ಪ್ರಥಮ್ ನನ್ನ 3ನೇ ಮಗ ಎಂದ ದರ್ಶನ್ ತಾಯಿ: 'ಕ್ರಾಂತಿ'ಗೆ ನನ್ನ ಬೆಂಬಲ ಎಂದ 'ನಟ ಭಯಂಕರ'!

ಪ್ರಥಮ್ ಅಭಿನಯದ ಮತ್ತೊಂದು ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈಗಾಗಲೇ ಪ್ರಥಮ್ ಪ್ರಚಾರ ಕೆಲಸವನ್ನು ಆರಂಭ ಮಾಡಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಪ್ರಥಮ್ ತಮ್ಮ 'ನಟ ಭಯಂಕರ' ಸಿನಿಮಾದ ಆಡಿಯೋ ರಿಲೀಸ್ ಮಾಡಿದ್ದರು. ರೋರಿಂಗ್ ಸ್ಟಾರ್ ಶ್ರೀಮುರಳಿ ಆಡಿಯೋ ರಿಲೀಸ್ ಮಾಡಿದ್ದರು.

ಈಗ 'ನಟ ಭಯಂಕರ' ಸಿನಿಮಾವನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ತಾಯಿ ಮೀನಾ ತೂಗುದೀಪ ಶ್ರೀನಿವಾಸ್ ಲಾಂಚ್ ಮಾಡಿದ್ದಾರೆ. ಪ್ರಥಮ್ ನಾಯಕನಾಗಿ ನಟಿಸಿರುವ ಈ ಸಿನಿಮಾ ಅಭಿಮಾನಿಗಳಲ್ಲಿ ಕುತೂಹಲ ಸೃಷ್ಟಿಸಿದೆ. ಇವೆಲ್ಲದರ ಮಧ್ಯೆ ಮೀನಾ ತೂಗುದೀಪ್ ಶ್ರೀನಿವಾಸ್ ಪ್ರಥಮ್ ನನ್ನ ಮೂರನೇ ಮಗ ಎಂದಿರುವುದು ದರ್ಶನ್ ಹಾಗೂ ಪ್ರಥಮ್ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.

ಪ್ರಥಮ್ ನನ್ನ 3ನೇ ಮಗ

ಪ್ರಥಮ್ ನನ್ನ 3ನೇ ಮಗ

ಪ್ರಥಮ್ ತಮ್ಮ 'ನಟ ಭಯಂಕರ' ಸಿನಿಮಾವನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಂದಲೇ ಲಾಂಚ್ ಮಾಡಿಸಬೇಕು ಎಂದುಕೊಂಡಿದ್ದರು. ಆದರೆ, ದರ್ಶನ್ ಬ್ಯುಸಿಯಿದ್ದ ಕಾರಣ ಅದು ಸಾಧ್ಯವಾಗಿರಲಿಲ್ಲ. ಈ ಕಾರಣಕ್ಕೆ ದರ್ಶನ್ ಅವರ ತಾಯಿ ಮೀನಾ ತೂಗುದೀಪ ಶ್ರೀನಿವಾಸ್ ಅವರಿಂದ ಲಾಂಚ್ ಮಾಡಿಸಿದ್ದಾರೆ. ಈ ವೇಳೆ ಮೀನಾ ತೂಗುದೀಪ್ ಅವರು ಪ್ರಥಮ್ ನನ್ನ ಮೂರನೇ ಮಗನಿದ್ದಂತೆ ಎಂದು ಹೇಳಿದ್ದಾರೆ. ಈ ವಿಡಿಯೋವನ್ನು ಸ್ವತ: ಪ್ರಥಮ್ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ವೈರಲ್ ಆಗುತ್ತಿದೆ.

ಸಿನಿಮಾ ಶುಭ ಹಾರೈಸಿದ ಮೀನಾ ತೂಗುದೀಪ

ಸಿನಿಮಾ ಶುಭ ಹಾರೈಸಿದ ಮೀನಾ ತೂಗುದೀಪ

ಪ್ರಥಮ್ ಸಿನಿಮಾ ನಟ ಭಯಂಕರ ಸಿನಿಮಾಗೆ ದರ್ಶನ್ ಅವರ ತಾಯಿ ಮೀನಾ ತೂಗುದೀಪ್ ಶುಭ ಹಾರೈಸಿದ್ದಾರೆ. "ಪ್ರಥಮ್ ನಮ್ಮ ಹುಡುಗ. ಪ್ರಥಮ್ ನನ್ನ ಮೂರನೇ ಮಗನಿದ್ದಂತೆ. ನಟಭಯಂಕರ ಸಿನಿಮಾಗೆ ಆಲ್‌ ದಿ ಬೆಸ್ಟ್" ಎಂದು ಮೀನಾ ತೂಗುದೀಪ ಶ್ರೀನಿವಾಸ್ ಶುಭ ಕೋರಿದ್ದಾರೆ.

