ಚುನಾವಣಾ ಪ್ರಚಾರದಲ್ಲಿ 'ಕಾಟೇರ' ಸ್ಟೋರಿ ಬಿಟ್ಟುಕೊಟ್ಟ ದರ್ಶನ್: ಟ್ರೈಲರ್ ಯಾವಾಗ?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಏನೇ ಮಾತಾಡಿದ್ರೂ ಸಿಕ್ಕಾಪಟ್ಟೆ ಸುದ್ದಿಯಾಗುತ್ತೆ. ಇನ್ನು ಸಿನಿಮಾ ಬಗ್ಗೆ ಮಾತಾಡಿದ್ರೆ, ಅಭಿಮಾನಿಗಳು ಸುಮ್ಮನೆ ಬಿಡುತ್ತಾರಾ? ಕಣ್ಮುಚ್ಚಿ ಕಣ್ಣುಬಿಡುವುದರೊಳಗೆ ಟ್ರೆಂಡ್ ಮಾಡುತ್ತಾರೆ. ಸದ್ಯ ದರ್ಶನ್ ನಟಿಸುತ್ತಿರುವ ಸಿನಿಮಾ ಕಾಟೇರ ಸಿನಿಮಾ ಮೇಲೆ ಕಣ್ಣಿಟ್ಟಿ ಕೂತಿದ್ದಾರೆ.

'ಕ್ರಾಂತಿ' ಬಳಿಕ ದರ್ಶನ್ ಹೊಸ ಸಿನಿಮಾ 'ಕಾಟೇರ' ಶೂಟಿಂಗ್ ನಡೆಯುತ್ತಿದೆ. ತರುಣ್ ಸುಧೀರ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇದು ತರುಣ್ ಹಾಗೂ ದರ್ಶನ್ ಕಾಂಬಿನೇಷನ್‌ನಲ್ಲಿ ಬರುತ್ತಿರೋ ಎರಡನೇ ಸಿನಿಮಾ.

Darshan revealed Kaatera movie story during the Darshan Puttannaiah Campaign

ದರ್ಶನ್ ಲುಂಗಇ ತೊಟ್ಟು 80ರ ದಶಕದ ಹೀರೊಗಳಂತೆ ಕಾಣಿಸುತ್ತಿರೋ ಕೆಲವು ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದವು. ಅಲ್ಲಿಂದ ಅಭಿಮಾನಿಗಳಲ್ಲಿ ಸಿನಿಮಾದ ಕಥೆ ಬಗ್ಗೆ ಕುತೂಹಲ ಮೂಡಿತ್ತು. ಈಗ ಸ್ವತ: ದರ್ಶನ್ 'ಕಾಟೇರ' ಕಥೆಯ ಬಗ್ಗೆ ಚಿಕ್ಕದೊಂದು ಸುಳಿವು ಬಿಟ್ಟು ಕೊಡುತ್ತಿದ್ದಾರೆ.

'ಕಾಟೇರ' ಸಿನಿಮಾ ಕಥೆಯೇನು?

'ಕಾಟೇರ' ತರುಣ್ ಸುಧೀರ್ ಟೈಟಲ್‌ನಿಂದಲೇ ಕಿಕ್ ಕೊಟ್ಟಿದ್ದರು. ಇದರ ಜೊತೆನೇ ದರ್ಶನ್ ಲುಕ್ ಅಭಿಮಾನಿಗಳಿಗೆ ನಿದ್ದೆ ಕೆಡಿಸಿತ್ತು. ಆದಷ್ಟು ಬೇಗ ಶೂಟಿಂಗ್ ಮುಗಿದರೆ, ಸಿನಿಮಾ ನೋಡೇ ಬಿಡೋಣ ಅಂತ ಕಾದು ಕೂತಿದ್ದಾರೆ. ಆದರೆ, ನಿರ್ದೇಶಕ ತರುಣ್ ಸುಧೀರ್ ಮಾತ್ರ ಕಥೆಯೇನು ಅನ್ನೋ ಚಿಕ್ಕದೊಂದು ಸುಳಿವು ಕೂಡ ಬಿಟ್ಟು ಕೊಟ್ಟಿರಲಿಲ್ಲ. ಈಗ ಸ್ವತ: ದರ್ಶನ್ ಚಿಕ್ಕದೊಂದು ಎಳೆಯನ್ನು ರಿವೀಲ್ ಮಾಡಿದ್ದಾರೆ.

'ಉಳುವವನೇ ಹೊಲದೊಡೆಯ' ಅನ್ನೋ ಕಾಯ್ದೆ ಬಗ್ಗೆ ಈಗಾಗಲೇ ಎಲ್ಲರಿಗೂ ಗೊತ್ತೇ ಇದೆ. ಇದನ್ನೇ ಆಧಾರವಾಗಿಟ್ಟುಕೊಂಡು 'ಕಾಟೇರ' ಕಥೆಯನ್ನು ಹೆಣೆಯಲಾಗಿದೆ. ಈ ಸುಳಿವನ್ನು ದರ್ಶನ್ ಪುಟ್ಟಣ್ಣಯ್ಯ ಪ್ರಚಾರದ ವೇಳೆ ನಟ ದರ್ಶನ್ ರಿವೀಲ್ ಮಾಡಿದ್ದಾರೆ.

Darshan revealed Kaatera movie story during the Darshan Puttannaiah Campaign

'ಕಾಟೇರ' ಕಥೆ ಬಗ್ಗೆ ದರ್ಶನ್ ಹೇಳಿದ್ದೇನು?

