಮೇಟ್ ತುರುವನೂರು ಸಿದ್ದಾರೂಢ ಜೈಲಿನೊಳಗಿನ ಸಂಗತಿಯನ್ನು ಹೊರಹಾಕಿದ್ದಾರೆ.

ದರ್ಶನ್ ವೀಕ್ ಆಗಿದ್ದಾರೆ. ವರ್ಕ್‌ಔಟ್ ಏನೂ ಮಾಡುತ್ತಿಲ್ಲ. ಜೈಲೂಟನೂ ಸರಿ ಹೋಗುತ್ತಿಲ್ಲ ಎಂದು ಪರಪ್ಪನ ಅಗ್ರಹಾರ ಜೈಲಿನ ಫುಡ್ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಇದೇ ವೇಳೆ ಅಭಿಮಾನಿಯಾಗಿ ದರ್ಶನ್‌ರನ್ನು ಭೇಟಿ ಮಾಡಿದ ಕ್ಷಣವನ್ನು ನೆನೆದಿದ್ದಾರೆ. "8-7-2024 ಸೋಮವಾರ ಬಾಸ್ ಭೇಟಿ ಮಾಡಿದ್ದನ್ನು ಹೇಗೆ ಮರೆಯುವುದಕ್ಕೆ ಆಗುತ್ತೆ. ಮರೆಯುವುದಕ್ಕೆ ಸಾಧ್ಯವೇ ಇಲ್ಲ. ನಾನು 9ನೇ ತಾರೀಕು ಬಿಡುಗಡೆ ಆಗುತ್ತೇನೆ. 8ನೇ ತಾರೀಕು ಅವರನ್ನು ಭೇಟಿ ಮಾಡುತ್ತೇನೆ. ಆದರೆ, ಒಬ್ಬ ಅಭಿಮಾನಿಯಾಗಿ ಆ ಜಾಗದಲ್ಲಿ ಅವರನ್ನು ನೋಡಿದ್ದು ಬೇಜಾರು. ಯಾಕಂದ್ರೆ ದರ್ಶನ್ ಸರ್ ದೊಡ್ಡ ಫ್ಯಾನ್ಸ್ ನಾನು." ಎಂದಿದ್ದಾರೆ.
ಇದೇ ವೇಳೆ ಡಿ ಬಾಸ್ ಜೈಲಿಗೆ ಬಂದಿದ್ದು ಬಹಳ ನೋವು ಕೊಟ್ಟಿದೆ ಎಂದಿದ್ದಾರೆ. "ಸರ್ ನಾನೇ ಅಲ್ಲ. ಬಳ್ಳಾರಿ ಜೈಲಿನಲ್ಲಿ ಎಷ್ಟು ಜನ ಬಂಧಿಗಳು ಇದ್ದಾರೋ ಅವರೆಲ್ಲರೂ ದರ್ಶನ್‌ಗೆ ಫ್ಯಾನ್. ಬಾಸ್ ಅಲ್ಲಿಗೆ ಹೋಗಿದ್ದು ಬಹಳ ನೋವು ಕೊಟ್ಟಿದೆ. ಅವರು ಅಪರಾಧ ಮಾಡಿದ್ದಾರೋ ಬಿಟ್ಟಿದ್ದಾರೋ ಅದನ್ನು ಕಾನೂನು ನೋಡಿಕೊಳ್ಳುತ್ತೆ. ನ್ಯಾಯಾಲಯ ನೋಡಿಕೊಳ್ಳುತ್ತೆ. ಅದನ್ನು ನೋಡಿಕೊಳ್ಳುವುದಕ್ಕೆ ಅಂತಲೇ ಜಡ್ಜ್ ಇರುತ್ತಾರೆ. ಅವರು ತೀರ್ಮಾನ ಮಾಡುತ್ತಾರೆ. ನಾವ್ಯಾರೂ ತೀರ್ಮಾನ ಮಾಡಬಾರದು. ನಾನು ಜೈಲಿಗೆ ಬರ್ತೀನಿ ಅಂತಲೇ ಅಂದುಕೊಂಡಿರಲಿಲ್ಲ. ಇನ್ನು ಬಾಸ್ ಬರುತ್ತಾರೆ ಅಂತ ಹೇಗೆ ಅಂದುಕೊಳ್ಳೋದು" ಎಂದಿದ್ದಾರೆ.

