Darshan-Devil: 'ಡೆವಿಲ್' ಸಿನಿಮಾದಲ್ಲಿ ಇರೋ ಹಾಡುಗಳೆಷ್ಟು? ಆಕ್ಷನ್ ಸೀಕ್ವೆನ್ಸ್ ಎಷ್ಟು ಗೊತ್ತೇ?
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಡೆವಿಲ್' ಸಿನಿಮಾ ಬಿಡುಗಡೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಈ ಸಿನಿಮಾವನ್ನು ಗೆಲ್ಲಿಸಲೇಬೇಕು ಅಂತ ಅಭಿಮಾನಿಗಳು ಹಾಗೂ ಚಿತ್ರತಂಡ ಪಣತೊಟ್ಟು ನಿಂತಿದೆ. ಈಗಾಗಲೇ ಸಿನಿಮಾ ಎರಡು ಹಾಡುಗಳನ್ನೂ ರಿಲೀಸ್ ಮಾಡಿದ್ದು, ಟ್ರೈಲರ್ ಲಾಂಚ್‌ಗೆ ವೇದಿಕೆ ಕೂಡ ರೆಡಿಯಾಗಿದೆ. ಈ ಮಧ್ಯೆ ಸಿನಿಮಾದ ಬಗ್ಗೆ ಒಂದೊಂದೇ ಸೀಕ್ರೆಟ್‌ಗಳು ರಿವೀಲ್ ಆಗುತ್ತಿವೆ.
ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಹೆಸರು ಬಾರದೇ ಹೋಗಿದ್ದರೆ, ಈಗಾಗಲೇ ಸಿನಿಮಾ ರಿಲೀಸ್ ಆಗಿರುತ್ತಿತ್ತು. ಆದ್ರೀಗ ದರ್ಶನ್ ಇಲ್ಲದೆಯೇ ಸಿನಿಮಾದ ಪ್ರಚಾರದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. 'ಕಾಟೇರ'ದಂತಹ ಬ್ಲಾಕ್ ಬಸ್ಟರ್ ಸಿನಿಮಾ ಕೊಟ್ಟ ಬಳಿಕ ಒಪ್ಪಿಕೊಂಡಿರುವ ಸಿನಿಮಾ ಆಗಿದ್ದರಿಂದ 'ಡೆವಿಲ್' ಬಗ್ಗೆ ನಿರೀಕ್ಷೆಗಳು ಹೆಚ್ಚಿವೆ. ಈಗಾಗಲೇ ಥಿಯೇಟರ್‌ಗಳ ಮುಂದೆ ಅಭಿಮಾನಿಗಳ ಸಂಭ್ರಮವೂ ಶುರುವಾಗಿದೆ.

ದರ್ಶನ್ ಜೈಲಿನೊಳಗೆ ಇದ್ದರೂ ನಿರ್ದೇಶಕ-ನಿರ್ಮಾಪಕ ಮಿಲನ ಪ್ರಕಾಶ್ 'ಡೆವಿಲ್' ಸಿನಿಮಾ ಬಿಡುಗಡೆ ಮುಂದಾಗಿದ್ದು, ಸಿನಿಮಾದಲ್ಲಿರುವ ಕೆಲವು ಕಂಟೆಂಟ್‌ಗಳ ಬಗ್ಗೆ ಸ್ಯಾಂಡಲ್‌ವುಡ್‌ನಲ್ಲಿ ಚರ್ಚೆಯಾಗುತ್ತಿದೆ. ಅದರಲ್ಲೂ ಈ ಸಿನಿಮದಲ್ಲಿ ಎಷ್ಟು ಹಾಡುಗಳಿವೆ? ಎಷ್ಟು ಆಕ್ಷನ್ ಸೀಕ್ವೆನ್ಸ್ ಇವೆ ಅನ್ನೋದು ಸಿನಿಮಾ ಮಂದಿ ಚರ್ಚೆ ಮಾಡುವುದಕ್ಕೆ ಶುರು ಮಾಡಿದ್ದಾರೆ. 'ಡೆವಿಲ್' ಬಗ್ಗೆ ಹರಿದಾಡುತ್ತಿರುವ ಸುದ್ದಿಗಳ ಮೇಲೆ ಕಣ್ಣಾಯಿಸೋದಾರೇ,
'ಡೆವಿಲ್'ನಲ್ಲಿರೋ ಸಾಂಗ್‌ಗಳೆಷ್ಟು?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಡೆವಿಲ್' ಸಿನಿಮಾದಲ್ಲಿ ಐದು ಹಾಡುಗಳಿವೆ. ಅದರಲ್ಲಿ ಅಜನೀಶ್ ಲೋಕನಾಥ್ 5 ವಿಭಿನ್ನ ಸಾಂಗ್‌ಗಳನ್ನು ಕಂಪೋಸ್ ಮಾಡಿದ್ದಾರೆ. ಅದರಲ್ಲಿ ಒಂದು ಮಾಂಟೇಜ್ ಸಾಂಗ್, ಇನ್ನೊಂದು ಇಂಟ್ರುಡಕ್ಷನ್ ಸಾಂಗ್, ಮತ್ತೊಂದು ಎಮೋಷನಲ್ ಸಾಂಗ್, ಉಳಿದ ಎರಡು ಡ್ಯೂಯೆಟ್ ಸಾಂಗ್‌ಗಳು ಇವೆ. ಈಗಾಗಲೇ ಮೂರು ಹಾಡುಗಳು ರಿಲೀಸ್ ಆಗಿದ್ದು, ಫ್ಯಾನ್ಸ್‌ಗೆ ಕಿಕ್ ಕೊಟ್ಟಿವೆ. ಈ ಐದು ಹಾಡುಗಳು ಸಿನಿಮಾ ನೋಡುವ ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಇಷ್ಟ ಆಗುತ್ತೆ ಅನ್ನೋದು ಸಿನಿಮಾ ಮಂದಿಯ ಮಾತು.
ಎಷ್ಟು ಆಕ್ಷನ್ ಸೀಕ್ವೆನ್ಸ್ ಇವೆ?
'ಡೆವಿಲ್' ಸಿನಿಮಾದಲ್ಲಿ ಐದು ಹಾಡುಗಳಿದ್ದರೆ, ಹಾಗೇ ಐದು ಆಕ್ಷನ್ ಸೀಕ್ವೆನ್ಸ್ ಇವೆ. ಸಿನಿಮಾದ ಬೇರೆ ಬೇರೆ ಸನ್ನಿವೇಶದಲ್ಲಿ ಐದು ಫೈಟ್‌ಗಳು ಬಂದು ಹೋಗುತ್ತವೆ. ಇವು ಪ್ರೇಕ್ಷಕರಿಗೆ ಸಖತ್ ಕಿಕ್ ಕೊಡುತ್ತವೆಂದು ಸಿನಿಮಾ ಮಂದಿ ಮಾತಾಡಿಕೊಳ್ಳುತ್ತಿದ್ದಾರೆ. ಸಿನಿಮಾದ ಹೈಲೈಟ್ ಅಂದರೆ, ಆಕ್ಷನ್ ಸೀಕ್ವೆನ್ಸ್ ಎಂದು ಹೇಳಲಾಗುತ್ತಿದೆ.