ಪ್ರಥಮ್ ಚಾಲೆಂಜಿಂಗ್ ಕ್ವೀನ್ ಎಂದಿದ್ಯಾರಿಗೆ?

" ಮನುಷ್ಯ ದಿನದಿಂದ ದಿನಕ್ಕೆ ಬೆಳೆಯಬೇಕು. ನನ್ನ ಎಂಎಲ್‌ಎ ಸಿನಿಮಾವನ್ನು ದರ್ಶನ್ ಸರ್ ಲಾಂಚ್ ಮಾಡಿದ್ರು. ಮುಂದಿನ ಸಿನಿಮಾ ಅವರಿಗಿಂತಲೂ ಬಿಗ್ ಸ್ಟಾರ್‌ ಜೊತೆ ಮಾಡಿಸಬೇಕು. ಯಾವಾಗಲೂ ಮಗನಿಗಿಂತ ಅಮ್ಮನೇ ಬಿಗ್ ಸ್ಟಾರ್ ಆಗಿರುತ್ತಾರೆ. ಚಾಲೆಂಜಿಂಗ್ ಸ್ಟಾರ್ ಅಂದರೆ, ನೀವು ಚಾಲೆಂಜಿಂಗ್ ಕ್ವೀನ್. ಅದಕ್ಕೋಸ್ಕರ ಚಾಲೆಂಜಿಂಗ್ ಕ್ವೀನ್ ಅಂತ ಕರೆದೆ. ಯಾವಾಗಲೂ ಹೀರೋ ಸಿಗಲ್ಲ ಅಂತ ತಲೆ ಕೆಡಿಸಿಕೊಳ್ಳಲ್ಲ. ಮುಖ್ಯಮಂತ್ರಿ ಸಿಗಲ್ಲ ಅಂದ್ರೆ ಹೈ ಕಮಾಂಡ್ ಇರುತ್ತಾರೆ." ಎಂದು ಪ್ರಥಮ್ ಹೇಳಿದ್ದಾರೆ.

'ಕ್ರಾಂತಿ' ಸಿನಿಮಾಗೆ ಪ್ರಥಮ್ ಬೆಂಬಲ

'ಕ್ರಾಂತಿ' ಸಿನಿಮಾಗೆ ಪ್ರಥಮ್ ಬೆಂಬಲ

'ನಟ ಭಯಂಕರ' ಸಿನಿಮಾವನ್ನು ಪ್ರಥಮ್ ವಜ್ರಮುನಿ, ಸುಧೀರ್, ತೂಗದೀಪ ಶ್ರೀನಿವಾಸ್‌ ಅವರಿಗೆ ಅರ್ಪಿಸಿದ್ದಾರೆ. "ವೈಮನಸ್ಸು ಜೀವನದಲ್ಲಿ ಸರ್ವೇಸಾಮಾನ್ಯ. ಎಲ್ಲವೂ ಸರಿಹೋಗಲಿದೆ. ದರ್ಶನ್ ಸರ್ ತಾಯಿಯ ಋಣಕ್ಕಾಗಿ, ಹೃದಯದಿಂದ ಬೆಂಬಲಿಸಲಿದ್ದೇನೆ. 'ಕ್ರಾಂತಿ' ಸಿನಿಮಾದೊಂದಿಗೆ ನಾನು ನಿಲ್ಲುತ್ತೇನೆ." ಎಂದು ಪ್ರಥಮ್ ಟ್ವೀಟ್ ಮಾಡಿದ್ದಾರೆ. ದರ್ಶನ್ ಮಾಧ್ಯಮದವರ ವಿರುದ್ಧ ಕೆಟ್ಟದಾಗಿ ಮಾತನಾಡಿದ್ದಾರೆ. ಎನ್ನುವ ಕಾರಣಕ್ಕೆ ದರ್ಶನ್ ಅವರನ್ನು ಮಾಧ್ಯಮಗಳು ಬ್ಯಾನ್ ಮಾಡಿವೆ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ಕಿಡಿಕಾರಿದ್ದರು. ದರ್ಶನ್ ಕೂಡ ಅಭಿಮಾನಿಗಳ ಬೆಂಬಲಕ್ಕೆ ಟ್ವೀಟ್ ಮೂಲಕವೇ ಅಭಿನಂದನೆ ಸಲ್ಲಿಸಿದ್ದರು.

More from Filmibeat

English summary
Darshan Mother Meena Thoogudeepa Srinivas Wished Pratham Movie Nata Bhayankara, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X