'ಕ್ರಾಂತಿ' ಸಿನಿಮಾದ ಪೋಲೆಂಡ್ ಮೇಕಿಂಗ್ ವಿಡಿಯೋ ಲೀಕ್: ದರ್ಶನ್ ಸ್ಟೈಲ್‌ಗೆ ಫ್ಯಾನ್ಸ್ ಫಿದಾ!

2022 ಕನ್ನಡ ಚಿತ್ರರಂಗಕ್ಕೆ ಹಿಂದೆಂದಿಗಿಂತಲೂ ಅದ್ಭುತ ವರ್ಷ ಎಂದು ಸಾಬೀತಾಗಿದೆ. ಸದಾ ಸೋಲಿನ ಸುಳಿಗೆ ಸಿಲುಕುತ್ತಿದ್ದ ಸ್ಯಾಂಡಲ್‌ವುಡ್ ಈ ಬಾರಿ ಲಾಭದಲ್ಲಿದೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಗೆದ್ದಿವೆ. ಕನ್ನಡದ ಸಿನಿಮಾಗಳು ಬೇರೆ ಚಿತ್ರರಂಗಗಳೂ ಕೂಡ ಇತ್ತ ತಿರುಗಿ ನೋಡುವಂತೆ ಮಾಡುತ್ತಿವೆ.

ಈ ವರ್ಷ ಇನ್ನೂ ಬಿಗ್ ಬಜೆಟ್ ಸಿನಿಮಾಗಳು ಬಿಡುಗಡೆಗೆ ತುದಿಗಾಲಲ್ಲಿ ನಿಂತಿವೆ. ಅದರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಕ್ರಾಂತಿ' ಸಿನಿಮಾ ಕೂಡ ಒಂದು. ವಿ.ಹರಿಕೃಷ್ಣ ನಿರ್ದೇಶನದ ಈ ಸಿನಿಮಾ ರಿಲೀಸ್‌ಗಾಗಿ ದರ್ಶನ್ ಫ್ಯಾನ್ಸ್ ಎದುರು ನೋಡುತ್ತಿದ್ದಾರೆ.

'ಕ್ರಾಂತಿ' ಸಿನಿಮಾ ಇನ್ನೇನು ನವೆಂಬರ್‌ಗೆ ರಿಲೀಸ್ ಆಗುತ್ತೆ ಅನ್ನೋ ನಿರೀಕ್ಷೆಯಲ್ಲಿರುವಾಗಲೇ ಚಿತ್ರತಂಡ ಹಾಡುಗಳ ಚಿತ್ರೀಕರಣದಲ್ಲಿ ತೊಡಗಿಕೊಂಡಿದೆ ಎನ್ನಲಾಗಿದೆ. ಈ ಮಧ್ಯೆ ಪೋಲೆಂಡ್‌ನ ಲ್ಲಿ ಚಿತ್ರೀಕರಿಸಲಾಗಿದ್ದ ದೃಶ್ಯ ತುಣುಕುಗಳು ಲೀಕ್ ಆಗಿವೆ.

 'ಕ್ರಾಂತಿ' ವಿಡಿಯೋ ಲೀಕ್

'ಕ್ರಾಂತಿ' ವಿಡಿಯೋ ಲೀಕ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಇದ್ಮೇಲೆ ಆ ಸಿನಿಮಾ ಕ್ರೇಜ್ ಜೋರಾಗೇ ಇರುತ್ತೆ. 'ಯಜಮಾನ' ಸಿನಿಮಾದ ಬಳಿಕ ಮತ್ತೆ ಅದೇ ತಂಡ 'ಕ್ರಾಂತಿ'ಗಾಗಿ ಒಂದಾಗಿತ್ತು. ಇನ್ನೇನು ಸಿನಿಮಾದ ಬಹುತೇಕ ಚಿತ್ರೀಕರಣ ಮುಗಿದಿದ್ದು, ಕೊನೆಯ ಹಂತದ ಶೂಟಿಂಗ್‌ನಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಈ ಮಧ್ಯೆ 'ಕ್ರಾಂತಿ' ಮೇಕಿಂಗ್ ವಿಡಿಯೋ ಲೀಕ್ ಆಗಿದ್ದು, ಕಳೆದೊಂದು ದಿನದಿಂದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಂದ್ಹಾಗೆ, ಈ ವಿಡಿಯೋವನ್ನು ಲೀಕ್ ಮಾಡಿದ್ದು ಯಾರು ಅನ್ನೋ ಬಗ್ಗೆ ಇನ್ನೂ ಗೊತ್ತಿಲ್ಲ. ಚಿತ್ರತಂಡ ಈ ಬಗ್ಗೆ ಮಾಹಿತಿ ನೀಡಿಲ್ಲ.

