2ನೇ ವಾರ ಬಾಕ್ಸಾಫೀಸ್‌ನಲ್ಲಿ 'ಕಾಟೇರ' ಗಳಿಸಿದ್ದೆಷ್ಟು? ಇನ್ನು ಎಷ್ಟು ಥಿಯೇಟರ್‌ನಲ್ಲಿದೆ ಸಿನಿಮಾ?
'ಕೆಜಿಎಫ್ 2', 'ಕಾಂತಾರ', 'ವಿಕ್ರಾಂತ್ ರೋಣ' ಈ ಕನ್ನಡ ಸಿನಿಮಾಗಳು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡಿದ್ದವು. ಈ ಸಿನಿಮಾಗಳಿಂದ ಕನ್ನಡ ಚಿತ್ರರಂಗ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡುವುದಕ್ಕೂ ಶುರು ಮಾಡಿದ್ದವು. ಆದರೆ, 'ಕಾಂತಾರ' ಬಳಿಕ ಸ್ಯಾಂಡಲ್‌ವುಡ್ ಸಿನಿಮಾಗಳು ಸದ್ದು ಮಾಡಿರಲಿಲ್ಲ.
2023, ಕನ್ನಡ ಚಿತ್ರರಂಗದ ಲಾಭದಾಯಕ ಸಿನಿಮಾವನ್ನೇನು ಕೊಡಲಿಲ್ಲ. ಕೆಲವೇ ಕೆಲವು ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿದ್ದು ಬಿಟ್ಟರೆ, ಫ್ಯಾನ್ ಇಂಡಿಯಾ ಮಟ್ಟದಲ್ಲಿ ಯಾವುದೇ ಸಿನಿಮಾ ಸದ್ದು ಮಾಡಿರಲಿಲ್ಲ. ಆದರೆ, 2023 ಕೊನೆಯಲ್ಲಿ ಇದು ಅಪ್ಪಟ ಕನ್ನಡ ಸಿನಿಮಾ ಅಂತ ತೆರೆಕಂಡಿದ್ದು 'ಕಾಟೇರ'.

70ರ ದಶಕದ ಕಥೆಯಲ್ಲಿ ದರ್ಶನ್ ಎರಡು ವಿಭಿನ್ನ ಗೆಟಪ್‌ಗಳಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾಗೆ ವರ್ಷದ ಕೊನೆಯಲ್ಲಿ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಎರಡನೇ ವಾರವೂ ಕೂಡ 'ಕಾಟೇರ' ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದೆ. ಈ ಮೂಲಕ ಕನ್ನಡದಲ್ಲಿ ಹೊಸ ದಾಖಲೆಯನ್ನು ಬರೆದಿದೆ. ಹಾಗಿದ್ರೆ, ಎರಡು ವಾರಗಳಲ್ಲಿ 'ಕಾಟೇರ' ಗಳಿಸಿದ ಒಟ್ಟು ಕಲೆಕ್ಷನ್ ಎಷ್ಟು? ಎಷ್ಟು ಟಿಕೆಟ್‌ಗಳು ಸೇಲ್ ಆಗಿವೆ? ತಿಳಿಯಲು ಮುಂದೆ ಓದಿ.
2ನೇ ವಾರ ಎಷ್ಟು ಥಿಯೇಟರ್‌ನಲ್ಲಿತ್ತು 'ಕಾಟೇರ'?
ದರ್ಶನ್ ಸಿನಿಮಾ 'ಕಾಟೇರ' ಮೊದಲ ವಾರ ಸುಮಾರು 406 ಥಿಯೇಟರ್‌ಗಳಲ್ಲಿ ರಿಲೀಸ್ ಆಗಿತ್ತು. ಹಾಗೇ 72 ಮಲ್ಟಿಪ್ಲೆಕ್ಸ್ ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಿತ್ತು. ಮೊದಲ ವಾರ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದರಿಂದ ಎರಡನೇ ವಾರ ಥಿಯೇಟರ್‌ಗಳ ಸಂಖ್ಯೆಯನ್ನು ಏರಿಕೆ ಮಾಡಲಾಗಿತ್ತು. 2ನೇ ವಾರ ಸುಮಾರು 462 ಚಿತ್ರಮಂದಿರ ಹಾಗೂ 72 ಮಲ್ಟಿಪ್ಲೆಕ್ಸ್ ಸ್ಕ್ರೀನ್‌ಗಳಲ್ಲಿ ಶೋ ಮುಂದುವರೆದಿತ್ತು. ಈ ಎರಡೂ ವಾರ ಸಿನಿಮಾ ಬಾಕ್ಸಾಫೀಸ್ ಕಲೆಕ್ಷನ್‌ನಲ್ಲಿ ಹಿಂದೆ ಬಿದ್ದಿಲ್ಲ.

