ದರ್ಶನ್‌ ಚಿಕಿತ್ಸೆ ನೀಡದಿದ್ದರೆ ಲಕ್ವ ಹೊಡೆಯುವ ಸಾಧ್ಯತೆ; ದಾಸನಿಗಿರುವ ಆರೋಗ್ಯ ಸಮಸ್ಯೆಗಳೇನು?

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸ್ಥಾನದಲ್ಲಿರುವ ದರ್ಶನ್‌ಗೆ ಆರೋಗ್ಯ ಸಮಸ್ಯೆ ಎದುರಾಗಿದೆ. ಬಳ್ಳಾರಿ ಜೈಲಿನಲ್ಲಿರುವ ದರ್ಶನ್ ಸದ್ಯ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ ಎಂಬುದು ಗೊತ್ತಾಗಿತ್ತು. ಆದರೆ, ದಾಸನಿಗೆ ಬೆನ್ನು ನೋವಿನ ಜೊತೆಗೆ ಇನ್ನೂ ಹಲವು ಆರೋಗ್ಯ ಸಮಸ್ಯೆಗಳಿವೆ ಅನ್ನೋದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

ನಿನ್ನೆ (ಅಕ್ಟೋಬರ್ 28) ದರ್ಶನ್ ಪರ ವಕೀಲರಾದ ಸಿ. ವಿ. ನಾಗೇಶ್ ಹೈಕೋರ್ಟ್ ನ್ಯಾಯಾಧೀಶರ ಮುಂದೆ ವಾದವನ್ನು ಮಂಡಿಸಿದರು. ಈ ವೇಳೆ ದರ್ಶನ್‌ಗೆ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹಾಗೇ ಅವರಿಗೆ ಇರುವ ಹಲವು ಆರೋಗ್ಯ ಸಮಸ್ಯೆಗಳನ್ನು ಬಗ್ಗೆನೂ ಹೈ ಕೋರ್ಟ್ ನ್ಯಾಯಾಧೀಶರ ಮುಂದೆ ಹೇಳಿದ್ದು, ಇಂದು (ಅಕ್ಟೋಬರ್ 29) ಜಾಮೀನು ಸಿಗುವ ಸಾಧ್ಯತೆಯಿದೆ.

Darshan lawyer says in high court that he has kidney issue and if not operated may get paralyzed

ಈಗ ದರ್ಶನ್ ಜಾಮೀನಿಗಿಂತ ಹೆಚ್ಚಾಗಿ ಅವರ ಆರೋಗ್ಯ ಸಮಸ್ಯೆ ಬಗ್ಗೆ ಚರ್ಚೆಯಾಗುತ್ತಿದೆ. ದಾಸನ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಹಿರಿಯ ವಕೀಲರಾದ ಸಿ.ವಿ ನಾಗೇಶ್ ವಾದ ಮಂಡನೆ ವೇಳೆ ದರ್ಶನ್ ಬೆನ್ನು ನೋವಿನಿಂದ ಬಳಲುತ್ತಿದ್ದು, ಅವರಿಗೆ ಶೀಘ್ರವೇ ಚಿಕಿತ್ಸೆ ಆಗಬೇಕಿದೆ. ಒಂದು ವೇಳೆ ಚಿಕಿತ್ಸೆ ಆಗದೇ ಹೋದರೆ, ಪಾರ್ಶ್ವವಾಯುವಿಗೆ (ಲಕ್ವ) ತುತ್ತಾಗುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ. ಹಾಗಿದ್ದರೆ, ದಾಸನಿಗೆ ಇರುವ ಆರೋಗ್ಯ ಸಮಸ್ಯೆಗಳೇನು? ತಿಳಿಯಲು ಮುಂದೆ ಓದಿ..

ಸೋಮವಾರ (ಅಕ್ಟೋಬರ್ 28) ದರ್ಶನ್ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆದಿತ್ತು. ನ್ಯಾಯಮೂರ್ತಿ ಎಸ್‌.ವಿಶ್ವಜಿತ್‌ ಶೆಟ್ಟಿ ಅವರಿದ್ದ ಏಕಸದಸ್ಯ ಪೀಠದ ಮುಂದೆ ದರ್ಶನ್ ಪರ ವಕೀಲರಾದ ಸಿ ವಿ ನಾಗೇಶ್ ವಾದವನ್ನು ಮಂಡಿಸಿದ್ದರು. ಈ ವೇಳೆ ದರ್ಶನ್‌ ಅವರಿಗಿರುವ ಆರೋಗ್ಯ ಸಮಸ್ಯೆಗಳನ್ನು ಬಹಿರಂಗ ಪಡಿಸಿದ್ದಾರೆ. ಇದು ದರ್ಶನ್ ಅಭಿಮಾನಿಗಳನ್ನು ಆತಂಕಕ್ಕೆ ದೂಡಿದೆ.

