ಕಳೆದ 3 ದಿನಗಳ ಕಲೆಕ್ಷನ್ ₹33.47 ಕೋಟಿ? ಸಂಕ್ರಾಂತಿವರೆಗೆ 'ಕಾಟೇರ' ₹200 ಕೋಟಿ ಕಲೆ ಹಾಕಿತೇ?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. 'ಕಾಟೇರ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟಕ್ಕೆ ಗೆಲುವು ಕಂಡಿದೆ. ಸಂಕ್ರಾಂತಿ ಹಬ್ಬದ ವೇಳೆ ಬಿಗ್ ಬಜೆಟ್ ಸಿನಿಮಾಗಳು ರಿಲೀಸ್ ಆಗಿದ್ದರೂ, 'ಕಾಟೇರ' ಗಲ್ಲಾಪಟ್ಟಿಗೆಯಿಂದ ಅಲ್ಲಾಡುತ್ತಿಲ್ಲ. ಗಳಿಕೆಯಲ್ಲಿ ದಾಖಲೆಗಳನ್ನು ಸೃಷ್ಟಿಸುತ್ತ ಮುಂದೆ ಸಾಗುತ್ತಲೇ ಇದೆ.
ಬಾಕ್ಸಾಫೀಸ್‌ನಲ್ಲಿ 'ಕಾಟೇರ' ಈಗಾಗಲೇ 150 ಕೋಟಿ ರೂಪಾಯಿ ಗಡಿ ದಾಟಿದೆ. ದರ್ಶನ್ ಸಿನಿಮಾ 'ಕಾಟೇರ' ಗಲ್ಲಾಪಟ್ಟಿಗೆಯಲ್ಲಿ 200 ಕೋಟಿ ರೂಪಾಯಿ ಕಲೆಕ್ಷನ್ ಮಾಡಬಹುದು ಅನ್ನೋ ಅನುಮಾನವನ್ನು ಟ್ರೇಡ್ ಎಕ್ಸ್‌ಪರ್ಟ್ಸ್ ವ್ಯಕ್ತಪಡಿಸುತ್ತಿದ್ದಾರೆ. ಕಳೆದ ಮೂರು ದಿನಗಳಲ್ಲೂ ಈ ಸಿನಿಮಾ ಕಲೆಕ್ಷನ್ ಅದ್ಭುತವಾಗಿದೆ.

