'ಕಾಟೇರ' ಸಕ್ಸಸ್ ಪಾರ್ಟಿ ಪ್ರಕರಣ ಜೆಟ್‌ಲಾಗ್ ಪಬ್‌ನಲ್ಲಿ ಮದ್ಯ ಮಾರಾಟಕ್ಕೆ ನಿಷೇಧ; ಎಷ್ಟು ದಿನ?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ 'ಕಾಟೇರ' ಬಾಕ್ಸಾಫೀಸ್‌ನಲ್ಲಿ ಅಬ್ಬರಿಸುವುದನ್ನು ಇನ್ನು ನಿಲ್ಲಿಸಿಲ್ಲ. ಸಿನಿಮಾ ಬಿಡುಗಡೆಯಾದ ನಾಲ್ಕನೇ ವಾರದಲ್ಲೂ ಸಿನಿಮಾದ ಕಲೆಕ್ಷನ್ ಜೋರಾಗಿಯೇ ಇದೆ. ಒಂದ್ಕಡೆ ಸಿನಿಮಾ ಸೆಲೆಬ್ರೆಷನ್ ಜೋರಾಗಿದ್ದರೆ, ಇನ್ನೊಂದು ಕಡೆ ವಿವಾದದಲ್ಲೂ ಸಿಕ್ಕಿಕೊಂಡಿದ್ದರು.

'ಕಾಟೇರ' ಸಿನಿಮಾಗೆ ಪ್ರೇಕ್ಷಕರಿಂದ ಅದ್ಭುತ ಬೆಂಬಲ ಕಂಡ ಬೆನ್ನಲ್ಲಿ ದರ್ಶನ್ ಹಾಗೂ ಚಿತ್ರರಂಗದ ಆತ್ಮೀಯರು ತಡರಾತ್ರಿ ಪಾರ್ಟಿ ಮಾಡಿದ ಆರೋಪ ಬಂದಿತ್ತು. ದರ್ಶನ್ ಜೊತೆಗೆ ಮಧ್ಯರಾತ್ರಿ ನಡೆದ ಪಾರ್ಟಿಯಲ್ಲಿ ಧನಂಜಯ್, ಅಭಿಷೇಕ್ ಅಂಬರೀಶ್, ಚಿಕ್ಕಣ್ಣ, ಸತೀಶ್ ನೀನಾಸಂ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಹೆಸರು ಕೇಳಿ ಬಂದಿತ್ತು. ಈ ಸಂಬಂಧ ದರ್ಶನ್ ಸೇರಿದಂತೆ ಚಿತ್ರರಂಗದ ಸೆಲೆಬ್ರೆಟಿಗಳಿಗೆ ನೋಟಿಸ್ ನೀಡಲಾಗಿತ್ತು.

Darshan Kaatera success party case: Jetlag Pub cant sell liquor for the next 25 days

ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಸುಬ್ರಹ್ಮಣ್ಯ ನಗರ ಪೊಲೀಸ್​ ಠಾಣೆಯಲ್ಲಿ ದರ್ಶನ್ ಹಾಗೂ ಪಾರ್ಟಿಯಲ್ಲಿ ಭಾಗಿಯಾದವರ ವಿಚಾರಣೆ ನಡೆದಿತ್ತು. ಬಳಿಕ ದರ್ಶನ್ ಪಾರ್ಟಿ ಮಾಡಿದ್ದ ಬೆಂಗಳೂರಿನ ಜೆಟ್‌ಲಾಗ್ ಪಬ್‌ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿ ಆದೇಶದ ಮೇಲೆ ಮದ್ಯ ಮಾರಾಟ ಮಾಡುವುದಕ್ಕೆ ನಿಷೇಧ ಹೇರಲಾಗಿದೆ ಎಂದು ವರದಿಯಾಗಿದೆ.

