'ಕ್ರಾಂತಿ' ಸಿನಿಮಾ ನವೆಂಬರ್‌ನಲ್ಲಿ ಯಾಕೆ ರಿಲೀಸ್ ಆಗಿಲ್ಲ? ಸೀಕ್ರೆಟ್ ರಿವೀಲ್ ಮಾಡೇ ಬಿಟ್ರು ದರ್ಶನ್!

ಸ್ಯಾಂಡಲ್‌ವುಡ್‌ನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಕ್ರಾಂತಿ'. ಇದೇ ವರ್ಷ ಸಿನಿಮಾ ರಿಲೀಸ್ ಆಗುತ್ತೆ ಅನ್ನೋ ನಿರೀಕ್ಷೆ ಇತ್ತು. ಆದರೆ, 2023, ಜನವರಿ 26ಕ್ಕೆ ರಿಲೀಸ್ ಅಂತ ಅನೌನ್ಸ್ ಮಾಡಿದಾಗ ದರ್ಶನ್ ಅಭಿಮಾನಿಗಳಿಗೆ ನಿರಾಸೆಯಾಗಿತ್ತು.

ಆದ್ರೀಗ 'ಕ್ರಾಂತಿ' ಬಿಡುಗಡೆಗೆ ಇನ್ನೂ ಎರಡು ತಿಂಗಳು ಇರುವಾಗಲೇ ದರ್ಶನ್ ಪ್ರಚಾರವನ್ನು ಗ್ರ್ಯಾಂಡ್ ಆಗಿಯೇ ಆರಂಭಿಸಿದ್ದಾರೆ. ಸಿನಿಮಾ ಬಗ್ಗೆ ಒಂದೊಂದು ಮಾಹಿತಿಯನ್ನು ರಿವೀಲ್ ಮಾಡುತ್ತಿದ್ದಾರೆ. ಅದಕ್ಕೂ ಮೊದಲು ನವೆಂಬರ್‌ನಲ್ಲಿ 'ಕ್ರಾಂತಿ' ಯಾಕೆ ರಿಲೀಸ್ ಮಾಡಿಲ್ಲ ಅನ್ನೋದನ್ನು ರಿವೀಲ್ ಮಾಡಿದ್ದಾರೆ.

'ಈ ಕಾರಣಕ್ಕೆ ನವೆಂಬರ್‌ನಲ್ಲಿ ಕ್ರಾಂತಿ ರಿಲೀಸ್ ಆಗಿಲ್ಲ'

'ಈ ಕಾರಣಕ್ಕೆ ನವೆಂಬರ್‌ನಲ್ಲಿ ಕ್ರಾಂತಿ ರಿಲೀಸ್ ಆಗಿಲ್ಲ'

'ಕ್ರಾಂತಿ' ಸಿನಿಮಾ ಶಿಕ್ಷಣ ವ್ಯವಸ್ಥೆಯನ್ನು ಆಧರಿಸಿ ಹೆಣೆಯಲಾದ ಕಥೆ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಯಾಕೆ ಸಿಗುತ್ತಿಲ್ಲ ಅನ್ನೋದರ ಮೇಲೆ ಈ ಸಿನಿಮಾ ಬೆಳಕು ಚೆಲ್ಲಲಿದೆ. 'ಯಜಮಾನ' ಸಿನಿಮಾದಲ್ಲಿ ಎಣ್ಣೆ 'ಕ್ರಾಂತಿ' ಮಾಡಿದ್ದಂತೆ ಈಗ ದರ್ಶನ್ 'ಕ್ರಾಂತಿ' ಸಿನಿಮಾದಲ್ಲೇ ಶಿಕ್ಷಣ 'ಕ್ರಾಂತಿ' ಮಾಡಲು ಹೊರಟಿದ್ದಾರೆ. ಈ ಕಾರಣಕ್ಕಾಗಿಯೇ ಸಿನಿಮಾ ಬಿಡುಗಡೆಗೆ ನವೆಂಬರ್ ಸರಿಯಾದ ತಿಂಗಳು ಆಗಿತ್ತು. ಆದರೆ, ರಿಲೀಸ್ ಮಾಡಿಲ್ಲ. ಹಾಗಂತ ಡಿಸೆಂಬರ್‌ನಲ್ಲಿ ರಿಲೀಸ್ ಮಾಡುವುದಕ್ಕೆ ದರ್ಶನ್ ಬಿಡಲಿಲ್ಲ. ಕಾರಣ ಏನು? ಅನ್ನೋದನ್ನು ಸ್ವತ: ದಾಸನೇ ರಿವೀಲ್ ಮಾಡಿದ್ದಾರೆ.

'ಕ್ರಾಂತಿ' ರಿಲೀಸ್ ಬಗ್ಗೆ ದರ್ಶನ್ ಹೇಳಿದ್ದೇನು?

'ಕ್ರಾಂತಿ' ರಿಲೀಸ್ ಬಗ್ಗೆ ದರ್ಶನ್ ಹೇಳಿದ್ದೇನು?

