ಹಣ್ಣು, ಆಧಾರ್ ಕಾರ್ಡ್ ಹಿಡಿದು ದರ್ಶನ್ ಮದುವೆ ಆಗಲು ಬಳ್ಳಾರಿ ಜೈಲ್‌ಗೆ ಬಂದ ಲೇಡಿ ಫ್ಯಾನ್: ಈ ಮಹಿಳೆಯ ಕಥೆಯೇನು?
ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಜೈಲಿನಲ್ಲಿದ್ದಾರೆ. ಇತ್ತೀಚೆಗಷ್ಟೇ ಅವರನ್ನು ಪರಪ್ಪನ ಅಗ್ರಹಾರ ಜೈಲ್‌ನಿಂದ ಬಳ್ಳಾರಿ ಜೈಲ್‌ಗೆ ಸ್ಥಳಾಂತರ ಮಾಡಲಾಗಿದೆ. ಇನ್ನೊಂದು ಕಡೆ ರೇಣುಕಾಸ್ವಾಮಿ ಹತ್ಯೆ ಕೇಸ್‌ಗೆ ಸಂಬಂಧಿಸಿದಂತೆ ತನಿಖೆಯನ್ನು ಪೂರ್ಣಗೊಳಿಸಿರುವ ಪೊಲೀಸರು ಚಾರ್ಜ್‌ಶೀಟ್ ಅನ್ನು ಕೋರ್ಟ್‌ಗೆ ಸಲ್ಲಿಸಿದ್ದಾರೆ. ಈಗ ದರ್ಶನ್ ಜಾಮೀನು ಪಡೆದು ಹೊರಗೆ ಬರುವ ಕಡೆಗೆ ಗಮನ ಹರಿಸಿದ್ದಾರೆ.
ಈ ಮಧ್ಯೆ ಬಳ್ಳಾರಿ ಜೈಲ್‌ನ ಮುಂದೆ ಮಹಿಳೆಯೊಬ್ಬರು ದರ್ಶನ್ ಭೇಟಿ ಮಾಡಲೇಬೇಕು ಅಂತ ರಂಪಾಟ ಮಾಡಿದ್ದಾರೆ. ಅಭಿಮಾನಿಗಳನ್ನು ಜೈಲಿನ ಒಳಗೆ ಭೇಟಿ ಮಾಡುವುದಕ್ಕೆ ಅವಕಾಶ ಇಲ್ಲದೇ ಇರುವುದರಿಂದ ಮಹಿಳೆ ಹಠ ಹಿಡಿದು ಕೂತಿದ್ದಳು. ಸದ್ಯಕ್ಕೆ ರಕ್ತ ಸಂಬಂಧಿ ಹಾಗೂ ವಕೀಲರಿಗೆ ಮಾತ್ರ ಅವಕಾಶವನ್ನು ನೀಡುತ್ತಿದ್ದು, ಬೇರೆಯವರು ದರ್ಶನ್ ಅವರನ್ನು ಭೇಟಿ ಮಾಡುವುದಕ್ಕೆ ನಿರ್ಬಂಧ ಹೇರಿದ್ದಾರೆ.

ಬಳ್ಳಾರಿ ಜೈಲ್‌ಗೆ ದರ್ಶನ್‌ಗಾಗಿ ಹಣ್ಣುಗಳನ್ನು ತೆಗೆದುಕೊಂಡು ಬಂದಿದ್ದರು. ದರ್ಶನ್ ಅಂದರೆ ನನಗೆ ಇಷ್ಟ. ಅವರನ್ನು ಮದುವೆ ಆಗುವುದಕ್ಕೆ ರೆಡಿ ಎಂದು ಹೇಳಿದ್ದಾರೆ. ಅಲ್ಲದೆ ದರ್ಶನ್ ಅವರನ್ನು ಭೇಟಿ ಮಾಡಲೇಬೇಕು ಅಂತ ಪಟ್ಟು ಹಿಡಿದಿದ್ದರು.
ಪರಪ್ಪನ ಅಗ್ರಹಾರ ಜೈಲ್‌ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇದ್ದಾಗ, ಹೀಗೆ ಅಭಿಮಾನಿಗಳು ಅವರನ್ನು ನೋಡುವುದಕ್ಕೆ ಬರುತ್ತಿದ್ದರು. ಆದರೆ, ಬಳ್ಳಾರಿ ಜೈಲ್‌ಗೆ ಸ್ಥಳಾಂತರ ಮಾಡಿದಾಗಲೂ ಇಂತಹ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದೆ. ಕೆಲವು ಬಂದು ಸುಮ್ಮನೆ ಹುಚ್ಚಾಟ ಮಾಡಿ, ಡ್ರಾಮ ಕ್ರಿಯೇಟ್ ಮಾಡುತ್ತಿದ್ದಾರೆ. ಬಳ್ಳಾರಿನ ಮುಂದೆ ಡ್ರಾಮ್ ಮಾಡಿದ್ದ ಈ ಮಹಿಳೆಯ ಎಲ್ಲಿಯವರು? ಎನ್ನುವ ಬಗ್ಗೆ ಮಾಹಿತಿ ಇಲ್ಲ. ಆದರೆ, ದರ್ಶನ್ ಬಗ್ಗೆ ಆಡಿದ ಮಾತುಗಳ ಝಲಕ್ ಇಲ್ಲಿದೆ.