ಬೆಂಗಳೂರಿನ ಜೆಟ್‌ ಲಾಗ್ ಪಬ್‌ನಲ್ಲಿ ಬೆಳಗಿನ ಜಾವದವರೆಗೂ ಪಾರ್ಟಿ ಮಾಡಿದ ಆರೋಪ ಎದುರಿಸುತ್ತಿರುವ 8 ಕನ್ನಡದ ನಟರ ವಿಚಾರಣೆ ನಡೆದಿತ್ತು. ಈ ಬೆನ್ನಲ್ಲೇ ಈಗ ಜೆಟ್ ಲಾಗ್ ಪಬ್‌ಗೆ ಜಿಲ್ಲಾಧಿಕಾರಿ ಶಾಕ್ ಕೊಟ್ಟಿದ್ದಾರೆ. ಮುಂದಿನ 25 ದಿನಗಳ ಕಾಲ ಜೆಟ್‌ಲಾಗ್‌ ಪಬ್‌ನಲ್ಲಿ ಮದ್ಯ ಮಾರಾಟ ಮಾರುವುದಕ್ಕೆ ನಿಷೇಧ ಹೇರಲಾಗಿದೆ.

ಅಬಕಾರಿ ನಿಯಮವನ್ನು ಗಾಳಿಗೆ ತೂರಿದ್ದು ಎಫ್‌ಐಆರ್‌ನಲ್ಲಿ ದಾಖಲಾಗಿದೆ. ಈ ಬೆನ್ನಲ್ಲೇ ಜೆಟ್ ಲಾಗ್ ಪಬ್ ವಿರುದ್ಧ ಇಂತಹ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ. ಇದರೊಂದಿಗೆ ಮೂರು ಬಾರಿ ನಿಯಮ ಉಲ್ಲಂಘನೆ ಮಾಡಿದರೆ, ಮದ್ಯ ಮಾರಾಟದ ಪರವಾನಗಿ ರದ್ದು ಮಾಡುವ ಸಾಧ್ಯತೆನೂ ಇದೆ.

Darshan Kaatera success party case: Jetlag Pub cant sell liquor for the next 25 days

ಜೆಟ್‌ ಲಾಗ್ ಪಬ್ ವಿರುದ್ಧ ಇದೇ ಮೊದಲ ಬಾರಿಗೆ ದೂರು ಬಂದ ಹಿನ್ನೆಲೆಯಲ್ಲಿ 25 ದಿನಗಳ ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿದೆ. ಇನ್ನೂ ಎರಡು ಬಾರಿ ನಿಯಮವನ್ನು ಉಲ್ಲಂಘಿಸಿದರೆ, ಶಾಶ್ವತವಾಗಿ ಮದ್ಯ ಮಾರಾಟದ ಪರವಾನಗಿಯನ್ನು ರದ್ದು ಮಾಡುವ ಸಾಧ್ಯತೆಯಿದೆ. ಇತ್ತ ಎಂಟು ಮಂದಿ ನಟರ ಪೊಲೀಸ್ ವಿಚಾರಣೆ ಅಪ್‌ಡೇಟ್ ಹೊರಬೀಳಬೇಕಿದೆ.

ಸದ್ಯ ದರ್ಶನ್ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಸಂಕ್ರಾಂತಿಗೆ ಪರಭಾಷಾ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಥಿಯೇಟರ್‌ಗೆ ಎಂಟ್ರಿ ಕೊಟ್ಟರೂ, 'ಕಾಟೇರ' ಮಾತ್ರ ಅಲ್ಲಾಡುತ್ತಿಲ್ಲ. ಬಾಕ್ಸಾಫೀಸ್‌ನಲ್ಲಿ 190 ಕೋಟಿ ರೂಪಾಯಿ ಕಲೆಕ್ಷನ್ ಮಾಡಿರುವ ಈ ಸಿನಿಮಾ ಇನ್ನೇನು 200 ಕೋಟಿ ರೂಪಾಯಿ ಕ್ಲಬ್ ಸೇರಲಿದೆ. ಆ ಖುಷಿಯಲ್ಲಿ ದರ್ಶನ್ ಇದ್ದಾರೆ.

More from Filmibeat

English summary
Darshan Kaatera success party case update:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X