ಧನ್ವೀರ್‌ಗೆ ಶುಭ ಕೋರಿ ಪೋಸ್ಟ್: ಧನ್ವೀರ್ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಕೊಡಲಿ ಎಂದ ದರ್ಶನ್
ಈ ವಾರ ಬಿಡುಗಡೆಯಾಗುತ್ತಿರುವ ಕನ್ನಡ ಸಿನಿಮಾಗಳಲ್ಲಿ ಧನ್ವೀರ್ ನಟನೆಯ 'ಹಯಗ್ರೀವ' ಕೂಡ ಒಂದು. ದರ್ಶನ್ ಬಳಗದಲ್ಲಿ ಗುರುತಿಸಿಕೊಂಡಿರುವ ಧನ್ವೀರ್‌ಗೆ ಅವರ ಅಭಿಮಾನಿಗಳ ಬೆಂಬಲ ಕೂಡ ಇದೆ. ನಾಳೆ (ಫೆಬ್ರವರಿ 27) ರಿಲೀಸ್ ಆಗುತ್ತಿರುವ ಸಿನಿಮಾಗೆ ಕಳೆದ ಕೆಲವು ದಿನಗಳಿಂದ ಧನ್ವೀರ್ ಭರ್ಜರಿಯಾಗಿ ಪ್ರಚಾರವನ್ನು ಮಾಡುತ್ತಿದ್ದಾರೆ.
ದರ್ಶನ್ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಧನ್ವೀರ್ ಸಿನಿಮಾಗೆ ಪ್ರೇಕ್ಷಕರಿಂದ ರೆಸ್ಪಾನ್ಸ್ ಹೇಗೆ ಸಿಗುತ್ತೆ ಅನ್ನೋ ಕುತೂಹಲಕ್ಕೆ ನಾಳೆ ತೆರೆ ಬೀಳಲಿದೆ. ಸಿನಿಮಾ ಬಿಡುಗಡೆಗೆ ಒಂದು ದಿನ ಇರುವಾಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇನ್‌ಸ್ಟಾಗ್ರಾಂ ಖಾತೆಯಿಂದ ಧನ್ವೀರ್‌ಗೆ ಶುಭ ಕೋರಲಾಗಿದೆ. ತಮ್ಮ ಸೆಲೆಬ್ರೆಟಿಗಳಿಗೆ ದರ್ಶನ್ ಈ ಸಿನಿಮಾವನ್ನು ನೋಡಿ ಧನ್ವೀರ್‌ಗೆ ಬೆಂಬಲ ನೀಡುವಂತೆ ಮನವಿ ಕೊಂಡಿದ್ದಾರೆ.

ಶ್ರೀಮತಿ ಪದ್ಮ ಸಮೃದ್ಧಿ ಮಂಜುನಾಥ್ ನಿರ್ಮಿಸುತ್ತಿರುವ ಈ ಸಿನಿಮಾವನ್ನು ರಘು ಕುಮಾರ್ ಓಆರ್ ನಿರ್ದೇಶನ ಮಾಡುತ್ತಿದ್ದಾರೆ. ಇನ್ನು ಈ ಸಿನಿಮಾದ ಸ್ಟಾರ್‌ಕಾಸ್ಟ್ ಕೂಡ ಬೆನ್ನಾಗಿದೆ. ಈ ಸಿನಿಮಾದಲ್ಲಿ ನಾಯಕನಾಗಿ ಧನ್ವೀರ್ ನಟಿಸುತ್ತಿದ್ದರೆ, ನಾಯಕಿಯಾಗಿ ಸಂಜನಾ ಆನಂದ್ ನಟಿಸುತ್ತಿದ್ದಾರೆ. ಇವರೊಂದಿಗೆ ಸಾಧಕೋಕಿಲಾ, ಶರತ್ ಲೋಹಿತಾಶ್ವ, ಶೋಭರಾಜ್, ಅಶ್ವಿನಿ ಗೌಡ ಹಾಗೂ ಗಿಲ್ಲಿ ನಟ ನಟಿಸಿದ್ದಾರೆ. ಈ ಸಿನಿಮಾಗೆ ಶುಭ ಕೋರಿ ದರ್ಶನ್ ಅವರ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಏನಿದೆ ಎಂದು ನೋಡುವುದಾರೇ,
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ದರ್ಶನ್ ಜೈಲಿನಲ್ಲಿ ಇದ್ದಾರೆ. ಒಂದು ವೇಳೆ ಹೊರಗೆ ಇದ್ದಿದ್ದರೆ, ಧನ್ವೀರ್‌ಗೆ ಒಳ್ಳೆಯ ಬೆಂಬಲ ಸಿಗುತ್ತಿತ್ತು. ಹೀಗಿದ್ದರೂ ದರ್ಶನ್ ಜೈಲಿನಿಂದಲೇ ಧನ್ವೀರ್ ಸಿನಿಮಾಗೆ ಬೆಂಬಲ ನೀಡುವಂತೆ ತಮ್ಮ ಸೆಲೆಬ್ರೆಟಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ ಒಳ್ಳೆಯ ಸಿನಿಮಾವನ್ನು ಗೆಲ್ಲಿಸುವಂತೆ, ಧನ್ವೀರ್‌ಗೆ ಹಾಗೂ ಅವರ ತಂಡದ ಪರಿಶ್ರಮಕ್ಕೆ ಬೆಂಬಲ ಸಿಗಲಿ ಎಂದು ಮನವಿ ಮಾಡಿಕೊಂಡಿದ್ದಾರೆ.
