"ಬಾಡಿ ಸಿಗದೇ ಕೊಲೆ ಕೇಸ್ ಅಲ್ಲ.. ಮಾಲ್ ಸಿಗದೆ ಕಳ್ ಕೇಸ್ ಅಲ್ಲ"; ಥಿಯೇಟರ್ ಮುಂದೆ ದಾಸನ ಫ್ಯಾನ್ಸ್ ದರ್ಬಾರ್

ದರ್ಶನ್ ವೃತ್ತಿ ಬದುಕಿನಲ್ಲೇ 'ನವಗ್ರಹ' ಸಿನಿಮಾ ವಿಶೇಷವಾಗಿ ನಿಲ್ಲುತ್ತೆ. ಸುಮಾರು 16 ವರ್ಷಗಳ ಹಿಂದೇನೆ ಇಂತಹದ್ದೊಂದು ಕನ್ನಡ ಚಿತ್ರರಂಗದಲ್ಲಿ ಇಂತಹದ್ದೊಂದು ಪ್ರಯತ್ನಕ್ಕೆ ಮುಂದಾಗಿತ್ತು. ಕನ್ನಡ ಚಿತ್ರರಂಗದ ದಿಗ್ಗಜ ಖಳನಾಯಕರ ಮಕ್ಕಳನ್ನು ಇಟ್ಟುಕೊಂಡು ಸಿನಿಮಾ ಮಾಡಲಾಗಿತ್ತು. ಈ ಪ್ರಯತ್ನಕ್ಕೆ ಕನ್ನಡಿಗರು ಕೂಡ ಮನಸೋತಿದ್ದರು.

ಇದೇ ಸಿನಿಮಾ ಈಗ 16 ವರ್ಷಗಳ ಬಳಿಕ ಮತ್ತೆ ಮರು ಬಿಡುಗಡೆಯಾಗುತ್ತಿದೆ. ಕಳೆದ ಒಂದು ವಾರದಿಂದಲೇ ದರ್ಶನ್ ಫ್ಯಾನ್ಸ್ ಸೆಲೆಬ್ರೆಷನ್ ಮಾಡುತ್ತಿದ್ದಾರೆ. ಇಂದು ಅದ್ಧೂರಿಯಾಗಿ ರೀ- ರಿಲೀಸ್ ಆಗಿರುವ ಈ ಸಿನಿಮಾಗೆ ಥಿಯೇಟರ್‌ಗಳಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ. ತೆರೆಮೇಲೆ ಮತ್ತೆ ದರ್ಶನ್ ನೋಡಿ ಫ್ಯಾನ್ಸ್ ಆರ್ಭಟಿಸುತ್ತಿದ್ದಾರೆ.

Darshan movie Navagraha Re Release This is how fans celebrated in theaters

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ದರ್ಶನ್‌ಗೆ ಮಧ್ಯಂತರ ಜಾಮೀನು ಸಿಕ್ಕಿದೆ. ಈ ಹಿಂದೆ ಜೈಲಿನಲ್ಲಿ ಇರುವಾಗಲೇ ದರ್ಶನ್ ನಟಿಸಿದ ಕೆಲವು ಸಿನಿಮಾ ಮರು ಬಿಡುಗಡೆಯಾಗಿದ್ದವು. ಈಗ ಜಾಮೀನು ಸಿಕ್ಕು ಹೊರ ಬಂದ ಮೇಲೆ 'ನವಗ್ರಹ' ಮತ್ತೆ ಬಿಡುಗಡೆಯಾಗುತ್ತಿದ್ದು, ಬಾಕ್ಸಾಫೀಸ್‌ ಮೇಲೆ ಸಿನಿಮಾ ಮಂದಿ ಕಣ್ಭಿಟ್ಟಿದ್ದಾರೆ. ಆದರೆ, ಅದಕ್ಕೂ ಮುನ್ನ ಥಿಯೇಟರ್‌ ಒಳಗೆ ಹೊರಗೆ ಸೆಲೆಬ್ರೆಷನ್ ಹೇಗಿದೆ? ಮತ್ತೆ ಸಿನಿಮಾ ನೋಡಿ ಫ್ಯಾನ್ಸ್ ಸೆಲೆಬ್ರೆಷನ್ ಹೇಗಿದೆ ನೋಡಿ.

ಮೈಸೂರಿನ ಅಂಬಾರಿ ಲೂಟಿ ಮಾಡಲು ಸಂಚು ಹಾಕುವ ಈ ರೋಚಕ ಕಥೆಯನ್ನು ತೆರೆಮೇಲೆ ತರಲಾಗಿತ್ತು. ದಿನಕರ್ ತೂಗುದೀಪ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದರು. ವಿನೋದ್ ಪ್ರಭಾಕರ್, ತರುಣ್ ಸುಧೀರ್, ಸೃಜನ್ ಲೋಕೇಶ್, ಧರ್ಮ ಕೀರ್ತಿರಾಜ್, ನಾಗೇಂದ್ರ ಅರಸ್, ಶರ್ಮಿಳಾ ಮಾಂಡ್ರೆ ಅಂತಹ ದೊಡ್ಡ ಸ್ಟಾರ್ ಕಾಸ್ಟ್ ಈ ಸಿನಿಮಾದಲ್ಲಿತ್ತು. ಈಗ ಮತ್ತೆ ಆ ಸಿನಿಮಾ ನೋಡುವುದಕ್ಕೆ ಥಿಯೇಟರ್ ಮುಂದೆ ಕ್ರೇಜ್ ಹೇಗಿದೆ ನೋಡಿ.

