'ಕ್ರಾಂತಿ' ಸಿನಿಮಾ ನೋಡಿದ ದರ್ಶನ್ ಪತ್ನಿ ವಿಜಯಲಕ್ಷ್ಮಿ: ವಿಡಿಯೋ ವೈರಲ್!

ದರ್ಶನ್ ಸಿನಿಮಾ 'ಕ್ರಾಂತಿ' ಗ್ರ್ಯಾಂಡ್ ಆಗಿಯೇ ರಿಲೀಸ್ ಆಗಿತ್ತು. ಮೊದಲ ದಿನ ಅಭಿಮಾನಿಗಳು ಥಿಯೇಟರ್ ಮುಂದೆ ಹಬ್ಬವನ್ನೇ ಮಾಡಿದ್ದರು. ತಮಟೆ ಬಾರಿಸಿ ಕುಣಿದು ಕುಪ್ಪಳಿಸಿದ್ದರು.

ಹಲವು ವರ್ಷಗಳ ಬಳಿಕ ದರ್ಶನ್ ಹಾಗೂ ರಚಿತಾ ರಾಮ್ ಮತ್ತೆ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಇದರೊಂದಿಗೆ ದೊಡ್ಡ ದೊಡ್ಡ ತಾರಾಗಣವೇ ಈ ಸಿನಿಮಾದಲ್ಲಿದೆ. ಎಲ್ಲಕ್ಕಿಂತ ಹೆಚ್ಚಾಗಿ ಸಂಗೀತ ನಿರ್ದೇಶಕ ಹರಿಕೃಷ್ಣ ಡೈರೆಕ್ಷನ್ ನೋಡುವುದಕ್ಕೆ ಪ್ರೇಕ್ಷಕರು ಕಾತುರರಾಗಿದ್ದರು.

'ಕ್ರಾಂತಿ' ದರ್ಶನ್ ಅಭಿಮಾನಿಗಳಿಗೆ ಇಷ್ಟ ಆಗಿದೆ. ಅಕ್ಷರ ಕ್ರಾಂತಿ ಮಾಡಲು ಹೊರಟ ನೆಚ್ಚಿನ ನಟನಿಗೆ ಜೈ ಅಂದಿದ್ದಾರೆ. ಇದೇ ವೇಳೆ 'ಕ್ರಾಂತಿ' ಸಿನಿಮಾವನ್ನು ಪತ್ನಿ ವಿಜಯಲಕ್ಷ್ಮಿ ಕೂಡ ವೀಕ್ಷಣೆ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

'ಕ್ರಾಂತಿ' ವೀಕ್ಷಿಸಿದ ವಿಜಯಲಕ್ಷ್ಮಿ

'ಕ್ರಾಂತಿ' ವೀಕ್ಷಿಸಿದ ವಿಜಯಲಕ್ಷ್ಮಿ

ದರ್ಶನ್ ಪತ್ನಿ 'ಕ್ರಾಂತಿ' ಬಿಡುಗಡೆ ವೇಳೆ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಸಿನಿಮಾ ಬಗ್ಗೆ ಒಂದೇ ಒಂದು ಮಾತು ಕೂಡ ಆಡಿರಲಿಲ್ಲ. ಆದ್ರೀಗ ಸೈಲೆಂಟಾಗಿಯೇ 'ಕ್ರಾಂತಿ' ಸಿನಿಮಾ ನೋಡಿ ಎಂಜಾಯ್ ಮಾಡಿದ್ದಾರೆ. ಸಿನಿಮಾದ ದೃಶ್ಯವೊಂದಕ್ಕೆ ಪತ್ನಿ ವಿಜಯಲಕ್ಷ್ಮಿ ಉತ್ಸಾಹದಿಂದ ಜೈಕಾರ ಹಾಕಿದ್ದು ಕೂಡ ವಿಡಿಯೋದಲ್ಲಿ ಸೆರೆಯಾಗಿದೆ. ಅಲ್ಲದೆ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲೂ ವೈರಲ್ ಆಗುತ್ತಿದೆ.

