ಕೊರಗಜ್ಜನ ಸನ್ನಿಧಿಯಲ್ಲಿ ದರ್ಶನ್ ಪ್ರಾರ್ಥನೆ; ಸುಮಲತಾಗೆ ದರ್ಶನ್ ಬೆಂಬಲ ಫಿಕ್ಸ್!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಇತ್ತೀಚೆಗೆ ಹೆಚ್ಚಾಗಿ ದೇವಸ್ಥಾನಗಳಿಗೆ ಭೇಟಿ ಕೊಡುತ್ತಿದ್ದಾರೆ. ಇತ್ತೀಚೆಗೆ ತಿರುಪತಿ, ಕಾಳಹಸ್ತಿಗೆ ಪತ್ನಿ ಹಾಗೂ ಸ್ನೇಹಿತರೊಂದಿಗೆ ಭೇಟಿ ನೀಡಿದ್ದರು. ಈಗ ದಕ್ಷಿಣ ಕನ್ನಡದ ಕುತ್ತಾರು ಬಳಿಯ ಕೊರಗಜ್ಜನ ಸನ್ನಿಧಿಗೆ ಭೇಟಿ ಕೊಟ್ಟಿದ್ದಾರೆ. ಮಂಗಳೂರಿನ ಕೊರಗಜ್ಜನ ಸನ್ನಿಧಿಗೆ ರಾಜ್ಯದ ಮೂಲೆ ಮೂಲೆಯಿಂದ ಭಕ್ತರು ಬಂದು ತಮ್ಮ ಪ್ರಾರ್ಥನೆಯನ್ನು ಸಲ್ಲಿಸಿ ಹೋಗುತ್ತಾರೆ.
ಹಾಗೇ ದರ್ಶನ್ ಕೂಡ ಇಂದು (ಮಾರ್ಚ್ 10) ಕೊರಗಜ್ಜನ ಸನ್ನಧಿಗೆ ಭೇಟಿ ಕೊಟ್ಟು ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿದ್ದಾರೆ. ಇವರೊಂದಿಗೆ ಸ್ಯಾಂಡಲ್‌ವುಡ್ ನಟ ಚಿಕ್ಕಣ್ಣ, ಯಶಸ್ ಸೂರ್ಯ ಸೇರಿದಂತೆ ಅವರ ಆಪ್ತರು ಕೂಡ ಜೊತೆಯಲ್ಲಿ ಇದ್ದರು. ಇದೇ ಮೊದಲ ಬಾರಿಗೆ ದರ್ಶನ್ ಕೊರಗಜ್ಜನ ಸನ್ನಧಿಗೆ ಬಂದು ಪ್ರಾರ್ಥನೆ ಸಲ್ಲಿಸಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ದೇವಸ್ಥಾನದಕ್ಕೆ ಬರುವ ಸುದ್ದಿ ತಿಳಿಯುತ್ತಿದ್ದಂತೆ ಭಕ್ತ ಸಮುದಾಯ ಅವರನ್ನು ಸುತ್ತುವರೆದಿತ್ತು. ಈ ವೇಳೆ ದರ್ಶನ್ ಮಾಧ್ಯಮಗಳಿಗೆ ಕೊರಗಜ್ಜನ ದೇವಸ್ಥಾನಕ್ಕೆ ಆತ್ಮೀಯರು ಹಲವು ಬಾರಿ ಹೇಳಿದ್ದರು. ಆದರೆ, ಬರುವುದಕ್ಕೆ ಆಗಿರಲಿಲ್ಲ. ಈಗ ಬಂದು ಪ್ರಾರ್ಥನೆ ಸಲ್ಲಿಸಿದ್ದಾಗಿ ಹೇಳಿದ್ದಾರೆ. ಇದೇ ವೇಳೆ ಸುಮಲತಾ ರಾಜಕೀಯದ ಬಗ್ಗೆನೂ ದರ್ಶನ್ ಖಡಕ್ ಆಗಿ ಮಾತಾಡಿದ್ದಾರೆ.
"ಕೊರಗಜ್ಜನಿಗೆ ಪ್ರಾರ್ಥನೆ ಸಲ್ಲಿಸಲು ಬಂದಿದ್ದೇನೆ"
ಕುತ್ತಾರ ಕೊರಗಜ್ಜನ ಸನ್ನಿಧಿಗೆ ಬಂದು ಪ್ರಾರ್ಥನೆ ಸಲ್ಲಿಸಿದ ಬಳಿಕ ದರ್ಶನ್ ಯಾವುದೇ ಕಾರಣವಿಲ್ಲ. ದರ್ಶನ್ ಪಡೆದು ಪ್ರಾರ್ಥನೆ ಸಲ್ಲಿಸಲು ಬಂದಿದ್ದೇನೆ ಎಂದಿದ್ದಾರೆ. "ಎಲ್ಲರೂ ಸಾಕಷ್ಟು ಬಾರಿ ಹೇಳಿದ್ದರು. ಬರುವುದಕ್ಕೆ ಆಗಿರಲಿಲ್ಲ. ಅದಕ್ಕೆ ಬಂದು ಹೋಗೋಣ ಅಂತ ಬಂದಿದ್ದೇನೆ ಅಷ್ಟೇ. ಎಲ್ಲರೂ ಹೇಳುತ್ತಿದ್ದರಲ್ಲ ಅದಕ್ಕೆ ನೋಡಿಕೊಂಡು ರಿಕ್ವೆಸ್ಟ್ ಮಾಡಿಕೊಂಡು ಬರೋಣ ಅಂತ ಬಂದೆ. ಸರ್ ಯಾವುದೇ ಎಕ್ಸ್ ವೈ ಜೆಡ್ ಕಾರಣವಿಲ್ಲ. " ಎಂದಿದ್ದಾರೆ.