"ಡಿ ಬಾಸ್‌ಗೆ ಈ ತರ ಕ್ರೇಜ್ ಇರೋದು"

ಥಿಯೇಟರ್ ಮುಂದೆ ದರ್ಶನ್ ಅಭಿಮಾನಿಗಳ ಕ್ರೇಜ್ ಏನೂ ಕಮ್ಮಿಯಿಲ್ಲ. ಪ್ರತಿ ಸಿನಿಮಾ ರೀ ರಿಲೀಸ್ ಆದಂತೆ ಈ ಬಾರಿ ಕೂಡ ಥಿಯೇಟರ್‌ ಮುಂದೆ ಜಮಾಯಿಸಿದ್ದಾರೆ. ಬೆಳಗ್ಗೆ 7.30ರ ಶೋನಿಂದಲೇ ಫ್ಯಾನ್ಸ್ ಸಂಭ್ರಮಿಸುವುದಕ್ಕೆ ಶುರು ಮಾಡಿದ್ದಾರೆ. ಆ ವಿಡಿಯೋಗಳನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ. "Re-releaseಗೂ ಈ ತರ ಕ್ರೇಜ್ ಇರೋ ಒಬ್ರೇ ಒಬ್ಬ ನಟ ಅಂದ್ರೆ ಅದು ನಮ್ ಡಿಬಾಸ್" ಎನ್ನುತ್ತಿದ್ದಾರೆ.

ಥಿಯೇಟರ್ ಒಳಗೆ ಸೆಲೆಬ್ರೆಷನ್

ಇನ್ನು ಥಿಯೇಟರ್ ಒಳಗೆ ಅಭಿಮಾನಿಗಳು ಸೆಲೆಬ್ರೆಷನ್ ಏನೂ ಕಮ್ಮಿಯಿಲ್ಲ. ಸ್ಕ್ರೀನ್ ಮುಂದೆ ಅಭಿಮಾನಿಗಳು ಕುಣಿಯುತ್ತಿದ್ದಾರೆ. 'ನವಗ್ರಹ' ಸಿನಿಮಾದ ಹಾಡುಗಳು ಹಾಗೂ ದರ್ಶನ್ ಡೈಲಾಗ್ ಬಂದಾಗ ಫ್ಯಾನ್ಸ್ ಥಿಯೇಟರ್‌ನಲ್ಲಿಯೇ ನಿಲ್ಲುತ್ತಿಲ್ಲ. "ಧೂಳ್ ಧೂಳ್ ಜಗ್ಗು.. ಕರ್ನಾಟಕದ ಅತೀ ದೊಡ್ಡ ರೀ ರಿಲೀಸ್" ಎಂದು ಫ್ಯಾನ್ಸ್ ಕಾಮೆಂಟ್ ಮಾಡುತ್ತಿದ್ದಾರೆ.

ಡಿ ಬಾಸ್ ಫ್ಯಾನ್ಸ್‌ಗೆ ಈ ತಾಕತ್ತು ಇರೋದು

'ನವಗ್ರಹ' ಸಿನಿಮಾ ಕನ್ನಡ ಚಿತ್ರರಂಗದಲ್ಲಾದ ವಿಶಿಷ್ಟ ಪ್ರಯೋಗಗಳಲ್ಲಿ ಒಂದು. ಅದರಲ್ಲಿ ಎರಡು ಮಾತಿಲ್ಲ. ಆ ಸಮಯದಲ್ಲಿ ಈ ಸಿನಿಮಾಗೆ ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟದ ಗೆಲವು ಸಿಕ್ಕಿರಲಿಲ್ಲ. ಆದ್ರೀಗ 'ನವಗ್ರಹ'ಕ್ಕೆ ಕ್ರೇಜ್ ಹೆಚ್ಚಾಗಿದೆ. ಅದಕ್ಕೆ ಫ್ಯಾನ್ಸ್ " ಸ್ಕ್ರೀನ್ ಸ್ಟಾಪ್ ಮಾಡಿಸಿ, ಸೆಲೆಬ್ರೆಷನ್ ಮಾಡೋ ತಾಕತ್ತು ಇರೋದು ಡಿ ಬಾಸ್ ಫ್ಯಾನ್ಸ್‌ಗೆ ಮಾತ್ರ" ಎಂದು ಹೇಳಿದ್ದಾ

ಕಾಮೆಂಟ್‌ ಮೇಲೆ ಕಾಮೆಂಟ್

ಡಿ ಬಾಸ್ ಫ್ಯಾನ್ಸ್ ಥಿಯೇಟರ್ ಮುಂದೆ ಅಂತೂ ಸೆಲೆಬ್ರೆಟ್ ಮಾಡುತ್ತಿದ್ದಾರೆ. ಈ ದಿನ ಅವರಿಗೆ 'ನವಗ್ರಹ' ಹಬ್ಬ. ಥಿಯೇಟರ್ ಒಳಗೆ ಹಾಗೂ ಹೊರಗೆ ಎರಡೂ ಕಡೆಗಳಲ್ಲೂ ಸಂಭ್ರಮ ಜೋರಾಗಿಯೇ ಮನೆ ಮಾಡಿದೆ. "ಬಾಡಿ ಸಿಗದೇ ಕೊಲೆ ಕೇಸ್ ಅಲ್ಲ, ಮಾಲ್ ಸಿಗದೇ ಕಳ್ ಕೇಸ್ ಅಲ್ಲ" ಎಂದು ಬರೆದು ಕೊಂಡು ಸಂಭ್ರಮಿಸಿದ್ದಾರೆ.

More from Filmibeat

English summary
Darshan movie Navagraha Re Release This is how fans celebrated in theaters
Read more about: darshan navagraha filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X