ದರ್ಶನ್ ವಿವಾಹ ವಾರ್ಷಿಕೋತ್ಸವ: ಅಲೋಕ್ ಕುಮಾರ್ ಬಳಿಕ ವಿಜಯಲಕ್ಷ್ಮಿ ಮನವಿ ಏನು?
ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಸುಪ್ರೀಂ ಕೋರ್ಟ್‌ನಲ್ಲಿ ಮತ್ತೊಂದು ಹಿನ್ನಡೆಯಾಗಿದೆ. ಇತ್ತೀಚೆಗೆ ದರ್ಶನ್ ಜಾಮೀನಿಗಾಗಿ ಮನವಿ ಮಾಡಿಕೊಂಡಿದ್ದರು. ರೇಣುಕಾಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ರಯಲ್ ವಿಳಂಬ ಆಗುತ್ತಿದೆ. ಜೈಲಿನಲ್ಲಿ ಸಹ ಖೈದಿಗಳಿಂದ ಬೆದರಿಕೆ ಇದ್ದು, ಜಾಮೀನನ್ನು ನೀಡುವಂತೆ ದರ್ಶನ್ ಮಾಡಿಕೊಂಡಿದ್ದರು. ಈ ಅರ್ಜಿಯನ್ನು ಕೈಗೆತ್ತಿಕೊಂಡಿದ್ದ ಸುಪ್ರೀಂ ಕೋರ್ಟ್ ಕಾರಾಗೃಹ ಇಲಾಖೆ ವರದಿ ನೀಡುವಂತೆ ಸೂಚನೆಯನ್ನು ನೀಡಿತ್ತು.
ಈ ಸಂಬಂಧ ಕಾರಾಗೃಹ ನೀಡಿದ ದಾಖಲೆಗಳನ್ನು ಎಸ್‌ಪಿಪಿ ಪ್ರಸನ್ನ ಕುಮಾರ್ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದರು. ಅದನ್ನು ಪರಿಶೀಲಿಸಿದ ಬಳಿಕ ಸುಪ್ರೀಂ ಕೋರ್ಟ್ ಒಂದು ವರ್ಷದ ಒಳಗೆ ಟ್ರಯಲ್ ಮುಗಿಸುವಂತೆ ಸೂಚನೆಯನ್ನು ನೀಡಿದೆ. ಈ ಹಿನ್ನೆಲೆಯಲ್ಲಿ ದರ್ಶನ್ ಮಾನಸಿಕವಾಗಿ ಕುಗ್ಗಿದ್ದಾರೆಂದು ಹೇಳಲಾಗುತ್ತಿದೆ. ಅಲ್ಲದೆ ನಾಳೆ ದರ್ಶನ್ ಹಾಗೂ ವಿಜಯಲಕ್ಷ್ಮಿ ಅವರ ವಿವಾಹ ವಾರ್ಷಿಕೋತ್ಸವವಿದ್ದು, ವಿಜಯ್ ಲಕ್ಷ್ಮಿ ಅವರು ಕಾರಾಗೃಹದ ಡಿಜಿಪಿ ಅಲೋಕ್ ಕುಮಾರ್ ಅವರ ಬಳಿ ವಿಶೇಷ ಮನವಿ ಮಾಡಿಕೊಂಡಿದ್ದಾರೆ.

ನಾಳೆ (ಮೇ 19) ವಿಜಯಲಕ್ಷ್ಮಿ ಹಾಗೂ ದರ್ಶನ್ ವೈವಾಹಿಕ ಜೀವನಕ್ಕೆ ಕಾಲಿಟ್ಟು 23 ವರ್ಷಗಳಾಗುತ್ತಿವೆ. ಈ ಹಿನ್ನೆಲೆಯಲ್ಲಿ ವಿಜಯಲಕ್ಷ್ಮಿ ಅವರು ಕಾರಾಗೃಹದ ಡಿಜಿಪಿ ಅಲೋಕ್ ಕುಮಾರ್ ಅವರ ಬಳಿ ಹಾಗೂ ದರ್ಶನ್ ಪರಪ್ಪನ ಅಗ್ರಹಾರದ ಕಾರಾಗೃಹದ ಅಧಿಕಾರಿಗಳ ಬಳಿ ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ವಿಶೇಷ ಮನವಿ ಮಾಡಿಕೊಂಡಿದ್ದಾರೆ. ಆ ಬಗ್ಗೆ ಅಲೋಕ್ ಕುಮಾರ್ ಅವರು ಟಿವಿ9ಗೆ ನೀಡಿದ ಸಂದರ್ಶನದಲ್ಲಿ ಕೆಲವು ಇಂಟ್ರೆಸ್ಟಿಂಗ್ ಮಹಿತಿಯನ್ನು ಹಂಚಿಕೊಂಡಿದ್ದಾರೆ.
