ಓಲ್ಡ್ ಗೆಟಪ್ ಹಾಕಿದಾಗ ದರ್ಶನ್ ಮಧ್ಯಾಹ್ನದ ಊಟವನ್ನೇ ಬಿಟ್ಟಿದ್ದೇಕೆ? ತರುಣ್ ಬಿಚ್ಚಿಟ್ಟ ಗುಟ್ಟೇನು?
ಕರ್ನಾಟಕದಲ್ಲಿ 'ಕಾಟೇರ' ಸಿನಿಮಾ ಗೆದ್ದಿದೆ. ಬಾಕ್ಸಾಫೀಸ್‌ನಲ್ಲಿ 'ಕಾಟೇರ' ಧೂಳೆಬ್ಬಿಸಿ, 100 ಕೋಟಿ ರೂಪಾಯಿಗೂ ಅಧಿಕ ಮೊತ್ತವನ್ನು ಕಲೆ ಹಾಕಿದೆ. ಹೀಗಾಗಿ ಇಡೀ ಚಿತ್ರತಂಡ ಖುಷಿಯ ಅಲೆಯಲ್ಲಿ ತೇಲುತ್ತಿದೆ. ದರ್ಶನ್ ವೃತ್ತಿ ಬದುಕಿನಲ್ಲೇ ವಿಭಿನ್ನ ಸಿನಿಮಾ ಅಂತ ಅಭಿಮಾನಿಗಳು ಕೂಡ ಥ್ರಿಲ್ ಆಗಿದ್ದಾರೆ.
70ರ ದಶಕದ ಕಥೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇದೇ ಮೊದಲ ಬಾರಿಗೆ ಕಾಣಿಸಿಕೊಂಡಿದ್ದಾರೆ. ಒಂದು ಕಡೆ 70ರ ದಶಕದ ಗೆಟಪ್ ಆಗಿದ್ದರೆ, ಇನ್ನೊಂದು ಕಡೆ ವಯಸ್ಸಾದ ಪಾತ್ರದಲ್ಲಿ ದರ್ಶನ್ ಕಾಣಿಸಿಕೊಂಡಿದ್ದರು. ಈ ಎರಡು ಗೆಟಪ್‌ಗಳು ಕೂಡ ದರ್ಶನ್ ವೃತ್ತಿ ಬದುಕಿನಲ್ಲೇ ಮೊದಲು.

ಆದರೆ, ವಯಸ್ಸಾದ ಪಾತ್ರದಲ್ಲಿ ನಟಿಸುವುದಕ್ಕೆ ದರ್ಶನ್ ತುಂಬಾನೇ ಕಷ್ಟ ಪಟ್ಟಿದ್ದರು. ಎರಡೆರಡು ಗಂಟೆ ಮೇಕಪ್ ಹಾಕಿಕೊಂಡು ಶೂಟಿಂಗ್‌ಗೆ ರೆಡಿಯಾಗಬೇಕಿತ್ತು. ಮೇಕಪ್ ಹಾಕಿಕೊಂಡ ಬಳಿಕ ದರ್ಶನ್ ಎಷ್ಟು ಕಷ್ಟಪಟ್ಟಿದ್ದಾರೆ ಅನ್ನೋದನ್ನು ನಿರ್ದೇಶಕರ ತರುಣ್ ಸುಧೀರ್ ರಿವೀಲ್ ಮಾಡಿದ್ದಾರೆ. ಇಷ್ಟೇ ಅಲ್ಲ, ಓಲ್ಡ್ ಗೆಟಪ್‌ನಲ್ಲಿ ಮೇಕಪ್ ಹಾಕಿದ ಬಳಿಕ ದರ್ಶನ್ ಮಧ್ಯಾಹ್ನ ಊಟವನ್ನೇ ಮಾಡುತ್ತಿರುಲಿಲ್ಲ. ಅದ್ಯಾಕೆ ಅನ್ನೋದನ್ನು ಹೇಳಿದ್ದಾರೆ.
"ಕಾಟೇರ ಲುಕ್ ಟೆಸ್ಟ್"
'ಕಾಟೇರ' ಸಿನಿಮಾದಲ್ಲಿ ಹೊಸತೇನನ್ನೋ ಟ್ರೈ ಮಾಡಬೇಕು ಅಂತ ಪ್ರಯತ್ನ ಪಟ್ಟಿದ್ದರು. ಅದೇ ಓಲ್ಡ್ ಗೆಟಪ್. ಯಾಕಂದ್ರೆ, ಹಿಂದೆಂದೂ ದರ್ಶನ್ ಓಲ್ಡ್ ಲುಕ್ ಕೊಟ್ಟಿರಲಿಲ್ಲ. ಹೀಗಾಗಿ ಬೇರೆ ಬೇರೆ ಲುಕ್ ಟ್ರೈ ಮಾಡಿದ್ದರು. ಆದರೆ, ಕೊನೆಗೆ ಓಕೆ ಆಗಿದ್ದೇ ಈಗಿರುವ ಓಲ್ಡ್ ಗೆಟಪ್. ದರ್ಶನ್ ಈ ಓಲ್ಡ್ ಗೆಟಪ್ ಅನ್ನು ಇಡೀ ತಂಡ ಒಪ್ಪಿಕೊಂಡಿತ್ತು. ಆದರೆ, ಮೇಕಪ್ ಹಾಕುವಾಗ ಮಾತ್ರ ದೊಡ್ಡ ಸಮಸ್ಯೆ ಎದುರಾಗುತ್ತಿತ್ತು.
"ಬೇರೆ ಬೇರೆ ಲುಕ್ ಟ್ರೈ ಮಾಡಿದ್ವಿ"
ದರ್ಶನ್ ಓಲ್ಡ್ ಗೆಟಪ್ ಬಗ್ಗೆ ನಿರ್ದೇಶಕ ತರುಣ್ ಸುಧೀರ್ ಹೀಗಂತಾರೆ. "ಇನ್ನೊಂದು ವಯಸ್ಸಾಗಿರೊ ಗೆಟಪ್ ಬೇಕಿತ್ತು. ಅದಕ್ಕಾಗಿ ಒಂದಿಷ್ಟು ಬೇರೆ ಬೇರೆ ಲುಕ್‌ಗಳನ್ನು ಟ್ರೈ ಮಾಡಿದ್ವಿ ನಾವು. ಕೊನೆಗೆ ಒಂದು ಫೈನಲ್ ಲುಕ್ ಲಾಕ್ ಆಯ್ತು. ಅವರಿಗೆ ಈ ಲುಕ್ ಸಖತ್ ಚಾಲೆಂಜಿಂಗ್ ಆಗಿತ್ತು. ಮೇಕಪ್ ಹಾಕಿಕೊಳ್ಳುವುದಕ್ಕೆ ಎರಡು ಗಂಟೆ ಆಗೋದು. ತೆಗೆಯೋದಕ್ಕೆ 45 ನಿಮಿಷ ಬೇಕಿತ್ತು." ತರುಣ್ ಸುಧೀರ್ ಹೇಳಿದ್ದಾರೆ.

