'ಕಾಟೇರ' ಅಡ್ವಾನ್ಸ್ ಬುಕಿಂಗ್ ಆರಂಭ; ಒಂದು ಟಿಕೆಟ್ ಬೆಲೆ ₹1000, ಥಿಯೇಟರ್‌ ಯಾವುದು?

ಒಂದ್ಕಡೆ 'ಡಂಕಿ', ಇನ್ನೊಂದು ಕಡೆ 'ಸಲಾರ್'. ಎರಡು ಸಿನಿಮಾ ಬಿಡುಗಡೆಯಾದ ಒಂದು ವಾರದಲ್ಲಿ ಕನ್ನಡದ ಬಿಗ್ ಸಿನಿಮಾ 'ಕಾಟೇರ' ರಿಲೀಸ್‌ ಆಗುತ್ತಿದೆ. ಕನ್ನಡದ ಸೂಪರ್‌ಸ್ಟಾರ್ ದರ್ಶನ್ ಸಿನಿಮಾ ಅನ್ನೋದು ಒಂದಾದ್ರೆ, ದರ್ಶನ್ ಹಿಂದೆಂದೂ ಕಾಣದ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಅನ್ನೋದು ಇನ್ನೊಂದು ಇಂಟ್ರೆಸ್ಟಿಂಗ್ ವಿಷಯ.

'ಕಾಟೇರ' ಸಿನಿಮಾ ಬಿಡುಗಡೆಗೆ ಇನ್ನು ಕೇವಲ 6 ದಿನಗಳು ಬಾಕಿ ಉಳಿದಿವೆ. ಅಷ್ಟರಲ್ಲೇ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಕೂಡ ಓಪನ್ ಆಗಿದೆ. ಬೆಂಗಳೂರಿನಲ್ಲಿ ಆಯ್ದ ಕೆಲವು ಚಿತ್ರಮಂದಿರಗಳಲ್ಲಿ ಮಾತ್ರ ಬುಕಿಂಗ್ ಓಪನ್ ಮಾಡಲಾಗಿದೆ. ಇದಾದ ಕೆಲವೇ ಗಂಟೆಗಳಲ್ಲಿ ಫಾಸ್ಟ್ ಆಗಿ ಬುಕಿಂಗ್ ಆಗುತ್ತಿದೆ.

Darshan movie Kaatera ticket price thousand rupees in rockline cinemas in Bengaluru

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾಗೆ ಕ್ರೇಜ್ ಏನು ಕಮ್ಮಿ ಇಲ್ಲ. ರಿಲೀಸ್ ಡೇಟ್ ಅನೌನ್ಸ್ ಆಗುತ್ತಿದ್ದಂತೆ ಡಿ ಬಾಸ್ ಅಭಿಮಾನಿಗಳು ಸಿನಿಮಾ ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. 70ರ ದಶಕದ ಅವತಾರದಲ್ಲಿ ದರ್ಶನ್ ನೋಡುವುದಕ್ಕೆ ಸಜ್ಜಾಗಿದ್ದಾರೆ. ಸದ್ಯ ಅಡ್ವಾನ್ಸ್ ಬುಕಿಂಗ್ ಓಪನ್ ಆಗುತ್ತಿದ್ದಂತೆ ಟಿಕೆಟ್ ಬೆಲೆ ಬಗ್ಗೆನೇ ಚರ್ಚೆಯಾಗುತ್ತಿದೆ.

ಮೊದಲ ಹಂತವಾಗಿ ಬೆಂಗಳೂರಿನ ಸುಮಾರು 10 ಥಿಯೇಟರ್‌ಗಳಲ್ಲಿ 'ಕಾಟೇರ' ಸಿನಿಮಾದ ಅಡ್ವಾನ್ಸ್ ಬುಕಿಂಗ್‌ ಓಪನ್ ಮಾಡಲಾಗಿದೆ. ಇದರಲ್ಲಿ ಕೆಜಿ ರಸ್ತೆಯ ಪ್ರಮುಖ ಚಿತ್ರಮಂದಿರ ಅನುಪಮ ಕೂಡ ಸೇರಿದೆ. ಹಾಗೇ ಗೋಪಾಲ್ ಸಿನಿಮಾಸ್, ಪ್ರಸನ್ನ, ಲಕ್ಷ್ಮಿ ಅಂತಹ ಚಿತ್ರಮಂದಿರಗಳು ಕೂಡ ಅಡ್ವಾನ್ಸ್ ಬುಕಿಂಗ್ ಓಪನ್ ಮಾಡಿವೆ.

