ಕೊಲ್ಲೂರು ಮೂಕಾಂಬಿಕೆ ಸನ್ನಿಧಿಯಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ; ಪತಿ ಬಿಡುಗಡೆಯಾಗಿ ಚಂಡಿಕಾ ಯಾಗ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಗ್ರಹಗತಿ ಸರಿಯಾಗಿಲ್ಲ ಅಂತ ಹಲವು ಜ್ಯೋತಿಷಿಗಳು ಹೇಳುತ್ತಿದ್ದಾರೆ. ದರ್ಶನ್ ಜೈಲಿಗೆ ಸೇರಿದ ಬಳಿಕವಂತೂ ಕೆಲವರು ಜ್ಯೋತಿಷಿಗಳು ದೋಷಗಳ ಬಗ್ಗೆನೂ ಹೇಳಿಕೆ ಕೊಟ್ಟಿದ್ದರು. ಮತ್ತೆ ಕೆಲವರು ದರ್ಶನ್ ನವೆಂಬರ್‌ವರೆಗೂ ಬಿಡುಗಡೆ ಭಾಗ್ಯವಿಲ್ಲ ಎಂದೂ ಹೇಳಿಕೆ ಕೊಟ್ಟಿದ್ದರು. ಇದೇ ನಿಟ್ಟಿನಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಕೊಲ್ಲೂರು ಮೂಕಾಂಬಿಕೆ ಸನ್ನಿಧಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ದರ್ಶನ್ ಜೈಲು ಸೇರಿಸಿದ್ದಾರೆ. ಈ ಕೊಲೆ ಪ್ರಕರಣದಿಂದ ದರ್ಶನ್‌ರನ್ನು ಬಿಡಿಸಿಕೊಳ್ಳುವುದಕ್ಕೆ ಪತ್ನಿ ವಿಜಯಲಕ್ಷ್ಮಿ ಶತ ಪ್ರಯತ್ನ ಮಾಡುತ್ತಿದ್ದಾರೆ. ಈ ಬೆನ್ನಲ್ಲೇ ವಿಜಯಲಕ್ಷ್ಮಿ ದರ್ಶನ್ ಈಗ ಕೊಲ್ಲೂರು ಮೂಕಾಂಬಿಕೆ ಸನ್ನಿಧಿಗೆ ಭೇಟಿ ಕೊಟ್ಟು, ಪತಿ ಬಿಡುಗಡೆಯಾಗಿ ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆ.

Darshan wife vijayalakshmi visited kolluru shri mookambika temple performed Chandika Homa

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸರು ತೀವ್ರ ತನಿಖೆ ನಡೆಸಿ, ಚಾರ್ಜ್ ಶೀಟ್ ಸಿದ್ಧಪಡಿಸುತ್ತಿದ್ದಾರೆ. ದರ್ಶನ್‌ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂಬ ವಿಷಯದ ಕುರಿತು ಈಗಾಗಲೇ ವರದಿಯಾಗಿದ್ದು, ಪ್ರಬಲ ಸಾಕ್ಷ್ಯಗಳು ಕೂಡ ಸಿಕ್ಕಿವೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದವು. ಇತ್ತ ನ್ಯಾಯಾಲಯದಲ್ಲೂ ದರ್ಶನ್‌ಗೆ ಒಂದರ ಮೇಲೊಂದರಂತೆ ಹಿನ್ನೆಡೆಗಳು ಆಗುತ್ತಿವೆ.

ಈ ಎಲ್ಲಾ ಕಾರಣಗಳಿಗೆ ವಿಜಯಲಕ್ಷ್ಮಿ ದರ್ಶನ್ ಕೊಲ್ಲೂರು ಮೂಕಾಂಬಿಕೆಯ ಮೊರೆ ಹೋಗಿದ್ದಾರೆ. ವಿಜಯಲಕ್ಷ್ಮಿ ಆಪ್ತರೊಂದಿಗೆ ಮೂಕಾಂಬಿಕೆಯ ದರ್ಶನ ಪಡೆದಿರುವ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಕೊಲ್ಲೂರಿನಲ್ಲಿ ವಿಜಯಲಕ್ಷ್ಮಿ ಪತಿ ದರ್ಶನ್ ಬಿಡುಗಡೆಗಾಗಿ ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆ ಎನ್ನಲಾಗಿದೆ. ಅಲ್ಲೇ ಚಂಡಿಕಾ ಹೋಮವನ್ನು ಮಾಡಿದ್ದಾರೆ ಎಂದು ವರದಿಗಳಾಗಿವೆ.

