ದರ್ಶನ್ ಟ್ವೀಟ್‌ನಲ್ಲಿ 'ಹುಲಿ'ಪ್ರತ್ಯಕ್ಷ: ಸೌಂದರ್ಯ, ಶೌರ್ಯದ ಸಂಕೇತ ಎಂದ ದರ್ಶನ್: ಹಿನ್ನೆಲೆ ಏನು?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಾಣಿ ಪ್ರಿಯ ಅನ್ನೋದು ಗೊತ್ತಿರೋ ವಿಷಯವೇ. ಮೊದಲಿನಿಂದಲೂ ಪ್ರಾಣಿಗಳು ಅಂದರೆ ದರ್ಶನ್‌ಗೆ ಎಲ್ಲಿಲ್ಲದ ಪ್ರೀತಿ. ಈ ಕಾರಣಕ್ಕೆ ತಮ್ಮ ಫಾರ್ಮ್ ಹೌಸ್‌ನಲ್ಲಿ ದರ್ಶನ್ ತಮಗಿಷ್ಟವಾದ ಪ್ರಾಣಿಗಳನ್ನು ಸಾಕಿದ್ದಾರೆ.

ಸಿನಿಮಾ ಶೂಟಿಂಗ್‌ನಿಂದ ಬಿಡುವು ಸಿಕ್ಕಾಗಲೆಲ್ಲಾ ದರ್ಶನ್ ಫಾರ್ಮ್‌ ಹೌಸ್‌ ಕಡೆ ಪಯಣ ಬೆಳೆಸುತ್ತಾರೆ. ಇಲ್ಲಾ ಕ್ಯಾಮರಾ ಹಿಡಿದು ವನ್ಯಜೀವಿಗಳನ್ನು ಸೆರೆಹಿಡಿಯಲು ಹೊರಟು ಬಿಡುತ್ತಾರೆ. ಕಾಡು ಮೇಡುಗಳನ್ನು ಸುತ್ತಿ ಪ್ರಾಣಿಗಳನ್ನು ಕ್ಯಾಮರಾದಲ್ಲಿ ಸೆರೆ ಹಿಡಿದು ಬರುವುದು ಹೊಸ ಹವ್ಯಾಸವಾಗಿಬಿಟ್ಟಿದೆ.

ದರ್ಶನ್ ಸದ್ಯಕ್ಕೀಗ 'ಕ್ರಾಂತಿ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದೇ ವೇಳೆ ಟ್ವಿಟರ್‌ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಲಿಯ ಕೆಲವು ಫೋಟೊಗಳನ್ನು ಶೇರ್ ಮಾಡಿದ್ದಾರೆ. ಹುಲಿ ಸೌಂದರ್ಯ ಹಾಗೂ ಶೌರ್ಯದ ಸಂಕೇತ ಅಂತ ಬೇರೆ ಹೇಳಿದ್ದಾರೆ. ಅಷ್ಟಕ್ಕೂ ದರ್ಶನ್ ಹುಲಿಯ ಫೋಟೊಗಳನ್ನು ಶೇರ್ ಮಾಡಿದ್ದೇಕೆ? ಟ್ವೀಟ್‌ನಲ್ಲಿ ಏನು ಬರೆದುಕೊಂಡಿದ್ದಾರೆ ಎನ್ನುವುದನ್ನು ತಿಳಿಯಲು ಮುಂದೆ ಓದಿ.

ಟೈಗರ್ ಫೋಟೊ ಹಂಚಿಕೊಂಡಿದ್ದೇಕೆ?

ಟೈಗರ್ ಫೋಟೊ ಹಂಚಿಕೊಂಡಿದ್ದೇಕೆ?

ಈ ಸಂದರ್ಭದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಲಿ ಫೋಟೊಗಳನ್ನು ಯಾಕೆ ಹಂಚಿಕೊಂಡರು ಅನ್ನೋ ಸಂಶಯ ಹುಟ್ಟೋದು ಸಹಜ. ಆದರೆ, ಟೈಗರ್ ಫೋಟೊಗಳನ್ನು ಶೇರ್ ಮಾಡಿದ್ದರ ಹಿಂದೆ ಬೇರೆನ್ನೂ ಉದ್ದೇಶವಿಲ್ಲ. ಇಂದು ( ಜುಲೈ 29) ವರ್ಲ್ಡ್ ಟೈಗರ್ ಡೇ. ಈ ಕಾರಣಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಟ್ವಿಟರ್ ಖಾತೆಯಲ್ಲಿ ಹುಲಿ ಫೋಟೊಗಳನ್ನು ಶೇರ್ ಮಾಡಿದ್ದರು. ಆ ಟ್ವೀಟ್ ಅನ್ನೇ ಈಗ ಅಭಿಮಾನಿಗಳು ವೈರಲ್ ಮಾಡುತ್ತಿದ್ದಾರೆ.

