ಚಿತ್ರದುರ್ಗದ ಖಾಸಗಿ ಆಸ್ಪತ್ರೆಯಲ್ಲಿ ಸಹನಾಗೆ ಹೆರಿಗೆ: ಮೃತ ರೇಣುಕಾಸ್ವಾಮಿಗೆ ಗಂಡು ಮಗು ಜನನ
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ದೇಶದಾದ್ಯಂತ ಸಂಚಲನ ಸೃಷ್ಟಿಸಿದೆ. ಇತ್ತ ಈ ಪ್ರಕರಣದಲ್ಲಿ ಆರೋಪಿಯಾಗಿರುವ ದರ್ಶನ್ ಜಾಮೀನು ನೀಡುವ ಬಗ್ಗೆ ಚರ್ಚೆಯಾಗುತ್ತಿದ್ದರೆ, ಅತ್ತ ರೇಣುಕಾಣುಸ್ವಾಮಿ ಕುಟುಂಬದಲ್ಲಿ ಖುಷಿ ಮನೆ ಮಾಡಿದೆ. ಒಂದು ಕಡೆ ದರ್ಶನ್‌ಗೆ ಜಾಮೀನು ಸಿಗದ ಬೆನ್ನಲ್ಲೇ ಹರ್ಷ ವ್ಯಕ್ತಪಡಿಸಿದ್ದರೆ, ಇನ್ನೊಂದು ಕಡೆ ರೇಣುಕಾಸ್ವಾಮಿ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ನಡೆಯುವ ವೇಳೆ ಅವರ ಪತ್ನಿ ಸಹನಾ ಐದು ತಿಂಗಳ ಗರ್ಭಿಣಿಯಾಗಿದ್ದರು. ಆ ಸಂದರ್ಭದಲ್ಲಿ ಪತಿಯ ಹತ್ಯೆಯನ್ನು ಸಹನಾ ಕಂಡಿಸಿದ್ದರು. ಯಾರು ಹತ್ಯೆ ಮಾಡಿದ್ದಾರೋ ಅವರಿಗೆ ಶಿಕ್ಷೆ ಆಗಲೇಬೇಕು ಎಂದು ಕಣ್ಣೀರು ಹಾಕಿದ್ದರು. ರೇಣುಕಾಸ್ವಾಮಿ ಸಾವನ್ನಪ್ಪಿ ನಾಲ್ಕು ತಿಂಗಳು ಆಗಿದ್ದು, ಇಂದು (ಅಕ್ಟೋಬರ್ 16) ಬೆಳಗಿನ ಜಾವ ರೇಣುಕಾಸ್ವಾಮಿ ಪತ್ನಿ ಸಹನಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಚಿತ್ರದುರ್ಗದ ರೇಣಕಾಸ್ವಾಮಿಯನ್ನು ದರ್ಶನ್ ಮತ್ತು ಅವರ ಗ್ಯಾಂಗ್ ಅಪಹರಣ ಮಾಡಿ ಬೆಂಗಳೂರಿಗೆ ಕರೆತಂದಿದ್ದರು. ದರ್ಶನ್ ಗೆಳತಿ ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ. ಇದರಿಂದ ಕೋಪಗೊಂಡಿದ್ದ ದರ್ಶನ್ ಮತ್ತು ಅವರ ಸಂಗಡಿಗರು ರೇಣುಕಾಸ್ವಾಮಿಯನ್ನು ಪಟ್ಟಣಗೆರೆ ಶೆಡ್‌ನಲ್ಲಿ ಮನಸೋ ಇಚ್ಚೆ ಥಳಿಸಿದ್ದರು. ಇದರಿಂದ ರೇಣುಕಾಸ್ವಾಮಿ ಸಾವನ್ನಪ್ಪಿದ್ದಾರೆಂಬ ಆರೋಪ ದರ್ಶನ್ ಹಾಗೂ ಸಂಗಡಿಗರ ಮೇಲಿದೆ.
ಇತ್ತ ಮಗನನ್ನು ಕಳೆದುಕೊಂಡ ದು:ಖ ಒಂದು ಕಡೆ. ಅದೇ ಇನ್ನೊಂದು ಕಡೆ ಮೊಮ್ಮಗನನ್ನು ಪಡೆದ ಖುಷಿ. ರೇಣುಕಾಸ್ವಾಮಿ ತಂದೆ ಕಾಶಿನಾಥ್ ಶಿವನಗೌಡರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವಾಗ ಭಾವುಕರಾಗಿದ್ದಾರೆ. ಮಗನನ್ನು ಕಳೆದುಕೊಂಡಿದ್ದ ತಂದೆಗೆ ಮತ್ತೆ ಮಗನೇ ಸಿಕ್ಕಿದಂತೆ ಆಗಿದೆ. ಈ ಖುಷಿಯ ಸಂದರ್ಭದಲ್ಲೂ ಭಾವುಕರಾಗಿ ಪ್ರತಿಕ್ರಿಯೆ ನೀಡಿದ್ದಾರೆ.
