6ನೇ ದಿನವೂ ನಿಲ್ಲದ 'ಕಾಟೇರ' ಬಾಕ್ಸಾಫೀಸ್ ಬೇಟೆ; ₹100 ಕೋಟಿ ಕ್ಲಬ್ ಸೇರಲು ಇನ್ನೆಷ್ಟು ಬೇಕು?

ಕನ್ನಡ ಚಿತ್ರರಂಗದಲ್ಲಿ 'ಕಾಟೇರ' ಸಿನಿಮಾ ಬಗ್ಗೆನೇ ಟಾಕ್. ಸಿನಿಮಾ ಬಿಡುಗಡೆಯಾದಲ್ಲಿಂದ ಇಲ್ಲಿವರೆಗೂ ಪ್ರತಿದಿನ ಬಾಕ್ಸಾಫೀಸ್ ಕಲೆಕ್ಷನ್‌ನಲ್ಲಿ ಹಿನ್ನಡೆಯಾಗಿದ್ದೇ ಇಲ್ಲ. ನಿನ್ನೆ (ಜನವರಿ 3) 6ನೇ ದಿನವೂ ದರ್ಶನ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ ಎಂದು ಲೆಕ್ಕ ಕೊಡಲಾಗಿದೆ.

2023 ಸ್ಯಾಂಡಲ್‌ವುಡ್‌ಗೆ ಅಷ್ಟೊಂದು ಆಶಾದಾಯಕ ವರ್ಷವೇನೂ ಆಗಿರಲಿಲ್ಲ. ಇಡೀ ವರ್ಷ ಕನ್ನಡದ ಯಾವುದೇ ಸಿನಿಮಾ ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟಕ್ಕೆ ಕಲೆಕ್ಷನ್ ಮಾಡಿರಲಿಲ್ಲ. ಕೆಲವೇ ಕೆಲವು ಸಿನಿಮಾಗಳು ಗಲ್ಲಾಪಟ್ಟಿಗೆಯಲ್ಲಿ ಗೆದ್ದು ಬೀಗಿದ್ದವು. ಇನ್ನೇನು ವರ್ಷ ಮುಗಿಯುವ ಕೊನೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಕಾಟೇರ' ಸಿನಿಮಾ ರಿಲೀಸ್ ಆಗಿತ್ತು.

Darshan Movie Kaatera Box office collection day 6 is around 95.36 crore

ವರ್ಷದ ಕೊನೆಯಲ್ಲಿ 'ಕಾಟೇರ'ದಿಂದ ಕನ್ನಡ ಚಿತ್ರರಂಗಕ್ಕೆ ಬಿಗ್ ಸಕ್ಸಸ್ ಸಿಕ್ಕಂತಾಗಿದೆ. ಅಪ್ಪಟ ಕನ್ನಡ ಸಿನಿಮಾ ಅಂತಲೇ ಅಖಾಡಕ್ಕೆ ಇಳಿದಿದ್ದ ಈ ಸಿನಿಮಾ ಬಾಕ್ಸಾಫೀಸ್ ದೋಚುತ್ತಿದೆ. 'ಕಾಟೇರ' ರಿಲೀಸ್ ಆಗಿ ಇಂದಿಗೆ (ಜನವರಿ 4) 7 ದಿನಗಳಾಗಿವೆ. ಆದರೆ, ಕಳೆದ 6 ದಿನಗಳಲ್ಲಿ ಸಿನಿಮಾ ಸರಾಸರಿಯಂತೆ 10.50 ಕೋಟಿ ರೂಪಾಯಿಯಂತೆ ಕಲೆಕ್ಷನ್ ಆಗಿದೆ.

6ನೇ ದಿನ 'ಕಾಟೇರ' ಕಲೆಕ್ಷನ್ ಎಷ್ಟು?

ದರ್ಶನ್ ಪರಭಾಷೆಯ ಸಿನಿಮಾಗಳಿಗೆ ಸವಾಲೆಸೆದು ರಿಲೀಸ್ ಮಾಡಿರುವ ಸಿನಿಮಾ 'ಕಾಟೇರ'. ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾವನ್ನು ಕನ್ನಡಿಗರು ಕೈ ಹಿಡಿದಿದ್ದಾರೆ. ಸಿನಿಮಾ ರಿಲೀಸ್ ಆದಲ್ಲಿಂದ ಇಲ್ಲಿವರೆಗೂ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತಾ ಮುನ್ನುಗ್ಗುತ್ತಲೇ ಇದೆ.

