Kranti Collection: ಮೊದಲ ದಿನ 'ಕ್ರಾಂತಿ' ಗಳಿಕೆ ಎಷ್ಟು? ಟ್ರೇಡ್ ಎಕ್ಸ್‌ಪರ್ಟ್‌ಗಳ ಲೆಕ್ಕಾಚಾರವೇನು?
2023ರಲ್ಲಿ ಬಿಡುಗಡೆಯಾಗುತ್ತಿರುವ ಮೊದಲ ಸೂಪರ್‌ಸ್ಟಾರ್ ಸಿನಿಮಾ 'ಕ್ರಾಂತಿ'. ಕಳೆದ ವರ್ಷ ಸ್ಯಾಂಡಲ್‌ವುಡ್‌ನ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಹೊಸ ಹೊಸ ದಾಖಲೆಗಳನ್ನು ಬರೆದಿದ್ದವು. ಈ ವರ್ಷನೂ ಅದೇ ಯಶಸ್ಸನ್ನು ಮುಂದುವರೆಸುತ್ತಾ? ಅನ್ನೋ ಪ್ರಶ್ನೆಗೆ 'ಕ್ರಾಂತಿ' ಆರಂಭಿಕ ಉತ್ತರ ಕೊಡಲಿದೆ.
ಮಾಸ್ ಲೀಡರ್ ದರ್ಶನ್ ಸಿನಿಮಾ ಹೇಗೆ ಇದ್ದರೂ ಮೊದಲ ವಾರ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುವುದು ಪಕ್ಕಾ. ಈ ಕಾರಣಕ್ಕೆ ಫಸ್ಟ್ ಡೇ 'ಕ್ರಾಂತಿ' ಸಿನಿಮಾದ ಕಲೆಕ್ಷನ್ ಎಷ್ಟಾಗಬಹುದು ಅನ್ನೋ ಲೆಕ್ಕಾಚಾರ ಈಗಾಗಲೇ ಶುರುವಾಗಿದೆ.
'ಕ್ರಾಂತಿ' ಅಡ್ವಾನ್ಸ್ ಬುಕಿಂಗ್ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ನಾಲ್ಕೈದು ದಿನಗಳಿಂದ ಅಡ್ವಾನ್ಸ್ ಬುಕ್ಕಿಂಗ್ ಸಖತ್ ಆಗಿಯೇ ಆಗಿತ್ತು. ಹೀಗಾಗಿ ಮೊದಲ ದಿನ ಭರ್ಜರಿ ಕಲೆಕ್ಷನ್ ಆಗಬಹುದು ಎಂದು ಅಂದಾಜಿಸಲಾಗಿದೆ. ಅಷ್ಟಕ್ಕೂ ಟ್ರೇಡ್ ಎಕ್ಸ್‌ಪರ್ಟ್ ಹಾಕಿದ ಲೆಕ್ಕಾಚಾರವೇನು? ಅನ್ನೋ ಮಾಹಿತಿಗಾಗಿ ಮುಂದೆ ಓದಿ.

'ಕ್ರಾಂತಿ' ಮೂವಿ ರೆಸ್ಪಾನ್ಸ್ ಹೇಗಿದೆ?
ಈ ವರ್ಷದ ಮೊದಲ ಸ್ಯಾಂಡಲ್‌ವುಡ್ ಸಿನಿಮಾ 'ಕ್ರಾಂತಿ' ಬಾಕ್ಸಾಫೀಸ್ ದಾಖಲೆ ಬರೆಯುತ್ತೆ ಎಂದು ನಿರೀಕ್ಷೆ ಮಾಡಲಾಗಿದೆ. ಆದರೆ, ಹರಿಕೃಷ್ಣ ನಿರ್ದೇಶನ ಮಾಡಿರುವ ಈ ಸಿನಿಮಾಗೆ ಮೊದಲ ದಿನವೇ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರಿಗೆ ಸಿನಿಮಾ ಇಷ್ಟ ಆಗದೇ ಇದ್ದರೂ, ಉದ್ದೇಶಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಒಂದೊಳ್ಳೆ ಸಂದೇಶ ನೀಡುವುದಕ್ಕೆ ನಿರ್ಮಿಸಿದ ಸಿನಿಮಾ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಆದರೆ, ಈ ಸಂದೇಶ ಬಾಕ್ಸಾಫೀಸ್‌ನಲ್ಲಿ ಮೋಡಿ ಮಾಡುತ್ತಾ? ಅನ್ನೋದು ಕುತೂಹಲ ಅಂತೂ ಇದೆ.

