1 ಕೋಟಿ ಟಿಕೆಟ್ ಸೇಲ್.. ₹200 ಕೋಟಿ ಕಲೆಕ್ಷನ್; 'ಕಾಟೇರ' ಪ್ಯಾನ್ ಇಂಡಿಯಾ ರಿಲೀಸ್ ಆಗುತ್ತಾ?

ಕಳೆದ ಐದಾರು ವರ್ಷಗಳಿಂದ ಕನ್ನಡ ಚಿತ್ರರಂಗ ದಿಢೀರನೇ ಫಿನಿಕ್ಸ್‌ನಂತೆ ಎದ್ದು ನಿಂತಿತ್ತು. ಬ್ಯಾಕ್ ಟು ಬ್ಯಾಕ್ ಪ್ಯಾನ್ ಇಂಡಿಯಾ ಸಿನಿಮಾ ರಿಲೀಸ್ ಆಗಿತ್ತು. 'ಕೆಜಿಎಫ್'ನಿಂದ ಶುರುವಾಗಿದ್ದು 'ಕಾಂತಾರ'ವರೆಗೂ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಆದರೆ, 'ಕಾಂತಾರ' ಬಳಿಕ ಕನ್ನಡ ಚಿತ್ರರಂಗ ಮತ್ತೆ ಸಂಕಷ್ಟಕ್ಕೆ ಸಿಲುಕಿತ್ತು.

2023ಯಲ್ಲಿ ರಿಲೀಸ್ ಆದ ಕೆಲವೇ ಕೆಲವು ಕನ್ನಡ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿತ್ತು. ಸುಮಾರು 11 ತಿಂಗಳು ಸ್ಯಾಂಡಲ್‌ವುಡ್‌ಗೆ ಐದಾರು ಹಿಟ್ ಸಿನಿಮಾಗಳು ಸಿಕ್ಕಿತ್ತಷ್ಟೇ. ಅಲ್ಲಿಂದೆ 2023 ಕಥೆಯೇನೋ ಮುಗಿದಿತ್ತು. ಆದರೆ, 2024 ಆರಂಭ ಅದ್ಭುತವಾಗಿ ಇರಬೇಕಿತ್ತು. ಇದು ದರ್ಶನ್ ಸಿನಿಮಾ 'ಕಾಟೇರ'ದಿಂದ ಆಗಿದೆ.

Darshan movie Kaatera entered 200 Crore club after 3 weeks of its release

ಡಿಸೆಂಬರ್ 29, 2023ರಂದು ತೆರೆಕಂಡಿದ್ದ ಸಿನಿಮಾ 'ಕಾಟೇರ'ವನ್ನು ಸಿನಿಪ್ರೇಮಿಗಳು ಹೊತ್ತು ಮೆರೆಯುತ್ತಿದ್ದಾರೆ. ವಾರದಿಂದ ವಾರಕ್ಕೆ ಬಾಕ್ಸಾಫೀಸ್‌ನಲ್ಲಿ ಅಬ್ಬರಿಸೋದು ದುಪ್ಪಟ್ಟಾಗುತ್ತಿದೆ. ನಾಲ್ಕನೇ ವಾರಕ್ಕೆ ಗಲ್ಲಾಪೆಟ್ಟಿಗೆಯಲ್ಲಿ 200 ಕೋಟಿ ರೂಪಾಯಿ ಕಲೆ ಹಾಕಿ, ಹೊಸ ಇತಿಹಾಸವನ್ನೇ ಬರೆದಿದೆ. ಹಾಗಿದ್ದರೆ, ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?, ಖರೀದಿ ಮಾಡಿದ ಟಿಕೆಟ್‌ಗಳು ಎಷ್ಟು? ಮೂರನೇ ವಾರಕ್ಕೆ ಎಷ್ಟು ಟಿಕೆಟ್ ಸೇಲ್ ಆಗಿದೆ? ಇದೆಲ್ಲವನ್ನು ತಿಳಿಯಲು ಮುಂದೆ ಓದಿ.

'ಕಾಟೇರ' ಇಂಡಸ್ಟ್ರಿ ಹಿಟ್ ಅನ್ನೋದು ಮೊದಲ ವಾರದಲ್ಲೇ ಸಾಬೀತಾಗಿತ್ತು. ಕೇವಲ ಬಿಡುಗಡೆಯಾದ ಆರು ದಿನಗಳಲ್ಲಿಯೇ ಈ ಸಿನಿಮಾ 100 ಕೋಟಿ ರೂಪಾಯಿಗೂ ಕಲೆ ಹಾಕಿತ್ತು. ಈಗ ನಾಲ್ಕನೇ ವಾರಕ್ಕೆ 200 ಕೋಟಿ ರೂಪಾಯಿ ಕ್ಲಬ್ ಸೇರಿದೆ. ಕನ್ನಡದಲ್ಲಿ ಮಾತ್ರ ಬಿಡುಗಡೆಯಾದ ಸಿನಿಮಾವೊಂದು ಈ ಮಟ್ಟಿಗೆ ಬಾಕ್ಸಾಫೀಸ್‌ನಲ್ಲಿ ಕಲೆಕ್ಷನ್ ಮಾಡಿದ್ದಿಲ್ಲ.

