"ದುಷ್ಮನ್‌ಗಳು ತುಳಿಬೇಕು ಅಂದ್ಕೊಂಡಷ್ಟು ಫ್ಯಾನ್ಸ್ ಮೆರೆಸ್ತಾನೇ ಇದ್ದಾರೆ"; ಕರಿಯಾ ರೀ- ರಿಲೀಸ್ ಕ್ರೇಜ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ವೃತ್ತಿ ಬದುಕಿಗೆ ಹೊಸ ಇಮೇಜ್ ಕೊಟ್ಟ ಸಿನಿಮಾ 'ಕರಿಯ'. ಜೋಗಿ ಪ್ರೇಮ್ ನಿರ್ದೇಶಿಸಿದ್ದ ಈ ಸಿನಿಮಾ ಇಂದು (ಆಗಸ್ಟ್ 30) ರೀ ರಿಲೀಸ್ ಆಗಿದೆ. ಈ ಹಿನ್ನೆಲೆಯಲ್ಲಿ ಸಿನಿಮಾ ಬಿಡುಗಡೆಯಾಗದ ಥಿಯೇಟರ್‌ಗಳ ಮುಂದೆ ದರ್ಶನ್ ಅಭಿಮಾನಿಗಳು ಜಮಾಯಿಸಿದ್ದಾರೆ. ಫಸ್ಟ್ ಡೇ ಫಸ್ಟ್ ಶೋ ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ತಮ್ಮ ನೆಚ್ಚಿನ ನಟನನ್ನು ನೆನೆದು ಸೋಶಿಯಲ್ ಮೀಡಿಯಾಗಳಲ್ಲಿ ಕಾಮೆಂಟ್ ಮಾಡುವುದಕ್ಕೆ ಶುರು ಮಾಡಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪದ ಮೇಲೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. ಕಳೆದ ಎರಡು ತಿಂಗಳಿನಿಂದ ದರ್ಶನ್ ಜೈಲಿನಲ್ಲಿಯೇ ಇದ್ದಾರೆ. ಇತ್ತೀಚೆಗೆ ಜೈಲ್ ಒಳಗಿನ ಫೋಟೋ ಲೀಕ್ ಆದ್ಮೇಲೆ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪರಪ್ಪನ ಅಗ್ರಹಾರದಿಂದ ಅವರನ್ನು ಬಳ್ಳಾರಿ ಜೈಲ್‌ಗೆ ಶಿಫ್ಟ್ ಮಾಡಲಾಗಿದೆ.

ಇದೇ ಸಂದರ್ಭದಲ್ಲಿ 'ಕರಿಯ' ಸಿನಿಮಾವನ್ನು ಮರು ಬಿಡುಗಡೆ ಮಾಡಲಾಗಿದೆ. ಈ ಸಿನಿಮಾವನ್ನು ನೋಡಿ ಅಭಿಮಾನಿಗಳು ಹುಚ್ಚೆದ್ದು ಕುಣಿದಿದ್ದಾರೆ. ಸ್ಕ್ರೀನ್ ಮುಂದೆ ಕರಿಯನ ಹಾಡುಗಳಿಗೆ ಡ್ಯಾನ್ಸ್ ಮಾಡುತ್ತಿರುವ ವಿಡಿಯೋವನ್ನು ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಅದರಲ್ಲೂ ತಮ್ಮ ಎಕ್ಸ್ (ಟ್ವಿಟರ್) ಖಾತೆಯ ಮೂಲಕ ದರ್ಶನ್ ಕ್ರೇಜ್ ಬಗ್ಗೆ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಅದರ ಝಲಕ್ ಇಲ್ಲಿದೆ.
"ಬಾಸ್ ರಿಲೀಸ್ ಆದ್ಮೇಲೆ ಏನೇನಾಗುತ್ತೋ"
"ಜಸ್ಟ್ ರೀ ರಿಲೀಸ್ ಮೂವಿಗೆ ಈ ಹವಾ ಇಟ್ಟಿರೋರ್ ನಾವು ಇನ್ನ BOSS ರಿಲೀಸ್ ದಿನ ಇಡೀ ಕರ್ನಾಟಕ ಏನ್ ಆಗುತ್ತೋ ಏನೋ ನೆನಸಿಕೊಂಡ್ರೆ ಮೈ ಜುಮ್ ಅನ್ನುತ್ತೆ . ಡಿ ಬಾಸ್ ಕರಿಯಾ ರೀ ರಿಲೀಸ್ ಸಿನಿಮಾ ಸಂಭ್ರಮ ಬೇರೆ ನಟರ ಎಲ್ಲಾ ಸಿನಿಮಾಗಳ ಸಂಭ್ರಮಕ್ಕಿಂತ ದೊಡ್ಡದು" ಎಂದು ಸಾಂಕೇತಿಕವಾಗಿ ಹೇಳಿಕೊಂಡಿದ್ದಾರೆ.