"ನೀನು ನಡೆಸಿಕೊಡ್ತೀರಾ ಸರ್?"
ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೊರಗಜ್ಜನ ಸನ್ನಿಧಿ ಪ್ರಾರ್ಥನೆ ಸಲ್ಲಿಸಿದ್ದರಿಂದ ವಿಶೇಷ ಬೇಡಿಕೆ ಏನಾದರೂ ಇಟ್ಟಿದ್ದಾರಾ? ಎಂದು ಮಾಧ್ಯಮದವರು ಪ್ರಶ್ನೆ ಮಾಡಿದ್ದರು. ಅದಕ್ಕೆ ದರ್ಶನ್ ಕೊಟ್ಟ ಉತ್ತರ ಹೀಗಿತ್ತು. "ನನ್ನ ಪ್ರಾರ್ಥನೆಯನ್ನು ನಿಮಗೆ ಹೇಳಿದರೆ, ನೀವು ಮಾಡಿಕೊಡ್ತೀರಾ ಸರ್. ನಾನು ಇವತ್ತೇ ಬಂದಿದ್ದೇನೆ. ಪ್ರಾರ್ಥನೆ ಮಾಡಿಕೊಂಡಿದ್ದೇನೆ ಅಷ್ಟೇ." ಎಂದು ದರ್ಶನ್ ಪ್ರತಿಕ್ರಿಯೆ ನೀಡಿದ್ದಾರೆ.
"ತಾಯಿ ಅಲ್ಲ ಅಂತ ಬಿಟ್ಟುಕೊಡೋಕಾಗುತ್ತಾ?"
ಇತ್ತೀಚೆಗೆ ಸುಮಲತಾ ಲೋಕ ಸಭಾ ಚುನಾವಣೆಗೆ ಸ್ಪರ್ಧೆ ಮಾಡುವ ವಿಷಯದ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ. ಸುಮಲತಾ ಬಿಜೆಪಿಯಿಂದ ಸ್ಪರ್ಧೆ ಮಾಡುತ್ತಾರೆ ಅನ್ನೋ ಮಾತು ಕೇಳಿ ಬರುತ್ತಿದೆ. ಒಂದು ವೇಳೆ ಬಿಜೆಪಿಯಿಂದ ಸ್ಪರ್ಧೆ ಮಾಡಿದರೆ ಬೆಂಬಲಿಸುತ್ತೀರಾ ಎಂದು ಪ್ರಶ್ನೆ ಮಾಡಿದ್ದರು. "ಇದು ಪೊಲಿಟಿಲ್ ಟೈಟಲ್ ಅಷ್ಟೇನೆ. ಮೊನ್ನೆ ಎಲ್ಲಾ ಅಮ್ಮನ ಜೊತೆನೇ ಇದ್ದೀನಿ. ಈ ಹಿಂದೆ ಕೂಡ ಅಮ್ಮನ ಜೊತೆನೇ ಇದ್ದೀನಿ. ಈಗ ಒಂದು ಹೇಳ್ತೀನಿ. ನಿಮ್ಮ ಮನೆಯಲ್ಲಿ ನಿಮ್ಮ ತಾಯಿಯನ್ನು ಬಿಟ್ಟು ಬಿಡ್ತೀರಾ..? ಬಿಜೆಪಿಗೆ ಬಂದ ಕೂಡಲೇ ನಿಮ್ಮ ತಾಯಿ ಅಲ್ಲ ಅಂತ ಬಿಟ್ಟುಬಿಡ್ತೀರಾ? ಅಮ್ಮ ಅಮ್ಮನೇ ಸರ್.." ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಸಮಲತಾ ಬಿಜೆಪಿ ಪಕ್ಷದಿಂದ ಮಂಡ್ಯ ಲೋಕ ಸಭಾ ಕ್ಷೇತ್ರದಲ್ಲೇ ಚುನಾವಣೆಗೆ ಸ್ಪರ್ಧೆ ಮಾಡಬೇಕು ಎಂದು ಬಯಸಿದ್ದಾರೆ. ಆದರೆ, ಬಿಜೆಪಿ ಹಾಗೂ ಮೈತ್ರಿ ಹಿನ್ನೆಲೆ ಅವರಿಗೆ ಮಂಡ್ಯದಿಂದ ಟಿಕೆಟ್ ಸಿಗಬಹುದೇ? ಅನ್ನು ಪ್ರಶ್ನೆ ಎದ್ದಿದೆ. ಇನ್ನೊಂದು ಕಡೆ ಅವರ ಆಪ್ತರೇ ಬಿಜೆಪಿಯಿಂದ ಸ್ಪರ್ಧಿಸಿದರೇ ಮಾತ್ರ ಬೆಂಬಲ ಅನ್ನೋ ಮಾತು ಕೇಳಿ ಬಂದಿತ್ತು. ಆದರೆ, ಸುಮಲತಾ ಎಲ್ಲೇ ಸ್ಪರ್ಧಿಸಿದರೂ ದರ್ಶನ್ ಬೆಂಬಲ ನೀಡುವುದಾಗಿ ಸ್ಪಷ್ಟನೆ ಕೊಟ್ಟಿದ್ದಾರೆ.


Click it and Unblock the Notifications











