"ನಾನು ಬಾವಿಯಲ್ಲಿರೋ ಕಪ್ಪೆ, ಅದ್ರಲ್ಲೇ ಖುಷಿಯಾಗಿದ್ದೇನೆ": ಹೀಗಂದಿದ್ಯಾಕೆ ದರ್ಶನ್?

ಚಾಲೆಂಜಿಂಗ್ ಸ್ಟಾರ್ ದರ್ಶನ್ 56ನೇ ಸಿನಿಮಾ ಬಿಡುಗಡೆ ಸಜ್ಜಾಗುತ್ತಿದೆ. ಇನ್ನೊಂದು ವಾರದಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಹೀಗಾಗಿ ದರ್ಶನ್ ತಮ್ಮ 'ಕಾಟೇರ' ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. 'ಕಾಟೇರ' ಬಗ್ಗೆ ಇಂಟ್ರೆಸ್ಟಿಂಗ್ ವಿಷಯಗಳನ್ನು ಹಂಚಿಕೊಂಡಿದ್ದಾರೆ.

ದರ್ಶನ್ ಮೊದಲಿನಿಂದಲೂ ಪ್ಯಾನ್ ಇಂಡಿಯಾ ಸಿನಿಮಾ ಮಾಡೋದಿಲ್ಲ ಅನ್ನೋ ಬಗ್ಗೆ ಹೇಳುತ್ತಲೇ ಬರುತ್ತಿದ್ದಾರೆ. ಇತ್ತೀಚೆಗೆ ಆನಂದ್ ಆಡಿಯೋ ಯೂಟ್ಯೂಬ್‌ಗೆ ನೀಡಿದ ಸಂದರ್ಶನದಲ್ಲೂ ಮತ್ತೆ ಪ್ಯಾನ್ ಇಂಡಿಯಾ ಸಿನಿಮಾ ಮತ್ತೆ ಗುಡುಗಿದ್ದಾರೆ. ಕನ್ನಡಿಗರಿಗೋಸ್ಕರನೇ ಸಿನಿಮಾ ಮಾಡುತ್ತೇನೆ ಎಂದು ಪುನರುಚ್ಚರಿಸಿದ್ದಾರೆ.

Darshan said he is doing movies for kannadigas not for pan india

ಈ ಸಂದರ್ಶನದಲ್ಲಿ ದರ್ಶನ್ ಯಾಕೆ ಪ್ಯಾನ್ ಇಂಡಿಯಾ ಸಿನಿಮಾ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ ಅನ್ನೋದನ್ನು ರಿವೀಲ್ ಮಾಡಿದ್ದಾರೆ. 'ಕಾಟೇರ' ಯಾಕೆ ಪ್ಯಾನ್ ಇಂಡಿಯಾ ಸಿನಿಮಾ ಆಗಿಲ್ಲ? ಅನ್ನೋದನ್ನು ಈ ಸಂದರ್ಶನದಲ್ಲಿ ಹೇಳಿದ್ದಾರೆ. ಇದೇ ವೇಳೆ "ನಾನು ಬಾವಿಯಲ್ಲಿರೋ ಕಪ್ಪೆ" ಅನ್ನೋ ಮಾತು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಪ್ಯಾನ್ ಇಂಡಿಯಾ ಮಾಡಿದ್ರೂ ಕಾರಲ್ಲಿ ತಾನೇ ಬರುತ್ತೇನೆ. ಕನ್ನಡ ಸಿನಿಮಾ ಮಾಡುವುದಕ್ಕೆ ಕನ್ನಡಿಗರು ಕಾರನ್ನು ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ. "ಪ್ಯಾನ್ ಇಂಡಿಯಾ ಸಿನಿಮಾ ಮಾಡಿದ ತಕ್ಷಣ ನಾನು ಚಾಪರ್‌ನಲ್ಲಾ ಬರ್ತಿನಿ. ಕಾರಲ್ಲಿ ತಾನೇ ಬರುತ್ತೇನೆ. ಪ್ಯಾನ್ ಇಂಡಿಯಾ ಸಿನಿಮಾ ಮಾಡಿದರೂ ಅದೇ ಕಾರಲ್ಲೇ ಬರೋದು. ಕನ್ನಡ ಸಿನಿಮಾ ಮಾಡಿಯೇ ನನಗೆ ಕಾರು ಕೊಟ್ಟಿದ್ದಾರೆ. ನಾನ್ಯಾಕೆ ಪ್ಯಾನ್ ಇಂಡಿಯಾ ಸಿನಿಮಾ ಬಗ್ಗೆ ತಲೆ ಕೆಡಿಸಿಕೊಳ್ಳಲಿ." ಎಂದು ಹೇಳಿದ್ದಾರೆ.

