India
  For Quick Alerts
  ALLOW NOTIFICATIONS  
  For Daily Alerts

  ದರ್ಶನ್ 'ಕ್ರಾಂತಿ' ಸಿನಿಮಾ ಶೂಟಿಂಗ್ ನಿಂತಿಲ್ಲ: ಶೀಘ್ರದಲ್ಲೇ ಮತ್ತೆ ಚಿತ್ರೀಕರಣ ಆರಂಭ!

  |

  ಎಲ್ಲಿ ನೋಡಿದರೂ ಕೊರೊನಾ ಆತಂಕ. ಮತ್ತೆ ಲಾಕ್ ಡೌನ್ ಆಗುತ್ತೆ. ಚಿತ್ರರಂಗ ಬಾಗಿಲು ಹಾಕುತ್ತೆ. ಸಿನಿಮಾ ಶೂಟಿಂಗ್ ಸ್ಟಾಪ್ ಆಗುತ್ತೆ ಅನ್ನುವ ಮಾತು ಕೇಳಿ ಬರುತ್ತಿದೆ. ಕೆಲವು ಸಿನಿಮಾಗಳ ಚಿತ್ರೀಕರಣ ನಿಂತೇ ಹೋಗಿದೆ ಅನ್ನುವ ಸುದ್ದಿ ಕೂಡ ಕೇಳಿ ಬರುತ್ತಿದೆ. ಈ ಗ್ಯಾಪ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ ಶೂಟಿಂಗ್ ಬಗ್ಗೆ ಸುದ್ದಿಗಳು ಹರಿದಾಡಿದ್ದವು. ದರ್ಶನ್ ಸಿನಿಮಾ ಕೊರೊನಾ ಆತಂಕ ಎದುರಾಗಿದೆ ಎಂದು ಹೇಳಲಾಗುತ್ತಿತ್ತು.

  ಸ್ಯಾಂಡಲ್‌ವುಡ್‌ನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಕ್ರಾಂತಿ'. ರಾಬರ್ಟ್ ಬಳಿಕ ದರ್ಶನ್ ಅಭಿನಯದ ಮತ್ತೊಂದು ಮಾಸ್ ಕಮ್ ಪವರ್‌ಫುಲ್ ಸಿನಿಮಾ. ಹೀಗಾಗಿ ಈ ಸಿನಿಮಾ ನೋಡಲು ಜನರು ಕಾದು ಕೂತಿದ್ದಾರೆ. ಆದರೆ, ಕೊರೊನಾ ಮೂರನೇ ಅಲೆ ಆರಂಭ ಆಗಿದ್ದರಿಂದ 'ಕ್ರಾಂತಿ' ಸಿನಿಮಾ ಶೂಟಿಂಗ್ ನಿಂತು ಹೋಗಿದ್ಯಾ? ಅನ್ನುವ ಆತಂಕಕ್ಕೆ ಅಭಿಮಾನಿಗಳು ಒಳಗಾಗಿದ್ದರು. ಸಿನಿಮಾ ಶೂಟಿಂಗ್ ಹಾಗೂ ಕ್ರಾಂತಿ ಬಗ್ಗೆ ನಿರ್ಮಾಪಕಿ ಶೈಲಜಾ ನಾಗ್ ಫಿಲ್ಮಿ ಬೀಟ್‌ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.

