ವಿರಾಜ್‌ಪೇಟೆ ಬಳಿಕ ಪುತ್ರ ವಿನೀಶ್ ಜೊತೆ ಸಕಲೇಶಪುರ ಸುತ್ತಿ ಬಂದ ದರ್ಶನ್: ದಾಸನ ಡ್ರಿಫ್ಟಿಂಗ್‌ಗೆ ಗಜಪಡೆ ಫಿದಾ!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗ ಜಾಲಿ ಮೂಡ್‌ನಲ್ಲಿದ್ದಾರೆ. ಮಳೆಗಾಲ ಶುರುವಾಗುತ್ತಿದ್ದಂತೆ ಪುತ್ರನೊಂದಿಗೆ ತಮ್ಮ ಪಡೆಯನ್ನು ಕರೆದುಕೊಂಡು ಆಫ್ ರೋಡ್ ಟ್ರಿಪ್ ಪ್ಲ್ಯಾನ್ ಮಾಡುತ್ತಿದ್ದಾರೆ. ಎಂತಹ ಕಾಡು ಮೇಡುಗಳನ್ನು ಹತ್ತಿ ಇಳಿಯಬಲ್ಲ ದುಬಾರಿ ಕಾರುಗಳು ರಸ್ತೆಗೆ ಇಳಿದಿವೆ ಅಂದ್ರೆ, ಟ್ರಿಪ್ ಫಿಕ್ಸ್ ಅಂತಲೇ.
ಇತ್ತೀಚೆಗಷ್ಟೇ ದರ್ಶನ್ ಹಾಗೂ ಸ್ನೇಹಿತರು ಮಡಿಕೇರಿ, ವಿರಾಜ್‌ಪೇಟೆಯಲ್ಲಿ ಆಪ್ ರೋಡ್ ಟ್ರಿಪ್ ಮಾಡಿದ್ದರು. ಕಾಡು ಮೇಡುಗಳಲ್ಲಿ ಕಾರುಗಳಲ್ಲೇ ಹತ್ತಿ ಇಳಿದು ಸಾಹಸ ಮೆರೆದಿದ್ದರು. ಈ ವಿಡಿಯೋ ನೋಡಿ ದರ್ಶನ್ ಅಭಿಮಾನಿಗಳು ಬಹುಪರಾಕ್ ಎಂದಿದ್ದರು.

ಈಗ ಇದೇ ಜೋಷ್‌ನಲ್ಲಿ ಮತ್ತೊಂದು ಟ್ರಿಪ್ ಮಾಡಿದ್ದಾರೆ. ಪುತ್ರ ವಿನೀಶ್ ಜೊತೆ ತಮ್ಮ ಗ್ಯಾಂಗ್ ಕರ್ಕೊಂಡು ಸಕಲೇಶಪುರದ ಕಡೆ ಹೋಗಿದ್ದಾರೆ. ಬಿಡದಂತೆ ಸುರಿಯುತ್ತಿರುವ ಮಳೆಯಲ್ಲಿ ದ್ವಿಚಕ್ರ ವಾಹನದಲ್ಲೇ ರೈಟಿಂಗ್ ಹೊರಟು ಬಂದಿದ್ದಾರೆ. ಕಳೆದ ಎರಡು ವಾರಗಳಲ್ಲಿ ಎರಡನೇ ಆಫ್ ರೋಡ್ ಟ್ರಿಪ್ ಇದು. ಈ ಟ್ರಿಪ್‌ಗೆ ಸಂಬಂಧಿಸಿ ವಿಡಿಯೋ ಹೊರಬಿದ್ದಿದ್ದು, ಇದೂ ಕೂಡ ಅಭಿಮಾನಿಗಳಿಗೆ ಇಷ್ಟ ಆಗಿದೆ..
ಸಕಲೇಶಪುರದ ಕಡೆಗೆ ಗಜಪಡೆ ಟ್ರಿಪ್
ದರ್ಶನ್ ಅರಣ್ಯ ಇಲಾಖೆಯ ರಾಯಭಾರಿ ಅನ್ನೋದು ಗೊತ್ತೇ ಇದೆ. ಇಷ್ಟೇ ಅಲ್ಲದೆ ಕಾಡು-ಮೇಡು, ಪ್ರಾಣಿ-ಪಕ್ಷಿಗಳು ಅಂದರೆ ಬಲು ಇಷ್ಟು. ಅದಕ್ಕೆ ಬಿಡುವು ಸಿಕ್ಕಾಗ ಹೀಗೆ ಆಫ್ ರೋಡ್ ಟ್ರಿಪ್ ಹೋಗೋದು ದರ್ಶನ್‌ಗೆ ಹೊಸದೇನಲ್ಲ. ಆದರೆ, ಈ ಮಳೆಯಲ್ಲಿ ಆಫ್ ರೋಡ್ ಟ್ರಿಪ್ ಹೋಗಿದ್ದು ತೀರಾ ವಿರಳ.