"ದರ್ಶನ್ ನೋಡಲು ಅವಕಾಶ ಮಾಡಿಕೊಡಿ"
"ದರ್ಶನ್ ಅವರನ್ನು ನೋಡುವುದಕ್ಕೆ ಬಂದರೆ ಪೊಲೀಸರು ಬಿಡುತ್ತಿಲ್ಲ. ಅವರನ್ನೇ ನೋಡುವುದಕ್ಕೆ ಬಂದಿದ್ದೇವೆ ಅಂದ್ಮೇಲೆ ಯಾಕೆ ಬಿಡಲ್ಲ. ಇಡೀ ದೇಶವೇ ಬರಲಿ ಬಿಡಬೇಕು. ದರ್ಶನ್ ಅವರನ್ನು ಮಾತಾಡಿಸುವುದಕ್ಕೆ ಬರಬಾರದಾ? ರಕ್ತ ಸಂಬಂಧಿಯನ್ನು ಮಾತ್ರ ಬಿಡುತ್ತೇವೆ ಅಂದರೆ ಹೇಗೆ? ಅವರು ನಮಗೆ ಬೇಕು ಅಂತಲೇ ತಾನೇ ನಾವು ಬಂದಿದ್ದೇವೆ. ನಮಗೂ ಬಿಡಬೇಕು. ನಮಗೂ ಅವಕಾಶ ಮಾಡಿ ಕೊಡಬೇಕು." ಎಂದು ದರ್ಶನ್ ಲೇಡಿ ಫ್ಯಾನ್ ಹೇಳಿಕೊಂಡಿದ್ದಾರೆ.
"ಭೇಟಿ ಮಾಡದೇ ಹೋಗಲ್ಲ"
"ನನ್ನನ್ನು ಯಾರೂ ಕಳಿಸಿಲ್ಲ. ನಾನು ಪರಪ್ಪನ ಅಗ್ರಹಾರದ ಬಳಿನೂ ಹೋಗಿದ್ದೆ. ಇಲ್ಲಿಗೂ ಬಂದಿದ್ದೇನೆ. ನಿನ್ನೆ ರಾತ್ರಿ ಬಂದಿದ್ದೆ. ಬಸ್‌ಸ್ಟಾಪ್‌ನಲ್ಲಿ ಇದ್ದೆ. ಈಗ ಇಲ್ಲಿಗೆ ಬಂದಿದ್ದೇನೆ. ಹಣ್ಣು ಎಲ್ಲಾ ತಂದಿದ್ದೀನಿ. ಅವರನ್ನು ನೋಡಿಕೊಂಡು ಹೋಗಬೇಕು ಅಷ್ಟೇ. ಇಲ್ಲಾ ಅಂದರೆ, ಇಲ್ಲಿಂದ ನಾನು ಹೋಗುವುದಿಲ್ಲ." ಎಂದು ಬಳ್ಳಾರಿ ಜೈಲ್‌ನ ಮುಂದೆ ರಂಪಾಟ ಮಾಡಿದ್ದಾರೆ.
"ದರ್ಶನ್ ಮದುವೆ ಆಗಲು ರೆಡಿ"
"ನನಗೆ ದರ್ಶನ್ ಇಷ್ಟನೇ. ನಾನು ಅವನಿಗೋಸ್ಕರನೇ ಕಾಯುತ್ತಿದ್ದೇನೆ. ಅಲ್ಲಿ ಹೋದರೂ ಇಲ್ಲನೇ. ಇಲ್ಲಿ ಬಂದರೂ ಇಷ್ಟಾನೇ. ಅವರನ್ನು ಮದುವೆ ಮಾಡಿಕೊಳ್ಳುವುದಕ್ಕೂ ರೆಡಿನೇ. ಹೆಂಡತಿ ಆಗುವುದಕ್ಕೂ ರೆಡಿನೇ ನಾನು. ಅದಕ್ಕಾಗಿಯೇ ನಾನು ಬಂದಿರೋದು. ಚಿಕನ್, ಮಟನ್ ಬೇಕು ಅಂದರೂ ತೆಗೆದುಕೊಂಡು ಬಂದು ಕೊಡುತ್ತೇನೆ. ಅವರಿಗೆ ವಿಜಯಲಕ್ಷ್ಮಿ ಒಬ್ಬರೇ ಹೆಂಡ್ತಿ. ನನಗೆ ಈಗ ಇಷ್ಟ ಆಗಿದ್ದಾರೆ. ನಾನು ಮದುವೆ ಮಾಡಿಕೊಳ್ಳಬೇಕು ಅಂದುಕೊಂಡಿದ್ದೇನೆ." ಎಂದು ದರ್ಶನ್ ಅಭಿಮಾನಿ ಹೇಳಿಕೊಂಡಿದ್ದಾರೆ.


Click it and Unblock the Notifications