ಸ್ಟೈಲಿಶ್ ಲುಕ್
ದರ್ಶನ್ 'ಡೆವಿಲ್' ಸಿನಿಮಾದಲ್ಲಿ ಹಿಂದೆಂದಿಗಿಂತಲೂ ಸ್ಟೈಲಿಶ್ ಆಗಿ ಕಾಣಿಸುತ್ತಾರೆ ಎನ್ನಲಾಗಿದೆ. ಮಿಲನ ಪ್ರಕಾಶ್ ಹೆಣೆದಿರೋ ಕಥೆಯಲ್ಲಿ ದರ್ಶನ್ ಲುಕ್ ಹಾಗೂ ಮ್ಯಾನಸರಿಂಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. 'ಕಾಟೇರ'ದಲ್ಲಿ ಹಳ್ಳಿಯವನಾಗಿ ಕಾಣಿಸಿಕೊಂಡಿದ್ದ ದರ್ಶನ್, ಈ ಸಿನಿಮಾದಲ್ಲಿ ಕಂಪ್ಲೀಟ್ ಅಪೋಸಿಟ್ ಲುಕ್ ಕೊಟ್ಟಿದ್ದಾರೆ ಎನ್ನಲಾಗಿದೆ. ಜೊತೆಗೆ ಒಂದಿಷ್ಟು ಪಂಚಿಂಗ್ ಡೈಲಾಗ್‌ಗಳು ಇವೆ. ಇವುಗಳನ್ನು ಕೇಳಿ ಪ್ರೇಕ್ಷಕರು ಶಿಳ್ಳೆ ಹೊಡೆಯೋದು ಗ್ಯಾರಂಟಿ ಅಂತಿವೆ ಮೂಲಗಳು.
ಟ್ರೈಲರ್ ರಿಲೀಸ್ ಯಾವಾಗ?
ಮಿಲನ ಪ್ರಕಾಶ್ ಎರಡು ಟ್ರೈಲರ್ ಅನ್ನು ಕಟ್ ಮಾಡಿಕೊಟ್ಟುಕೊಂಡಿದ್ದಾರೆ. ಅದರಲ್ಲಿ ಯಾವುದು ರಿಲೀಸ್ ಮಾಡಬೇಕು ಅನ್ನೋ ನಿರ್ಧಾರಕ್ಕೆ ಇನ್ನೂ ಬಂದಿಲ್ಲ ಎನ್ನಲಾಗಿದೆ. ಡಿಸೆಂಬರ್ ಮೊದಲ ವಾರ ಅಂದರೆ, ಡಿ. 03ರಂದು ಟ್ರೈಲರ್ ಮಾಡುವ ಆಲೋಚನೆಯಿಟ್ಟುಕೊಂಡಿದ್ದಾರೆಂದು ಗಾಂಧಿನಗರ ಮಾತಾಡಿಕೊಳ್ಳುತ್ತಿದೆ. ಆದರೆ, ಈ ಬಗ್ಗೆ ಚಿತ್ರತಂಡ ಆಗಲಿ, ಇಲ್ಲವೇ ನಿರ್ದೇಶಕ ಮಿಲನ ಪ್ರಕಾಶ್ ಆಗಲಿ ಅಧಿಕೃತವಾಗಿ ಎಲ್ಲೂ ಹೇಳಿಕೆ ಕೊಟ್ಟಿಲ್ಲ.


Click it and Unblock the Notifications











