Navagraha Box Office Day 1: ಮೊದಲ ದಿನ 'ನವಗ್ರಹ' ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು? 'ನವಗ್ರಹ 2' ಫಿಕ್ಸಾ?

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಆರೋಪಿಯಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬೆನ್ನಲ್ಲೇ ದರ್ಶನ್ ನಟಿಸಿದ ಕೆಲವು ಸಿನಿಮಾಗಳು ಮರುಬಿಡುಗಡೆಯಾಗಿದ್ದವು. ಅದರಲ್ಲಿ 'ನವಗ್ರಹ' ಸಿನಿಮಾ ಕೂಡ ಒಂದು. 2009ರಲ್ಲಿ ತೆರೆಕಂಡಿದ್ದ ಈ ಸಿನಿಮಾ ಕನ್ನಡದ ಮಟ್ಟಿಗೆ ಅಂದಿನ ಕಾಲಕ್ಕೆ ಸಿನಿಪ್ರಿಯರ ಗಮನ ಸೆಳೆದಿತ್ತು.

ದಿನಕರ್ ತೂಗುದೀಪ ನಿರ್ದೇಶಿಸಿದ್ದ ಈ ಸಿನಿಮಾ 16 ವರ್ಷಗಳ ಹಿಂದೆ ರಿಲೀಸ್ ಆಗಿತ್ತು. ಹೊಸ ಪ್ರಯತ್ನಕ್ಕೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ದರ್ಶನ್ ಸ್ಟಾರ್ ಆಗಿದ್ದರೂ, ಖಳನಾಯಕನ ಪಾತ್ರದಲ್ಲಿ ನಟಿಸಿ ಅಚ್ಚರಿ ಮೂಡಿಸಿದ್ದರು. ಇನ್ನು ಕನ್ನಡ ಚಿತ್ರರಂಗದ ಖಳನಾಯಕರ ಮಕ್ಕಳು ಒಟ್ಟಿಗೆ ನಟಿಸುತ್ತಿದ್ದಾರೆ ಅನ್ನುವ ವಿಷಯವೇ ಬೇರೆ ಚಿತ್ರರಂಗದ ಗಮನ ಸೆಳೆದಿತ್ತು.

Darshan starrer Navagraha Re Release box office day 1 collection report

ಈಗ 16 ವರ್ಷಗಳ ಬಳಿಕ ಮತ್ತೆ ಮರು ಬಿಡುಗಡೆಯಾಗಿದೆ. ಸುಮಾರು 100ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಈ ಸಿನಿಮಾ ರಿಲೀಸ್ ಆಗಿದ್ದು, ಮೊದಲ ದಿನ ಕೆಲವು ಸ್ಕ್ರೀನ್ ಸೂಪರ್ ರೆಸ್ಪಾನ್ಸ್ ಸಿಕ್ಕಿದೆ. ಫ್ಯಾನ್ಸ್ ಶೋಯಿಂದ ಹಿಡಿದು ಎಲ್ಲಾ ಶೋಗಳು ಹೌಸ್‌ಫುಲ್ ಆಗಿದ್ದವು. ಹಾಗಿದ್ದರೆ, ಮೊದಲ ದಿನ 'ನವಗ್ರಹ 2' ಸಿನಿಮಾದ ಕಲೆಕ್ಷನ್ ಎಷ್ಟಾಗಿದೆ? ಯಾವ ಚಿತ್ರಮಂದಿರದಲ್ಲಿ ಎಷ್ಟು ಗಳಿಸಿದೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

'ನವಗ್ರಹ' ಮೊದಲ ದಿನದ ಕಲೆಕ್ಷನ್ ಎಷ್ಟು?

'ನವಗ್ರಹ' ಕನ್ನಡದ ಬೆಸ್ಟ್ ಸಿನಿಮಾಗಳಲ್ಲಿ ಒಂದು. ಮಲ್ಟಿಸ್ಟಾರರ್ ನಟಿಸಿದ ಈ ಸಿನಿಮಾಗೆ ಇಂದಿಗೂ ಕ್ರೇಜ್ ಇದೆ. 16 ವರ್ಷದ ಬಳಿಕ ರೀ ರಿಲೀಸ್ ಆದಾಗಲೂ 'ನವಗ್ರಹ' ನೋಡುವುದಕ್ಕೆ ಪ್ರಮುಖ ಚಿತ್ರಮಂದಿರಗಳಲ್ಲಿ ಮುಗಿಬಿದ್ದಿದ್ದರು. ಕರ್ನಾಟಕದ ವಿತರಕರ ಪ್ರಕಾರ 'ನವಗ್ರಹ' ಸಿನಿಮಾ ಮೊದಲ ದಿನ ಬಾಕ್ಸಾಫೀಸ್‌ನಲ್ಲಿ 18 ಲಕ್ಷ ರೂಪಾಯಿಂದ 22 ಲಕ್ಷ ರೂಪಾಯಿವರೆಗೆ ಕಲೆಕ್ಷನ್ ಆಗಿರಬಹುದೆಂದು ಅಂದಾಜಿಸಲಾಗಿದೆ. ರೀ ರಿಲೀಸ್ ಆದ ಒಂದು ಸಿನಿಮಾಗೆ ಈ ಕಲೆಕ್ಷನ್ ಉತ್ತಮ ಎಂದೇ ಇಂಡಸ್ಟ್ರಿಯಲ್ಲಿ ಭಾವಿಸಲಾಗುತ್ತೆ.