'ಕ್ರಾಂತಿ' ಕಲೆಕ್ಷನ್ ಲೆಕ್ಕಾಚಾರವೇನು?
'ಕ್ರಾಂತಿ' ಸಿನಿಮಾ ಫಸ್ಟ್ ಡೇ ಕಲೆಕ್ಷನ್ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ, 'ಕ್ರಾಂತಿ' ಮೊದಲ ದಿನವೇ ಭರ್ಜರಿ ಕಲೆಕ್ಷನ್ ಮಾಡಲಿದೆ. ಫಸ್ಟ್ ಡೇನೇ ಈ ಸಿನಿಮಾ ಸುಮಾರು 10 ರಿಂದ 15 ಕೋಟಿ ರೂ. ಕಲೆಕ್ಷನ್ ಮಾಡಬಹುದು ಎಂದು ನಿರೀಕ್ಷೆ ಮಾಡಿದ್ದಾರೆ. ಪ್ಯಾನ್ ಇಂಡಿಯಾ ಅಲ್ಲದ ಸಿನಿಮಾದ ಇಷ್ಟು ದೊಡ್ಡ ಕಲೆಕ್ಷನ್ ಮಾಡಿದ್ರೆ ಅದು ದಾಖಲೆಯೇ. ಆದರೆ, ಅಧಿಕೃತ ಮಾಹಿತಿಯನ್ನು ಚಿತ್ರತಂಡವೇ ರಿಲೀಸ್ ಮಾಡಬೇಕಿದೆ.

ಅಡ್ವಾನ್ಸ್ ಬುಕಿಂಗ್ ಭರ್ಜರಿ
ದರ್ಶನ್ ಸಿನಿಮಾ ದೊಡ್ಡ ಮಟ್ಟಕ್ಕೆ ಕಲೆಕ್ಷನ್ ಮಾಡುತ್ತೆ ಅನ್ನೋ ನಿರೀಕ್ಷೆ ಇದ್ದೇ ಇತ್ತು. ಅದಕ್ಕೆ ಸರಿಯಾಗಿ ಅಡ್ವಾನ್ಸ್ ಬುಕಿಂಗ್‌ಗೂ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಸಿನಿಮಾ ಬಿಡುಗಡೆಗೂ ಮುನ್ನ ಅಡ್ವಾನ್ಸ್ ಬುಕಿಂಗ್‌ನಿಂದಲೇ ಸುಮಾರು 6 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ಹೇಳಲಾಗಿದೆ. ಬೆಂಗಳೂರಿನಲ್ಲಿ 3.3 ಕೋಟಿ ರೂ. ಕಲೆ ಹಾಕಿತ್ತು. 627 ಶೋಗಳಲ್ಲಿ 199 ಶೋ ಸೋಲ್ಡ್ ಆಗಿತ್ತು. ಇದು ಬಿಟ್ಟರೆ, ಮೈಸೂರಿನಲ್ಲಿ 58 ಲಕ್ಷ ರೂ. ಕಲೆಕ್ಷನ್ ಅಡ್ವಾನ್ಸ್ ಬುಕಿಂಗ್‌ನಿಂದ ಆಗಿದೆ.

ಹೇಗಿದೆ ಪ್ರೇಕ್ಷಕರ ರೆಸ್ಪಾನ್ಸ್?
ದರ್ಶನ್ ಸಿನಿಮಾ 'ಕ್ರಾಂತಿ'ಗೆ ಹಲವೆಡೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಬೆಂಗಳೂರಿನಲ್ಲಿ ಶೇ. 70ಕ್ಕೂ ಅಧಿಕ ಥಿಯೇಟರ್‌ಗಳು ಪುಲ್ ಆಗಿವೆ. ಉಳಿದಂತೆ ಮೈಸೂರು, ಹುಬ್ಬಳ್ಳಿ, ಶಿವಮೊಗ್ಗ, ಕಲಬುರ್ಗಿಯಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಹೀಗಾಗಿ ಮೊದಲ ದಿನವೇ ಕಲೆಕ್ಷನ್ 10 ರಿಂದ 15 ಕೋಟಿ ರೂ. ಆಸುಪಾಸಿನಲ್ಲಿ ಆಗಬಹುದು ಎಂದು ಟ್ರೇಡ್ ಅನಲಿಸ್ಟ್‌ಗಳು ಅಂದಾಜಿಸಿದ್ದಾರೆ.


Click it and Unblock the Notifications