ಸ್ನೇಹಿತೆಯರ ಜೊತೆ 'ಕ್ರಾಂತಿ' ವೀಕ್ಷಣೆ

ಸ್ನೇಹಿತೆಯರ ಜೊತೆ 'ಕ್ರಾಂತಿ' ವೀಕ್ಷಣೆ

ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಸಿನಿಮಾ ವೀಕ್ಷಣೆ ಮಾಡಿದ್ದು ಟ್ರೆಂಡಿಂಗ್‌ನಲ್ಲಿದೆ. ಡಿ ಬಾಸ್ ಅಭಿಮಾನಿಗಳು ಈ ವಿಡಿಯೋ ನೋಡಿ ಎಂಜಾಯ್ ಮಾಡುತ್ತಿದ್ದಾರೆ. ವಿಜಯಲಕ್ಷ್ಮಿ ಅವರೊಂದಿಗೆ ಅವರ ಸ್ನೇಹಿತೆಯರು ಕೂಡ ಜೊತೆಯಾಗಿದ್ದರು. ಮಲ್ಟಿಪ್ಲೆಕ್ಸ್‌ನಲ್ಲಿ ಪತಿ ದರ್ಶನ್ ಅಭಿನಯದ 'ಕ್ರಾಂತಿ' ಸಿನಿಮಾವನ್ನು ನೋಡಿ ಎಂಜಾಯ್ ಮಾಡಿದ್ದಾರೆ.

'ಕ್ರಾಂತಿ' ನೋಡಿದ ವಿನೋದ್ ಪ್ರಭಾಕರ್

'ಕ್ರಾಂತಿ' ನೋಡಿದ ವಿನೋದ್ ಪ್ರಭಾಕರ್

ದರ್ಶನ್ ಗೆಳೆಯ ವಿನೋದ್ ಪ್ರಭಾಕರ್ ಕೂಡ 'ಕ್ರಾಂತಿ' ಸಿನಿಮಾವನ್ನು ನೋಡಿ ಎಂಜಾಯ್ ಮಾಡಿದ್ದಾರೆ. ಮಲ್ಪಿಪ್ಲೆಕ್ಸ್ ಥಿಯೇಟರ್‌ನಲ್ಲಿ ಸ್ನೇಹಿತರೊಂದಿಗೆ ತೆರಳಿ 'ಕ್ರಾಂತಿ'ಯನ್ನು ವೀಕ್ಷಣೆ ಮಾಡಿದ್ದಾರೆ. ಈ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

'ಕ್ರಾಂತಿ' ವೀಕೆಂಡ್‌ನಲ್ಲಿ ಹೇಗಿದೆ?

'ಕ್ರಾಂತಿ' ವೀಕೆಂಡ್‌ನಲ್ಲಿ ಹೇಗಿದೆ?

'ಕ್ರಾಂತಿ' ಸಿನಿಮಾ ಕಲೆಕ್ಷನ್ ಎರಡನೇ ದಿನ ಡ್ರಾಪ್ ಆಗಿತ್ತು. ಈಗ ವೀಕೆಂಡ್‌ನಲ್ಲಿ 'ಕ್ರಾಂತಿ' ಸಿನಿಮಾದ ಕಲೆಕ್ಷನ್‌ನಲ್ಲಿ ಏರಿಕೆ ಆಗುವ ಸಾಧ್ಯತೆಯಿದೆ. ಶನಿವಾರ ಹಾಗೂ ಭಾನುವಾರ ಎರಡು ದಿನಗಳು ಕ್ರಾಂತಿ ಕಲೆಕ್ಷನ್ ಅದ್ಭುತವಾಗಿರುತ್ತೆ ಎಂದೇ ನಿರೀಕ್ಷೆ ಮಾಡಲಾಗಿದೆ. ಇದೂವರೆಗೂ ಸಿನಿಮಾ 20 ಕೋಟಿ ರೂ. ಅಧಿಕ ಕಲೆಕ್ಷನ್ ಮಾಡಿದೆ ಎಂದು ಟ್ರೇಡ್ ಎಕ್ಸ್‌ಪರ್ಟ್‌ ಹೇಳುತ್ತಿದ್ದಾರೆ. ಹೀಗಾಗಿ ವೀಕೆಂಡ್‌ನಲ್ಲಿ ಎಷ್ಟು ಕಲೆಕ್ಷನ್ ಆಗಿದೆ ಅನ್ನೋ ಕುತೂಹಲ ಎಲ್ಲರಲ್ಲೂ ಇದೆ.

More from Filmibeat

English summary
Darshan Wife Vijaylakshmi Watched Kranti Movie Video Goes Viral,Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X