ದರ್ಶನ್ ಇನ್‌ಸ್ಟಾಗ್ರಾಂ ಖಾತೆಯ ಪೋಸ್ಟ್‌ನಲ್ಲಿ ಹೀಗಿದೆ. "ನಮ್ಮ ಧನ್ವೀರ್ ಅಭಿನಯದ ಹೊಸ ಸಿನಿಮಾ 'ಹಯಗ್ರೀವ' ನಾಳೆ ತೆರೆಗೆ ಬರ್ತಾ ಇದೆ. ಈ ಚಿತ್ರವು ಧನ್ವೀರ್ ಮತ್ತು ಸಂಪೂರ್ಣ ತಂಡದ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಕೊಡಲಿ, ಜನರ ಮನ ಗೆದ್ದುಕೊಂಡು ಸಿನಿಮಾ ಸೂಪರ್ ಹಿಟ್ ಆಗಲಿ ಎಂದು ಹೃದಯಪೂರ್ವಕವಾಗಿ ಆಶಿಸುತ್ತೀನಿ. ಎಲ್ಲಾ ಕನ್ನಡ ಸಿನಿ ಪ್ರಿಯರು ಮತ್ತು ನಮ್ಮ ಸೆಲೆಬ್ರಿಟಿಗಳು ನಿಮ್ಮ ಫ್ಯಾಮಿಲಿ, ಸ್ನೇಹಿತರೊಂದಿಗೆ ಒಟ್ಟಿಗೆ ಸಿನಿಮಾ ಹಾಲ್‌ಗೆ ಹೋಗಿ 'ಹಯಗ್ರೀವ' ನೋಡಿರಿ. ಒಳ್ಳೇ ಕನ್ನಡ ಚಿತ್ರಗಳಿಗೆ ನಿಮ್ಮ ಪ್ರೀತಿ, ಬೆಂಬಲ ಸದಾ ಇರಲಿ. ಜೈ ಕನ್ನಡ! ಜೈ ಕರ್ನಾಟಕ!" ಎಂದು ದರ್ಶನ್ ಮನವಿ ಮಾಡಿದ್ದಾರೆ.
ದರ್ಶನ್ ಪೋಸ್ಟ್‌ಗೆ ಅವರ ಅಭಿಮಾನಿಗಳು ಕಾಮೆಂಟ್‌ಗಳನ್ನು ಮಾಡಿದ್ದಾರೆ. "ನಿಯತ್ತಿಗೆ ಇನ್ನೊಂದ್ ಹೆಸರೇ ಧನ್ವೀರ್ ಅಣ್ಣ" ಎಂದು ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದಾರೆ. "ನಿಮ್ಮ ಜೊತೆ ನಿಂತಾವರ ಜೊತೆಗೆ ಸದಾ ನಾವು ಜೊತೆಗೆ ಇರ್ತಿವಿ ಬಾಸ್.. ಜೈ ಡಿಬಾಸ್" ಎಂದು ಮತ್ತೊಬ್ಬರು ಹೇಳಿದ್ದಾರೆ. "ಬಾಸ್ ಅದು ನಮ್ಮ ಸಿನಿಮಾ ಹಯಗ್ರೀವ" ಎಂದು ಇನ್ನೊಬ್ಬ ಅಭಿಮಾನಿ ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಅಭಿಮಾನಿ "ಬನ್ನಿ ಬಾಸ್ ಬೇಗ" ಎಂದು ಕಮೆಂಟ್ ಮಾಡಿದ್ದಾರೆ.
ದರ್ಶನ್ ಆಪ್ತರಾಗಿರುವ ಧನ್ವೀರ್ ಸಿನಿಮಾ ಅವರ ಅಭಿಮಾನಿಗಳಿಂದ ಬೆಂಬಲ ಸಿಕ್ಕಿದೆ. ಅದಲ್ಲೂ ದರ್ಶನ್ ಇನ್‌ಸ್ಟಾಗ್ರಾಂ ಪೋಸ್ಟ್ ಹೊರ ಬಿದ್ದ ಮೇಲಂತೂ ದರ್ಶನ್ ಅಭಿಮಾನಿಗಳು ಅವರದ್ದೇ ಸಿನಿಮಾ ರಿಲೀಸ್ ಆಗುತ್ತಿರುವಂತೆ ಪ್ರಚಾರ ಮಾಡುತ್ತಿದ್ದಾರೆ. ನಾಳೆ (ಫೆಬ್ರವರಿ 27) ರಿಲೀಸ್ ಆಗುತ್ತಿರುವ ಈ ಸಿನಿಮಾವನ್ನು ದರ್ಶನ್ ಫ್ಯಾನ್ಸ್ ಯಾವ ಮಟ್ಟಿಗೆ ಬೆಂಬಲ ನೀಡುತ್ತಿದ್ದಾರೆಂದು ಇನ್ನೇನು ಕೆಲವೇ ಕ್ಷಣಗಳಲ್ಲಿ ತಿಳಿಯಲಿದೆ.


Click it and Unblock the Notifications