ವಿಜಯಲಕ್ಷ್ಮಿ ದರ್ಶನ್ ಅವರು ನಾಳೆ (ಮೇ 19) ವಿವಾಹ ವಾರ್ಷಿಕೋತ್ಸವ ಇದ್ದಿದ್ದರಿಂದ ಅಲೋಕ್ ಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ. ಆ ಮನವಿಗೆ ಸಂಬಂಧಿಸಿದಂತೆ ವೆಡ್ಡಿಂಗ್ ಆನಿವರ್ಸರಿಯನ್ನು ಆಚರಿಸುವುದಕ್ಕೆ ಅವಕಾಶ ನೀಡಬೇಕೆ ಬೇಡವೇ? ಅನ್ನೋದು ನಿರ್ಧಾರ ಆಗಲಿದೆ. ಈ ಬಗ್ಗೆ ಅಲೋಕ್ ಕುಮಾರ್ ಇಷ್ಟು ಮಾಹಿತಿ ಹಂಚಿಕೊಂಡಿದ್ದಾರೆ.
"ವಿಜಯಲಕ್ಷ್ಮಿ ಅವರು ನನ್ನನ್ನು ಭೇಟಿ ಮಾಡಿದರು. ಮೇ 19ರಂದು ವೆಡ್ಡಿಂಗ್ ಅವರದ್ದು ಆನಿವರ್ಸರಿ ಇದೆ. ದರ್ಶನ್ ಅವರು ಮಾನಸಿಕವಾಗಿ ಕುಗ್ಗಿದ್ದಾರೆ. ಯಾಕಂದ್ರೆ, ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನು ಕ್ಯಾನ್ಸಲ್ ಆಗಿದ್ದರಿಂದ ಮಾನಸ್ಸಿಗೆ ತುಂಬಾನೇ ಹಚ್ಚಿಕೊಂಡಿದ್ದಾರೆ. ಹೀಗಾಗಿ ವಿಜಯಲಕ್ಷ್ಮಿ ಅವರು ನನಗೊಂದು ಅಪ್ಲಿಕೇಷನ್ ಕೊಟ್ಟಿದ್ದರೆ. ಹಾಗೇ ದರ್ಶನ್ ಅವರೂ ಕೊಟ್ಟಿದ್ದಾರೆ. ಈ ಕಾರಣಕ್ಕೆ ಇವತ್ತು ಸಂಜೆ ಒಳಗೆ ಒಂದು ತೀರ್ಮಾನವನ್ನು ತೆಗೆದುಕೊಳ್ಳುತ್ತೇವೆ" ಎಂದು ಕಾರಾಗೃಹದ ಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ.

