Darshan Fight: 'ಡೆವಿಲ್' ಸಿನಿಮಾ ರಿಲೀಸ್ ಬೆನ್ನಲ್ಲೇ ಸಹ ಖೈದಿಗಳಿಗೆ ಕಾಲಿನಲ್ಲಿ ಒದ್ದು ಕಿರುಕುಳ? ಏನಿದು ಕಿತ್ತಾಟ?

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸಿರುವ 'ಡೆವಿಲ್' ಸಿನಿಮಾ ಬಿಡುಗಡೆಗೆ ಇನ್ನೇನು ಕೆಲವೇ ದಿನಗಳು ಉಳಿದಿವೆ. ಅಷ್ಟರಲ್ಲಿ ಮತ್ತೆ ಸುದ್ದಿಯಾಗಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನ್ ತನ್ನ ಸಹ ಕೈದಿಗಳೊಂದಿಗೆ ಕಿತ್ತಾಡಿಕೊಂಡಿದ್ದಾರೆ. ಅವರಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆಯನ್ನು ನೀಡಿದ್ದಾರೆಂಬ ಆರೋಪ ಕೇಳಿ ಬಂದಿದೆ. ಎರಡನೇ ಬಾರಿ ಜೈಲು ಸೇರುತ್ತಿದ್ದಂತೆ ದರ್ಶನ್ ಮಾನಸಿಕವಾಗಿ ಡಿಸ್ಟರ್ಬ್ ಆಗಿದೆ ವರದಿಯಾಗಿದೆ.

'ಡೆವಿಲ್' ಬಿಡುಗಡೆ ಸಮಯದಲ್ಲಿ ಇಂತಹ ಕಿತ್ತಾಟದಲ್ಲಿ ಗುರುತಿಸಿಕೊಂಡಿದ್ದು ಸಿನಿಮಾಗೆ ಹಿನ್ನಡೆಯಾಗುವ ಸಾಧ್ಯತೆಯಿದೆ. ಟಿವಿ9 ವರದಿ ಮಾಡಿರುವಂತೆ ದರ್ಶನ್ ತನ್ನದೇ ಸೆಲ್‌ನಲ್ಲಿ ಇರುವ ಸಹ ಕೈದಿಗಳಿಗೆ ಕಿರುಕುಳ ನೀಡುತ್ತಿದ್ದಾರೆಂಬ ಆರೋಪ ಕೇಳಿ ಬಂದಿದೆ. ಸುಪ್ರೀಂ ಕೋರ್ಟ್ ದರ್ಶನ್ ಜಾಮೀನು ರದ್ದು ಮಾಡಿದ ಬಳಿಕ 2ನೇ ಬಾರಿ ಜೈಲು ಸೇರುತ್ತಿದ್ದಂತೆ ಮಾನಸಿಕವಾಗಿ ಕುಗ್ಗಿದ್ದಾರೆ ಎನ್ನಲಾಗಿದೆ.

Darshan physical harassment for jail mates with Jagadeesh and Anu Kumar

ರೇಣುಕಾಸ್ವಾಮಿ ಪ್ರಕರಣದಲ್ಲಿ 2ನೇ ಆರೋಪಿಯಾಗಿರುವ ದರ್ಶನ್ ಕಳೆದ ಕೆಲವು ತಿಂಗಳಿನಿಂದ ಜೈಲಿನಲ್ಲಿ ಇದ್ದಾರೆ. ಜೈಲು ಜೀವನಕ್ಕೆ ಒಗ್ಗಿಕೊಳ್ಳುವುದಕ್ಕೆ ದರ್ಶನ್ ಪರದಾಡುತ್ತಿದ್ದಾರೆ. ಅವರಿಗೆ ಬೇಕಿರುವ ಸೌಲಭ್ಯಗಳು ಜೈಲಿನಲ್ಲಿ ಸಿಗುತ್ತಿಲ್ಲ. ಹೀಗಾಗಿ ಮಾನಸಿಕವಾಗಿ ದರ್ಶನ್ ಕುಗ್ಗಿದ್ದಾರೆಂಬ ಸುದ್ದಿನೂ ಕೇಳಿಬರುತ್ತಿದೆ. ಈ ಮಧ್ಯೆ ರೇಣುಕಾಸ್ವಾಮಿ ಪ್ರಕರಣದಲ್ಲಿ ಭಾಗಿಯಾಗಿದ್ದ ಸಹಚರರ ಮೇಲೂ ದರ್ಶನ್ ಹಲ್ಲೆ ಪ್ರಕರಣ ಈಗ ದೊಡ್ಡ ಮಟ್ಟಕ್ಕೆ ಸುದ್ದಿಯಾಗುತ್ತಿದೆ.

ದರ್ಶನ್ ಎರಡನೇ ಬಾರಿಗೆ ಜೈಲಿಗೆ ಹೋದಾಗಲೇ ಅವರಿಗೆ ಮನವರಿಕೆಯಾಗಿತ್ತು. ಇನ್ನು ಆರರಿಂದ ಒಂದು ವರ್ಷ ಬಿಡುಗಡೆ ಭಾಗ್ಯವಿಲ್ಲ ಅನ್ನೋದು ಅವರಿಗೆ ಬಂದಿತ್ತು. ಆದರೆ, ಇಷ್ಟು ದಿನ ಜೈಲಿನಲ್ಲಿ ಕಾಲ ಕಳೆದ ಬಳಿಕ ದರ್ಶನ್ ತಾಳ್ಮೆಯನ್ನು ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ಹೀಗಾಗಿ ರೇಣುಕಾಸ್ವಾಮಿ ಕೇಸ್‌ನಲ್ಲಿ ಆರೋಪಿಗಳಾಗಿರುವ ಅನುಕುಮಾರ್, ಜಗ್ಗ, ನಾಗರಾಜು, ಪ್ರದೋಶ್, ಲಕ್ಷ್ಮಣ್ ಅವರ ಮೇಲೆ ದರ್ಪ ತೋರುತ್ತಿದ್ದಾರೆ ಎಂದು ಟಿವಿ9 ವರದಿ ಮಾಡಿದೆ.

