ಕರ್ನಾಟಕ ಕನ್ನಡಿಗರ ಅಡ್ಡ ಅಂತ ಪ್ರೂವ್ ಮಾಡುತ್ತಾ 'ಕಾಟೇರ'? ಅದಕ್ಕೊಂದು ಸಾಕ್ಷಿ ಇಲ್ಲಿದೆ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ 'ಕಾಟೇರ' ರಿಲೀಸ್ ಡೇಟ್ ಅನೌನ್ಸ್ ಮಾಡಿ ಊಹೆಗೂ ಮೀರಿದ ಅಚ್ಚರಿಯನ್ನು ಚಿತ್ರತಂಡ ಕೊಟ್ಟಿದೆ. ಈ ಸಿನಿಮಾ ನೋಡುವುದಕ್ಕೆ ದರ್ಶನ್ ಅಭಿಮಾನಿಗಳು ಇಷ್ಟು ದಿನ ಕಾದು ಕೂತಿದ್ದರು. ಮೇಕಿಂಗ್ ಸಮಯದಲ್ಲಿ ನಿರ್ದೇಶನ ತರುಣ್ ಸುಧೀರ್ ಒಂದೇ ಒಂದು ಸುಳಿವು ಬಿಟ್ಟು ಕೊಡದೇ ಇದ್ದಿದ್ದರಿಂದ 'ಕಾಟೇರ' ತಂಡ ಕೊಟ್ಟ ಸರ್ಪ್ರೈಸ್‌ಗೆ ಕಂಗಾಲಾಗಿದ್ದಾರೆ.
'ಕಾಟೇರ' ಸಿನಿಮಾ ಈ ಮಟ್ಟಿಗೆ ಸೌಂಡು ಮಾಡೋಕೆ ಕಾರಣ ದರ್ಶನ್. ಹಿಂದೆಂದೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂತಹ ಪಾತ್ರದಲ್ಲಿ ಕಂಡಿರಲಿಲ್ಲ. ರೆಟ್ರೋ ಸ್ಟೈಲ್‌ನಲ್ಲಿ, ಹಳ್ಳಿಯವನಾಗಿ ಕಾಣಿಸಿಕೊಂಡಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಇದು ರೈತರ ಹಿನ್ನೆಲೆಯುಳ್ಳ ಸಿನಿಮಾ. ಹೀಗಾಗಿ ಸಿನಿಪ್ರಿಯರಲ್ಲಿ ಕುತೂಹಲ ದುಪ್ಪಟ್ಟಾಗಿದೆ.

ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಮಾಡುವುದಕ್ಕೆ ಅಂತಾನೇ ಅನೌನ್ಸ್‌ಮೆಂಟ್ ಟೀಸರ್ ಅನ್ನು ರಿಲೀಸ್ ಮಾಡಲಾಗಿತ್ತು. 24 ಗಂಟೆಗಳು ಮುಗಿಯುವುದರೊಳಗೆ ಈ ಸಿನಿಮಾದ ಅನೌನ್ಸ್‌ಮೆಂಟ್ ಟೀಸರ್ ಟ್ರೆಂಡಿಂಗ್‌ನಲ್ಲಿದೆ. ದರ್ಶನ್ ಹೊಸ ಲುಕ್ ಕಣ್ತುಂಬಿಕೊಂಡು ಥ್ರಿಲ್ ಆಗಿದ್ದಾರೆ.
