"ಒಂದು ಫೈಟ್‌ನಲ್ಲಿ 2 ಕೈ ಇಲ್ಲ.. ಫಸ್ಟ್ ಸಾಂಗ್ ನೋಡಲು 20 ನಿಮಿಷ.. ಫೈಟ್‌ಗೆ 40 ನಿಮಿಷ ಕಾಯ್ಬೇಕು": ದರ್ಶನ್
ದರ್ಶನ್ ಸಿನಿಮಾ 'ಕಾಟೇರ' ಟ್ರೈಲರ್ ಬಿಡುಗಡೆಗೆ ಕ್ಷಣಗಣನೆ ಆರಂಭ ಆಗಿದೆ. ನಾಳೆ (ಡಿಸೆಂಬರ್ 16) ದರ್ಶನ್ 56ನೇ ಸಿನಿಮಾದ ಟ್ರೈಲರ್ ಹುಬ್ಬಳ್ಳಿಯಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. ಈಗಾಗಲೇ ಹುಬ್ಬಳ್ಳಿ ಕೂಡ ದರ್ಶನ್ ಆಗಮನವನ್ನು ಎದುರು ನೋಡುತ್ತಿದೆ.
'ರಾಬರ್ಟ್' ಬಳಿಕ ತರುಣ್ ಸುಧೀರ್ ಹಾಗೂ ದರ್ಶನ್ ಕಾಂಬಿನೇಷನ್‌ನಲ್ಲಿ ಬರ್ತಿರೋ 2ನೇ ಸಿನಿಮಾವೇ ಈ 'ಕಾಟೇರ'. ಜೊತೆಗೆ ದರ್ಶನ್ ಇದೇ ಮೊದಲ ಬಾರಿಗೆ ರೆಟ್ರೋ ಸ್ಟೈಲ್‌ನಲ್ಲಿ ತೆರೆಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಇದೇ ಮೊದಲ ಬಾರಿಗೆ ದರ್ಶನ್ ಇಂತಹ ಗಂಭೀರ ಪಾತ್ರದಲ್ಲಿ ನಟಿಸಿದ್ದರಿಂದ ಸಿನಿಮಾ ನೋಡುವುದಕ್ಕೆ ಫ್ಯಾನ್ಸ್ ತುದಿಗಾಲಲ್ಲಿ ನಿಂತಿದ್ದಾರೆ.

ಇದೇ ವೇಳೆ ದರ್ಶನ್ 'ಕಾಟೇರ' ಸಿನಿಮಾದ ಬಗ್ಗೆ ಕೆಲವು ಇಂಟ್ರೆಸ್ಟಿಂಗ್ ವಿಷಯಗಳನ್ನು ರಿವೀಲ್ ಮಾಡಿದ್ದಾರೆ. ಸಿನಿಮಾದ ಹಾಡು, ಆಕ್ಷನ್ ಸೀಕ್ವೆನ್ಸ್ ಬಗ್ಗೆ ಕೆಲವು ಸುಳಿವುಗಳನ್ನು ಬಿಟ್ಟುಕೊಟ್ಟಿದ್ದಾರೆ. ಅದರಲ್ಲೂ 'ಕಾಟೇರ'ದಲ್ಲಿರೋ ಮೂರು ಆಕ್ಷನ್ ಸೀಕ್ವೆನ್ಸ್‌ನಲ್ಲಿ ಒಂದರಲ್ಲಿ ಎರಡೂ ಕೈ ಇಲ್ಲ ಎಂದು ಹೇಳಿ ಕುತೂಹಲ ಕೆರಳಿಸಿದ್ದಾರೆ. ಅಷ್ಟಕ್ಕೂ 'ಕಾಟೇರ' ಬಗ್ಗೆ ದರ್ಶನ್ ಬಿಟ್ಟುಕೊಟ್ಟರೋ ಸುಳಿವುಗಳನ್ನು ತಿಳಿಯಲು ಮುಂದೆ ಓದಿ.
ಸುಮಾರು 400ಕ್ಕೂ ಆಕ್ಷನ್ ಸೀಕ್ವೆನ್ಸ್ ಮಾಡಿರಬಹುದು ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ರಿವೀಲ್ ಮಾಡಿದ್ದಾರೆ. ಅದೇ ಇನ್ನೊಂದು ಕಡೆ 'ಕಾಟೇರ'ದಲ್ಲಿ ಇರೋ ಮೂರು ಆಕ್ಷನ್ ಸೀಕ್ವೆನ್ಸ್‌ನಲ್ಲಿ ಎರಡು ಡಿಫ್ರೆಂಡ್ ಆಗಿ ನಿಲ್ಲುತ್ತದೆ ಅಂತ ಹೇಳಿದ್ದಾರೆ. "ಈ ಸಿನಿಮಾದ ಸ್ಪೆಷಾಲಿಟಿ ಏನು ಅಂತ ಹೇಳ್ತೀನಿ ಕೇಳಿ. ಇಲ್ಲಿವರೆಗೂ ಒಂದು ಸಿನಿಮಾಗೆ ನಾಲ್ಕು ಫೈಟ್ ಅಂದರೆ, ಒಂದು 400 ಫೈಟ್ ಆಗಿರಬಹುದು ಅಂದುಕೊಳ್ಳುತ್ತೇನೆ. ಆದರೆ, ಈ ಸಿನಿಮಾ ಸ್ಪೆಷಲ್." ಎಂದು ದರ್ಶನ್ ಹೇಳಿದ್ದಾರೆ.