ಒಂದೇ ಸೆಲ್‌ನಲ್ಲಿ ದರ್ಶನ್ ಜೊತೆಗೆ ಇನ್ನು ಐದು ಮಂದಿ ಅನುಕುಮಾರ್, ಜಗ್ಗ, ನಾಗರಾಜು, ಪ್ರದೋಶ್, ಲಕ್ಷ್ಮಣ್ ಇದ್ದಾರೆ. ಇದರಲ್ಲಿ ದರ್ಶನ್ ಮಾಜಿ ಮ್ಯಾನೇಜರ್ ನಾಗರಾಜ್ ಅವರನ್ನು ಬಿಟ್ಟು ಉಳಿದ ನಾಲ್ಕು ಮಂದಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳವನ್ನು ನೀಡುತ್ತಿದ್ದಾರೆ ಎನ್ನಲಾಗಿದೆ. ಮಲಗಿದ್ದ ಸಹ ಕೈದಿಗಳನ್ನು ಕಾಲಿನಿಂದ ಒದ್ದು ಎಚ್ಚರಿಸುತ್ತಿದ್ದಾರೆ ಅನ್ನೋ ಮಾತು ಕೂಡ ಕೇಳಿ ಬರುತ್ತಿದೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನ್‌ಗೆ ಕಠಿಣ ನಿಯಮ ವಿಧಿಸಲಾಗಿದೆ. ಅದರಲ್ಲೂ ಮೊದಲ ಬಾರಿ ಸಿಗರೇಟು ಹಿಡಿದು ಕೂತಿದ್ದ ದರ್ಶನ್ ಫೋಟೊಗಳು ವೈರಲ್ ಆಗಿತ್ತು. ಆ ಬಳಿಕ ಸುಪ್ರೀಂ ಕೋರ್ಟ್ ಜೈಲಾಧಿಕಾರಿಗಳ ವಿರುದ್ಧ ಅಸಮಧಾನ ಹೊರ ಹಾಕಿತ್ತು. ಟಿವಿ9 ವರದಿ ಮಾಡಿದಂತೆ ಈಗ ಐಪಿಎಸ್ ಅಧಿಕಾರಿ ಅಂಶು ಕುಮಾರ್ ಜೈಲಿನ ಮುಖ್ಯ ಸೂಪರಿಂಟೆಂಡೆಂಟ್ ಆಗಿ ನೇಮಕಗೊಂಡಿದ್ದಾರೆ. ಅವರು ಕಠಿಣ ನಿಯಮವನ್ನು ಜಾರಿಗೆ ತಂದಿದ್ದು, ಎಲ್ಲಾ ಕೆಲಸವನ್ನು ಅವರೇ ಮಾಡಬೇಡಿಕೊಳ್ಳಬೇಕಿದೆ. ಜೈಲಿನ ಶೌಚಾಲಯವನ್ನು ಅವರೇ ಸ್ವಚ್ಛಗೊಳಿಸಬೇಕಿದೆ. ಊಟವನ್ನು ಅವರೇ ಹೋಗಿ ತೆಗೆದುಕೊಳ್ಳಬೇಕಿದೆ. ಇದು ದರ್ಶನ್ ಅಸಮಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ದರ್ಶನ್ ಈ ಎಲ್ಲಾ ಘಟನೆಗಳಿಂದ ಬೇಸತ್ತಿರುವ ದರ್ಶನ್ ತಾಳ್ಮೆಯನ್ನು ಕಳೆದುಕೊಂಡಿದ್ದಾರೆನ್ನಲಾಗಿದೆ. ಹೀಗಾಗಿ ಜಗದೀಶ್ ಹಾಗೂ ಅನು ಕುಮಾರ್‌ಗೆ ಚಿತ್ರಹಿಂಸೆ ಕೊಡುವುದಕ್ಕೆ ಶುರು ಮಾಡಿದ್ದಾರೆ ಆರೋಪ ಮಾಡಲಾಗಿದೆ. ಹೀಗಾಗಿ ದರ್ಶನ್ ಕೊಡುತ್ತಿರುವ ಟಾರ್ಚರ್ ತಡೆದು ಕೊಳ್ಳಲಾಗದೆ ಇಲ್ಲೇ ಇದ್ದರೆ ಸಾಯ್ತೀನಿ ಎಂದು ಅನು ಕುಮಾರ್ ಹೇಳಿಕೊಂಡಿದ್ದಾರಂತೆ. ಅಲ್ಲದೇ ಅನುಕುಮಾರ್, ಜಗದೀಶ್ ಇಬ್ಬರೂ ತಮ್ಮನ್ನು ಚಿತ್ರದುರ್ಗದ ಜೈಲಿಗೆ ಶಿಫ್ಟ್ ಮಾಡುವಂತೆ ಕೇಳಿಕೊಂಡಿದ್ದಾರೆ.

More from Filmibeat

English summary
Darshan physical harassment for jail mates with Jagadeesh and Anu Kumar.
Read more about: darshan jail case
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X