ದರ್ಶನ್ 56ನೇ ಸಿನಿಮಾ ಬಗ್ಗೆ ಮತ್ತೊಂದು ಅಪ್‌ಡೇಟ್:'ದಾಸ'ನ ಎದುರು ತೊಡೆತಟ್ಟಲು ಬಾಬು ರೆಡಿ!

ಚಾಲೆಂಜಿಂಗ್‌ಸ್ಟಾರ್ ದರ್ಶನ್ ಹುಟ್ಟುಹಬ್ಬಕ್ಕೆ ಈಗಿನಿಂದಲೇ ಪೂರ್ವ ತಯಾರಿ ನಡೆಯುತ್ತಿದೆ. ಬರ್ತ್‌ಡೇಯಲ್ಲೂ 'ಕ್ರಾಂತಿ' ಮಾಡುವುದಕ್ಕೆ ಫ್ಯಾನ್ಸ್ ತುದಿಗಾಲಲ್ಲಿ ನಿಂತಿದ್ದಾರೆ. ಕಳೆದ ಕೆಲವು ದಿನಗಳಿಂದ ದರ್ಶನ್ ಬೇರೆ ಬೇರೆ ಕಾರಣಗಳಿಂದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರಲಿಲ್ಲ. ಆದರೆ, ಬಾರಿ ಅಭಿಮಾನಿಗಳೊಂದಿಗೆ ಬರ್ತ್‌ಡೇ ಸೆಲೆಬ್ರೆಟ್ ಮಾಡುವುದಕ್ಕೆ ಸಜ್ಜಾಗಿದ್ದಾರೆ.

ಅದೇ ಇನ್ನೊಂದು ಕಡೆ ಹುಟ್ಟುಹಬ್ಬದ ಈ ಸಂದರ್ಭದಲ್ಲೇ ದರ್ಶನ್ 56ನೇ ತಂಡ ಒಂದೊಂದೇ ಸ್ಪೆಷಲ್ ಸರ್ಪ್ರೈಸ್ ಕೊಡುವುದಕ್ಕೆ ಮುಂದಾಗಿದೆ. ಫೆಬ್ರವರು 16ರಂದು ಹುಟ್ಟುಹಬ್ಬದ ದಿನವೇ 56ನೇ ಸಿನಿಮಾ ಟೈಟಲ್ ಕೂಡ ಮಾಡಲಿದೆ.

ಈ ಮಧ್ಯೆ 56ನೇ ಸಿನಿಮಾ ತಂಡಕ್ಕೆ ಟಾಲಿವುಡ್ ನಟ ಜಗಪತಿ ಬಾಬು ಸೇರಿಕೊಂಡಿದ್ದಾರೆ. ಕಳೆದ ಕೆಲವು ದಿನಗಳಿಂದ ಜಗಪತಿಬಾಬು ನಟಿಸುತ್ತಿರುವ ಬಗ್ಗೆ ಗುಸುಗುಸು ಇತ್ತು. ಆದ್ರೀಗ ಚಿತ್ರತಂಡವೇ ಅಧಿಕೃತವಾಗಿ ಅನೌನ್ಸ್ ಮಾಡಿದೆ.

ದರ್ಶನ್‌ಗೆ ಟಕ್ಕರ್ ಕೊಡಲು ಬಂದ ಜಗಪತಿ ಬಾಬು

ಟಾಲಿವುಡ್‌ನ ಬೇಡಿಕೆಯ ಸ್ಟಾರ್ ನಟ ಜಗಪತಿ ಬಾಬು. ಪೋಷಕ ಪಾತ್ರ, ಖಳನಾಯಕನಾಗಿ ಟಾಲಿವುಡ್ ನಟ ಜಗಪತಿಬಾಬು ಜನಮೆಚ್ಚುಗೆ ಗಳಿಸಿದ್ದಾರೆ. ಕೇವಲ ತೆಲುಗು ಸಿನಿಮಾ ಅಷ್ಟೇ ಅಲ್ಲ. ಸ್ಯಾಂಡಲ್‌ವುಡ್‌ನಲ್ಲೂ ಜಗಪತಿಬಾಬುಗೆ ಬೇಡಿಕೆ ಇದೆ. ಹೀಗಾಗಿ ದರ್ಶನ್ 56ನೇ ಸಿನಿಮಾಗೆ ನಿರ್ದೇಶಕ ತರುಣ್ ಸುಧೀರ್ ತೆಲುಗಿನ ಈ ವಿಶೇಷ ನಟ ಜಗಪತಿಬಾಬುರನ್ನು ಕರೆದುಕೊಂಡು ಬರುತ್ತಿದ್ದಾರೆ. ತನ್ನ ಹುಟ್ಟುಹಬ್ಬದಂದೇ ಜಗಪತಿಬಾಬುರನ್ನು ದರ್ಶನ್ ಸಿನಿಮಾ ತಂಡವನ್ನು ಅಧಿಕೃತವಾಗಿ ಸೇರಿಕೊಂಡಿದ್ದಾರೆ.