ನಟಿ ಯಮುನಾ ಮನವಿ
" ಇವತ್ತು ನಮ್ಮ ದರ್ಶನ್ ಸರ್ ಅವರ ಅಭಿಮಾನಿಗಳ ಜೊತೆ ಕರಿಯಾ ರೀ ರಿಲೀಸ್ ಅನ್ನು ನೋಡಬೇಕು ಅಂತ ನಾನು ಬಂದೆ. ನನಗೆ ಫಸ್ಟ್ ಡೇ ಫಸ್ಟ್ ಶೋ ಎಕ್ಸ್‌ಪೀರಿಯನ್ಸ್ ಆಗಿರಲಿಲ್ಲ. ಯಾಕಂದ್ರೆ ಡಿ ಬಾಸ್ ಅಭಿಮಾನಿಗಳು ಎಷ್ಟು ಮಂದಿ ಇರುತ್ತಾರೆ ಅಂದ್ರೆ, ನನಗೆ ಮೊದಲ ದಿನ ನೋಡುವ ಅನುಭವ ಆಗಿರಲಿಲ್ಲ. ಇವತ್ತು ಆ ಅನುಭವ ಇತ್ತು. ಯಾಕಂದ್ರೆ, ಸಿನಿಮಾ ಪೂರ್ತಿ ದರ್ಶನ್ ಸರ್ ಅವರನ್ನೇ ಕಣ್ತುಂಬ ತುಂಬಿಕೊಳ್ಳುತ್ತಿದೆ. ಅದರಲ್ಲೂ ರೀ ರಿಲೀಸ್‌ಗೆ ಯಾವ ರೀತಿ ಹಬ್ಬದ ವಾತಾವರಣ ಇತ್ತು. ದರ್ಶನ್ ಸರ್ ಅದಷ್ಟು ಬೇಗ ಬಂದು ಡೆವಿಲ್ ಸಿನಿಮಾ ಫಸ್ಟ್ ಡೇ ಫಸ್ಟ್ ಶೋನ ಅಭಿಮಾನಿಗಳಿಗೆ ತೋರಿಸಬೇಕು." ಎಂದು ನಟಿ ಯಮುನಾ ವಿಡಿಯೋದಲ್ಲಿ ಹೇಳಿದ್ದಾರೆ.
ದರ್ಶನ್ ನಮ್ಮ ಚಿತ್ರರಂಗದವರು
"ಮತ್ತೊಮ್ಮೆ ಹೇಳುತ್ತಿದ್ದೇನೆ. ನಾನು ಡಿ ಬಾಸ್ ಫ್ಯಾನ್ ಅಲ್ಲ. ನಾನೊಬ್ಬ ಸಾಮಾನ್ಯ ಪ್ರೇಕ್ಷಕ. ನನಗೆ ದರ್ಶನ್ ಅವರು ನಮ್ಮ ಚಿತ್ರರಂಗದವರು ಅಂತ ಹೇಳಿಕೊಳ್ಳುವುದಕ್ಕೆ ಹೆಮ್ಮೆ ಹಾಗೂ ಸಂತೋಷ ಆಗುತ್ತೆ. ಆದರೆ, ಇದೇ ಸಮಯದಲ್ಲಿ ನನಗೆ ತಪ್ಪಿತಸ್ಥ ಅಂತಾನೂ ಅನಿಸುತ್ತಿದೆ. ಯಾಕಂದ್ರೆ, ಇಷ್ಟೊಂದು ಜನ ಬೇರೆ ಸಿನಿಮಾಗಳನ್ನು ಬೆಂಬಲಿಸಿದ್ದರೆ, ಕನ್ನಡ ಚಿತ್ರರಂಗ ಎಲ್ಲೋ ಇರುತ್ತಿತ್ತು." ಎಂದು ಮತ್ತೊಬ್ಬ ನೆಟ್ಟಿಗರು ಹೇಳಿಕೊಂಡಿದ್ದಾರೆ.
