ಮಹಿಳೆಗೆ ದರ್ಶನ್ ನಾಯಿ ಕಚ್ಚಿದ ಪ್ರಕರಣ: ಚಾಲೆಂಜಿಂಗ್ ಸ್ಟಾರ್‌ಗೆ ಕ್ಲೀನ್ ಚಿಟ್?
ಇತ್ತೀಚೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನೆಯ ಸಾಕು ನಾಯಿ ವಕೀಲೆಯೊಬ್ಬರಿಗೆ ಕಚ್ಚಿತ್ತು. ಈ ಸಂಬಂಧ ಅಮಿತ್ ಜಿಂದಾಲ್ ಅನ್ನೋ ಮಹಿಳೆ ದರ್ಶನ್ ಹಾಗೂ ಅವರ ಡಾಗ್ ಕೇರ್ ಟೇಕರ್ ವಿರುದ್ಧ ದೂರನ್ನು ದಾಖಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜರಾಜೇಶ್ವರಿನಗರ ಪೊಲೀಸರು ದರ್ಶನ್‌ಗೆ ನೋಟಿಸ್ ಕಳುಹಿಸಿ ವಿಚಾರಣೆ ಮಾಡಿದ್ದರು.
ವಕೀಲೆಯೂ ಆಗಿರುವ ಅಮಿತಾ ಜಿಂದಾಲ್ ತಮ್ಮ ಮೇಲೆ ಉದ್ದೇಶ ಪೂರ್ವಕವಾಗಿ ನಾಯಿಯನ್ನು ಬಿಟ್ಟು ಕಚ್ಚಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದರು. ಸದ್ಯ ರಾಜಾರಾಜೇಶ್ವರಿನಗರದ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಜ್ ಶೀಟ್ ಸಲ್ಲಿಸಲು ಮುಂದಿದ್ದಾಗಿದ್ದಾರೆ. ತನಿಖೆಯಲ್ಲಿ ಘಟನಾ ಸ್ಥಳದಲ್ಲಿ ದರ್ಶನ್ ಇಲ್ಲದೆ ಇರುವುದು ಸಾಬೀತಾಗಿದ್ದು, ದೋಷಾರೋಪ ಪಟ್ಟಿಯಲ್ಲಿ ದರ್ಶನ್ ಹೆಸರು ಸೇರಿಸಿಲ್ಲ ಎಂದು ಹೇಳಲಾಗುತ್ತಿದೆ.

ದರ್ಶನ್ ನಾಯಿ ಕಚ್ಚಿದ ಪ್ರಕರಣವೇನು?
ರಾಜರಾಜೇಶ್ವರಿ ನಗರದಲ್ಲಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನೆ ಬಳಿ ಅಮಿತಾ ಜಿಂದಾಲ್ ಅನ್ನೋ ಮಹಿಳೆ ಕಾರು ಪಾರ್ಕ್ ಮಾಡಿದ್ದರು. ಕಾರ್ಯಕ್ರಮ ಮುಗಿಸಿ ಹಿಂತಿರುಗುವಾಗ ದರ್ಶನ್ ಮನೆಯ ಸಾಕು ನಾಯಿ ಮಹಿಳೆಗೆ ಕಚ್ಚಿತ್ತು. ಹೀಗಾಗಿ ಅಮಿತಾ ಜಿಂದಾಲ್ ಅವರು ಉದ್ದೇಶ ಪೂರ್ವಕವಾಗಿಯೇ ನಾಯಿಯನ್ನು ಬಿಟ್ಟು ಕಚ್ಚಿಸಲಾಗಿದೆ ಎಂದು ದೂರು ದಾಖಲಿಸಿದ್ದರು.
ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ವಿಚಾರಣೆ ಕೈಗೆತ್ತಿಕೊಂಡಿದ್ದರು. ನಾಯಿ ಕಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಮನೆಯಲ್ಲಿ ನಾಯಿಯನ್ನು ನೋಡಿಕೊಳ್ಳುತ್ತಿರುವ ಕೇರ್ ಟೇಕರ್ ಹೇಮಂತ್ ವಿಚಾರಣೆ ಮಾಡಿದ್ದರು. ಜೊತೆ ಪೊಲೀಸರು ಸ್ಥಳ ಮಹಜರು ಕೂಡ ಮಾಡಿ ಮಾಹಿತಿ ಸಂಗ್ರಹಿಸಿದ್ದರು. ಬಳಿಕ ದರ್ಶನ್‌ಗೆ ನೋಟಿಸ್ ಕೂಡ ನೀಡಿದ್ದರು.
