ಗೆಳೆಯನ ನಿರ್ಮಾಣ ಸಂಸ್ಥೆ ಲಾಂಚ್ ಮಾಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆಳೆಯರ ಬೆನ್ನೆಲುಬಾಗಿ ಸದಾ ನಿಲ್ಲುತ್ತಾರೆ. ಅವರಿಗೆ ಒಂದಲ್ಲ ಒಂದು ರೀತಿ ಸಹಾಯ ಮಾಡುತ್ತಲೇ ಇರುತ್ತಾರೆ. ಇದು ಅವರ ಆತ್ಮೀಯರಿಗೂ ಗೊತ್ತು. ಈಗ ತನ್ನ ಗೆಳೆಯನ ಹೊಸ ನಿರ್ಮಾಣ ಸಂಸ್ಥೆಗೂ ಸಾಥ್ ಕೊಟ್ಟಿದ್ದಾರೆ.
ಚುನಾವಣೆಯಲ್ಲಿ ತನ್ನ ಆತ್ಮೀಯರ ಪರವಾಗಿ ದರ್ಶನ್ ಪ್ರಚಾರ ಮಾಡುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಈ ಪ್ರಚಾರದಲ್ಲಿಯೇ ಬ್ಯುಸಿಯಾಗಿದ್ದಾರೆ. ಇದರ ಮಧ್ಯೆನೇ ದರ್ಶನ್ ತನ್ನ ಗೆಳೆಯನ ಹೊಸ ನಿರ್ಮಾಣ ಸಂಸ್ಥೆಗೆ ಸಾಥ್ ಕೊಟ್ಟಿದ್ದಾರೆ.

ದರ್ಶನ್ ರೀಲ್‌ನಲ್ಲಷ್ಟೇ ಅಲ್ಲ. ರಿಯಲ್ ಲೈಫ್‌ನಲ್ಲಿಯೂ ಡಿಬಾಸ್ ಸಹಾಯ ಹಸ್ತ ಚಾಚುತ್ತಾರೆ. ಈ ಕಾರಣಕ್ಕಾಗಿಯೇ ದರ್ಶನ್ ಆತ್ಮೀಯರಿಗೆ ತುಂಬಾನೇ ಇಷ್ಟ ಆಗುತ್ತಾರೆ. ಅಂದ್ಹಾಗೆ ಡಿ ಪಡೆಯಲ್ಲಿ ಗುರುತಿಸಿಕೊಂಡಿರುವ ಗೆಳೆಯ ವಿ.ವಿನಯ್ ಹೊಸದಾಗಿ ನಿರ್ಮಾಣ ಸಂಸ್ಥೆ ಆರಂಭಿಸಿದ್ದಾರೆ. ಇದೇ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿ ಡಿಬಾಸ್ ಗೆಳೆಯನ ಕನಸಿಗೆ ಸಾಥ್ ಕೊಟ್ಟಿದ್ದಾರೆ.
"ಇದು ಬಹಳ ದಿನಗಳ ಕನಸು. ವಿಭಿನ್ನ ಆಗಿ ಏನಾದರೂ ಮಾಡಬೇಕು ಎಂಬ ಹಂಬಲ ಇಟ್ಟುಕೊಂಡು ಹೊಸ ಹೆಜ್ಜೆ ಇಟ್ಟಿದ್ದೇನೆ. ಅದೇ ರೀತಿ ಪ್ರಯತ್ನ ಮಾಡುತ್ತಿದ್ದೇವೆ. ಕೆಲ ದಿನಗಳಲ್ಲಿ ನಿರ್ಮಾಣ ಸಂಸ್ಥೆ ಬಗ್ಗೆ ಹೊಸ ಅಪ್ ಡೇಟ್ ಕೊಡುತ್ತೇವೆ. ನನ್ನ ನಿರ್ಮಾಣ ಸಂಸ್ಥೆ ಹೆಸರು ವಿರೌಡ್. ವಿ ಅಂದರೆ ವಿನಯ್. ರೌಡ್ ಅಂದರೆ ಸ್ಪ್ಯಾನಿಶ್ ಭಾಷೆಯಲ್ಲಿ ಐರನ್ ಎಂದು. ನಾವು ಏನೇ ಮಾಡಿದರು ದರ್ಶನ್ ಸರ್ ಬೆಂಬಲ ಇರುತ್ತೆ. ಎಲೆಕ್ಷನ್‌ನಲ್ಲಿ ಬ್ಯುಸಿ ಇದ್ದರೂ ನನ್ನ ನಿರ್ಮಾಣ ಸಂಸ್ಥೆ ಅನಾವರಣ ಮಾಡಿದ್ದಾರೆ" ಎಂದು ದರ್ಶನ್ ಗೆಳೆಯ ವಿ.ವಿನಯ್ ಸಂತಸ ಹಂಚಿಕೊಂಡಿದ್ದಾರೆ.
ವಿನಯ್ 'ವಿರೌಡ್' ನಿರ್ಮಾಣ ಸಂಸ್ಥೆ ಬಿಡದಿ ಬಳಿ ಆರಂಭಗೊಂಡಿದೆ. ಮೂಲತಃ ವಿನಯ್ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದು, ಇವರಿಗೆ ಸಿನಿಮಾ ಮೇಲೆ ಅಪಾರ ಒಲವು ಇದೆ. ಹೀಗಾಗಿಯೇ ನಿರ್ಮಾಣ ಸಂಸ್ಥೆಯನ್ನು ಆರಂಭ ಮಾಡಿದ್ದಾರೆ.