 ಪೋಲೆಂಡ್ ಶೂಟ್ ಮಾಡಿದ ವಿಡಿಯೋ

ಪೋಲೆಂಡ್ ಶೂಟ್ ಮಾಡಿದ ವಿಡಿಯೋ

ಅಂದ್ಹಾಗೆ, ಲೀಕ್ ಆದ ವಿಡಿಯೋದಲ್ಲಿ ದರ್ಶನ್ ನೀಲಿ ಬಣ್ಣದ ಚಾರ್ಟರ್ ಫ್ಲೈಟ್‌ನಿಂದ ಇಳಿದು ಬರುವ ದೃಶ್ಯವನ್ನು ಸೆರೆ ಹಿಡಿಯಲಾಗಿದೆ. ಅಲ್ಲದೆ ಪೋಲೆಂಡ್‌ನಲ್ಲಿ ತಂತ್ರಜ್ಞರು ದರ್ಶನ್ ದೃಶ್ಯವನ್ನು ಸೆರೆಹಿಡಿಯುತ್ತಿರೋದು ಲೀಕ್ ಆದ ವಿಡಿಯೋದಲ್ಲಿದೆ. ಕೆಲವೇ ಕೆಲವು ಸೆಕೆಂಡ್‌ಗಳ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದನ್ನು ಚಿತ್ರತಂಡವೇ ಹೊರಬಿಟ್ಟಿದೆಯಾ? ಅಥವಾ ಯಾರೋ ಕಿಡಿಗೇಡಿಗಳು ಲೀಕ್ ಮಾಡಿದ್ರಾ? ಅನ್ನೋದು ಇನ್ನೂ ತಿಳಿದು ಬಂದಿಲ್ಲ.

 'ಕ್ರಾಂತಿ' ಸಾಂಗ್ ಬಗ್ಗೆ ಸದ್ದು

'ಕ್ರಾಂತಿ' ಸಾಂಗ್ ಬಗ್ಗೆ ಸದ್ದು

ದರ್ಶನ್ ಸಿನಿಮಾ 'ಕ್ರಾಂತಿ' ಇನ್ನೇನು ಶೂಟಿಂಗ್ ಮುಗೀತು ಅನ್ನುವಾಗಲೇ ಮತ್ತೆ ಚಿತ್ರತಂಡ ಚುರುಕಾಗಿದೆ. ಇಡೀ ಟೀಮ್ 'ಕ್ರಾಂತಿ' ಸಾಂಗ್‌ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದೆ ಎಂದು ಹೇಳಲಾಗಿತ್ತು. ಇನ್ನೊಂದು ಕಡೆ ಸ್ವತ: ನಿರ್ಮಾಪಕಿ ಶೈಲಜಾ ನಾಗ್ ಕೂಡ ಇನ್ನೂ ಸಿನಿಮಾದ ಶೂಟಿಂಗ್ ಬಾಕಿ ಇದೆ. ಶೀಘ್ರದಲ್ಲಿಯೇ ಸಿನಿಮಾ ಬಗ್ಗೆ ಮಾಹಿತಿ ನೀಡುವುದಾಗಿ ಫಿಲ್ಮಿಬೀಟ್‌ಗೆ ಮಾಹಿತಿ ನೀಡಿದ್ದರು.

 ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ 'ಕ್ರಾಂತಿ'

ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ 'ಕ್ರಾಂತಿ'

ಈಗಾಗಲೇ 'ಕ್ರಾಂತಿ' ಸಿನಿಮಾದ ಫಸ್ಟ್ ಲುಕ್ ಟೀಸರ್ ರಿಲೀಸ್ ಆಗಿದ್ದು ಡಿ ಬಾಸ್ ಅಭಿಮಾನಿಗಳು ಥ್ರಿಲ್ ಆಗಿದ್ದರು. ವಿ. ಹರಿಕೃಷ್ಣ ಇದೇ ಮೊದಲ ಬಾರಿಗೆ ಪ್ಯಾನ್ ಇಂಡಿಯಾ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ದರ್ಶನ್‌ಗೆ ನಾಯಕಿಯಾಗಿ ಡಿಂಪಲ್ ಕ್ವೀನ್ ರಚಿತಾ ರಾಮ್ ಬಹಳ ದಿನಗಳ ಬಳಿಕ ನಟಿಸುತ್ತಿದ್ದಾರೆ. ಶೈಲಜಾ ನಾಗ್ ಹಾಗೂ ಬಿ ಸುರೇಶ್ ಇಬ್ಬರೂ ಅದ್ಧೂರಿಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿರೋದು ನೋಡಿದ್ರೆ, ಹೊಸ ಸಂಚಲನ ಸೃಷ್ಟಿಸೋದು ಗ್ಯಾರಂಟಿ.

More from Filmibeat

English summary
Darshan Starrer Kranti Movie Polland Making Video Leak Online, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X