ವಿಚಾರಣೆಗೆ ಹಾಜರಾಗಿದ್ದ ದರ್ಶನ್
ರಾಜರಾಜೇಶ್ವರಿನಗರ ಪೊಲೀಸರು IPC 289ರ ಅನ್ವಯ ನಾಯಿ ಕೇರ್ ಟೇಕರ್ ಮೊದಲ ಆರೋಪಿ ಹಾಗೂ ದರ್ಶನ್ 2ನೇ ಆರೋಪಿಯಾಗಿ ಕೇಸ್ ದಾಖಲಿಸಿಕೊಂಡಿದ್ದರು. ಈ ಸಂಬಂಧ ವಿಚಾರಣೆಯನ್ನು ನಡೆಸಿದ್ದರು. ದರ್ಶನ್‌ಗೆ ನೋಟಿಸ್ ಕೂಡ ನೀಡಿದ್ದರು.
ಈ ಸಂಬಂಧ ರಾಜರಾಜೇಶ್ವರಿ ನಗರದ ಪೊಲೀಸ್ ಠಾಣೆಗೆ ತೆರಳಿ ದರ್ಶನ್ ತೆರಳಿ ವಿಚಾರಣೆಯನ್ನು ಎದುರಿಸಿದ್ದರು. " ಈ ಘಟನೆ ನಡೆದ ಸಂದರ್ಭದಲ್ಲಿ ನಾನು ಊರಲ್ಲಿ ಇರಲಿಲ್ಲ. ಇನ್ನು ಮುಂದೆ ಇಂತಹ ಘಟನೆ ನಡೆಯದಂತೆ ನೋಡಿಕೊಳ್ಳುವೆ" ಎಂದು ಪೊಲೀಸರ ಮುಂದೆ ಹೇಳಿಕೆ ಕೊಟ್ಟು ಬಂದಿದ್ದರು.
ಈ ಪ್ರಕರಣದಲ್ಲಿ ದರ್ಶನ್ ಪಾತ್ರವಿಲ್ಲ
ರಾಜರಾಜೇಶ್ವರಿನಗರ ಪೊಲೀಸರು ನಾಯಿ ಕಚ್ಚಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ವಿಚಾರಣೆ ನಡೆಸಿದ್ದರು. ಈ ಸಂಬಂಧ ದೋಷಾರೋಪ ಪಟ್ಟಿಯನ್ನು ಸಲ್ಲಿಸಲು ಮುಂದಾಗಿದ್ದಾರೆ. ಈ ಪ್ರಕರಣದಲ್ಲಿ ನಟನ ಪಾತ್ರವಿರುವ ಬಗ್ಗೆ ಯಾವುದೇ ಸಾಕ್ಷಿ ಸಿಕ್ಕಿಲ್ಲ. ಹೀಗಾಗಿ ನಟ ದರ್ಶನ್ ಹೆಸರನ್ನು ಚಾರ್ಚ್‌ಶೀಟ್‌ನಿಂದ ಕೈ ಬಿಡಲು ನಿರ್ಧರಿಸಿದ್ದಾರೆ.
ದರ್ಶನ್ ಸದ್ಯ 'ಕಾಟೇರ' ಸಿನಿಮಾದ ಬಿಡುಗಡೆಯಲ್ಲಿ ಬ್ಯುಸಿಯಾಗಿದ್ದಾರೆ. ತರುಣ್ ಸುಧೀರ್ ನಿರ್ದೇಶಿಸಿರುವ ಈ ಸಿನಿಮಾದಲ್ಲಿ ಇದೇ ಮೊದಲ ಬಾರಿಗೆ ವಿಭಿನ್ನ ಗೆಟಪ್‌ನಲ್ಲಿ ದರ್ಶನ್ ಕಾಣಿಸಿಕೊಂಡಿದ್ದು, ಡಿಸೆಂಬರ್ 29ರಂದು ಬಿಡುಗಡೆಗೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.


Click it and Unblock the Notifications











