"ನಾವು ಬಾಸ್‌ಗಳಲ್ಲ.. ನೀವುಗಳೇ ಬಾಸ್.." ಅಭಿಮಾನಿಗಳಿಗೆ ದರ್ಶನ್ ಹೀಗೆ ಹೇಳಿದ್ದು ಯಾಕೆ?

ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಕಾಟೇರ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಇದರ ಹಿಂದೆನೇ ಮಿಲನ ಪ್ರಕಾಶ್ ನಿರ್ದೇಶಿಸುತ್ತಿರುವ 57ನೇ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆನೇ ಬಿಜಿಎಸ್ ಉತ್ಸವದಲ್ಲಿ ದರ್ಶನ್ ಭಾಗಿಯಾಗಿದ್ದರು. ಫ್ಯಾನ್ಸ್ ದರ್ಶನ್ ನೋಡಿ ಥ್ರಿಲ್ ಆಗಿದ್ದರು.

15ನೇ ಬಿಜಿಎಸ್ ಫೌಂಡರ್ಸ್ ಡೇ ಹಾಗೂ ಬಿಜಿಎಸ್ ಉತ್ಸವವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿದೆ. ಮೂರು ದಿನಗಳು ನಡೆಯುವ ಈ ಉತ್ಸವದಲ್ಲಿ ನಿನ್ನೆ (ನವೆಂಬರ್ 24) ರಾಕಿಂಗ್ ಸ್ಟಾರ್ ಭಾಗವಹಿಸಿದ್ದರು. ಇಂದು (ನವೆಂಬರ್ 23) ಚಾಲೆಂಜಿಂಗ್ ಸ್ಟಾರ್ ದರ್ಶನ್ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Darshan says I am not the boss; you are the boss to his fans at the BGS Utsav 2023

ನಿರ್ಮಲಾನಂದನಾಥ ಸ್ವಾಮಿ ಹಾಗೂ ಗಣ್ಯರೊಂದಿಗೆ ದರ್ಶನ್ ವೇದಿಕೆ ಹಂಚಿಕೊಂಡಿದ್ದರು. ಇನ್ನೇನು ದರ್ಶನ್ ಮಾತಾಡುವುದಕ್ಕೆ ವೇದಿಕೆ ಮೇಲೆ ಬರಬೇಕು ಅನ್ನುವಷ್ಟರಲ್ಲಿ ಅಭಿಮಾನಿಗಳು ಡಿ ಬಾಸ್ ಅಂತ ಕೂಗುವುದಕ್ಕೆ ಶುರು ಮಾಡಿದ್ದರು.

ಇನ್ನೇ ದರ್ಶನ್ ವೇದಿಕೆ ಮೇಲೆ ಬಂದು ಮಾತಾಡಬೇಕು ಅನ್ನುವಷ್ಟರಲ್ಲಿ, ಫ್ಯಾನ್ಸ್ ಡಿ ಬಾಸ್ ಅಂತ ಶುರುವಿಟ್ಟುಕೊಂಡಿದ್ದರು. ಆಗ ದರ್ಶನ್ ""ಹೂಂ ಅಪ್ಪಿ.. ಆಯ್ತು ಅಪ್ಪಿ.. ನಾವು ಬಾಸ್‌ಗಳಲ್ಲ ಅಪ್ಪಿ. ನೀವುಗಳೇ ಬಾಸ್. ನಿಮ್ಮಿಂದ ನಾವು. ನಮ್ಮಿಂದ ನೀವಲ್ಲ. ಅದೊಂದು ಹೇಳಿ ಬಿಡುತ್ತೀನಿ ಆಮೇಲೆ." ಎಂದು ತಮ್ಮ ಸೆಲೆಬ್ರೆಟಿಗಳನ್ನು ಉದ್ದೇಶಿಸಿ ಡೈಲಾಗ್ ಬಿಟ್ಟಿದ್ದರು. ಈ ಮಾತನ್ನು ಕೇಳುತ್ತಿದ್ದಂತೆ ಫ್ಯಾನ್ಸ್ ಥ್ರಿಲ್ ಆಗಿದ್ದರು.