2ನೇ ಬಾರಿ ದರ್ಶನ್ ಸಿನಿಮಾದಲ್ಲಿ ಜಗಪತಿ ಬಾಬು

2ನೇ ಬಾರಿ ದರ್ಶನ್ ಸಿನಿಮಾದಲ್ಲಿ ಜಗಪತಿ ಬಾಬು

ಟಾಲಿವುಡ್‌ ನಟ ಜಗಪತಿ ಬಾಬುಗೆ ಸ್ಯಾಂಡಲ್‌ವುಡ್‌ ಹೊಸತೇನೂ ಅಲ್ಲ. ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ದರ್ಶನ್ ಹಾಗೂ ತರುಣ್ ಸುಧೀರ್ ಕಾಂಬಿನೇಷನ್‌ನಲ್ಲಿ ಬಂದ ಮೊದಲ ಸಿನಿಮಾ 'ರಾಬರ್ಟ್‌'ನಲ್ಲಿ ಖಳನಾಯಕನಾಗಿ ಕಂಡಿದ್ದರು. ಈ ಸಿನಿಮಾದಲ್ಲಿ ದರ್ಶನ್ ಹಾಗೂ ಜಗಪತಿ ಬಾಬು ಪೈಪೋಟಿಗೆ ಬಿದ್ದು ನಟಿಸಿದ್ದರು. ಇವರಿಬ್ಬರನ್ನು ಕನ್ನಡಿಗರೂ ಮೆಚ್ಚಿಕೊಂಡಿದ್ದರು. ಈಗ ಮತ್ತೊಮ್ಮೆ ತೆರೆಮೇಲೆ ಮುಖಾಮುಖಿಯಾಗುತ್ತಿದ್ದಾರೆ. ಆದರೆ, ಈ ಬಾರಿಗೆ ಖಳನಾಯಕನಾಗಿಯೇ ಕಾಣಿಸಿಕೊಳ್ಳುತ್ತಿದ್ದಾರಾ? ಇಲ್ಲಾ ಬೇರೆ ಪಾತ್ರದಲ್ಲಿ ನಟಿಸುತ್ತಾರಾ? ಅನ್ನೋದು ಸದ್ಯಕ್ಕೆ ಸೀಕ್ರೆಟ್.

'ಕ್ರಾಂತಿ' ಬಳಿಕ 56ನೇ ಚಿತ್ರದಲ್ಲಿ ಬ್ಯುಸಿ

'ಕ್ರಾಂತಿ' ಬಳಿಕ 56ನೇ ಚಿತ್ರದಲ್ಲಿ ಬ್ಯುಸಿ

'ಕ್ರಾಂತಿ'ಯನ್ನು ಸವಾಲಾಗಿ ಸ್ವೀಕರಿಸಿದ್ದ ದರ್ಶನ್ ಸಿನಿಮಾ ಗೆಲ್ಲಿಸಲೇ ಬೇಕು ಅಂತ ನಿರ್ಧರಿಸಿದ್ದರು. ಇವರೊಂದಿಗೆ ದರ್ಶನ್ ಅಭಿಮಾನಿಗಳು ಕೂಡ ಜೊತೆಯಾಗಿ ನಿಂತಿದ್ದರು. ಇನ್ನೇನು 'ಕ್ರಾಂತಿ' ರಿಲೀಸ್ ಆದ ಬಳಿಕ 56ನೇ ಸಿನಿಮಾ ಕಡೆ ಮುಖ ಮಾಡಿದ್ದಾರೆ. ತರುಣ್ ಸುಧೀರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ರಾಕ್‌ಲೈನ್ ವೆಂಕಟೇಶ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ದೊಡ್ಡ ಸ್ಟಾರ್‌ಕಾಸ್ಟ್ ಈ ಸಿನಿಮಾದಲ್ಲಿ ಇದೆ.

ದರ್ಶನ್ ಹುಟ್ಟುಹಬ್ಬಕ್ಕೆ ಸಜ್ಜು

ದರ್ಶನ್ ಹುಟ್ಟುಹಬ್ಬಕ್ಕೆ ಸಜ್ಜು

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಳೆದ ಮೂರು ವರ್ಷಗಳಿಂದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರಲಿಲ್ಲ. ಕೋವಿಡ್ ಕಾರಣಗಳಿಂದ ಅಭಿಮಾನಿಗಳಿಗೆ ಬರ್ತ್‌ಡೇ ಬೇಡ ಎಂದೇ ಹೇಳಿದ್ದರು. ಹಾಗೇ ಪುನೀತ್ ರಾಜ್‌ಕುಮಾರ್ ನಿಧನದ ಬೆನ್ನಲ್ಲೇ ಹುಟ್ಟುಹಬ್ಬದಿಂದ ದೂರವಿದ್ದರು. ಆದರೆ, ಈ ಬಾರಿ ಅಭಿಮಾನಿಗಳಿಗೆ ನಿರಾಸೆ ಮಾಡುವುದಿಲ್ಲ. ಹೀಗಾಗಿ ಬರ್ತ್‌ಡೇ ಸೆಲೆಬ್ರೆಷನ್ ಜೋರಾಗಿಯೇ ಇರುತ್ತೆ ಎಂದು ನಿರೀಕ್ಷೆ ಮಾಡಬಹುದಾಗಿದೆ.

More from Filmibeat

English summary
Darshan Starrer 56th Movie Team Welcome telugu Star Jagapathi Babu On Board, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X