5ನೇ ದಿನಕ್ಕಿಂತ 6 ದಿನ 'ಕಾಟೇರ' ಸಿನಿಮಾದ ಕಲೆಕ್ಷನ್ ಹೆಚ್ಚಿದೆ. ಸಾಮಾನ್ಯವಾಗಿ ದಿನದಿಂದ ದಿನಕ್ಕೆ ಸಿನಿಮಾ ಕಡಿಮೆ ಆಗುತ್ತೆ. ಆದರೆ, 'ಕಾಟೇರ' 6ನೇ ದಿನ ಬರೋಬ್ಬರಿ 9.78 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಅದೇ 5ನೇ ದಿನ 9.24 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು.

100 ಕೋಟಿ ಕ್ಲಬ್ ಸೇರಲು ಇನ್ನೆಷ್ಟು ಬೇಕು?

'ಕಾಟೇರ' ಸಿನಿಮಾ ಇನ್ನೊಂದು ದಿನದಲ್ಲಿ ನೂರು ಕೋಟಿ ಕ್ಲಬ್ ಸೇರುವ ಎಲ್ಲಾ ಸಾಧ್ಯತೆಗಳೂ ಇವೆ. ಕಳೆದ ಆರು ದಿನಗಳ ಕಲೆಕ್ಷನ್ ನೋಡಿದರೆ, 7ನೇ ದಿನ 'ಕಾಟೇರ' ನೂರು ಕೋಟಿಯನ್ನು ದಾಟುವುದು ಖಚಿತ.

6ನೇ ದಿನದ 'ಕಾಟೇರ' ಸಿನಿಮಾದ ಒಟ್ಟಿ ಗಳಿಕೆ ಸುಮಾರು 95 ಕೋಟಿ ರೂಪಾಯಿ ದಾಟಿದೆ. ಹೀಗಾಗಿ ಇನ್ನು 5 ಕೋಟಿ ರೂಪಾಯಿ ಗಳಿಕೆ ಕಂಡರೆ, ಕೇವಲ ಕನ್ನಡದಲ್ಲಷ್ಟೇ ತೆರೆಕಂಡಿದ್ದ ಸಿನಿಮಾ ಕಡಿಮೆ ಅವಧಿಯಲ್ಲಿ 100 ಕೋಟಿ ಕ್ಲಬ್ ಸೇರಲಿದೆ. ಈ ಆರು ದಿನಗಳಲ್ಲಿ 'ಕಾಟೇರ' ಕಲೆಕ್ಷನ್ ಹೀಗಿದೆ.

ದಿನ ಕಲೆಕ್ಷನ್ (Gross)

ಮೊದಲ ದಿನ ₹19.79 ಕೋಟಿ (Gross)
ಎರಡನೇ ದಿನ ₹17.35 ಕೋಟಿ (Gross)
ಮೂರನೇ ದಿನ ₹20.94 ಕೋಟಿ (Gross)
ನಾಲ್ಕನೇ ದಿನ ₹18.29 ಕೋಟಿ (Gross)
ಐದನೇ ದಿನ ₹9.24 ಕೋಟಿ (Gross)
ಆರನೇ ದಿನ ₹9.75 ಕೋಟಿ (Gross)
ಒಟ್ಟು ₹95.36 ಕೋಟಿ (Gross)

ಬಾಕ್ಸಾಫೀಸ್ ಕಲೆಕ್ಷನ್ ವಿಚಾರ ಕೆಲವು ದಿನಗಳ ಹಿಂದೆ ಗೊಂದಲ ಸೃಷ್ಟಿಸಿತ್ತು. ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಬಾಕ್ಸಾಫೀಸ್ ಲೆಕ್ಕಚಾರದ ಬಗ್ಗೆ ಸ್ಪಷ್ಟತೆಯನ್ನು ಕೊಟ್ಟಿರಲಿಲ್ಲ. ಇದರ ಹೊರತಾಗಿಯೂ ಚಿತ್ರತಂಡ ಕಳೆದ ಆರು ದಿನಗಳಲ್ಲಿ ಬಾಕ್ಸಾಫೀಸ್ ಕಲೆಕ್ಷನ್‌ ಬಗ್ಗೆ ಮಾಹಿತಿಯನ್ನು ಕೊಂಡಿದೆ. ಈ ಕಲೆಕ್ಷನ್ ರಿಪೋರ್ಟ್ ಆ ಮಾಹಿತಿ ಆಧಾರದ ಮೇಲೆ ನಿರ್ಧಾರಿದ್ದು, ಲೆಕ್ಕಾಚಾರದ ಪ್ರಕಾರ ನಾಳೆ (ಜನವರಿ 5) ಬಾಕ್ಸಾಫೀಸ್‌ನಲ್ಲಿ 100 ಕೋಟಿ ರೂಪಾಯಿ ದಾಖಲಿಸಲಿದೆ.

More from Filmibeat

English summary
Darshan Kaatera Movie Day 6 Box Office Collection.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X