ಖೈದಿ ಉಡುಪು ತೊಟ್ಟು ಪೋಸ್ ಕೊಟ್ಟ ದರ್ಶನ್; ಪಕ್ಕದಲ್ಲಿ ನಿಂತಿರೋ ವ್ಯಕ್ತಿ ಯಾರು?

ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಬಳಿಕ ನಟ ದರ್ಶನ್ ಸಾಕಷ್ಟು ತೊಂದರಕ್ಕೆ ಸಿಕ್ಕಿಕೊಂಡಿದ್ದರು. ಹೆಚ್ಚು ಕಡಿಮೆ ಆರು ತಿಂಗಳ ಕಾಲ ಜೈಲಿನಲ್ಲಿಯೇ ಕಳೆಯಬೇಕಾದ ಪರಿಸ್ಥಿತಿಯಿತ್ತು. ಆದ್ರೀಗ ಜಾಮೀನು ಪಡೆದು ಜೈಲಿನಿಂದ ಹೊರ ಬಂದು ಮತ್ತೆ 'ಡೆವಿಲ್: ದಿ ಹೀರೋ' ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. ಸಿನಿಮಾ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ. ಸದ್ಯ ಟಾಕಿ ಪೋಷನ್ ಮುಗಿಸಿರುವ ದರ್ಶನ್ ಹಾಡುಗಳು ಸೇರಿದಂತೆ ಕೆಲವು ಕೆಲಸಗಳಷ್ಟೇ ಬಾಕಿ ಉಳಿದಿವೆ.

ಈ ಮಧ್ಯೆ ದರ್ಶನ್ ಖೈದಿ ಕಾಸ್ಟ್ಯೂಮ್ ತೊಟ್ಟಿರುವ ಲುಕ್ ಅನ್ನು ಚಿತ್ರತಂಡವೇ ರಿಲೀಸ್ ಮಾಡಿತ್ತು. ಈಗ ಅದೇ ಕಾಸ್ಟ್ಯೂಮ್‌ನಲ್ಲಿರುವ ಮತ್ತೊಂದು ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಒಂದ್ಕಡೆ ದರ್ಶನ್ ಗೆಟಪ್ ವೈರಲ್ ಆಗುತ್ತಿದ್ದರೆ, ಇನ್ನೊಂದು ಕಡೆ ಅವರ ಪಕ್ಕದಲ್ಲಿ ನಿಂತಿರುವ ವ್ಯಕ್ತಿ ಯಾರು ಅಂತಾನೂ ತಲೆ ಕೆಡಿಸಿಕೊಂಡಿದ್ದಾರೆ.

Darshan Thoogudeepa in a jail uniform with wig Nageshwar Rao goes viral

ಅಂದ್ಹಾಗೆ ದರ್ಶನ್ 'ಡೆವಿಲ್: ದಿ ಹೀರೋ' ಸಿನಿಮಾದ ದೃಶ್ಯವೊಂದಕ್ಕಾಗಿ ಈ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 'ಡೆವಿಲ್' ಟೀಮ್ ರಿಲೀಸ್ ಮಾಡಿದ ಪೋಸ್ಟರ್‌ನಲ್ಲಿ ದರ್ಶನ್ ಕನ್ವರ್‌ಲಾಲ್ ಲುಕ್ ಕೊಟ್ಟಿದ್ದರು. ಅಲ್ಲಿಂದಲೇ ದರ್ಶನ್ ಅಭಿಮಾನಿಗಳು ಥ್ರಿಲ್ ಆಗಿದ್ದರು. ಈಗ ದರ್ಶನ್ ಅದೇ ಕಾಸ್ಟ್ಯೂಮ್‌ನಲ್ಲಿರುವ ಮತ್ತೊಂದು ಫೋಟೊದಲ್ಲಿ ವೈರಲ್ ಆಗಿದ್ದು, ಪಕ್ಕದಲ್ಲಿರುವ ವ್ಯಕ್ತಿ ಯಾರು ಅಂತ ತಲೆ ಕೆಡಿಸಿಕೊಂಡಿದ್ದಾರೆ. ಹಾಗಿದ್ದರೆ, ದರ್ಶನ್ ಪಕ್ಕದಲ್ಲಿ ನಿಂತಿರುವ ಈ ವ್ಯಕ್ತಿ ಯಾರು? ತಿಳಿಯುವುದಕ್ಕೆ ಮುಂದೆ ಓದಿ.

ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಡೆವಿಲ್' ಸಿನಿಮಾವನ್ನು ನೋಡುವುದಕ್ಕೆ ಅವರ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಥಿಯೇಟರ್‌ ಮುಂದೆ ಹಬ್ಬ ಮಾಡುವುದಕ್ಕೆ ದರ್ಶನ್ ಫ್ಯಾನ್ಸ್ ಕಾದು ಕೂತಿದ್ದಾರೆ. ಹೀಗಾಗಿ ವೇಗವಾಗಿ ಸಿನಿಮಾ ಕೆಲಸವನ್ನು ಮುಗಿಸಲಾಗುತ್ತಿದೆ. ದರ್ಶನ್ ಕನ್ವರ್ ಲಾಲ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿರುವುದು ರೆಬಲ್ ಸ್ಟಾರ್ ಅಂಬರೀಶ್ ಅಭಿಮಾನಿಗಳಿಗೂ ಇಷ್ಟ ಆಗಿದೆ. ಮತ್ತೆ ತೆರೆಮೇಲೆ ಅಂಬಿಯನ್ನು ನೆನಪಿಸುವುದಕ್ಕೆ ಮುಂದಾಗಿರುವ ದರ್ಶನ್‌ ಸೀನ್ ನೋಡುವುದಕ್ಕೆ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.

ಇನ್ನು ದರ್ಶನ್ ಪಕ್ಕದಲ್ಲಿ ನಿಂತಿರುವ ವ್ಯಕ್ತಿ ಯಾರು? ಎನ್ನುವ ಪ್ರಶ್ನೆ ಇದ್ದೇ ಇರುತ್ತೆ. ಇವರು ಕನ್ನಡ ಚಿತ್ರರಂಗಕ್ಕೆ ತುಂಬಾನೇ ಬೇಕಾದ ವ್ಯಕ್ತಿ. ದರ್ಶನ್ ಅಷ್ಟೇ ಅಲ್ಲ. ಕನ್ನಡ ಚಿತ್ರರಂಗದ ಬಹುತೇಕ ಎಲ್ಲಾ ನಟರಿಗೂ ಇವರು ಪರಿಚಯ. ಸೂಪರ್‌ಸ್ಟಾರ್ ಸಿನಿಮಾಗಳಲ್ಲಿ ಇವರು ತೆರೆ ಮರೆಯಲ್ಲಿ ಕೆಲಸ ಮಾಡುತ್ತಾರೆ. ಅಂದ್ಹಾಗೆ ಇವರ ಹೆಸರು ನಾಗೇಶ್ವರ ರಾವ್. ಇವರನ್ನು ಸ್ಯಾಂಡಲ್‌ವುಡ್‌ನಲ್ಲಿ ವಿಗ್ ನಾಗೇಶ್ವರ ರಾವ್ ಅಂತಲೂ ಕರೆಯುತ್ತಾರೆ.

Darshan Thoogudeepa in a jail uniform with wig Nageshwar Rao goes viral

ವಿಗ್ ನಾಗೇಶ್ವರ ರಾವ್ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳಿಗೆ ವಿಗ್‌ಗಳನ್ನು ನೀಡುತ್ತಾರೆ. ಅದರಲ್ಲೂ ಸೂಪರ್‌ಸ್ಟಾರ್‌ಗಳಿಗೆ ವಿಗ್‌ಗಳನ್ನು ರೆಡಿ ಮಾಡಿಕೊಡುತ್ತಾರೆ. ಸಿನಿಮಾ ಅಷ್ಟೇ ಅಲ್ಲ, ರಿಯಲ್‌ ಲೈಫ್‌ನಲ್ಲೂ ಹೀರೊಗಳಿಗೆ, ರಾಜಕೀಯ ಮುಖಂಡರಿಗೆ ವಿಗ್‌ಗಳನ್ನು ಮಾಡಿಕೊಡುವುದು ಇವರೇನೆ. ಹೀಗಾಗಿ ಕನ್ನಡ ಚಿತ್ರರಂಗದಲ್ಲಿ ಹಾಗೂ ರಾಜಕೀಯ ವಲಯದಲ್ಲಿ ವಿಗ್ ನಾಗೇಶ್ವರ ರಾವ್ ಹೆಸರು ಸಿಕ್ಕಾಪಟ್ಟೆ ಚಾಲ್ತಿಯಲ್ಲಿದೆ.

More from Filmibeat

Read more about: darshan sandalwood movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X