ಮೇಕಪ್ ಸಹಾಯಕನ ನಿಧನಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಂಬನಿ
ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಮೇಕಪ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಶ್ರೀನಿವಾಸ್ ಸೋಮವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಶ್ರೀನಿವಾಸ್ ಅವರು ದರ್ಶನ್ ಚಿತ್ರರಂಗದಲ್ಲಿ ನಾಯಕನಟನಾಗಿ ಗುರುತಿಸಿಕೊಂಡ ಸಂದರ್ಭದಿಂದಲೂ ಅವರಿಗೆ ಮೇಕಪ್ ಮಾಡುತ್ತಿದ್ದರು.
Recommended Video
ಶ್ರೀನಿವಾಸ್ ಅವರ ನಿಧನಕ್ಕೆ ದರ್ಶನ್ ಹಾಗೂ ಅವರ ನೂರಾರು ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ. ದರ್ಶನ್ ನಟಿಸುತ್ತಿರುವ 'ರಾಬರ್ಟ್' ಚಿತ್ರ ಸೇರಿದಂತೆ ಅವರ ಬಹುತೇಕ ಚಿತ್ರಗಳಲ್ಲಿ ಶ್ರೀನಿವಾಸ್ ಪ್ರಸಾಧನ ಕಾರ್ಯ ಮಾಡಿದ್ದರು. ಕೊರೊನಾ ವೈರಸ್ ಸಂಕಷ್ಟದ ನಡುವೆ ಸಾಲು ಸಾಲು ಕಹಿ ಸುದ್ದಿಗಳು ಕೇಳಿಬರುತ್ತಿವೆ. ಅದರಲ್ಲಿಯೂ ಚಿತ್ರರಂಗಕ್ಕೆ ಸಂಬಂಧಪಟ್ಟ ಅನೇಕರು ವಿವಿಧ ರೀತಿಯಲ್ಲಿ ನಮ್ಮನ್ನು ಅಗಲಿದ್ದಾರೆ. ಈ ನಡುವೆ ಮತ್ತೊಂದು ಸಾವಿನ ಆಘಾತ ಎದುರಾಗಿದೆ. ಮುಂದೆ ಓದಿ...

ದರ್ಶನ್ ಕಂಬನಿ
ಎರಡು ದಶಕಗಳಿಂದ ನನ್ನ ಬಳಿ ಮೇಕಪ್ ಮ್ಯಾನ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಸೀನ ಅಲಿಯಾಸ್ ಶ್ರೀನಿವಾಸ್ ಇಂದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ಈ ನೋವನ್ನು ಸಹಿಸಿಕೊಳ್ಳುವ ಶಕ್ತಿ ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ದರ್ಶನ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಮದಗಜ ಚಿತ್ರದಲ್ಲೂ ಕೆಲಸ
ಶ್ರೀ ಮುರಳಿ ನಟನೆಯ 'ಮದಗಜ' ಚಿತ್ರಕ್ಕೂ ಅವರು ಮೇಕಪ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು. ದರ್ಶನ್ ಅಲ್ಲದೆ ಅನೇಕ ಕಲಾವಿದರಿಗೆ ಅವರು ಮೇಕಪ್ ಮಾಡಿದ್ದಾರೆ. ದರ್ಶನ್ ಅವರ ಅಭಿಮಾನಿಗಳು ಕೂಡ ಸಾಮಾಜಿಕ ಜಾಲತಾಣದ ಪುಟಗಳಲ್ಲಿ ಶ್ರೀನಿವಾಸ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಸೀನ ಎಂದೇ ಜನಪ್ರಿಯ
ಶ್ರೀನಿವಾಸ್ ಅವರು ದರ್ಶನ್ ಅವರ ನಿಕಟ ಒಡನಾಡಿಯಾಗಿದ್ದರು. ಅವರ ವಲಯದಲ್ಲಿ ಸೀನ ಎಂಬ ಹೆಸರಿನಿಂದಲೇ ಗುರುತಿಸಿಕೊಂಡಿದ್ದರು. ಮೇಕಪ್ ಕಲಾವಿದನಾಗಿ ಅವರು ಉತ್ತಮ ಹೆಸರು ಪಡೆದಿದ್ದರು. ದರ್ಶನ್ ಅವರ ವಿವಿಧ ಬಗೆಯ ಗೆಟಪ್‌ಗಳ ಹಿಂದೆ ಶ್ರೀನಿವಾಸ್ ಅವರ ಕೈಚಳಕವಿತ್ತು.

ಶ್ರೀನಿವಾಸ್ ಅಂತಿಮ ದರ್ಶನ
ಬೆಂಗಳೂರಿನಲ್ಲಿರುವ ಶ್ರೀನಿವಾಸ್ ಅವರ ನಿವಾಸಕ್ಕೆ ಮಧ್ಯಾಹ್ನ ಭೇಟಿ ನೀಡಿದ ದರ್ಶನ್, ಶ್ರೀನಿವಾಸ್ ಅವರ ಮೃತದೇಹದ ಅಂತಿಮ ದರ್ಶನ ಮಾಡಿ ಗೌರವ ಸಲ್ಲಿಸಿದರು. ಜತೆಗೆ ಶ್ರೀನಿವಾಸ್ ಅವರ ಕುಟುಂಬಕ್ಕೆ ಸಾಂತ್ವನ ಹೇಳಿ ಧೈರ್ಯ ತುಂಬಿದರು.


Click it and Unblock the Notifications