ರಾಜ್ಯದಲ್ಲಿ ವಿಧಾನ ಸಭಾ ಚುನಾವಣಾ ಕಾವು ರಂಗೇರಿದೆ. ಈ ಬೆನ್ನಲ್ಲೇ ಸರ್ವೋದಯ ಪಕ್ಷದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಪರ ಪ್ರಚಾರಕ್ಕೆ ಧುಮುಕಿದ್ದರು. ಈ ವೇಳೆ ದರ್ಶನ್ ಅಭ್ಯರ್ಥಿಯ ಪರ ಪ್ರಚಾರ ಮಾಡುತ್ತಲೇ ತಮ್ಮ ಸಿನಿಮಾ ಕಥೆಯನ್ನು ಬಿಟ್ಟಿಕೊಟ್ಟಿದ್ದಾರೆ.

"1965ರಿಂದ 1979ರವರೆಗೆ ನಡೆದ ಘಟನೆ ಎಲ್ಲರಿಗೂ ಗೊತ್ತು. ಉಳುವವನೇ ಭೂಮಿ ಒಡೆಯ ಅನ್ನೋದು. ಅವತ್ತೇ ಹರಿಸು ಚಿಹ್ನೆನೂ ಶುರುವಾಯ್ತು. ಹೇಗೆ ರೈತರು ನಿಂತರು ಅಂತ. ಅದರ ಮೇಲೆ ನಾವು ಈಗ ಸಿನಿಮಾ ಮಾಡುತ್ತಿರೋದು. ಆ ಸಿನಿಮಾದ ಟೀಸರ್ ಅನ್ನು ಕೂಡ ದರ್ಶನ್ ಪುಟ್ಟಣ್ಣ ಅವರೇ ಲಾಂಚ್ ಮಾಡಿದ್ರು. ಆದ್ರಿಂದ ಈ ಪ್ರೀತಿ, ಪ್ರೋತ್ಸಾಹ ಆಶೀರ್ವಾದ ಅವರಿಗೆ ಕೊಡಿ." ಎಂದು ದರ್ಶನ್ ಚುನಾವಣಾ ಪ್ರಚಾರದಲ್ಲಿ ರಿವೀಲ್ ಮಾಡಿದ್ದಾರೆ.

ದರ್ಶನ್ ಹಸಿರು 'ಕ್ರಾಂತಿ'

ದರ್ಶನ್ ಪುಟ್ಟಣ್ಣಯ್ಯ ಪರ ಪ್ರಚಾರ ಮಾಡುವ ಸಂದರ್ಭದಲ್ಲಿಯೇ ದರ್ಶನ್ ಹಸಿರು 'ಕ್ರಾಂತಿ'ಯ ಕಹಳೆ ಊದಿದ್ದಾರೆ. ದಿವಂಗತ ಕೆ. ಎಸ್. ಪುಟ್ಟಣ್ಣಯ್ಯ ಅವರ ಪುತ್ರ ದರ್ಶನ್ ಪುಟ್ಟಣ್ಣಯ್ಯ. ತಂದೆಯ ನಿಧನದ ಬಳಿಕ ಪುತ್ರನೇ ಚುನಾವಣೆಗೆ ನಿಂತಿದ್ದಾರೆ. ಕಳೆದ ಬಾರಿ ಜೆಡಿಎಸ್‌ನ ಸಿ. ಎಸ್. ಪುಟ್ಟರಾಜು ವಿರುದ್ಧ ಸೋಲುಂಡಿದ್ದರು. ಈ ಬಾರಿ ಸ್ವತ: ದರ್ಶನ್ ಪ್ರಚಾರಕ್ಕೆ ಇಳಿದಿದ್ದಾರೆ.

ಚುನಾವಣೆ ಕಾವು ಹೆಚ್ಚಾಗಿದ್ದರಿಂದ ದರ್ಶನ್ ತಮ್ಮ ಆತ್ಮೀಯರ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ಬೊಮ್ಮನಹಳ್ಳಿ ಬಿಜೆಪಿ ಅಭ್ಯರ್ಥಿ ಸತೀಶ್ ರೆಡ್ಡಿ, ಯಲಹಂಕದ ಕಾಂಗ್ರೆಸ್ ಅಭ್ಯರ್ಥಿ ರಾಜಣ್ಣ ಪರ ಈಗ ದರ್ಶನ್ ಪುಟ್ಟಣ್ಣಯ್ಯ ಪರ ಪ್ರಚಾರ ಮಾಡಿದ್ದಾರೆ. ಇದೇ ವೇಳೆ ದರ್ಶನ್ ಹಸಿರು 'ಕ್ರಾಂತಿ'ಯ ಕಹಳೆ ಊದಿದ್ದಾರೆ. ಇನ್ನು 'ಕಾಟೇರ' ಟ್ರೈಲರ್ ಯಾವಾಗ ಅನ್ನೋ ಪ್ರಶ್ನೆಗೆ ಅಭಿಮಾನಿಗಳೇ ಉತ್ತರ ಕೊಡುತ್ತಿದ್ದಾರೆ. ಮುಂದಿನ ವರ್ಷ ಫೆಬ್ರವರಿ 16, ದರ್ಶನ್ ಬರ್ತ್‌ಡೇಗೆ ಟ್ರೈಲರ್ ರಿಲೀಸ್ ಎನ್ನುತ್ತಿದ್ದಾರೆ. ಈ ಬಗ್ಗೆ ಟೀಮ್ ಇನ್ನೂ ಅಧಿಕೃತವಾಗಿ ಹೇಳಿಕೊಂಡಿಲ್ಲ.

More from Filmibeat

English summary
Darshan revealed Kaatera movie story during the Darshan Puttannaiah Campaign,know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X