"ಅಮ್ಮ ಹಾಳು ಬಾವಿಗೆ ಬೀಳು ಅಂದರೂ ಬೀಳುವುದಕ್ಕೆ ರೆಡಿ"; ಸುಮಲತಾ ನಿರ್ಧಾರಕ್ಕೆ ದರ್ಶನ್ ಬೆಂಬಲ
2024ನೇ ಸಾಲಿನ ಲೋಕಸಭೆ ಚುನಾವಣೆ ಸಖತ್ ಇಂಟ್ರೆಸ್ಟಿಂಗ್ ಆಗಿದೆ. ಅದರಲ್ಲೂ ರಾಜ್ಯ ಕೆಲವು ಕ್ಷೇತ್ರಗಳಲ್ಲಿ ನಡೆಯುತ್ತಿರುವ ರಾಜಕೀಯ ಚಟುವಟಿಕೆಗಳು ಅಷ್ಟೇ ಕುತೂಹಲ ಕೆರಳಿಸಿವೆ. ಅದರಲ್ಲೂ ಮಂಡ್ಯ ಲೋಕಸಭೆ ಕ್ಷೇತ್ರದಿಂದ ಸುಮಲತಾ ಸ್ಪರ್ಧೆ ಮಾಡುತ್ತಾರೋ ಇಲ್ಲವೋ? ಅನ್ನುವುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿತ್ತು.
ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಹೀಗಾಗಿ ಮಂಡ್ಯ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಬೇಕು ಅನ್ನುವ ಸುಮಲತಾ ಆಸೆ ಈಡೇರಿಲ್ಲ. ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಸ್ಪರ್ಧೆ ಮಾಡುವುದು ಫಿಕ್ಸ್ ಆಗಿದೆ. ಸುಮಲತಾ ಮಂಡ್ಯಗೆ ತೆರಳಿ ಮಂಡ್ಯದಿಂದ ಸ್ಪರ್ಧೆ ಮಾಡುವುದಿಲ್ಲ ಎಂದು ಘೋಷಣೆ ಮಾಡಿದ್ದು, ಮೈತ್ತಿ ಅಭ್ಯರ್ಥಿಗೆ ಬೆಂಬಲವೆಂದು ಹೇಳಿದ್ದಾರೆ.

ಸುಮಲತಾ ತೆಗೆದುಕೊಂಡು ನಿರ್ಧಾರಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬೆಂಬಲ ಕೊಟ್ಟಿದ್ದಾರೆ. ಕಳೆದ ಬಾರಿ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸುಮಲತಾ ಸ್ಪರ್ಧೆ ಮಾಡಿದಾಗ, ದರ್ಶನ್ ಹಾಗೂ ಯಶ್ ಬೆಂಬಲಕ್ಕೆ ನಿಂತಿದ್ದರು. ಇದೇ ವೇಳೆ ಜೋಡೆತ್ತುಗಳು ಅಂತಲೇ ಫೇಮಸ್ ಆಗಿದ್ದರು. ಈ ಬಾರಿ ಕೂಡ ದರ್ಶನ್ ಜೊತೆಯಾಗಿ ನಿಂತಿದ್ದಾರೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ ಸುಮಲತಾ ಪರ ದರ್ಶನ್ ಪ್ರಚಾರ ಮಾಡಿದ್ದರು. ಮಂಡ್ಯದ ಗ್ರಾಮಗಳಿಗೆಲ್ಲ ತೆರಳಿ ಸಮಲತಾಗಾಗಿ ಮತಯಾಚನೆ ಮಾಡಿದ್ದರು. ಈ ಬಾರಿ ಸುಮಲತಾ ಚುನಾವಣೆಗೆ ಅದೆಲ್ಲಿಂದ ಸ್ಪರ್ಧೆ ಮಾಡಿದ್ದರೂ, ದರ್ಶನ್ ಪ್ರಚಾರ ಮಾಡುತ್ತಿದ್ದರು. ಆದರೆ, ಮಂಡ್ಯ ಲೋಕಸಭೆ ಚುನಾವಣೆಯಿಂದ ಹಿಂದೆ ಸರಿದಿದ್ದು, ಅವರ ನಿರ್ಧಾರದ ಜೊತೆ ಇರುವುದಾಗಿ ಹೇಳಿಕೊಂಡಿದ್ದಾರೆ. ಈ ವೇಳೆ ದರ್ಶನ್ ಆಡಿದ ಮಾತಿನ ಝಲಕ್ ಇಲ್ಲಿದೆ.
ಮಂಡ್ಯದ ಕಾಳಿಕಾಂಬ ದೇವಸ್ಥಾನದ ಮುಂಭಾಗ ಸುಮಲತಾ ತಮ್ಮ ಬೆಂಬಲಿಗರು ಹಾಗೂ ಜನತೆಯೊಂದಿಗೆ ಚುನಾವಣಾ ಗಣದಿಂದ ಹಿಂದೆ ಸರಿಯುವ ನಿರ್ಧಾರ ಪ್ರಕಟಿಸಿದ್ದರು. ಈ ವೇಳೆ ದರ್ಶನ್ ಏನೇ ನಿರ್ಧಾರ ತೆಗೆದುಕೊಂಡು ನಾವು ಅವರೊಂದಿಗೆ ಇರುತ್ತೇವೆ ಎಂದಿದ್ದಾರೆ.