ದರ್ಶನ್ ಕ್ರೇಜ್ ಮ್ಯಾಚ್ ಮಾಡೋಕೆ ಆಗಲ್ಲ
"ದರ್ಶನ್ ಸರ್ ಕ್ರೇಜ್ ಅನ್ನು ಮ್ಯಾಚ್ ಮಾಡುವುದಕ್ಕೆ ಆಗಲ್ಲ. ಕರ್ನಾಟಕದಾದ್ಯಂತ ಎಲ್ಲಾ ಕಡೆ ಕರಿಯ ರೀ ರಿಲೀಸ್ ಕ್ರೇಜ್ ಇದೆ. ದುಷ್ಮನ್‌ಗಳು ತುಳಿಬೇಕು ಅಂದ್ಕೊಂಡಷ್ಟು ಅಭಿಮಾನಿಗಳು ಮೆರೆಸುತ್ತಾನೇ ಇದ್ದಾರೆ. ಕರಿಯ ರೀ ರಿಲೀಸ್ ಕ್ರೇಜ್" ಎಂದು ಇನ್ನೊಬ್ಬ ಅಭಿಮಾನಿ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾನೆ.
2011ಕ್ಕೆ ಸಾರಥಿ.. 2024ಕ್ಕೆ ಕರಿಯ
"2011ರಲ್ಲಿ ಸಾರಥಿ, 2024ರಲ್ಲಿ ಕರಿಯ. ಅದೇ ಎಮೋಷನ್, ಅದೇ ಪ್ರೀತಿ. ಇದು ವರ್ಲ್ಡ್ ಫಿಲ್ಮ್ ಇಂಡಿಸ್ಟ್ರಿಯ ಇತಿಹಾಸ. ಒಬ್ಬ ನಟ ಸಿಕ್ಕಾಪಟ್ಟೆ ನೆಗೆಟಿವ್ ಅಂಶಗಳು. ಅದರಲ್ಲೂ ಎರಡು ಬಾರಿ ಜೈಲ್‌ಗೆ ಹೋಗಿದ್ದಾರೆ. ಆದರೂ, ಅಭಿಮಾನಿಗಳು ಹಬ್ಬದಂತೆ ಸಂಭ್ರಮ ಮಾಡುತ್ತಿದ್ದಾರೆ" ಎಂದು ಇನ್ನೊಂದು ಅಭಿಮಾನಿ ಕಾಮೆಂಟ್ ಮಾಡುತ್ತಿದ್ದಾರೆ.
ಸಿಂಗಲ್ ಸ್ಕ್ರೀನ್ ಉಳಿಸಬಲ್ಲ ನಟ
" ಅವರ ಹೊಸ ಸಿನಿಮಾ ರಿಲೀಸ್ ಆಗದೇ ಇದ್ದರೂ ಸಿಂಗಲ್ ಸ್ಕ್ರೀನ್‌ಗಳನ್ನು ಉಳಿಸಬಲ್ಲ ಏಕೈಕ ನಟ."
"ಯಾವಾಗಲೂ ಜೊತೆಯಲ್ಲಿ ಇರುತ್ತೇನೆ"
"ಚೆನ್ನಾಗಿದ್ದಾಗ ಮಾತ್ರ ಜೊತೆಗಿದ್ರೆ ಎಂತಹ ಫ್ರೆಂಡ್‌ಶಿಪ್ ಅಲ್ವಾ? ಯಾವಾಗಲೂ ಜೊತೆಯಲ್ಲಿ ಇರುತ್ತೇನೆ. ಈ ಸಿನಿಮಾ ನೋಡುವುದಕ್ಕೆ ಬಂದಿದ್ದೇನೆ. ನೋಡಿದ ಮೇಲೆ ಹೇಳುತ್ತೇನೆ." ಎಂದು ದರ್ಶನ್ ಬಗ್ಗೆ ವಿನೋದ್ ಪ್ರಭಾಕರ್ ಹೇಳಿರುವ ಹೇಳಿಕೆಯನ್ನು ಅಭಿಮಾನಿಗಳು ವೈರಲ್ ಮಾಡುತ್ತಿದ್ದಾರೆ.


Click it and Unblock the Notifications