ದರ್ಶನ್ ಏನಂತಾರೆ?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಈ ಓಲ್ಡ್ ಗೆಟಪ್ ಬಗ್ಗೆ ಇಂಟ್ರೆಸ್ಟಿಂಗ್ ವಿಷಯವನ್ನು ರಿವೀಲ್ ಮಾಡಿದ್ದಾರೆ. "ಲುಕ್ ಅಂದಾಗ, ಒಂದು ಯಂಗ್ ಗೆಟಪ್ ಇದೆ. ಇನ್ನೊಂದು ಓಲ್ಡ್ ಗೆಟಪ್ ಇದೆ. ಯಂಗ್ ಗೆಟಪ್‌ಗೆ ಪಟ ಪಟ ಅಂತ ಆಗೋಯ್ತು. ಆದರೆ, ಓಲ್ಡ್ ಗೆಟಪ್ ಹಾಕಬೇಕಿದ್ದರೆ, ಒಂದೂ ಒಂದೂವರೆ ಗಂಟೆ ತೆಗೆದುಕೊಳ್ಳುತ್ತಿದ್ದೆ. ಯಾಕಂದ್ರೆ, ಮುಖವೆಲ್ಲ ಸುಕ್ಕು ಮಾಡಬೇಕು. ಒಂದು ಲೋಷನ್ ಬರುತ್ತೆ ಅದನ್ನು ಹಾಕಿ ಹಿಸುಕಿದರೆ ಮಾತ್ರ ರಿಂಕಲ್ ಬರುತ್ತೆ." ದರ್ಶನ್ ಓಲ್ಡ್ ಗೆಟಪ್ ಬಗ್ಗೆ ರಿವೀಲ್ ಮಾಡಿದ್ದಾರೆ.
ಮಧ್ಯಾಹ್ನದ ಊಟವನ್ನೇ ಮಾಡುತ್ತಿರಲಿಲ್ಲ
ದರ್ಶನ್ ಓಲ್ಡ್ ಗೆಟಪ್ ಹಾಕಿದಾಗ, ಮಧ್ಯಾಹ್ನದ ಊಟವನ್ನೇ ಮಾಡುತ್ತಿರಲಿಲ್ಲ. ಯಾಕಂದ್ರೆ, ಮೇಕಪ್ ಹಾಕಿದ ಬಳಿಕ ಅವರ ಬಾಯ ಅಗಲಿಸುವುದಕ್ಕೂ ಆಗುತ್ತಿರಲಿಲ್ಲ. ಅಲ್ಲದೇ ಮೀಸೆ, ಗಡ್ಡ ಇಟ್ಟುಕೊಂಡು ಊಟ ಮಾಡುವುದು ಕಷ್ಟ ಸಾಧ್ಯವೇನಿಸುತ್ತಿತ್ತು. "ಓಲ್ಡ್ ಗೆಟಪ್‌ನಲ್ಲಿ ಇದ್ದಾಗ ಅವರು ಊಟ ಮಾಡುತ್ತಿರಲಿಲ್ಲ. ಕಾರಣ ಏನಂದ್ರೆ, ಊಟ ಮಾಡುವುದಕ್ಕೆ ಆಗುತ್ತಿರಲಿಲ್ಲ. ಗಡ್ಡ, ಮೀಸೆ ಎಲ್ಲಾ ಇರುತ್ತೆ. ಸರಿಯಾಗಿ ಊಟ ಮಾಡುವುದಕ್ಕೆ ಆಗುತ್ತಿರಲಿಲ್ಲ. ಅವರು ಯಾವಾಗಲೂ ಮಧ್ಯಾಹ್ನ ಊಟ ಬಿಟ್ಟೇ ಶೂಟಿಂಗ್ ಮಾಡೋರು." ಎಂದು ನಿರ್ದೇಶಕ ತರುಣ್ ಸುಧೀರ್ ರಿವೀಲ್ ಮಾಡಿದ್ದಾರೆ.


Click it and Unblock the Notifications