"ನೀವು ಇಲ್ಲಿವರೆಗೂ ನೋಡಿದ್ರಿ. 5 ವರ್ಷ ಅಮ್ಮ ಏನೇನು ಮಾಡಿದ್ರು ಅಂತ. ಸ್ವತಂತ್ರ ಅಭ್ಯರ್ಥಿ ಇಷ್ಟೆಲ್ಲ ಕೆಲಸ ಮಾಡುವುದು ತುಂಬಾನೇ ದೊಡ್ಡದು. ನಾನು ರಾಜಕೀಯ ಮಾತಾಡಲ್ಲ. ಆದರೂ ಕೂಡ ಇವತ್ತು ಒಂದೇ ಮಾತಲ್ಲಿ ಹೇಳಿ ಮುಗಿಸುತ್ತೇನೆ. ಇವತ್ತು ಅಮ್ಮ ಏನೇ ನಿರ್ಧಾರ ತೆಗೆದುಕೊಂಡರೂ ಕೂಡ ನಾವು ಅವರ ಹಿಂದೆ ನಿಂತೇ ಇರುತ್ತೇವೆ. ಅದು ಯಾವುದೇ ತರ ನಿರ್ಧಾರ ಆಗಬಹುದು." ಎಂದು ಚಾಲೆಂಜಿಂಗ್ ಸ್ಟಾರ್ ಹೇಳಿದ್ದಾರೆ.
ಹಾಗೇ ಅಮ್ಮ ಹಾಳು ಬಾವಿಗೆ ಬೀಳು ಅಂದರೂ ಬೀಳುತ್ತೇನೆ ಎಂದು ದರ್ಶನ್ ಹೇಳಿಕೊಂಡಿದ್ದಾರೆ. "ಇವತ್ತು ತಾಯಿ ಅಂದ್ಬಿಟ್ಟು, ನಾಳೆ ಅಲ್ಲ ಅನ್ನೋದಲ್ಲ. ಸಾಯುವವರೆಗೂ ತಾಯಿ ತಾಯಿನೇ. ಅವರು ಹೀಗೆ ಮಾಡು ಅಂದರೆ ಮಾಡುವುದೇ. ಹಾಳು ಬಾವಿಗೆ ಬೀಳು ಅಂದರೆ, ಬೀಳುವುದಕ್ಕೂ ರೆಡಿನೇ. ಯಾಕಂದ್ರೆ ಆ ಮನೆಗೂ ನನಗೂ ಅಷ್ಟು ಬಾಂಧವ್ಯವಿದೆ. ಆದ್ದರಿಂದ ಅಮ್ಮ ಏನೇ ನಿರ್ಧಾರ ತೆಗೆದುಕೊಂಡರೂ, ಅದಕ್ಕೆ ನಾನಾಗಲಿ ನನ್ನ ತಮ್ಮ ಆಗಲಿ ಬದ್ಧರಾಗಿ ಇರುತ್ತೇವೆ." ಎಂದು ದರ್ಶನ್ ವೇದಿಕೆ ಮೇಲೆ ಹೇಳಿದ್ದಾರೆ


Click it and Unblock the Notifications