   ಕ್ರಾಂತಿ ಶೂಟಿಂಗ್ ನಿಲ್ಲಿಸಿಲ್ಲ

  ಕ್ರಾಂತಿ ಶೂಟಿಂಗ್ ನಿಲ್ಲಿಸಿಲ್ಲ

  'ಕ್ರಾಂತಿ' ಕನ್ನಡ ಚಿತ್ರರಂಗದಲ್ಲಿ ಕುತೂಹಲ ಕೆರಳಿಸಿರುವ ಸಿನಿಮಾ. ಯಾಕೆ ಅಂದರೆ, ಇದು ನಿರ್ದೇಶಕ ವಿ.ಹರಿಕೃಷ್ಣ ಹಾಗೂ ದರ್ಶನ್ ಕಾಂಬಿನೇಷನ್‌ನಲ್ಲಿ ಬರುತ್ತಿರುವ ಎರಡನೇ ಚಿತ್ರ. 'ರಾಬರ್ಟ್' ಅಂತಹ ಸೂಪರ್ ಹಿಟ್ ಸಿನಿಮಾ ಕೊಟ್ಟ ದರ್ಶನ್ ಹೊಸ ಸಿನಿಮಾ ನೋಡಲು ಕಾತರದಿಂದ ಕಾದು ಕೂತಿದ್ದಾರೆ. ಆದರೆ, ಕೊರೊನಾ ಆತಂಕದಲ್ಲಿ ಶೂಟಿಂಗ್ ನಿಂತು ಹೋದರೆ ಮತ್ತೆ ಬಿಡುಗಡೆ ತಡವಾಗುತ್ತೆ ಎನ್ನುವ ಆತಂಕ ಅಭಿಮಾನಿಗಳಲ್ಲಿತ್ತು. ಆದರೆ, ಸಿನಿಮಾ ಶೂಟಿಂಗ್ ನಿಲ್ಲಿಸಿಲ್ಲ. ಇನ್ನು ಮೂರು ನಾಲ್ಕು ಮತ್ತೆ ಚಿತ್ರೀಕರಣ ಆರಂಭ ಮಾಡುವ ಬಗ್ಗೆ ನಿರ್ಮಾಪಕಿ ಮಾಹಿತಿ ನೀಡಿದ್ದಾರೆ.

   ಶೇ. 30ರಷ್ಟು ಶೂಟಿಂಗ್ ಫಿನಿಶ್

  ಶೇ. 30ರಷ್ಟು ಶೂಟಿಂಗ್ ಫಿನಿಶ್

  'ಕ್ರಾಂತಿ' ಚಿತ್ರದ ಬಗ್ಗೆ ನಿರ್ಮಾಪಕಿ ಶೈಲಜಾ ನಾಗ್ ಫಿಲ್ಮಿ ಬೀಟ್ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ. ಸಿನಿಮಾ ಚಿತ್ರೀಕರಣ ಕೊರೊನಾದಿಂದ ನಿಂತಿಲ್ಲ. ಚಿಕ್ಕದೊಂದು ಬ್ರೇಕ್ ತೆಗೆದುಕೊಳ್ಳಲಾಗಿದೆ ಅಷ್ಟೇ. "ಕ್ರಾಂತಿ ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ಚಿಕ್ಕದೊಂದು ಬ್ರೇಕ್ ಪಡೆದಿದ್ದೇವೆ ಅಷ್ಟೇ. ಇನ್ನು ಮೂರು ನಾಲ್ಕು ದಿನಗಳಲ್ಲಿ ಮತ್ತೆ ಕ್ರಾಂತಿ ಚಿತ್ರದ ಶೂಟಿಂಗ್ ಅನ್ನು ಶುರು ಮಾಡುತ್ತೇವೆ. ಈಗಾಗಲೇ ಶೇ. 30 ರಷ್ಟು ಸಿನಿಮಾ ಶೂಟಿಂಗ್ ಅನ್ನು ಮುಗಿಸಿದ್ದೇವೆ. ಹೊರಗಡೆ ನೆಗೆಟಿವಿಟಿ ಜಾಸ್ತಿ ಇದೆ. ಯಾರು ನೋಡಿದರೂ ಕೊರೊನಾ ಬಗ್ಗೆನೇ ಮಾತಾಡುತ್ತಾರೆ. ಹೀಗಾಗಿ ಆದಷ್ಟು ಬೇಗ ಶೂಟಿಂಗ್ ಮುಗಿಸಬೇಕು ಅಂತಿದ್ದೀವಿ. ನೋಡೋಣ, ಎಲ್ಲಿವರೆಗೂ ಶೂಟಿಂಗ್ ಮಾಡಲು ಸಾಧ್ಯವೋ ಅಲ್ಲಿಯವರೆಗೂ ಚಿತ್ರೀಕರಣ ನಡೆಯುತ್ತೆ." ಎಂದು ಕ್ರಾಂತಿ ಚಿತ್ರದ ನಿರ್ಮಾಪಕ ಶೈಲಜಾ ನಾಗ್ ತಿಳಿಸಿದ್ದಾರೆ.