"ಈ ದಿನ ಬೆಳಗ್ಗೆ 6.55ಕ್ಕೆ ಗಂಡು ಮಗುವಿನ ಜನನ ಆಗಿದೆ. ತಾಯಿ ಹಾಗೂ ಮಗು ಸುಖವಾಗಿದ್ದಾರೆ. ಇಲ್ಲಿ ವೈದ್ಯರು ಒಂದು ವರ್ಷದಿಂದ ತಾಯಿಯನ್ನು ನೋಡಿಕೊಳ್ಳುತ್ತಿದ್ದರು. ಅವರು ನಮಗೆ ಉಚಿತವಾಗಿ ಸಹಕಾರ ಕೊಟ್ಟು ಡೆಲೆವರಿಯನ್ನು ಮಾಡಿಸಿದ್ದಾರೆ." ಎಂದು ರೇಣುಕಾಸ್ವಾಮಿ ತಂದೆ ಹೇಳಿದ್ದಾರೆ.
ಈ ವೇಳೆ ದರ್ಶನ್ ಜಾಮೀನು ಬಗ್ಗೆ ಮತಾಡುವುದಿಲ್ಲ. ಮಗು ಹಾಗೂ ತಾಯಿ ಇಬ್ಬರೂ ಚೆನ್ನಾಗಿದ್ದಾರೆಂದು ಹೇಳಿದ್ದಾರೆ. "ಅದರ ಬಗ್ಗೆ ಏನೂ ಮಾತಾಡುವುದಿಲ್ಲ. ನಮ್ಮ ಮಗು ಚೆನ್ನಾಗಿದೆ. ವೈದ್ಯರು ಮೊದಲಿನಿಂದಲೂ ವಿಶೇಷ ಕಾಳಜಿ ತೋರಿಸಿ, ಇವತ್ತಿ ನಾರ್ಮಲ್ ಆಗಿ ಡಿಲೆವರಿ ಮಾಡಿಸಿದ್ದಾರೆ. ನನಗೆ ಮಗನೇ ಬಂದಷ್ಟು ಸಂತೋಷ ಆಗಿದೆ." ಎಂದು ರೇಣುಕಾಸ್ವಾಮಿ ತಂದೆ ಮಾತಾಡಿದ್ದಾರೆ.
ದರ್ಶನ್ ಗೆಳತಿ ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದರು. ಇದು ದರ್ಶನ್ ಗಮನಕ್ಕೆ ಬಂದಾಗ ಕೋಪಗೊಂಡಿದ್ದರು. ರೇಣುಕಾಸ್ವಾಮಿಯವರನ್ನು ಪತ್ತೆ ಮಾಡಿ ಬೆಂಗಳೂರಿಗೆ ಕರೆದುಕೊಂಡು ಬರುವಂತೆ ತಮ್ಮ ಅಭಿಮಾನಿಗಳಿಗೆ ಹೇಳಿದ್ದರು. ದರ್ಶನ್ ಸಂಗಡಿಗರು ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆತಂದು ಅವರಿಗೆ ಚಿತ್ರ ಹಿಂಸೆ ಕೊಟ್ಟು ಹತ್ಯೆ ಮಾಡಿರುವ ಆರೋಪವನ್ನು ದರ್ಶನ್ ಹಾಗೂ ಸಂಗಡಿಗರು ಎದುರಿಸುತ್ತಿದ್ದಾರೆ. ಈ ಸಂಬಂಧ ದರ್ಶನ್ ಹಾಗೂ ಅವರ ಸಂಗಡಿಗರನ್ನು ಜೂನ್ 11ರಂದು ಬಂಧಿಸಲಾಗಿತ್ತು. ಅಲ್ಲಿಂದ ದರ್ಶನ್ ಸೆರೆವಾಸ ಅನುಭವಿಸುತ್ತಿದ್ದು, ಜಾಮೀನಿಗಾಗಿ ಕೋರ್ಟ್‌ನಲ್ಲಿ ಹರಸಾಹಸ ಮಾಡುತ್ತಿದ್ದಾರೆ.


Click it and Unblock the Notifications










