India vs Australia: ವಿಶ್ವ ಕಪ್ ಫೈನಲ್ ಪಂದ್ಯ ಆರಂಭಕ್ಕೂ ಮುನ್ನ ಸ್ಟಾರ್ ಸ್ಟೋರ್ಟ್ಸ್ ಕನ್ನಡದಲ್ಲಿ ದಾಸನ ದರ್ಶನ..!
ಕ್ರಿಕೆಟ್ ವಿಶ್ವಕಪ್ 2023 ಅಂತಿಮ ಹಂತಕ್ಕೆ ಬಂದು ನಿಂತಿದೆ. ಇಂದು (ನವೆಂಬರ್ 19) ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಫೈನಲ್ ಪಂದ್ಯ ನಡೆಯುತ್ತಿದೆ. ಈ ಸಂಬಂಧ ಇಡೀ ಪಂದ್ಯದಲ್ಲಿ ಯಾರು ಗೆಲ್ಲುತ್ತಾರೆ ಅನ್ನೋದನ್ನು ಇಡಿ ವಿಶ್ವವೇ ಎದುರು ನೋಡುತ್ತಿದೆ. ಭಾರತದಾದ್ಯಂತ ಈ ಕ್ರಿಕ್ರೆಟ್ ಪಂದ್ಯ ನೋಡುವುದಕ್ಕೆ ಕ್ರೇಜ್ ಹೆಚ್ಚಾಗಿದೆ.
ಭಾರತದ ಮತ್ತು ಆಸ್ಟ್ರೇಲಿಯಾ ನಡುವಿನದ್ದು ಹೈ ವೋಲ್ಟೇಜ್ ಪಂದ್ಯ ಅನ್ನೋದು ಗೊತ್ತೇ ಇದೆ. ಅದೇ ಹೈ ವೋಲ್ಟೇಜ್ ಪಂದ್ಯ ನಡೆಯುವುದಕ್ಕೂ ಮುನ್ನ ಸ್ಟಾರ್ ಸ್ಪೋರ್ಟ್ಸ್ ಕನ್ನಡದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾಣಿಸಿಕೊಳ್ಳಲಿದ್ದಾರೆ. ದರ್ಶನ್ ಕ್ರಿಕೆಟ್ ವರ್ಲ್ಡ್ ಕಪ್ ಫೈನಲ್ ಪಂದ್ಯ ವೇಳೆ ತಮ್ಮ ಅಭಿಮಾನಿಗಳಿಗೆ ದರ್ಶನ್ ನೀಡಲಿದ್ದಾರೆ.

ಈಗಾಗಲೇ ಸ್ಟಾರ್ ಸ್ಟೋರ್ಟ್ಸ್ ಕನ್ನಡ ದರ್ಶನ್ ಸಂದರ್ಶನದ ಪ್ರೋಮೊವನ್ನೂ ರಿಲೀಸ್ ಮಾಡಿದೆ. ಈ ಪ್ರೋಮೊದಲ್ಲಿ ದರ್ಶನ್ ಡಿ ಬಾಸ್ ಅಂತ ಬರೆದಿರೋ ಜರ್ನಿಯನ್ನು ರಿವೀಲ್ ಮಾಡಿದ್ದಾರೆ. ಇದು ದರ್ಶನ್ ಅಭಿಮಾನಿಗಳಿಗೆ ಕಿಕ್ ಕೊಡುತ್ತಿದೆ.
ಇಂದು ಮಧ್ಯಾಹ್ನ 12 ಗಂಟೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಂದರ್ಶನ ಸ್ಟಾರ್ ಸ್ಪೋರ್ಟ್ಸ್ ಕನ್ನಡ ಹಾಗೂ ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ವೇಳೆ ದರ್ಶನ್ ಕ್ರಿಕೆಟ್ ಬಗ್ಗೆ ಮನಬಿಚ್ಚಿ ಮಾತಾಡಲಿದ್ದಾರೆ. ಇದರೊಂದಿಗೆ ಸಿನಿಮಾದ ಝಲಕ್ ಇದ್ದರೂ ಇರಬಹುದು.
