ಸಾರಥಿ ಚಿತ್ರದ ಸ್ಟಂಟ್ ಡೈರೆಕ್ಟರ್ ಗೊಂದು ಸಲಾಂ

ಮೊದಲಾರ್ಧದಲ್ಲಿ ಬರುವ ಎರಡು ಫೈಟ್ ಗಳು ಒಂದಕ್ಕೊಂದು ಸೂಪರ್. ಅದರಲ್ಲೂ ಇಂಟರ್ವಲ್ ಗಿಂತ ಸ್ವಲ್ಪ ಮುಂಚೆ ಬರುವ ಆಟೋ ಚೇಸಿಂಗ್ ಫೈಟ್ ಅಂತೂ ಚಿಂದಿ. ತುಂಬಾ ರಿಸ್ಕ್ ತೆಗೆದುಕೊಂಡು ಮಾಡಿರುವ ಈ ಸಾಹಸ ದೃಶ್ಯಗಳು ಪ್ರೇಕ್ಷಕರನ್ನು ಮೈಜುಮ್ಮೆನಿಸುತ್ತದೆ.
ಚಿತ್ರದಲ್ಲಿನ ಸ್ಟಂಟ್ ದೃಶ್ಯಗಳು ಹಿಂದಿ, ತಮಿಳು, ತೆಲುಗಿನ ಯಾವುದೇ ಭಾಷೆಯ ಚಿತ್ರಗಳಿಗೆ ಪೈಪೋಟಿ ನೀಡುವ ಮಟ್ಟಕ್ಕೆ ಇದೆ ಅಥವಾ ಅದಕ್ಕಿಂತ ಒಂದು ಕೈ ಮೇಲೆ ಎಂದರೂ ಅತಿಶಯೋಕ್ತಿ ಆಗಲಾರದು. ಇಡೀ ಚಿತ್ರದ ಹೈಲೈಟ್ಸ್ ಎಂದರೆ ಕ್ಲೈಮ್ಯಾಕ್ಷ್ ನಲ್ಲಿ ನಡೆಯುವ ಅದ್ದೂರಿ ಫೈಟ್. ಕಾಡಿನಲ್ಲಿ ನಡೆಯುವ ಫೈಟ್ ದೃಶ್ಯಗಳನ್ನು ರವಿ ವರ್ಮಾ ರೋಮಾಂಚನಕಾರಿಯಾಗಿ ತೆರೆ ಮೇಲೆ ತಂದಿದ್ದಾರೆ.
English summary
One of the main reason behind huge success of Darshan lead Kannada movie Sarathi is stunt director Ravi Varma. Action scenes in this movies is really amazing. Hats off to Ravi Varma and Sarathi team.


Click it and Unblock the Notifications