"ನಾನು ಹೇಳಿದಿದ್ದು, ಬಂದ್ರೆ, ನವೆಂಬರ್‌ಗೆ ಬರೋಣ. ನವೆಂಬರ್ ಸರಿಯಾದ ಸಮಯ. ಡಿಸೆಂಬರ್ 1ನೇ ತಾರೀಕಿನಿಂದ ಎಲ್ಲರೂ ಶಬರಿಮಲೆ ಮಾಲೆ ಹಾಕಿಸಿಕೊಳ್ಳುತ್ತಾರೆ. ಇದು ನಾನು ಮಾಡಿದ ಪ್ಲ್ಯಾನ್ ಅಲ್ಲ. ಎಷ್ಟೋ ಸಾರಿ, ಡಿಸೆಂಬರ್ ಮಧ್ಯದಲ್ಲಿ ಸಿನಿಮಾ ರಿಲೀಸ್ ಮಾಡಿದಾಗ ಸುಮಾರು ಜನ, ನೀವೇನು ಮಾಸಿ ಅಂತ ಹೇಳ್ತೀರಲ್ಲ ನನ್ನ ಸೆಲೆಬ್ರೆಟಿಗಳು ಅವರೆಲ್ಲಾ ಮಾಲೆ ಹಾಕಿಸಿಕೊಳ್ಳುತ್ತಾರೆ. ಅವರು ಯಾರೂ ಸಿನಿಮಾಗೆ ಬರೋದಿಲ್ಲ. ಅವರು ತುಂಬಾನೇ ವೃತದಲ್ಲಿ ಇರುತ್ತಾರೆ. ಅವರು ಆಯ್ತು.. ಅವರ ಕೆಲಸ ಆಯ್ತು ಅಂತ ಇರುತ್ತಾರೆ. ಅವರು ಸಿನಿಮಾ ನೋಡುವುದಕ್ಕೆ ಜನವರಿ 14ರವರೆಗೂ ಕಾಯಬೇಕು. ಅದಕ್ಕೆ ನಾನು ಅಂದೆ, ಈ ಸಮಯದಲ್ಲಿ ಸಿನಿಮಾ ರಿಲೀಸ್ ಆದರೆ ಬೇಡ. ಇಲ್ಲಾ ಮುಂದಕ್ಕೆ ಹೋಗೋಣ ಅಂದೆ. ಓಕೆ ಜನವರಿ 26ಕ್ಕೆ ಹೋಗೋಣ. ಎಲ್ಲರೂ ಶಬರಿಮಲೆಗೆ ಹೋಗಿ ಬಂದಿರುತ್ತಾರೆ ಅಂದ್ಕೊಂಡ್ವಿ." ಎಂದು ರಿಲೀಸ್ ಡೇಟ್ ಸೀಕ್ರೆಟ್ ರಿವೀಲ್ ಮಾಡಿದ್ದಾರೆ.

ರೈತರಿಗೂ ಸಂಕ್ರಾಂತಿ ಸಂಭ್ರಮ

ರೈತರಿಗೂ ಸಂಕ್ರಾಂತಿ ಸಂಭ್ರಮ

"ಈ ಕಡೆ ರೈತರದ್ದು ತಗೊಳ್ಳಿ .. ಡಿಸೆಂಬರ್‌ನಿಂದ ಎಲ್ಲಾ ಕುಯಿಲಿನಲ್ಲಿ ಇರುತ್ತಾರೆ. ಸಂಕ್ರಾಂತಿ ಸಂಭ್ರಮ ಸಡಗರ ಎಲ್ಲಾ ಇರುತ್ತೆ. ಜನವರಿ 14 ಆದ್ಮೇಲೆ ಅವರು ಎಲ್ಲಾ ಫ್ರೀ ಆಗ್ತಾರೆ. ಇಷ್ಟು ದಿನಾನೇ ಸಿನಿಮಾ ಮಾಡಿದ್ದೀವಿ. ರಿಲೀಸ್‌ಗೆ ಯಾಕೆ ಪ್ಲ್ಯಾನ್ ಮಾಡೋದಿಲ್ಲ ನಾವು? ಒಂಬತ್ತು ತಿಂಗಳು ಬೇಕು ಮಗು ಆಚೆ ಬರುವುದಕ್ಕೆ ಅರ್ಜೆಂಟಾಗಿ 5 ತಿಂಗಳಲ್ಲೇ ಮಗುನಾ ಹೊರಗೆ ಎಳೆದುಕೊಂಡ್ರೆ ನಾಲ್ಕು ತಿಂಗಳು ಬೆಳವಣಿಗೆ ಹೇಗೆ? ಅಷ್ಟೇ. ಅದಕ್ಕೆ ಈ ಪ್ಲ್ಯಾನ್." ಎಂದು ಜನವರಿ 26ಕ್ಕೆ ರಿಲೀಸ್ ಮಾಡುತ್ತಿರೋ ಬಗ್ಗೆ ದರ್ಶನ್ ಹೇಳಿದ್ದಾರೆ.

'ಕ್ರಾಂತಿ' ಹೈಲೈಟ್ ಏನು?

'ಕ್ರಾಂತಿ' ಹೈಲೈಟ್ ಏನು?

'ಕ್ರಾಂತಿ' ನೋಡುವುದಕ್ಕೆ ಅಭಿಮಾನಿಗಳು ಕಾದು ಕೂತಿರುವುದಕ್ಕೆ ಹಲವು ಕಾರಣಗಳಿವೆ. ದರ್ಶನ್ ಹಾಗೂ ರಚಿತಾ ರಾಮ್ ಇಬ್ಬರೂ ಹೆಚ್ಚು-ಕಡಿಮೆ 10 ವರ್ಷಗಳ ಬಳಿಕ ಒಟ್ಟಿಗೆ ಒಂದೇ ಸಿನಿಮಾದಲ್ಲಿ ನಟಿಸಿದ್ದಾರೆ. ಅಲ್ಲದೆ, ವಿ.ಹರಿಕೃಷ್ಣ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಅಲ್ಲದೆ ಸಂಗೀತ ಕೂಡ ಹರಿಕೃಷ್ಣ ಅವರದ್ದೇ. ಈ ಕಾರಣಕ್ಕೆ 'ಕ್ರಾಂತಿ' ನೋಡುವುದಕ್ಕೆ ದರ್ಶನ್ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.

More from Filmibeat

English summary
Darshan Revealed Why Kranti Movie Not Released In November And Releasing In January, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X