ಸಿ.ವಿ ನಾಗೇಶ್ ವಾದ ಮಂಡನೆ ವೇಳೆ ದರ್ಶನ್ ತೀವ್ರವಾಗಿ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಈಗಾಗಲೇ ಬಳ್ಳಾರಿಯಲ್ಲಿ ಎಂಆರ್‌ಐ ಹಾಗೂ ಸಿಟಿ ಸ್ಕ್ಯಾನಿಂಗ್ ಅನ್ನು ಮಾಡಿಸಲಾಗಿದೆ. ಆ ವರದಿಯನ್ನು ಆಧರಿಸಿ ವೈದ್ಯರು ಶೀಘ್ರವಾಗಿ ಶಸ್ತ್ರಚಿಕಿತ್ಸೆ ಮಾಡಿಸಬೇಕು ಎಂದು ಸಲಹೆ ನೀಡಿದ್ದಾರೆ. ಒಂದು ವೇಳೆ ಶಸ್ತ್ರ ಚಿಕಿತ್ಸೆ ಮಾಡಿಸದೇ ಹೋದರೆ, ಪಾರ್ಶ್ವವಾಯು ಹೊಡೆಯುವ ಸಾಧ್ಯತೆಯಿದೆ ಎಂದು ಸಿ.ವಿ ನಾಗೇಶ್ ನ್ಯಾಯಾಧೀಶರ ಗಮನಕ್ಕೆ ತಂದಿದ್ದರು.

Darshan lawyer says in high court that he has kidney issue and if not operated may get paralyzed

ಇದಷ್ಟೇ ಅಲ್ಲ. ದರ್ಶನ್‌ಗೆ ಬೆನ್ನು ನೋವಿನ ಜೊತೆಗೆ ಕಿಡ್ನಿ ಸಮಸ್ಯೆಯಿದೆ. ರಕ್ತ ಸಂಚಾರದಲ್ಲಿ ಅಡಚಣೆಯಾಗಿದ್ದು, ಕಾಲುಗಳು ಮರಗಟ್ಟಿವೆ. ಜೊತೆಗೆ ಕೀಲು ಮೂಳೆ ಸಮಸ್ಯೆ ಕೂಡ ಇದೆ. ಹೀಗಾಗಿ ಸೂಕ್ತ ಸಮಯದಲ್ಲಿ ಶಸ್ತ್ರ ಚಿಕಿತ್ಸೆಯ ಅಗತ್ಯವಿದೆ. ಒಂದು ವೇಳೆ ನಡೆಸದೇ ಹೋದರೆ, ಪಾರ್ಶ್ವವಾಯುವಿಗೆ ಒಳಗಾಗುವ ಸಾಧ್ಯತೆಯಿದೆ ಎಂದು ನ್ಯಾಯಾಧೀಶರ ಮುಂದೆ ವಾದ ಮಂಡಿಸುವ ವೇಳೆ ಹೇಳಿದ್ದಾರೆ. ಹೀಗಾಗಿ ಅಭಿಮಾನಿಗಳು ದರ್ಶನ್ ಆರೋಗ್ಯದ ಬಗ್ಗೆ ಆತಂಕಕ್ಕೆ ಒಳಗಾಗಿದ್ದಾರೆ.

ದರ್ಶನ್ ಪರ ವಕೀಲರ ವಾದವನ್ನು ಆಲಿಸಿದ ಬಳಿಕ ನ್ಯಾಯಾಧೀಶರು ವಿಚಾರಣೆಯನ್ನು ಇವತ್ತಿಗೆ (ಅಕ್ಟೋಬರ್ 29) ಮುಂದೂಡಿದ್ದರು. ಇಂದು ಪಿ.ಪ್ರಸನ್ನ ಕುಮಾರ್ ದರ್ಶನ್ ಆರೋಗ್ಯ ಸಮಸ್ಯೆ ಬಗ್ಗೆ ಉತ್ತರ ನೀಡಲಿದ್ದಾರೆ. ಬಹುಶ: ಇಂದು (ಅಕ್ಟೋಬರ್ 29) ದರ್ಶನ್‌ಗೆ ನ್ಯಾಯಾಧೀಶರು ಜಾಮೀನು ಮಂಜೂರು ಮಾಡುವ ಸಾಧ್ಯತೆಯಿದೆ ಎಂದು ನಿರೀಕ್ಷೆ ಮಾಡಲಾಗಿದೆ.

More from Filmibeat

English summary
Darshan Thoogudeepa lawyer says in high court that he has kidney issue and if not operated may get paralyzed
Read more about: darshan health filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X