ದರ್ಶನ್ ಟ್ವೀಟ್‌ನಲ್ಲಿ ಏನಿದೆ?

ವಿಶ್ವ ಟೈಗರ್ ದಿನದಂದು ಚಾಲೆಂಜಿಂಗ್ ಸ್ಟಾರ್ ಹುಲಿಯನ್ನು ಉಳಿಸುವಂತೆ ಮನವಿ ಮಾಡಿಕೊಂಡಿದ್ದಾರೆ. " ಹುಲಿಯನ್ನು ಉಳಿಸಿ, ಯಾಕೆಂದರೆ, ಹುಲಿ ಸೌಂದರ್ಯ, ಶೌರ್ಯ, ಶಕ್ತಿ ಹಾಗೂ ರಾಷ್ಟ್ರೀಯತೆಯನ್ನು ಪ್ರತಿನಿಧಿಸುತ್ತದೆ. ರಾಷ್ಟ್ರದ ಗೌರವವನ್ನು ರಕ್ಷಿಸಿ" ಎಂದು ಹೇಳಿದ್ದಾರೆ. ದರ್ಶನ್ ಟ್ವೀಟ್‌ಗೆ ಅಭಿಮಾನಿಗಳು ಕೂಡ ಬೆಂಬಲಿಸಿದ್ದು, ನೆಚ್ಚಿನ ನಟನ ಪ್ರಾಣಿ ಪ್ರೀತಿಗೆ ಅಭಿಮಾನಿಗಳು ತಲೆದೂಗಿದ್ದಾರೆ.

'ಕ್ರಾಂತಿ' ಡಬ್ಬಿಂಗ್‌ನಲ್ಲಿ ದರ್ಶನ್

'ಕ್ರಾಂತಿ' ಡಬ್ಬಿಂಗ್‌ನಲ್ಲಿ ದರ್ಶನ್

ದರ್ಶನ್ ಇತ್ತೀಚೆಗಷ್ಟೇ 'ಕ್ರಾಂತಿ' ಸಿನಿಮಾ ಶೂಟಿಂಗ್ ಮುಗಿಸಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಸಿನಿಮಾದಲ್ಲಿನ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಮಾಡುತ್ತಿರುವ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಮೂಲಗಳ ಪ್ರಕಾರ, 'ಕ್ರಾಂತಿ' ಚಿತ್ರೀಕರಣ ಬಹುತೇಕ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ವಿ. ಹರಿಕೃಷ್ಣ ನಿರ್ದೇಶಿಸುತ್ತಿರುವ ಸಿನಿಮಾದಲ್ಲಿ ದರ್ಶನ್ ಅಕ್ಷರ ಕ್ರಾಂತಿ ಮಾಡಲಿದ್ದಾರೆ ಎನ್ನಲಾಗಿದೆ.

ಪ್ರಾಣಿಗಳು ದರ್ಶನ್‌ಗೆ ಬಲು ಪ್ರೀತಿ

ಪ್ರಾಣಿಗಳು ದರ್ಶನ್‌ಗೆ ಬಲು ಪ್ರೀತಿ

ದರ್ಶನ್‌ಗೆ ಸಾಕು ಪ್ರಾಣಿಗಳು ಅಂದರೆ ಅಷ್ಟೇ ಅಲ್ಲ. ಕಾಡು ಪ್ರಾಣಿಗಳ ಮೇಲೂ ಕಾಳಜಿ ಇದೆ. ಈ ಕಾರಣಕ್ಕೆ ವಜ್ಯ ಜೀವಿಗಳನ್ನು ದತ್ತು ಪಡೆದಿದ್ದಾರೆ. ಈ ಕಾರಣಕ್ಕೆ ಕೊರೊನಾ ಸಮಯದಲ್ಲಿ ಮೃಗಾಲಯಗಳಲ್ಲಿರುವ ಪ್ರಾಣಿಗಳನ್ನು ದತ್ತು ಪಡೆಯುವಂತೆ ಮನವಿ ಮಾಡಿಕೊಂಡಿದ್ದರು. ಅದರಂತೆಯೇ ದರ್ಶನ್ ಅಭಿಮಾನಿಗಳು ಮೃಗಾಯಲಯದಲ್ಲಿದ್ದ ಪ್ರಾಣಿಗಳು ದತ್ತು ಪಡೆದು ನೆರವಾಗಿದ್ದರು.

More from Filmibeat

English summary
Darshan Tweet About World Tiger Day: Says Tiger Represents Beauty, Bravery, Strength, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X