ಜೈಲಿನಲ್ಲಿ ಇರುವವ ಖೈದಿಗಳ, ಆರೋಪಿಗಳ ಮಾನಸಿಕ ಆರೋಗ್ಯಕ್ಕಾಗಿ ಕೆಲವು ಅವಕಾಶಗಳನ್ನು ನೀಡಲಾಗುತ್ತದೆ. ಜೈಲ್‌ನಲ್ಲಿ ಇರುವವರಿಗೆ ಆರೋಗ್ಯ ಕಾಪಾಡುವುದು ತುಂಬಾನೇ ಮುಖ್ಯ. ಯಾರದ್ದೆಲ್ಲ ಒಳ್ಳೆಯ ನಡತೆ ಇರುತ್ತೆ. ಅಂತಹವರ ಮಕ್ಕಳಿಗೆ ಭೇಟಿ ಮಾಡಿಸುವುದು, ವಯಸ್ಸಾದ ತಂದೆ-ತಾಯಿಯನ್ನು ಭೇಟಿ ಮಾಡಿಸುವುದು, ಅವರ ಪತ್ನಿ ಗರ್ಭಿಣಿಯಾಗಿದ್ದರೆ, ಅವರನ್ನು ಭೇಟಿ ಮಾಡಿಸುವುದು ಇಂತಹ ವ್ಯವಸ್ಥೆಯನ್ನು ಮಾಡುತ್ತಿರುತ್ತಾರೆ. ಅಲ್ಲಿರುವವರ ಮಾನಸಿಕ ಹಾಗೂ ಶಾರೀರಿಕ ಆರೋಗ್ಯ ಚೆನ್ನಾಗಿ ಇರಬೇಕು. ಹೀಗಾಗಿ ಈ ಎಲ್ಲಾ ವಿಚಾರಗಳನ್ನು ಇಟ್ಟುಕೊಂಡು ಒಂದು ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ದರ್ಶನ್ ವಿಚಾರದಲ್ಲೂ ಇಂತಹದ್ದೊಂದು ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ.
ಇನ್ನು ಇತ್ತೀಚೆಗೆ ಅಲೋಕ್ ಕುಮಾರ್ ಅವರು ದರ್ಶನ್ ಅವರನ್ನು ಭೇಟಿ ಮಾಡಿದ್ದು. ಈ ವೇಳೆ ದರ್ಶನ್ ಮಾಡಿಕೊಂಡ ಮನವಿ ಬಗ್ಗೆ ರಿವೀಲ್ ಮಾಡಿದ್ದಾರೆ. "15ನೇ ತಾರೀಕು ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲ್‌ನ ಪ್ರಿವ್ಯೂ ಮೀಟಿಂಗ್ ಅನ್ನು ನಾನು ತೆಗೆದುಕೊಂಡಿದ್ದೆ. ಇದರಲ್ಲಿ ಒಂದು ಗಂಟೆ ನಾನು ಜೈಲ್ಲಿ ಇರುವವರ ಅಭಿಪ್ರಾಯ ಕೇಳುವುದಕ್ಕೆ ಹೋಗಿದ್ದೆ. ಈ ವೇಳೆ ದರ್ಶನ್ ಅವರನ್ನು ಭೇಟಿ ಮಾಡಿದ್ದೇನೆ. ಅವರು ಅಂತಹ ಏನೂ ಸಮಸ್ಯೆಯಿಲ್ಲ ಅಂತ ಹೇಳಿದರು. ಆದರೆ, ನಮಗೆ ಭೇಟಿ ಮಾಡುವುದಕ್ಕೆ ಅವಕಾಶವಿದ್ದರೆ ಒಳ್ಳೆಯದು ಎಂದು ಹೇಳಿದ್ದರು. ಅದಕ್ಕೆ ನಾನು ಈ ಬಗ್ಗೆ ಪರಿಶೀಲನೆ ಮಾಡುತ್ತೇನೆ ಎಂದು ಹೇಳಿದ್ದೆ. ಅಲ್ಲದೆ ಬೇರೆ ಸಹಚರರೊಂದಿಗೆ ಮಾತಾಡುವುದಕ್ಕೆ ಹೆಚ್ಚು ಸಮಯ ಕೊಡಬೇಕು ಅಂದರೆ ಹೇಳಿದ್ದಾರೆ. ಮೊದಲು 60 ನಿಮಿಷವಿತ್ತು. ಈಗ ಅದನ್ನು 75ಕ್ಕೆ ಏರಿಸಬೇಕು ಅಂತ ತೀರ್ಮಾನ ತೆಗೆದುಕೊಂಡಿದ್ದೇವೆ." ಎಂದು ಅಲೋಕ್ ಕುಮಾರ್ ಹೇಳಿದ್ದಾರೆ.


Click it and Unblock the Notifications
