2ನೇ ವೀಕೆಂಡ್‌ನಲ್ಲಿ ಮತ್ತೆ ಚಿಗುರಿದ 'ಕಾಟೇರ'; ಬಾಕ್ಸಾಫೀಸ್‌ನಲ್ಲಿ 9ನೇ ದಿನವೂ ಭರ್ಜರಿ ಕಲೆಕ್ಷನ್!

2023 ವರ್ಷದ ಕೊನೆಯಲ್ಲಿ 'ಕಾಟೇರ' ಸಿನಿಮಾವನ್ನು ಅದ್ಧೂರಿಯಾಗಿ ಬಿಡುಗಡೆ ಮಾಡಲಾಗಿತ್ತು. ಅಲ್ಲಿಂದ ಇಲ್ಲಿವರೆಗೂ 'ಕಾಟೇರ'ನ ಸದ್ದು ಜೋರಾಗಿಯೇ ಇದೆ. ರಾಜ್ಯದ ಯಾವುದೇ ಮೂಲೆಗೆ ಹೋದರೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ 'ಕಾಟೇರ' ಬಗ್ಗೆ ಚರ್ಚೆಯಾಗುತ್ತಿದೆ.

'ಕಾಟೇರ' ರಿಲೀಸ್ ಆಗಿ ಇಂದಿಗೆ (ಜನವರಿ 7) 10 ದಿನಗಳಾಗಿವೆ. ಕಳೆದ 9 ದಿನಗಳಿಂದಲೂ ಕರ್ನಾಟಕದ ಬಾಕ್ಸಾಫೀಸ್‌ನಲ್ಲಿ ಈ ಸಿನಿಮಾದ್ದೇ ಸದ್ದು ಜೋರಾಗಿದೆ. ಈ ಸಿನಿಮಾ ಮೂಲಕ ಮತ್ತೆ ದರ್ಶನ್‌ ವೃತ್ತಿ ಬದುಕಿಗೆ ದೊಡ್ಡ ಬ್ರೇಕ್ ಸಿಕ್ಕಿದೆ. ಅಪ್ಪಟ ಕನ್ನಡ ಸಿನಿಮಾವೊಂದು 100 ಕೋಟಿ ರೂಪಾಯಿ ಕಲೆಕ್ಷನ್ ಮಾಡದೇ ಅದೆಷ್ಟೇ ದಿನಗಳಾಗಿತ್ತು. ಅದೀಗ ಈಡೇರಿದೆ.

 Darshan Kaatera Movie 9th day Box office Collection report

ಸಿಂಗಲ್ ಸ್ಕ್ರೀನ್, ಮಲ್ಟಿಪ್ಲೆಕ್ಸ್ ಎರಡರಲ್ಲೂ 'ಕಾಟೇರ' ಸಿನಿಮಾ ಭರ್ಜರಿಯಾಗಿ ಸದ್ದು ಮಾಡುತ್ತಿದೆ. ಮೊದಲ ವಾರ 'ಕಾಟೇರ' ಅಬ್ಬರ ನೋಡಿ ಕನ್ನಡ ಸಿನಿಮಾ ಮಂದಿನೇ ಕಂಗಾಲಾಗಿದ್ದರು. 2ನೇ ವಾರದ ಮಧ್ಯದಲ್ಲಿ ಕೊಂಚ ಮಟ್ಟಿಗೆ ಕಲೆಕ್ಷನ್ ಡ್ರಾಪ್ ಆಗಿದ್ದರೂ, ಎರಡನೇ ವೀಕೆಂಡ್‌ನಲ್ಲಿ ಮತ್ತೆ ಚಿಗುರಿದೆ. ನಿನ್ನೆ ಶನಿವಾರ (ಜನವರಿ 6) ಮತ್ತೆ 'ಕಾಟೇರ' ಗಳಿಕೆಯಲ್ಲಿ ಏರಿಕೆ ಕಂಡಿದೆ.

9ನೇ ದಿನದ ಶನಿವಾರ 'ಕಾಟೇರ' ಎಷ್ಟು ಅನ್ನೋದು ಹೊರಬಿದ್ದಿದೆ. ಸಿನಿಮಾದ ಬಾಕ್ಸಾಫೀಸ್ ಕಲೆಕ್ಷನ್ ಬಗ್ಗೆ ಹೇಳುವ sacnilk 'ಕಾಟೇರ' ನೆಟ್ ಕಲೆಕ್ಷನ್ ಬಗ್ಗೆ ವರದಿ ಮಾಡಿದೆ. ಇದರ ಪ್ರಕಾರ, 9ನೇ ದಿನ 'ಕಾಟೇರ' 3.25 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಹಾಗೇ ಗ್ರಾಸ್ ಕಲೆಕ್ಷನ್ ಅಂದಾಜು ಆರೂವರೆ ಕೋಟಿ ರೂಪಾಯಿ ಆಗಿರಬಹುದು ಎಂದು ಕನ್ನಡದ ವಿತರಕರ ವಲಯ ಅಭಿಪ್ರಾಯ ಪಟ್ಟಿದೆ.

 Darshan Kaatera Movie 9th day Box office Collection report

ಈ 9 ದಿನಗಳಲ್ಲಿ 'ಕಾಟೇರ' ಗ್ರಾಸ್ ಕಲೆಕ್ಷನ್ 110 ಕೋಟಿ ರೂಪಾಯಿ ಅಧಿಕ ಎಂದು ಹೇಳಲಾಗುತ್ತಿದೆ. ಹಾಗೇ sacnilk ಪ್ರಕಾರ, ಈ ಸಿನಿಮಾ 50.42 ಕೋಟಿ ರೂಪಾಯಿ ನೆಟ್ ಪ್ರಾಫಿಟ್ ಎಂದು ಹೇಳಲಾಗುತ್ತಿದೆ. ಅಪ್ಪಟ ಕನ್ನಡ ಸಿನಿಮಾವೊಂದು ಕರ್ನಾಟಕದಲ್ಲಿಯೇ ಇಷ್ಟು ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡಿದ್ದು, ಸಿನಿಮಾ ಮಂದಿಗೆ ಹೊಸ ಹುರುಷು ನೀಡಿದೆ.

ಹೊಸ ವರ್ಷಕ್ಕೆ ಕನ್ನಡ ಚಿತ್ರರಂಗದ ಮತ್ತೆ 'ಕಾಟೇರ' ಚೈತನ್ಯ ನೀಡಿದೆ. ಹೀಗಾಗಿ ಒಂದೊಂದಾಗೇ ದೊಡ್ಡ ದೊಡ್ಡ ಸಿನಿಮಾಗಳು ರಿಲೀಸ್‌ಗೆ ಸಜ್ಜಾಗುತ್ತಿವೆ. ಸದ್ಯ 'ಕಾಟೇರ' ಸಿನಿಮಾವನ್ನು ವಿದೇಶದಲ್ಲೂ ಬಿಡುಗಡೆ ಮಾಡಲಾಗಿದೆ. ಅಲ್ಲಿಂದಲೂ ಸಿನಿಮಾ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿವೆ. ಮುಂದಿನ ದಿನಗಳಲ್ಲಿ ಈ ಸಿನಿಮಾದ ಕಲೆಕ್ಷನ್ ಎಷ್ಟಾಗಬಹುದು? ಕರ್ನಾಟಕ ಬಾಕ್ಸಾಫೀಸ್‌ನಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸುತ್ತಾ? ಅನ್ನೋ ಪ್ರಶ್ನೆ ಎದುರಾಗಿದೆ.

More from Filmibeat

English summary
Darshan movie Kaatera collection 6.4 Crore in 9th day:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X