Darshan said he is doing movies for kannadigas not for pan india

ಇಷ್ಟೇ ಅಲ್ಲದೆ ನಾನು ಕನ್ನಡಿಗರಿಗೆ ಸಿನಿಮಾ ಮಾಡೋದು ಅನ್ನೋದನ್ನು ಸ್ಪಷ್ಟಪಡಿಸಿದ್ದಾರೆ. "ನಾನು ಮಾಡೋದು ಕನ್ನಡ ಸಿನಿಮಾ. ನಾನು ಕನ್ನಡಿಗರಿಗೆ ಸಿನಿಮಾ ಮಾಡೋದು. ಮೊದಲಿಂದಲೂ ನಾನು ಇದನ್ನೇ ಮಾಡಿಕೊಂಡು ಬಂದಿದ್ದೇನೆ. ಇಲ್ಲಿಂದ ಡಬ್ ಆಗಿ ಹೊರಗಡೆ ಹೋಗುತ್ತಿತ್ತೇ ಹೊರತು, ಅದ್ಯಾಕೆ ಅಲ್ಲಿಗೆ ತಲೆಕೆಡಿಸಿಕೊಳ್ಳಲಿ. ನಾನು ಮಾಡೋದು ಕನ್ನಡ ಸಿನಿಮಾ. ನಾನು ಮೊದಲಿನಿಂದ ಸಿನಿಮಾ ಮಾಡುತ್ತಿರೋದು ಇವರಿಗೇನೆ. ಇಲ್ಲಿಂದ ಡಬ್ ಆಗಿ ಅಲ್ಲಿಗೆ ಹೋಗುತ್ತಿತ್ತು. ಅದಕ್ಕೆ ಯಾಕೆ ತಲೆ ಕೆಡಿಸಿಕೊಳ್ಳಲಿ." ಎಂದಿದ್ದಾರೆ.

ದರ್ಶನ್ ಮಾತು ನೇರಾನೇರ. ಏನು ಹೇಳಬೇಕು ಅಂತ ಅನಿಸುತ್ತೋ ಅದನ್ನೇ ಹೇಳದೆ ಸುಮ್ಮನಿರುವುದಿಲ್ಲ. ಪ್ಯಾನ್ ಇಂಡಿಯಾ ವಿಚಾರದಲ್ಲೂ ಅಷ್ಟೇ ನಾನು ಬಾವಿಯೊಳಗಿನ ಕಪ್ಪೆ ಎಂದು ಹೇಳಿದ್ದಾರೆ. "ಪ್ಯಾನ್ ಇಂಡಿಯಾ ಅಂದಾಗ, ಪಕ್ಕದ ರಾಜ್ಯದವನಿಗೆ ಸಮಜಾಯಿಷಿ ಕೊಡೋಕೆ ಸಿನಿಮಾ ಮಾಡಬೇಕು. ಅದಕ್ಕೆ ನಮ್ಮ ಇಂಡಸ್ಟ್ರಿ, ನಮ್ಮ ಕನ್ನಡಕ್ಕೆ ಸಿನಿಮಾ ಮಾಡೋಣ. ಆಮೇಲೆ ನೋಡಿಕೊಳ್ಳೋಣ. ನಾನು ಬಾವಿಯಲ್ಲಿರೋ ಕಪ್ಪೆ. ನಾನು ತುಂಬಾನೇ ಖುಷಿಯಾಗಿದ್ದೇನೆ. ಅದಕ್ಕೆ ಹೇಳ್ತೀನಿ. ನಮ್ಮೂರಲ್ಲಿ ನಾನು ರಾಜಾನೇ." ಎಂದು ದರ್ಶನ್ ಪ್ಯಾನ್ ಇಂಡಿಯಾ ಸಿನಿಮಾ ಬಗ್ಗೆ ಖಡಕ್ ಉತ್ತರ ಕೊಟ್ಟಿದ್ದಾರೆ.

More from Filmibeat

English summary
Darshan revealed why he is not doing Pan India movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X