Darshan starrer Navagraha Re Release box office day 1 collection report

ಎಲ್ಲೆಲ್ಲಿ ಹೇಗಿದೆ ಕಲೆಕ್ಷನ್?

'ನವಗ್ರಹ' ಸಿನಿಮಾ ರೀ ರಿಲೀಸ್ ದರ್ಶನ್ ಅಭಿಮಾನಿಗಳನ್ನು ಸಂಭ್ರಮದಲ್ಲಿ ಮುಳುಗಿಸಿದೆ. ನಿನ್ನೆ (ನವೆಂಬರ್ 8) ಥಿಯೇಟರ್ ಮುಂದೆ ಅಭಿಮಾನಿಗಳು ಹುಚ್ಚೆದ್ದು ಕುಣಿದಿದ್ದರು. ಥಿಯೇಟರ್ ಒಳಗೂ ಪ್ರತಿಯೊಂದು ಸೀನ್ ಅನ್ನೂ ಎಂಜಾಯ್ ಮಾಡಿದ್ದರು. ವಿತರಕರ ಮೂಲದ ಪ್ರಕಾರ ಬೆಂಗಳೂರಿನ ಪ್ರಸನ್ನದಲ್ಲಿ 2.4 ಲಕ್ಷ ರೂಪಾಯಿ, ಮೈಸೂರಿನ ಸಂಗಮ್‌ನಲ್ಲಿ 2.6 ಲಕ್ಷ ರೂ., ಮಂಡ್ಯ ಗುರುಶ್ರೀಯಲ್ಲಿ 1.1 ಲಕ್ಷ ರೂ. ತುಮಕೂರಿನ ಮಾರುತಿ ಚಿತ್ರಮಂದಿರದಲ್ಲಿ 66 ಸಾವಿರ ರೂಪಾಯಿ ವರೆಗೂ ಕಲೆಕ್ಷನ್ ಆಗಿದೆ ಎನ್ನಲಾಗಿದೆ. ಈ ಬಗ್ಗೆ ಚಿತ್ರತಂಡ ಇನ್ನೂ ಅಧಿಕೃತ ಅಂಕಿ ಅಂಶಗಳನ್ನು ಹೊರ ಹಾಕಿಲ್ಲ.

ವೀಕೆಂಡ್‌ನಲ್ಲಿ ಕಲೆಕ್ಷನ್ ಆಗುತ್ತಾ?

ಸಾಮಾನ್ಯವಾಗಿ ಸಿನಿಮಾಗಳು ವೀಕೆಂಡ್‌ನಲ್ಲಿ ಭರ್ಜರಿ ಕಲೆಕ್ಷನ್ ಆಗುತ್ತವೆ. ಇನ್ನು ಎರಡು ದಿನಗಳಲ್ಲಿ ಇಂದು (ನವೆಂಬರ್ 9) ಹಾಗೂ ನಾಳೆ (ನವೆಂಬರ್ 10) ಈ ಎರಡು ದಿನವೂ ಸೇರಿ ಬಾಕ್ಸಾಫೀಸ್ ಕಲೆಕ್ಷನ್ 1 ಕೋಟಿ ದಾಟುತ್ತೆ ಅನ್ನುವ ಲೆಕ್ಕಾಚಾರದಲ್ಲಿ ಸಿನಿಮಾ ತಂಡವಿದೆ. ಮೊದಲ ದಿನವೇ ಅಬ್ಬರಿಸಿದ ದರ್ಶನ್ ಫ್ಯಾನ್ಸ್ ಇನ್ನು ಎರಡು ದಿನವೂ ಅದೇ ಜೋಷ್‌ನಲ್ಲಿ ಇರುತ್ತೆ ಅನ್ನೋದನ್ನು ಚಿತ್ರತಂಡ ಎದುರು ನೋಡುತ್ತಿದೆ.

ರೀ ರಿಲೀಸ್ ಸಿನಿಮಾಗಳಿಗೆ ಡಿಮ್ಯಾಂಡ್

ಇನ್ನು ಸ್ಯಾಂಡಲ್‌ವುಡ್‌ನಲ್ಲಿ ಇತ್ತೀಚೆಗೆ ರೀ ರಿಲೀಸ್ ಆಗುತ್ತಿರುವ ಸಿನಿಮಾಗಳಿಗೆ ಹೆಚ್ಚು ಡಿಮ್ಯಾಂಡ್ ಬಂದಿದೆ. ಅದರಲ್ಲಿ 'ನವಗ್ರಹ' ಸಿನಿಮಾ ಕೂಡ ಒಂದು. ಈ ಸಿನಿಮಾ ರಿಲೀಸ್ ಮಾಡುವಂತೆ ದರ್ಶನ್ ಅಭಿಮಾನಿಗಳು ಬೇಡಿಕೆ ಇಟ್ಟಿದ್ದರು. ಅದರಂತೆ ದಿನಕರ್ ತೂಗುದೀಪ ಈ ಸಿನಿಮಾವನ್ನು ಮರುಬಿಡುಗಡೆ ಮಾಡಿದ್ದರು. ಮೊದಲ ದಿನವಂತೂ ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ ಅಂತ ಹೇಳಬಹುದು.

More from Filmibeat

English summary
Darshan starrer Navagraha Re Release box office day 1 collection report;
Read more about: darshan box office filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X