ದರ್ಶನ್‌ಗೂ ಕ್ರಿಕೆಟ್ ಮೇಲೆ ಆಸಕ್ತಿ ಹೆಚ್ಚಿದೆ. ಈಗಾಗಲೇ ಸಿಸಿಎಲ್ ಅಂತಹ ಪಂದ್ಯಾವಳಿಗಳಲ್ಲಿ ಚಾಲೆಂಜಿಂಗ್ ಸ್ಟಾರ್ ಬ್ಯಾಟ್ ಹಿಡಿದು ಅಖಾಡಕ್ಕೆ ಇಳಿದಿದ್ದಾರೆ. ಇದರೊಂದಿಗೆ ಅಭಿಮಾನಿಗಳಿಗಾಗಿ ಕ್ರಿಕೆಟ್ ಅನ್ನು ಆಯೋಜಿಸಿದ್ದಾರೆ. ಅವರೊಂದಿಗೆ ಆಡಿದ್ದಾರೆ. ಹೀಗಾಗಿ ದರ್ಶನ್ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ವಿಶ್ವ ಕಪ್ ಪಂದ್ಯದ ಮೇಳೆ ಮ್ಯಾಚ್ ಬಗ್ಗೆ ಏನು ಹೇಳುತ್ತಾರೆ? ದರ್ಶನ್ ಪ್ರಿಡಿಕ್ಷನ್ ಏನು? ಅನ್ನೋದನ್ನು ತಿಳಿಯಬಹುದು.
ಈ ಹಿಂದೆ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಕೂಡ ಭಾಗವಹಿಸಿದ್ದರು. ಮುಂಬೈನಲ್ಲಿನ ಸ್ಟಾರ್ ಸ್ಪೋರ್ಟ್ಸ್ ಕನ್ನಡ ಸ್ಟುಡಿಯೋದಲ್ಲಿ ಶಿವಣ್ಣ ಭಾರತ ಹಾಗೂ ಪಾಕಿಸ್ತಾನ ತಂಡದ ನಡುವಿನ ಪಂದ್ಯಕ್ಕೆ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದರು. ಇದೇ ವೇಳೆ ತಮ್ಮ 'ಘೋಸ್ಟ್' ಸಿನಿಮಾವನ್ನು ಪ್ರಚಾರವನ್ನೂ ಮಾಡಿದ್ದರು. ಆ ಪಂದ್ಯದಲ್ಲೂ ಶಿವಣ್ಣ ಭವಿಷ್ಯ ನುಡಿದಂತೆ ಆಗಿತ್ತು.
ಇತ್ತ ಕನ್ನಡದ ಯೂಟ್ಯೂಬ್ ಸ್ಟಾರ್ ಡಾಕ್ಟರ್ ಬ್ರೋ ಕೂಡ ಸ್ಟಾರ್ ಸ್ಟೋರ್ಟ್ಸ್ ಕನ್ನಡ ಪರವಾಗಿ ನಿರೂಪಣೆ ಮಾಡುತ್ತಿದ್ದಾರೆ. ದೇಶದ ಉದ್ದಗಲಕ್ಕೂ ಅಡ್ಡಾಡಿ ಕ್ರಿಕೆಟ್ ಕ್ರೇಜ್ ಹೇಗಿದೆ ಅನ್ನೋದನ್ನು ಕನ್ನಡದ ಜನತೆಗೆ ತೋರಿಸಿಕೊಟ್ಟಿದ್ದರು. ಸದ್ಯಕ್ಕೀಗ ಡಾಕ್ಟರ್ ಬ್ರೋ ಬೆಂಗಳೂರಿನಲ್ಲಿ ಇದ್ದು, ಕ್ರಿಕೆಟ್ ಕ್ರೇಜ್ ಬಗ್ಗೆ ವರದಿ ಮಾಡುತ್ತಿದ್ದಾರೆ. ಒಟ್ನಲ್ಲಿ ಫೈನಲ್ ಪಂದ್ಯದ ವೇಳೆ ಡಿ ಬಾಸ್ ದರ್ಶನ ಕೊಡುತ್ತಿರೋದು ಅವರ ಅಭಿಮಾನಿಗಳಿಗೆ ಕಿಕ್ ಕೊಟ್ಟಿರೋದಂತೂ ಸತ್ಯ.


Click it and Unblock the Notifications