Darshan says I am not the boss; you are the boss to his fans at the BGS Utsav 2023

ಇದೇ ವೇಳೆ ಬಿಜಿಎಸ್ ಕಾರ್ಯಕ್ರಮ ಅಂದರೆ ಎಲ್ಲಿದ್ದರೂ ಬರುತ್ತೇನೆ. ಎಂದಿಗೂ ತಪ್ಪಿಗೆ ಹಾಕಿಕೊಳ್ಳುವುದಿಲ್ಲ ಎಂದು ಹೇಳಿದ್ದರು. "ಈ ಬಿಜಿಎಸ್‌ಗೂ ನನಗೂ ಅವಿನಾಭಾವ ಸಂಬಂಧ ಇದ್ದಂತೆ. ಏನಕ್ಕೆ ಈ ಮಾತು ಹೇಳುತ್ತೀನಿ ಅಂದರೆ, ಬಿಜಿಎಸ್‌ನಲ್ಲಿ ದರ್ಶನ್ ಸುಮಾರು ಕಾರ್ಯಕ್ರಮಗಳನ್ನು ಅಟೆಂಡ್ ಆಗಿದ್ದಾನೆ. ಬಿಜಿಎಸ್‌ನಲ್ಲಿ 6 ಗಂಟೆಗೆ ಕಾರ್ಯಕ್ರಮವಿದೆ ಅಂತ 3 ಗಂಟೆಗೆ ಹೇಳಿದರೂ ಬರುತ್ತೇನೆ." ಎಂದು ಹೇಳಿದ್ದಾರೆ.

ಬಿಜಿಎಸ್ ವಿದ್ಯಾದಾನ ಮಾಡುತ್ತಿರುವುದನ್ನು ದರ್ಶನ್ ಹೊಗಳಿದ್ದಾರೆ. ಶಿಕ್ಷಣ, ಆಸ್ಪತ್ರೆ ವ್ಯವಸ್ಥೆ ಬಗ್ಗೆನೂ ಮಾತಾಡಿ, ಈ ಸೇವೆಯನ್ನು ಮೆಚ್ಚಿ ಸ್ವಾಮಿಜೀಯವರು ಯಾವಾಗಲೇ ಕರೆದರೂ ಬರುತ್ತೇನೆ ಎಂದು ಹೇಳಿದ್ದಾರೆ. "ಶೂಟಿಂಗ್ ಇದ್ದರೂ ಬರ್ತೀನಿ ಅಂತ ಹೇಳುತ್ತೇನೆ. ಇಂದು ಕೂಡ ಮೈಸೂರಿನಲ್ಲಿ ಶೂಟಿಂಗ್ ನಡೆಯುತ್ತಿದೆ. ಆದರೂ ಶುರು ಮಾಡಿಕೊಳ್ರಪ್ಪ ಬರ್ತೀನಿ ಅಂತ ಹೇಳಿದ್ದೇನೆ." ಎಂದು ದರ್ಶನ್ ಹೇಳಿದ್ದಾರೆ.

ದರ್ಶನ್ ನಟಿಸುತ್ತಿರುವ 57ನೇ ಸಿನಿಮಾ 'ಡೆವಿಲ್' ಶೂಟಿಂಗ್ ಮೈಸೂರಿನಲ್ಲಿ ನಡೆಯುತ್ತಿದೆ. ಇತ್ತ ತರುಣ್ ಸುಧೀರ್ ನಿರ್ದೇಶಿಸಿದ 'ಕಾಟೇರ' ಸಿನಿಮಾದ ಶೂಟಿಂಗ್ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. 2024ರ ದರ್ಶನ್ ಹುಟ್ಟುಹಬ್ಬದ ಹೊತ್ತಿಗೆ ಈ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆಯಿದೆ.

More from Filmibeat

English summary
BGS Utsav 2023: I am not the boss says Challenging star Darshan:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X