ಫಿಟ್ನೆಸ್‌ಗೆ ಅಲ್ಲಿ ಜಾಸ್ತಿ ಸಮಯ ಕೊಡುತ್ತಿಲ್ಲ. ಅಂದರೆ, ಅಲ್ಲಿ ವ್ಯಾಯಾಮ ಮಾಡುವಂತಹದ್ದು ಏನೂ ಇಲ್ಲ. ಅಲ್ಲಿ ಫುಡ್ ಸರಿಯಿಲ್ಲ. ಆ ಊಟ ತಿಂದರೆ ನಾಯಿ ಕೂಡ ಬದುಕಲ್ಲ. ಅನಿವಾರ್ಯವಾಗಿ ಜೀವ ಉಳಿಸಿಕೊಳ್ಳುವುದಕ್ಕೆ ಬದುಕ ಬೇಕಷ್ಟೆ. ಅವರು ದೇಹದಿಂದ ಸ್ವಲ್ಪ ಕುಗ್ಗಿದ್ದಾರೆ ಎಂದು ಶಿಕ್ಷೆ ಮುಗಿಸಿ, ಜೈಲಿನಿಂದ ಹೊರಬಂದ ದರ್ಶನ್ ಅಭಿಮಾನಿ ತುರುವನೂರು ಸಿದ್ದಾರೂಢ ಫಿಲ್ಮಿಬೀಟ್ ಜೊತೆ ಹಂಚಿಕೊಂಡಿದ್ದಾರೆ.
ಇದೇ ವೇಳೆ ಜೈಲಿನಲ್ಲಿ ಪ್ರತಿ ದಿನ ಬೆಳಗ್ಗೆ ಏನು ತಿಂಡಿ ಕೊಡುತ್ತಾರೆ ಅನ್ನೋದನ್ನು ಹೇಳಿದ್ದಾರೆ. "ಸೋಮವಾರ ಟೊಮ್ಯಾಟೊ ಬಾತ್, ಮಂಗಳವಾರ ಚಿತ್ರಾನ್ನ, ಬುಧವಾರ ಅವಲಕ್ಕಿ, ಗುರುವಾರ ಪುಳಿಯೋಗರೆ, ಶುಕ್ರವಾರ ಉಪ್ಪಿಟ್ಟು, ಶನಿವಾರ ವಾಂಗೀಬಾತ್, ಭಾನುವಾರ ಪಲಾವ್ ಇದು ಎಷ್ಟು ವರ್ಷ ಆದರೂ ಇದೇ ಇರುತ್ತೆ. ನಾನ್ ವೆಜ್ ಶುಕ್ರವಾರ ಕೊಡುತ್ತಾರೆ. ಬುಧವಾರ ಒಂದು ಮೊಟ್ಟೆ ಕೊಡುತ್ತಾರೆ." ಎಂದು ತುರುವನೂರು ಸಿದ್ದಾರೂಢ ಫಿಲ್ಮಿಬೀಟ್‌ಗೆ ಹೇಳಿದ್ದಾರೆ.
ಜೈಲಿನ ವಾತಾವರಣಕ್ಕೆ, ಫುಡ್‌ಗೆ ದರ್ಶನ್ ಕುಗ್ಗಿದ್ದಾರೆಂದು ಹೇಳಿದ್ದಾರೆ. " ತುಂಬಾ ಕುಗ್ಗಿದ್ದಾರೆ. ಬಾಡಿ ವೀಕ್ ಆಗಿದೆ. ಆ ಫುಡ್‌ಗೆ ಆ ವಾತಾವರಣಕ್ಕೆ ಜ್ವರನೂ ಬರುತ್ತೆ. ಲಕ್ವನೂ ಹೊಡೆಯುತ್ತೆ. ಅಂದ್ರೆ ಜನಗಳಿಗೆ. ದರ್ಶನ್ ಸರ್‌ಗೆ ಅಲ್ಲ. ಆರೋಗ್ಯ ಕಾಪಾಡಿಕೊಳ್ಳುವುದು ಅಲ್ಲಿ ತುಂಬಾನೇ ಕಷ್ಟ" ಎಂದಿದ್ದಾರೆ.


Click it and Unblock the Notifications











