"ನೆಮ್ಮದಿಯಾಗಿ ಊಟ ಮಾಡಿ" ಎನ್ನುತ ಫುಡ್ ಸ್ಟಾಲ್ ಹಾಕಿದ ದರ್ಶನ್ ಸೋದರಳಿಯ; ಏನೇನ್ ಸಿಗುತ್ತೆ?

ಮೈಸೂರಿನಲ್ಲಿ ದಸರಾ ಶುರುವಾಯ್ತು ಅಂದರೆ, ದರ್ಶನ್ ಬೆಂಗಳೂರು ಬಿಡುತ್ತಿದ್ದರು. ಆ ಸಂಭ್ರಮ ಮುಗಿಯುವವರೆಗೂ ಮೈಸೂರಿನಲ್ಲೇ ಟಿಕಾಣಿ ಹೂಡುತ್ತಿದ್ದರು. ಮೈಸೂರಿನವರೇ ಆಗಿದ್ದರಿಂದ ಇಡೀ ಕುಟುಂಬ ಸಂಭ್ರಮದಲ್ಲಿ ಮುಳುಗಿ ಏಳುತ್ತಿತ್ತು. ಆದರೆ, ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿ ಆದಲ್ಲಿಂದ ಅವರ ನಾಡ ಹಬ್ಬ ದಸರಾವನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ.

ಕಳೆದ ವರ್ಷ ಕೂಡ ಜೈಲಿನಲ್ಲಿ ಕಳೆಯಬೇಕಾಗಿತ್ತು. ದಸರಾ ಹಬ್ಬ ಮುಗಿದ ಬಳಿಕ ಜಾಮೀನಿನ ಮೇಲೆ ದರ್ಶನ್ ಬಿಡುಗಡೆಯಾಗಿದ್ದರು. ಈ ವರ್ಷ ದಸರಾವನ್ನು ಅದ್ದೂರಿಯಾಗಿ ಆಚರಿಸಬಹುದೆಂದು ಅಭಿಮಾನಿಗಳು ನಿರೀಕ್ಷೆ ಮಾಡಿದ್ದರು. ಆದರೆ, ಸುಪ್ರೀಂ ಕೋರ್ಟ್ ಜಾಮೀನು ರದ್ದು ಮಾಡಿದ್ದರಿಂದ ಎರಡನೇ ಬಾರಿ ಜೈಲು ಸೇರಿದ್ದಾರೆ. ಹೀಗಾಗಿ ಸತತ ಎರಡನೇ ವರ್ಷ ದಸರಾವನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ.

Darshan Nephew Chandan Kumar Food Stall nemmadiyagi oota maadi in Mysuru Dasara is trending

ಆದರೆ, ದರ್ಶನ್ ಅಭಿಮಾನಿಗಳಿಗೊಂದು ಖುಷಿ ಸುದ್ದಿಯಿದೆ. ದರ್ಶನ್ ಅವರ ಅಕ್ಕನ ಮಗ ಚಂದನ್ ಕುಮಾರ್ ನಾನ್ ವೆಜ್ ಹೋಟೆಲ್ ಅನ್ನು ತೆರೆದಿದ್ದಾರೆ. ಮೈಸೂರು ದಸರಾಗೆ ಬರುವವರಿಗಾಗಿ ಫುಡ್ ಸ್ಟಾಲ್ ಹಾಕಿದ್ದು, ಮಾಂಸಹಾರಿ ಊಟದ ವ್ಯವಸ್ಥೆ ಮಾಡಿದ್ದಾರೆ. ಅಭಿಮಾನಿಗಳು ಮಾಡಿರುವ ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅದಕ್ಕೆ ಕಾರಣ ಫುಡ್ ಸ್ಟಾಲ್‌ನ ಹೆಸರು. ಅಂದ್ಹಾಗೆ ದರ್ಶನ್ ಸೋದರಳಿಯನ ಫುಡ್‌ಸ್ಟಾರ್ ಹೆಸರೇನು? ಅಲ್ಲಿ ಏನೆಲ್ಲ ಸಿಗುತ್ತೆ ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೈಲಿನಲ್ಲಿ ಇದ್ದರೂ, ಅವರು ನಟಿಸಿರುವ 'ಡೆವಿಲ್' ಬಿಡುಗಡೆಯಾಗಲಿದೆ. ಈಗಾಗಲೇ 'ಡೆವಿಲ್' ರಿಲೀಸ್ ಡೇಟ್ ಕೂಡ ಅನೌನ್ಸ್ ಆಗಿದೆ. ಮುಂಬರುವ ಡಿಸೆಂಬರ್‌ 12ರಂದು ರಿಲೀಸ್ ಆಗಲಿದೆ. ಈಗಾಗಲೇ ಹಾಡೊಂದನ್ನು ಚಿತ್ರತಂಡ ರಿಲೀಸ್ ಮಾಡಿದೆ. ದರ್ಶನ್ ಅವರ ಜನಪ್ರಿಯ ಡೈಲಾಗ್ "ಇದ್ರೆ ನೆಮ್ಮದಿಯಾಗಿ ಇರಬೇಕ್" ಅನ್ನೋದನ್ನು ಇಟ್ಟುಕೊಂಡು ಹಾಡಿಗೆ ಟ್ಯೂನ್ ಹಾಕಲಾಗಿತ್ತು. ಅದು ರಿಲೀಸ್ ಆಗುತ್ತಿದ್ದಂತೆ ಯೂಟ್ಯೂಬ್‌ ಹಾಗೂ ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