ಅನುಪಮಾದಿಂದ ಲಕ್ಷ್ಮಿ ಚಿತ್ರಮಂದಿರದವರೆಗೂ ಟಿಕೆಟ್ ಬೆಲೆಯಲ್ಲಿ ಹೆಚ್ಚೇನು ವ್ಯತ್ಯಾಸ ಕಂಡು ಬಂದಿಲ್ಲ. 150 ರೂಪಾಯಿಂದ ಟಿಕೆಟ್ ಬೆಲೆ ಆರಂಭವಾಗಿ 500 ರೂಪಾಯಿವರೆಗೂ ಇದೆ. ಆದರೆ, ರಾಕ್‌ಲೈನ್ ಸಿನಿಮಾಸ್‌ನಲ್ಲಿ ಟಿಕೆಟ್ ಬೆಲೆ ಗಗನಕ್ಕೆ ಏರಿದೆ. ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರದ್ದೇ ಸಿನಿಮಾ ಹಾಲ್ ಆಗಿರುವುದರಿಂದ ಇಲ್ಲಿ ಟಿಕೆಟ್ ಬೆಲೆ ದುಬಾರಿ ಎನಿಸಿದೆ.

Darshan movie Kaatera ticket price thousand rupees in rockline cinemas in Bengaluru

ಬೆಂಗಳೂರಿನ ಜಾಲಹಳ್ಳಿಯಲ್ಲಿರುವ ರಾಕ್‌ಲೈನ್ ಸಿನಿಮಾಸ್‌ನಲ್ಲಿ ಮಧ್ಯರಾತ್ರಿ 12 ಗಂಟೆಯಿಂದ 'ಕಾಟೇರ' ಸಿನಿಮಾ ಆರಂಭ ಆಗಲಿದೆ. ಮೊದಲ ಎರಡು ಶೋಗಳ ಟಿಕೆಟ್ ಬೆಲೆ 1000 ರೂಪಾಯಿ ಇಡಲಾಗಿದೆ. ಮಧ್ಯರಾತ್ರಿ 12 ಗಂಟೆ ಹಾಗೂ 3.30 ನಿಮಿಷಕ್ಕೆ ಆರಂಭ ಆಗುವ ಶೋ ನೋಡಬೇಕು ಅಂತಿದ್ದರೆ, 1000 ರೂಪಾಯಿ ಕೊಟ್ಟು ಟಿಕೆಟ್ ಖರೀದಿ ಮಾಡಬೇಕು. ಇದೂವರೆಗೂ ದರ್ಶನ್ ಸಿನಿಮಾದ ಟಿಕೆಟ್ ಬೆಲೆ ಇಷ್ಟೊಂದು ದುಬಾರಿ ಎನಿಸಿರಲಿಲ್ಲ.

'ರಾಬರ್ಟ್' ಅಂತಹ ಮೆಗಾ ಹಿಟ್ ಸಿನಿಮಾಗಳನ್ನು ಕೊಟ್ಟಿರೋ ಜೋಡಿ ಮತ್ತೆ 'ಕಾಟೇರ' ಮೂಲಕ ಜನರನ್ನು ರಂಜಿಸುವುದಕ್ಕೆ ಬರುತ್ತಿದೆ. ಇದು ತರುಣ್ ಸುಧೀರ್ ನಿರ್ದೇಶಿಸಿರುವ ವಿಭಿನ್ನ ಸಿನಿಮಾ. 70 ದಶಕದ ರೈತರ ಕಥೆಯನ್ನು ತೆರೆಮೇಲೆ ತರುತ್ತಿದ್ದು, ಈ ಸಿನಿಮಾ ಮೂಲಕ ಮಾಲಾಶ್ರೀ ಪುತ್ರಿ ಆರಾಧನಾ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಇವರೊಂದಿಗೆ ಬಿರಾದರ್, ಕುಮಾರ್ ಗೋವಿಂದ್, ಶ್ರುತಿ ಅಂತಹ ನಟರು ನಟಿಸಿರೋದು ವಿಶೇಷ.

More from Filmibeat

English summary
Kaatera Movie ticket price thousand rupees in rockline cinemas in Bengaluru
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X