'ಕಾಟೇರ' ಸಿನಿಮಾ ಸಂಕ್ರಾಂತಿ ಹಬ್ಬದಂದೂ ಉತ್ತಮ ಗಳಿಕೆ ಕಂಡಿದೆ ಎನ್ನಲಾಗಿದೆ. ಇಷ್ಟೇ ಅಷ್ಟೇ ಅಲ್ಲದೆ ಕಳೆದ ಮೂರು ದಿನಗಳ ರಜೆಯಲ್ಲಿ ರಾಜ್ಯದ ಬಹುತೇಕ ಕಡೆ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಂಡಿದೆ. ಪರಭಾಷೆಯ ಸಿನಿಮಾಗಳಿಗೆ ಸೆಡ್ಡು ಹೊಡೆದು ನಿಂತಿದೆ. ಕಳೆದ ಮೂರು ದಿನಗಳಲ್ಲಿ 'ಕಾಟೇರ' ಕಲೆಕ್ಷನ್ ಬಗ್ಗೆ ಟ್ರೇಡ್ ಎಕ್ಸ್‌ಪರ್ಟ್‌ಗಳ ಲೆಕ್ಕವೊಂದು ಹೊರಬಿದ್ದಿದೆ.
ಸಂಕ್ರಾಂತಿ ಹಬ್ಬ ಸ್ಯಾಂಡಲ್‌ವುಡ್ ಮಂದಿ ಲಕ್ಕಿ ಅಂತ ಸಾಬೀತಾಗಿಲ್ಲ. ಆದರೆ, ಈ ಬಾರಿ ಸಂಕ್ರಾಂತಿ ಹಬ್ಬ ದರ್ಶನ್‌ಗೆ ಲಕ್ಕಿ ಅಂತ ಸಾಬೀತಾಗಿದೆ. ಕಳೆದ ವೀಕೆಂಡ್ ಹಾಗೂ ರಜೆಯ ದಿನಗಳಲ್ಲಿ 'ಕಾಟೇರ'ಗೆ ಕಲೆಕ್ಷನ್ ಉತ್ತಮವಾಗಿದೆ. ಮೂರನೇ ವಾರದಲ್ಲೂ 'ಕಾಟೇರ' ನೋಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಬಿ ಹಾಗೂ ಸಿ ಸೆಂಟರ್‌ಗಳಲ್ಲಿ ಸಿನಿಮಾ ನೋಡಲು ಜನರು ಮುಗಿದ್ದಿದ್ದಾರೆ.
ಕಳೆದ ಮೂರು ದಿನಗಳಲ್ಲಿ 'ಕಾಟೇರ' ಸಿನಿಮಾ ಸುಮಾರು 5622 ಶೋಗಳು ನಡೆದಿವೆ. ಇದರಲ್ಲಿ 3864 ಶೋಗಳು ಹೌಸ್ ಆಗಿವೆ ಎನ್ನಲಾಗಿದೆ. ಶನಿವಾರದಂದು (ಜನವರಿ 16) 416 ಸಿಂಗಲ್ ಸ್ಕ್ರೀನ್‌ಗಳಲ್ಲಿ ಪ್ರದರ್ಶನ ಕಂಡಿತ್ತು. ಈ ದಿನ ಸುಮಾರು 1874 ಶೋಗಳನ್ನು ರನ್ ಮಾಡಲಾಗಿತ್ತು. ಇದರಲ್ಲಿ 1084 ಶೋ ಹೌಸ್‌ಫುಲ್ ಪ್ರದರ್ಶನ ಕಂಡಿವೆ.

ಇನ್ನು ಭಾನುವಾರ (ಜನವರಿ 17) ಕೂಡ 'ಕಾಟೇರ' 416 ಸಿಂಗಲ್ ಸ್ಕ್ರೀನ್‌ಗಳಲ್ಲಿ ಪ್ರದರ್ಶನ ಕಂಡಿತ್ತು. ಈ ದಿನ ಕೂಡ 1874 ಶೋಗಳನ್ನು ರನ್ ಮಾಡಲಾಗಿತ್ತು. ಇದರಲ್ಲಿ 1461 ಶೋಗಳು ಹೌಸ್‌ಫುಲ್ ಆಗಿತ್ತು. ಹಾಗೇ ಮೂರನೇ ದಿನ ಸಂಕ್ರಾಂತಿ ದಿನ ಸೋಮವಾರ (ಜನವರಿ 18) ಕೂಡ 416 ಸಿಂಗಲ್ ಸ್ಕ್ರೀನ್‌ಗಳಲ್ಲಿ, 1874 ಶೋಗಳನ್ನು ರನ್ ಮಾಡಲಾಗಿತ್ತು. 1319 ಶೋ ಪ್ರದರ್ಶನ ಹೌಸ್‌ಫುಲ್ ಆಗಿತ್ತು.
ಈ ಮೂರು ದಿನಗಳಲ್ಲಿ 'ಕಾಟೇರ' ಒಟ್ಟು 33.47 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗಿದೆ. ಈ ಮೂಲಕ 'ಕಾಟೇರ' ಸಿನಿಮಾ ಕೆಲವೇ ದಿನಗಳಲ್ಲಿ 200 ಕೋಟಿ ಕ್ಲಬ್ ಸೇರಬಹುದು ಎಂದು ಅಂದಾಜಿಸಲಾಗುತ್ತಿದೆ. ಸದ್ಯ 18ನೇ ದಿನಗಳಲ್ಲಿ ಗ್ರಾಸ್ ಕಲೆಕ್ಷನ್ 190.89 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎನ್ನಲಾಗಿದೆ.


Click it and Unblock the Notifications