2 ವಾರಗಳಲ್ಲಿ 'ಕಾಟೇರ' ಗಳಿಸಿದ್ದೆಷ್ಟು?
'ಕಾಟೇರ' ಸಿನಿಮಾಗೆ ಮೊದಲ ಎರಡು ವಾರಗಳಲ್ಲಿ ಪ್ರೇಕ್ಷಕರಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಸಿನಿಮಾ ಬಿಡುಗಡೆಯಾದ 6 ದಿನಗಳಲ್ಲೇ 'ಕಾಟೇರ' ನೂರು ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಅಚ್ಚರಿ ಹುಟ್ಟಿಸಿತ್ತು. ಈಗ ಎರಡನೇ ವಾರಕ್ಕೆ ಮತ್ತೊಂದು ಸಾಧನೆ. ಎರಡು ವಾರಗಳ ಮುಕ್ತಾಯಕ್ಕೆ 'ಕಾಟೇರ' ಸಿನಿಮಾ ಸುಮಾರು 157.42 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಚಿತ್ರತಂಡದ ಆಪ್ತರು ರಿವೀಲ್ ಮಾಡಿದ್ದಾರೆ.
2 ವಾರದಲ್ಲಿ ಎಷ್ಟು ಟಿಕೆಟ್ ಸೇಲ್?
ದರ್ಶನ್ ಸಿನಿಮಾ 'ಕಾಟೇರ' ಕನ್ನಡ ಭಾಷೆಯಲ್ಲಿ ಮಾತ್ರ ರಿಲೀಸ್ ಆಗಿದೆ. ಮೊದಲ ವಾರ ಕರ್ನಾಟಕದಲ್ಲಿ ಮಾತ್ರ ರಿಲೀಸ್ ಆಗಿತ್ತು. ಬಳಿಕ ಈಗ ವಿದೇಶಗಳಲ್ಲಿ ರಿಲೀಸ್ ಮಾಡಲಾಗಿದೆ. ಆದರೂ, ಟಿಕೆಟ್ ಮಾರಾಟದಲ್ಲಿ ಹೊಸ ದಾಖಲೆಯನ್ನು ಬರೆದಿದೆ. ಎರಡು ವಾರಗಳಲ್ಲಿ ಸುಮಾರು 24 ಲಕ್ಷಕ್ಕೂ ಅಧಿಕ ಟಿಕೆಟ್‌ಗಳು ಸೇಲ್ ಆಗಿವೆ ಎಂದು 'ಕಾಟೇರ' ಚಿತ್ರತಂಡ ಆಪ್ತರೇ ರಿವೀಲ್ ಮಾಡಿದ್ದಾರೆ.
3ನೇ ವಾರದಲ್ಲೂ ಹೇಗಿದೆ ರೆಸ್ಪಾನ್ಸ್?
'ಕಾಟೇರ' ಸಿನಿಮಾ ಸಂಕ್ರಾಂತಿ ಪರಭಾಷೆ ಸಿನಿಮಾಗಳು ಎದುರಾಗಿವೆ. ಮಹೇಶ್ ಬಾಬು ಸಿನಿಮಾ 'ಗುಂಟೂರು ಖಾರಂ' ಹಾಗೂ ಧನುಷ್ ಸಿನಿಮಾ 'ಕ್ಯಾಪ್ಟನ್ ಮಿಲ್ಲರ್' ರಿಲೀಸ್ ಆಗಿವೆ. ಹೀಗಾಗಿದ್ದರೂ, ಮೂರನೇ ವಾರ ಕರ್ನಾಟಕದಲ್ಲಿ 416 ಥಿಯೇಟರ್‌ಗಳಲ್ಲಿ 'ಕಾಟೇರ' ಪ್ರದರ್ಶನ ಕಾಣುತ್ತಿದ್ದು, 72 ಮಲ್ಟಿಪ್ಲೆಕ್ಸ್‌ನಲ್ಲಿ ಸಿನಿಮಾ ಮುಂದುವರೆಯುತ್ತಿದೆ.


Click it and Unblock the Notifications