ಇದರೊಂದಿಗೆ ಈ ಸಿನಿಮಾದಲ್ಲಿ ಮೂರು ಫೈಟ್‌ಗಳ ಬಗ್ಗೆ ತಮ್ಮದೇ ಶೈಲಿಯಲ್ಲಿ ಮಾಹಿತಿ ಬಿಟ್ಟುಕೊಟ್ಟಿದ್ದಾರೆ. "ಈ ಸಿನಿಮಾದಲ್ಲಿ 3 ಫೈಟ್ ಮಾಡಿದ್ದೀವಿ. ಒಂದು ಫೈಟ್‌ನಲ್ಲಿ ಎರಡೂ ಕೈ ಇದೆ. ಇನ್ನೊಂದು ಫೈಟ್‌ನಲ್ಲಿ ಬರೀ ಒಂದು ಕೈ ಇದೆ. ಇನ್ನೊಂದು ಫೈಟ್‌ನಲ್ಲಿ ಕೈಗಳೇ ಇಲ್ಲ. ಅವನು ಹೇಗೆ ಫೈಟ್ ಮಾಡಿರಬಹುದು ನೀವು ಯೋಚನೆ ಮಾಡಿ. ಆದರೆ, ಮೂರು ಫೈಟ್‌ನೂ ಮೂರು ತರ ಇದೆ." ಎಂದು ತಮ್ಮ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದ್ದಾರೆ.
ಈ ಹಿಂದೆ ದರ್ಶನ್ ಸಿನಿಮಾಗಳಿಗೆ ಹೋಲಿಸಿದರೆ, ಈ ಸಿನಿಮಾ ಡಿಫ್ರೆಂಟ್ ಆಗಿರುತ್ತೆ. ದರ್ಶನ್‌ಗೆ ಧೂಮ್ ಧಾಂ ಎಂಟ್ರಿ ಸೀನ್ ಇರೋದಿಲ್ಲ ಅನ್ನೋ ರಹಸ್ಯವನ್ನು ಬಿಟ್ಟುಕೊಟ್ಟಿದ್ದಾರೆ. "ಹೀರೊ ಎಂಟ್ರಿ ಅನ್ನುತ್ತಿದ್ದಂತೆ ಧೂಮ್ ಧಾಂ ಡಮಾರ್ ಅಂತ ಅಂದುಕೊಳ್ಳುತ್ತೇವೆ. ಫಸ್ಟ್ ಸಾಂಗ್ ನೋಡಬೇಕು ಅಂದರೆ, ಹೆಚ್ಚು ಕಡಿಮೆ 20 ನಿಮಿಷ ಕಾಯಬೇಕು. ಫಸ್ಟ್ ಫೈಟ್ ನೋಡಬೇಕು ಅಂದರೆ, 40 ನಿಮಿಷ ಕಾಯಬೇಕು. ದರ್ಶನ್ ಸಿನಿಮಾ ಸಾಂಗ್, ಫೈಟ್‌ನಲ್ಲಿ ಬರ್ತಾನೆ ಅಂತ. ಅದಕ್ಕೆ ಹೇಳಿದ್ದು ಫಸ್ಟ್ ಸಾಂಗ್ ನೋಡುವುದಕ್ಕೆ 20 ನಿಮಿಷ. ಫಸ್ಟ್ ಫೈಟ್ ನೋಡುವುದಕ್ಕೆ 40 ನಿಮಿಷ ಬೇಕು ಅಂತ. ಇದು ನಮ್ಮ ಕಾಟೇರ ಸಿನಿಮಾ." ಎಂದು ದರ್ಶನ್ 'ಕಾಟೇರ' ಸಿನಿಮಾ ಬಗ್ಗೆ ಹೇಳಿದ್ದಾರೆ.


Click it and Unblock the Notifications