ಪರಭಾಷೆಗಳಿಗೆ ಟಕ್ಕರ್ ಕೊಡುವುದಕ್ಕೆ ಅಂತಾನೇ 'ಕಾಟೇರ' ಸಿನಿಮಾ ಬರುತ್ತಿದೆ. ಪ್ಯಾನ್ ಇಂಡಿಯಾ ಸಿನಿಮಾಗಳ ಮುಂದೆ ದರ್ಶನ್ ತೊಡೆ ತಟ್ಟಿ ನಿಂತಿದ್ದಾರೆ ಅಂತ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಈ ಮಧ್ಯೆ ಥಿಯೇಟರ್‌ಗಳ ಕೊರೆತೆ ಎದುರಾಗುವುದಿಲ್ಲವೇ? ಅನ್ನೋ ಪ್ರಶ್ನೆನೂ ಎದುರಾಗಿದೆ. ಆದರೆ, ಫ್ಯಾನ್ಸ್ ಇದ್ಯಾವುದಕ್ಕೂ ತಲೆಕೆಡಿಸಿಕೊಂಡಿಲ್ಲ. 'ಕಾಟೇರ' ಕ್ರೇಜ್ ಬೇರೆಯದ್ದೇ ಲೆವೆಲ್‌ನಲ್ಲಿ ಇರುತ್ತೆ ಅಂತ ಕಾನ್ಫಿಡೆಂಟ್ ಆಗಿದ್ದಾರೆ.
ಅದಕ್ಕೆ ಸಾಕ್ಷಿ ಅಂದರೆ, ರಿಲೀಸ್ ಡೇಟ್ ಅನೌನ್ಸ್‌ಮೆಂಟ್ ಟೀಸರ್. ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಸಿನಿಮಾದ ಟೀಸರ್ ರಿಲೀಸ್ ಆಗಿತ್ತು. 24 ಗಂಟೆ ಕಳೆಯುವುದರೊಳಗೆ 1.8 ಮಿಲಿಯನ್ ವೀವ್ಸ್ ಪಡೆದು ಕೊಂಡಿದೆ. ಇನ್ನೇನು ಕೆಲವೇ ಗಂಟೆಗಳಲ್ಲಿ 20 ಮಿಲಿಯನ್ ದಾಟಲಿದ್ದು, ಸದ್ಯ ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್‌ನಲ್ಲಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ನಾಯಕಿಯಾಗಿ ಮಾಲಾಶ್ರೀ ಪುತ್ರಿ ನಟಿಸಿದ್ದಾರೆ. ಈ ಸಿನಿಮಾ ಮೂಲಕ ಆರಾಧನಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹಾಗೇ ಕುಮಾರ್ ಗೋವಿಂದ್, ಹಿರಿಯ ನಟ ಬಿರಾದರ್ ಸೇರಿದಂತೆ ಹಲವು ಮಂದಿ ಗಣ್ಯರು ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಕ್‌ಲೈನ್ ವೆಂಕಟೇಶ್ ನಿರ್ಮಾಣ ಅಂದಾಗ, ಥಿಯೇಟರ್‌ನಲ್ಲಿ ಟಕ್ಕರ್ ಸರಿಯಾಗೇ ಇರುತ್ತೆ. ಸದ್ಯಕ್ಕಿಗ ಚಿಕ್ಕದೊಂದು ತುಣುಕು ರಿಲೀಸ್ ಆಗಿದ್ದು, ಅಸಲಿ ಟೀಸರ್ ಹಾಗೂ ಟ್ರೈಲರ್ ರಿಲೀಸ್ ಆಗೋದು ಬಾಕಿಯಿದೆ.
ಈ ವರ್ಷದ ಕೊನೆಯಲ್ಲಿ ರಿಲೀಸ್ ಆಗುತ್ತಿರುವ ಸಿನಿಮಾಗಳಲ್ಲಿ 'ಕಾಟೇರ' ಕೂಡ ಒಂದು. ಅಲ್ಲದೆ ಸ್ಯಾಂಡಲ್‌ವುಡ್‌ಗೆ 'ಕಾಟೇರ' ಲಕ್ಕಿ ಬೇರೆ. ಹೀಗಾಗಿ ದರ್ಶನ್ ಸಿನಿಮಾ ಬಾರಿ ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸುತ್ತೆ ಅಂತ ಅಭಿಮಾನಿಗಳು ಬಲವಾಗಿ ನಂಬಿಸಿದ್ದಾರೆ. ಸಿನಿಮಾ ಪ್ರಚಾರ ಮಾಡುವುದಕ್ಕೆ ತಂಡದ ಬಳಿ ಒಂದು ತಿಂಗಳು ಬಾಕಿ ಉಳಿದಿದೆ.


Click it and Unblock the Notifications