ಆಗಾಗ ದರ್ಶನ್ ಟ್ರಿಪ್‌ಗೆ ಅಂತ ಹೋಗುತ್ತಲೇ ಇರುತ್ತಾರೆ. ಈ ಬಾರಿ ಟ್ರಿಪ್‌ನಲ್ಲಿ ಅಡ್ವೆಂಚರ್ ಮಾಡಿದ್ದಾರೆ. ಸಕಲೇಶಪುರದಲ್ಲಿ ಮಳೆ ಜೋರಿದೆ. ಹೀಗಾಗಿ ಕಾಡಿನ ರಸ್ತೆಗಳೆಲ್ಲ ನದಿಯಂತೆ ಹರಿಯುತ್ತಿವೆ. ಕಾರು ಬಂದರೆ, ಚಕ್ರಗಳೆಲ್ಲ ಹೂತು ಹೋಗುವತ್ತವೆ. ಇಂತಹ ದಾರಿಗಳಲ್ಲೇ ಬೆಟ್ಟ ಹತ್ತಿದ್ದಾರೆ. ಕಾಡು ಸುತ್ತಿದ್ದಾರೆ. ಈ ವಿಡಿಯೋ ನೋಡುವುದಕ್ಕೆ ರೋಮಾಂಚನಕಾರಿಯಾಗಿದೆ.
ಧರೆಗೆ ಉರುಳುತ್ತಿದ್ದ ದರ್ಶನ್ ಕಾರು
ಆಫ್ ರೋಡ್ ಟ್ರಿಪ್ ಅಡ್ವಂಚರ್ ಅನ್ನೋದೇ ಇದಕ್ಕೆ. ಮಲೆನಾಡು ಭಾಗದಲ್ಲಿ ಬಿಡದಂತೆ ಮಳೆ ಸುರಿಯುತ್ತೆ. ಇಂತಹ ಮಳೆಯಲ್ಲಿ ವಾಹನಗಳ ಪ್ರಯಾಣವೇ ಪ್ರಯಾಸ ತರುತ್ತೆ. ಅತ್ಯಂತ ಜಾಗರೂಕರಾಗಿ ಕಾರನ್ನು ಚಾಲಾಯಿಸಬೇಕು. ಒಂದು ಚೂರ ಯಾಮಾರಿದರೂ ಅಪಾಯ ತಪ್ಪಿದ್ದಲ್ಲ. ಸಕಲೇಶಪುರ ಟ್ರಿಪ್‌ನಲ್ಲೂ ಹೀಗೆ ಹಾಗಿತ್ತು.

ದರ್ಶನ್ ಪ್ರಯಾಣಿಸುತ್ತಿದ್ದ ಕಾರು ಬೆಟ್ಟದಿಂದ ಇಳಿಯುವಾಗ ಮಣ್ಣು ಸಡಿಲಗೊಂಡಿದ್ದರಿಂದ ಜಾರಿ ರಸ್ತೆಯ ಪಕ್ಕದಲ್ಲಿ ಸಿಕ್ಕಿಕೊಂಡಿತ್ತು. ಸ್ವಲ್ಪ ಯಾಮಾರಿದ್ದರೂ ಪಾತಾಳಕ್ಕೆ ಹೋಗುತ್ತಿತ್ತು. ಹೀಗೆ ಸಿಕ್ಕಿಕೊಂಡಿದ್ದ ಕಾರನ್ನು ಮತ್ತೆ ಎಳೆದು ರಸ್ತೆಗೆ ತಂದಿದ್ದೇ ರೋಚಕ.
ದರ್ಶನ್ ಕಾರು ಡಿಫ್ಟಿಂಗ್ ಹೈಲೈಟ್
ಕಾರು ಡಿಫ್ಟಿಂಗ್ ಮಾಡೋದು ಒಂದು ಟ್ಯಾಲೆಂಟ್. ಕಾರು ಓಡಿಸೋರೆಲ್ಲರಿಗೂ ಇದು ಅಸಾಧ್ಯ? ಆದರೆ, ಸ್ಲಿಪರಿಯಾಗಿದ್ದ ಜಾಗದಲ್ಲಿ ದರ್ಶನ್ ಜೀಪ್ ಅನ್ನು ಡ್ರಿಪ್ಟಿಂಗ್ ಮಾಡಿದ್ದು ಈ ವಿಡಿಯೋದ ಹೈಲೈಟ್. ಇದು ಕೂಡ ಮೈ ರೋಮಾಂಚನಗೊಳಿಸುವಂತೆ ಇದೆ.
ದರ್ಶನ್ ತಮ್ಮ ಗ್ಯಾಂಗ್ ಜೊತೆ ಆಫ್ ರೋಡ್ ಟ್ರಿಪ್ ಅನ್ನು ಸಖತ್ ಆಗಿಯೇ ಎಂಜಾಯ್ ಮಾಡಿದ್ದಾರೆ. ಜೊತೆ ಪುತ್ರ ವಿನೀಶ್ ಕೂಡ ಇದ್ದರು. ಎರಡನೇ ಬಾರಿ ಇಂತಹ ಆಫ್ ರೋಡ್ ಟ್ರಿಪ್ ಮಾಡಿದ್ದು ಮಳೆಗಾಲವನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರೆ.


Click it and Unblock the Notifications