ಸದ್ಯಕ್ಕೀಗ ದರ್ಶನ್ ಜೊತೆ ಪತಿ ವಿಜಯಲಕ್ಷ್ಮಿ ಹಾಗೂ ದಿನಕರ್ ತೂಗದೀಪ ನಿಂತಿದ್ದಾರೆ. ಅವರನ್ನು ಹೇಗಾದರೂ ಮಾಡಿ ಜೈಲ್‌ನಿಂದ ಬಿಡುಗಡೆ ಮಾಡಿಸಬೇಕು ಎಂದು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಕೆಲವು ಕಾಲ ಚರ್ಚಿಸಿದ್ದರು. ಈ ಬಗ್ಗೆ ವಿಜಯಲಕ್ಷ್ಮಿ ಆಗಲಿ, ದಿನಕರ್ ಆಗಲಿ ಪ್ರತಿಕ್ರಿಯೆ ನೀಡಿಲ್ಲ.

ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮಾತ್ರ ಮಗನ ಶಾಲೆಯ ವಿಚಾರವಾಗಿ ಮಾತಾಡುವುದಕ್ಕೆ ಬಂದಿದ್ದರು ಎಂದು ಮಾಧ್ಯಮಗಳ ಮುಂದೆ ಹೇಳಿಕೆ ಕೊಟ್ಟಿದ್ದರು. ಆದರೆ, ಇದು ಕೇವಲ ಮಗನ ಸ್ಕೂಲ್‌ನ ವಿಚಾರಕ್ಕೆ ಸಂಬಂಧಿಸಿದ್ದಲ್ಲ. ದರ್ಶನ್ ಬಿಡುಗಡೆ ಬಗ್ಗೆನೂ ಚರ್ಚೆ ಆಗಿರಬಹುದು ಎಂಬ ಅನುಮಾನವೂ ವ್ಯಕ್ತವಾಗಿದೆ. ಸದ್ಯ ದರ್ಶನ್‌ಗೆ ವಿಜಯಲಕ್ಷ್ಮಿ ಅವರೇ ಬೆಂಬಲವಾಗಿ ನಿಂತಿದ್ದಾರೆ. ವಾರಕ್ಕೊಮ್ಮೆ ದರ್ಶನ್‌ರನ್ನು ಭೇಟಿ ಮಾಡಿ, ಪ್ರಸಕ್ತ ವಿಷಯಗಳ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ.

ಇತ್ತ ದರ್ಶನ್‌ ಜೈಲೂಟ ಸರಿ ಹೊಂದುತ್ತಿಲ್ಲ ಮನೆ ಊಟ ಬೇಕು ಎಂದು ನ್ಯಾಯಾಲಯಕ್ಕೆ ಅರ್ಜುನ್ ಸಲ್ಲಿಸಿದ್ದರು. ಆದರೆ, 24ನೇ ಎಸಿಎಂಎಂ ಕೋರ್ಟ್ ಈ ಬೇಡಿಯನ್ನು ತಿರಸ್ಕರಿಸಿ, ಆದೇಶ ಹೊರಡಿಸಿದೆ. ಹೀಗಾಗಿ ದರ್ಶನ್‌ಗೆ ಇನ್ನೂ ಕೆಲವು ದಿನಗಳ ಕಾಲ ಜೈಲೂಟವೇ ಮಾಡಬೇಕಾಗಿದೆ. ಹೀಗಾಗಿ ವಿಜಯಲಕ್ಷ್ಮಿ ದರ್ಶನ್ ದೇವರ ಮೊರೆ ಹೋಗಿದ್ದು, ಕೊಲ್ಲೂರು ಮೂಕಾಂಬಿ ದೇವಾಲಯದಲ್ಲಿ ನವ ಚಂಡಿಕಾ ಹೋಮ ಮಾಡಿಸಿದ್ದಾರೆ. ನರಸಿಂಹ ಅಡಿಗ ನೇತೃತ್ವದಲ್ಲಿ ಈ ಚಂಡಿಕಾ ಹೋಮ ನಡೆದಿದೆ ಎನ್ನಲಾಗಿದೆ.

More from Filmibeat

English summary
Darshan wife Vijayalakshmi in kolluru shri mookambika temple:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X