ಕನ್ನಡ ಚಿತ್ರರಂಗಕ್ಕೆ ವಿಭಿನ್ನ ರೀತಿಯ ಸಿನಿಮಾಗಳನ್ನು ನಿರ್ಮಾಣ ಮಾಡುವ ಆಸೆ ಇಟ್ಟುಕೊಂಡಿದ್ದಾರೆ. ಒಳ್ಳೆಯ ಕಂಟೆಂಟ್ ಇರುವ ಎಂಟರ್ಟೈನ್ಮೆಂಟ್ ಸಿನಿಮಾವನ್ನು ನಿರ್ಮಾಣ ಮಾಡುವ ಕನಸನ್ನು ಇಟ್ಟುಕೊಂಡಿದ್ದಾರೆ. ವಿರೌಡ್ ನಿರ್ಮಾಣ ಸಂಸ್ಥೆಯಡಿ ಚೊಚ್ಚಲ ಚಿತ್ರ ನಿರ್ಮಾಣ ತಯಾರಿ ನಡೆಯುತ್ತಿದ್ದು, ವಿನಯ್ ಆಪ್ತ ಗೆಳೆಯರೊಬ್ಬರು ಈ ಸಿನಿಮಾ ನಿರ್ದೇಶನ ಮಾಡಲಿದ್ದಾರೆ.
ವಿನಯ್ ಹಾಲಿವುಡ್ ಸಿನಿಮಾಗಳಲ್ಲಿ ಕೆಲಸ ಮಾಡಿ ಅನುಭವವಿದೆ. ಈಗ ಕನ್ನಡ ಸಿನಿಮಾ ಮೂಲಕ ನಿರ್ದೇಶಕನಾಗಿ ಮೊದಲ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಶೀಘ್ರದಲ್ಲಿಯೇ ಈ ಬಗ್ಗೆ ಮಾಹಿತಿ ಹೊರಬೀಳಲಿದೆ. ಸದ್ಯ ಆ ಸಿನಿಮಾ ದರ್ಶನ್ ನಟಿಸುತ್ತಾರಾ? ಇಲ್ಲಾ ಬೇರೆ ನಟರಿಗಾಗಿ ಸಿನಿಮಾ ಮಾಡುತ್ತಾರಾ? ಅನ್ನೋ ಕುತೂಹಲ ಎದ್ದಿದೆ.


Click it and Unblock the Notifications