'ಕೆಜಿಎಫ್' ಸೀರಿಸ್, 'ಕಾಂತಾರ'ದಂತಹ ಸಿನಿಮಾಗಳು ಕರ್ನಾಟಕದಲ್ಲಿಯೂ ಸದ್ದು ಮಾಡಿದ್ದವು. ಆದರೆ, ಬೇರೆ ಭಾಷೆಯಿಂದಲೇ ಹೆಚ್ಚು ಗಳಿಕೆ ಮಾಡಿದ್ದವು. ಆದರೆ, 'ಕಾಟೇರ' ನಾಲ್ಕನೇ ವಾರಕ್ಕೆ ಸುಮಾರು 206.19 ಕೋಟಿ ರೂಪಾಯಿ (Gross) ಕಲೆಕ್ಷನ್ ಮಾಡಿದೆ ಎಂದು ಟ್ರೇಡ್ ಎಕ್ಸ್‌ಪರ್ಟ್ಸ್ ಲೆಕ್ಕ ಕೊಟ್ಟಿದ್ದಾರೆ. ಹೀಗಾಗಿ ಇದು ಕನ್ನಡ ಚಿತ್ರರಂಗದ ಮಟ್ಟಿಗೆ ಮೆಗಾ ಸಕ್ಸಸ್ ಕಂಡ ಸಿನಿಮಾ.

Darshan movie Kaatera entered 200 Crore club after 3 weeks of its release

ಕನ್ನಡ ಮಾರ್ಕೆಟ್ ಚಿಕ್ಕದು. ಇಲ್ಲಿ ಕನ್ನಡ ಸಿನಿಮಾ ಓಡುವುದಿಲ್ಲ ಅನ್ನೋರಿಗೆ 'ಕಾಟೇರ' ಉತ್ತರ ಕೊಟ್ಟಿದೆ. ಬಾಕ್ಸಾಫೀಸ್‌ನಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಯಾಗಿದೆ. ಅಪ್ಪಟ ಕನ್ನಡ ಸಿನಿಮಾ 'ಕಾಟೇರ' ಬಿಡುಗಡೆಯಾದ ಮೂರು ವಾರಗಳಲ್ಲಿ 1 ಕೋಟಿಗೂ ಅಧಿಕ ಟಿಕೆಟ್‌ಗಳು ಸೋಲ್ಡ್ ಔಟ್ ಆಗಿವೆ. "ಕನ್ನಡ ಭಾಷೆಯಲ್ಲಿ ಮಾತ್ರ ಬಿಡುಗಡೆಯಾದ ಕನ್ನಡ ಚಿತ್ರವೊಂದು 1 ಕೋಟಿಗೂ ಅಧಿಕ ಟಿಕೆಟ್‌ಗಳು ಮಾರಾಟಗೊಂಡ ಕನ್ನಡದ ಏಕೈಕ ಮೊದಲ ಚಿತ್ರ ಕಾಟೇರ" ಎಂದು ಚಿತ್ರತಂಡ ಹೇಳಿಕೊಂಡಿದೆ.

'ಕಾಟೇರ' ನಾಲ್ಕನೇ ವಾರದಲ್ಲೂ ಅಬ್ಬರಿಸುತ್ತಾ ಮುನ್ನುಗ್ಗುತ್ತಿದೆ. 4ನೇ ವಾರ ಸುಮಾರು 20 ಲಕ್ಷದ 63 ಸಾವಿರದ 983 ಟಿಕೆಟ್‌ಗಳು ಸೋಲ್ಡ್ ಆಗಿವೆ. ಈ ಟಿಕೆಟ್‌ಗಳಿಂದ ಸುಮಾರು 49.38 ಕೋಟಿ ರೂಪಾಯಿ (Gross) ಕಲೆಕ್ಷನ್ ಆಗಿದೆ ಎಂದು ಎಕ್ಸ್‌ಪರ್ಟ್‌ಗಳು ಅಭಿಪ್ರಾಯ ಪಟ್ಟಿದ್ದಾರೆ. ಪರಭಾಷೆಯ ಅದೆಷ್ಟೇ ದೊಡ್ಡ ಸಿನಿಮಾಗಳು ರಿಲೀಸ್ ಆದರೂ, ಕರ್ನಾಟಕದಲ್ಲಿ 'ಕಾಟೇರ' ಮುಂದೆ ನಿಲ್ಲೋಕೆ ಆಗಿಲ್ಲ.

ಇನ್ನು ಐದನೇ ವಾರದಲ್ಲಿ ಬ್ಯಾಕ್ ಟು ಬ್ಯಾಕ್ ರಜೆಗಳು ಇದೆ. ಇದು ಕೂಡ 'ಕಾಟೇರ'ಗೆ ಅನುಕೂಲ ಆಗಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ಸದ್ಯಕ್ಕೀಗ 200 ಕೋಟಿ ಮೈಲಿಗಲ್ಲು ಮುಟ್ಟಿರೋ 'ಕಾಟೇರ', ಮುಂದಿನ ದಿನಗಳಲ್ಲಿ 250 ಕೋಟಿ ರೂಪಾಯಿ ಮೇಲೆ ಕಣ್ಣಿಟ್ಟಿದೆ. ಒಂದು ವೇಳೆ 250 ಕೋಟಿ ಕ್ಲಬ್ ಸೇರಿದರೆ, ಸ್ಯಾಂಡಲ್‌ವುಡ್‌ ಹೊಸ ಇತಿಹಾಸ ಸೃಷ್ಟಿಸೋದರಲ್ಲಿ ಡೌಟೇ ಇಲ್ಲ.

More from Filmibeat

English summary
Darshan Kaatera movie Box office collection 200 crore
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X