   ವಿದೇಶಕ್ಕೆ ಹೋಗುವುದಿನ್ನೂ ವಿಳಂಬ

  ವಿದೇಶಕ್ಕೆ ಹೋಗುವುದಿನ್ನೂ ವಿಳಂಬ

  ಕರ್ನಾಟಕದಲ್ಲಿ ಕೊರೊನಾ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ವಿದೇಶದಲ್ಲಿ ಚಿತ್ರೀಕರಿಸಬೇಕಿರುವ ಭಾಗವನ್ನು ಶೂಟ್ ಮಾಡಲಾಗುತ್ತೆ ಎನ್ನಲಾಗಿತ್ತು. ಈ ಬಗ್ಗೆನೂ ಶೈಲಜಾ ನಾಗ್ ಪ್ರತಿಕ್ರಿಯೆ ನೀಡಿದ್ದಾರೆ. "ಫಾರಿನ್‌ನಲ್ಲಿ ಶೂಟಿಂಗ್ ಮಾಡಬೇಕು. ಆದರೆ, ಇಲ್ಲಿ ಮಾಡಬೇಕಿರುವ ಶೂಟಿಂಗ್ ಮುಗಿಸಿದ ಬಳಿಕ ವಿದೇಶಕ್ಕೆ ಹೋಗುತ್ತೇವೆ. ಅಲ್ಲಿವರೆಗೂ ಎಲ್ಲಿಗೂ ಹೋಗುವುದಿಲ್ಲ. ಕೊರೊನಾ ಇರುವುದರಿಂದ ನೈಜತಾಣಗಳಲ್ಲಿ ಸಿನಿಮಾ ಶೂಟಿಂಗ್ ಮಾಡುವುದು ಕಷ್ಟವೆನಿಸಿದೆ. ಆ ಕಾರಣಕ್ಕಾಗಿ ಸೆಟ್ ಹಾಕಿ ಶೂಟಿಂಗ್ ಮಾಡುತ್ತಿದ್ದೇವೆ." ಎನ್ನುತ್ತಾರೆ ಶೈಲಜಾ ನಾಗ್

   ದರ್ಶನ್ - ರಚಿತಾ ಜೋಡಿ ಹೈಲೈಟ್

  ದರ್ಶನ್ - ರಚಿತಾ ಜೋಡಿ ಹೈಲೈಟ್

  ಹರಿಕೃಷ್ಣ ನಿರ್ದೇಶನ ಮಾಡುತ್ತಿರುವ 2ನೇ ಸಿನಿಮಾ ಕ್ರಾಂತಿ ಹೈಲೈಟ್ ಅಂದ್ರೆ, ದರ್ಶನ್ ಹಾಗೂ ರಚಿತಾ ರಾಮ್ ಕಾಂಬಿನೇಷನ್. ಬಹಳ ದಿನಗಳ ಬಳಿಕ ಮತ್ತೆ ಈ ಜೋಡಿ ಒಂದಾಗಿದೆ. ಹೀಗಾಗಿ ದರ್ಶನ್ ಹಾಗೂ ರಚಿತಾ ರಾಮ್ ಅಭಿಮಾನಿಗಳಲ್ಲಿ ಸಿನಿಮಾ ಬಗ್ಗೆ ಕುತೂಹಲ ದುಪ್ಪಟ್ಟಾಗಿದೆ. ಇನ್ನು ಮೂರು ನಾಲ್ಕು ಮತ್ತೆ ಚಿತ್ರೀಕರಣ ಆರಂಭ ಮಾಡಲು ಚಿತ್ರತಂಡ ಸಿದ್ದವಾಗಿದ್ದು, ಆದಷ್ಟು ಬೇಗ ಅಭಿಮಾನಿಗಳಿಗೆ ತಲುಪಿಸಲು ನಿರ್ಧಾರ ಮಾಡಿದೆ. ಆದರೆ, ಕೊರೊನಾ ಮೂರನೇ ಅಲೆಯ ಬಗ್ಗೆ ಎಲ್ಲವೂ ನಿಂತಿದೆ.

  English summary
  Darshan starrer Kranti Movie speed up the shooting due to corona crisis. Omicron variant and third wave scare, Kranti team is working without any breaks.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X