ಈಗ ದರ್ಶನ್ ಅಕ್ಕನ ಮಗ ಚಂದನ್‌ ಈ ಹಾಡನ್ನೇ ಸ್ಪೂರ್ತಿಯಾಗಿಟ್ಟುಕೊಂಡು ತನ್ನ ಫುಡ್‌ಸ್ಟಾಲ್‌ಗೆ ಹೆಸರಿಟ್ಟಿದ್ದಾರೆ. ಅಂದ್ಹಾಗೆ ಈ ಫುಡ್‌ಸ್ಟಾಲ್ ಹೆಸರು "ನೆಮ್ಮದಿಯಾಗಿ ಊಟ ಮಾಡಿ". ಫುಡ್‌ ಸ್ಟಾಲ್ ಹಾಗೂ ನೆಟ್ಟಿಗರೊಬ್ಬರು ಮಾಡಿದ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ನೆಟ್ಟಿಗರೊಬ್ಬರು ಮೈಸೂರು ದಸರಾದ ಆಹಾರ ಮೇಳದಲ್ಲಿ ಇರುವ ಈ ಫುಡ್‌ಸ್ಟಾಲ್ ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದಾರೆ. "ಮೈಸೂರಿನ ದಸರಾ ಅಂಗವಾಗಿ ನಡೆಯುತ್ತಿರುವ ಆಹಾರ ಮೇಳದಲ್ಲಿ ಚಂದು ರವರು ನಾನ್ ವೆಜ್ ಹೋಟೆಲ್ ತೆರೆದಿದ್ದು, ಆಹಾರ ಮೇಳಕ್ಕೆ ಭೇಟಿ ನೀಡುವವರು 'ನೆಮ್ಮದಿಯಾಗಿ ಊಟ ಮಾಡಿ' ಹೋಟೆಲ್‌ನಲ್ಲಿ ರುಚಿಯಾದ ಊಟವನ್ನು ಸವಿಯಿರಿ" ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

ಇನ್ನು 'ನೆಮ್ಮದಿಯಾಗಿ ಊಟ ಮಾಡಿ' ಹೋಟೆಲ್‌ನಲ್ಲಿ ಏನಲ್ಲಾ ಸಿಗುತ್ತೆ ಅಂತ ನೋಡುವುದಾರೇ, ಚಿಕನ್ ಪಲಾವ್, ಮಟನ್ ಪಲಾವ್, ಮಟನ್ ಚಾಪ್ಸ್, ಚಿಕನ್ ಫ್ರೈ, ಚಿಕನ್ ಕಬಾಬ್ ಅನ್ನು ಇಡಲಾಗಿದೆ. ಬೆಲೆನೂ ಕಡಿಮೆಯಿದ್ದು, ಮೈಸೂರಿಗೆ ಬರುವವರಿಗೆ ನಾನ್ ವೆಜ್ ರುಚಿ ತೋರಿಸುವುದಕ್ಕೆ ಮುಂದಾಗಿದ್ದಾರೆ. ಇನ್ನು ಮೈಸೂರು ದಸರಾ ಕಳೆದ ಬಾರಿಯಂತೆ ಈ ಬಾರಿ ಕೂಡ ರಂಗೇರುತ್ತಿದೆ. ದೇಶ ಮೂಲೆ ಮೂಲೆಯಿಂದ ಜನರು ಮೈಸೂರು ದಸರಾವನ್ನು ಕಣ್ತುಂಬಿಕೊಳ್ಳುವುದಕ್ಕೆ ಆಗಮಿಸುತ್ತಿದ್ದಾರೆ.

More from Filmibeat

English summary
Darshan Nephew Chandan Kumar Food Stall Nemmadiyagi Oota Maadi in Mysuru Dasara is trending.
Read more about: darshan dasara mysore
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X