"ಈ ಸಿನಿಮಾದಿಂದ ದರ್ಶನ್ ಸರ್‌ಗೆ ರಾಷ್ಟ್ರ ಪ್ರಶಸ್ತಿ ಸಿಗೋದಂತೂ ಖಂಡಿತಾ"; ಸಂಗೀತ ನಿರ್ದೇಶಕ ವಿ.ಹರಿಕೃಷ್ಣ

ಇಂದು (ಡಿಸೆಂಬರ್ 23) ರೈತರ ದಿನದ ಅಂಗವಾಗಿ 'ಕಾಟೇರ' ಸಿನಿಮಾದ ಇವೆಂಟ್ ಮಂಡ್ಯದಲ್ಲಿ ನಡೆಯುತ್ತಿದೆ. ಮಂಡ್ಯದ ಜನರ ಮುಂದೆ ದರ್ಶನ್ ನಟನೆಯ 'ಕಾಟೇರ' ಸಿನಿಮಾದ ಹಾಡನ್ನು ರಿಲೀಸ್ ಮಾಡಲಾಗಿದೆ.

ಇದೇ ಸಂದರ್ಭದಲ್ಲಿ 'ಕಾಟೇರ' ಸಿನಿಮಾಗಾಗಿ ಕೆಲಸ ಮಾಡಿದ ನಟರು, ತಂತ್ರಜ್ಞರು ವೇದಿಕೆ ಮೇಲೆ ದರ್ಶನ್ ಬಗ್ಗೆ ಕೆಲವು ಇಂಟ್ರೆಸ್ಟಿಂಗ್ ಮಾಹಿತಿ ಹಂಚಿಕೊಂಡಿದ್ದಾರೆ. ಇವರಲ್ಲಿ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಈ ಸಿನಿಮಾದಲ್ಲಿ ನಟಿಸಿರೋ ದರ್ಶನ್ ಪಾತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

Darshan will get National Award for Kaatera movie said V Harikrishna

ದರ್ಶನ್ ಇದೂವರೆಗೂ ನಟಿಸಿದ 55 ಸಿನಿಮಾ ಒಂದಾದ್ರೆ, 56ನೇ ಸಿನಿಮಾ 'ಕಾಟೇರ'ನೇ ಒಂದು ಎಂದು ವಿ. ಹರಿಕೃಷ್ಣ ಅಭಿಪ್ರಾಯ ಪಟ್ಟಿದ್ದಾರೆ. ಇದೇ ವೇಳೆ ಕಾಟೇರ ಸಿನಿಮಾದಲ್ಲಿನ ನಟನೆಗಾಗಿ ದರ್ಶನ್‌ಗೆ ರಾಷ್ಟ್ರ ಪ್ರಶಸ್ತಿ ಸಿಗೋದು ಗ್ಯಾರಂಟಿ ಎಂದಿದ್ದಾರೆ. ವೇದಿಕೆ ಮೇಲೆ ಹರಿಕೃಷ್ಣ ಮಾತಿನ ಝಲಕ್ ಇಲ್ಲಿದೆ.

"ದರ್ಶನ್ ಸರ್ ನನಗೆ ಇದು 29ನೇ ಸಿನಿಮಾ ಕೊಡುತ್ತಿರೋದು. 29ನೇ ಸಿನಿಮಾವರೆಗೂ ಒಂದನ್ನು ಉಳಿಸಿಕೊಂಡು ಬಂದಿದ್ದೀನಿ. ಮೈಕ್ ಹಿಡ್ಕೊಂಡಾಗ ಮಾತಾಡೋಕೆ ಬರೋದಿಲ್ಲ. ಮೊದಲನೇ ಸಿನಿಮಾ ಬರುತ್ತಿರಲಿಲ್ಲ. 29ನೇ ಸಿನಿಮಾಗೂ ಮಾತಾಡೋಕೆ ಬರುತ್ತಿಲ್ಲ."

"ಕಾಟೇರ ಸಾಂಗ್ಸ್ ಬಗ್ಗೆ ಜನ ಹೇಳ್ತಾರೆ. ನಾನು ಹೇಳಬಾರದು. ಕಾಟೇರ ಸಿನಿಮಾ ಬಗ್ಗೆ ಇನ್ನೊಂದು ವಾರದಲ್ಲಿ ಜನ ಹೇಳಿಬಿಡ್ತಾರೆ. ಅದೂ ನಾನು ಹೇಳುವ ಅಗತ್ಯವಿಲ್ಲ. ಇಷ್ಟು ದಿನ ಜನ ಏನು 55 ಸಿನಿಮಾ ನೋಡಿದ್ದಾರೆ. ಅದು ಒಂದು ಕಡೆ, ಈ 56ನೇ ಸಿನಿಮಾ ಒಂದು ಕಡೆ ಆಗುತ್ತೆ. ಅದರಲ್ಲಿ ಯಾವುದೇ ಡೌಟು ಇಲ್ಲ."

"ಈ ಸಿನಿಮಾ ಬಗ್ಗೆ ಹೇಳುವುದೆಂದರೆ, ನಮ್ಮ ಹೆಮ್ಮೆ ದರ್ಶನ್ ಸರ್ ಈತರಹದ ಒಂದು ಸಿನಿಮಾ ಮಾಡಿರೋದು. ಹಾಗೇ ತರುಣ್ ಸುಧೀರ್ ಅವರು ಇಷ್ಟು ಚೆನ್ನಾಗಿ ದರ್ಶನ್ ಸರ್ ಅವರನ್ನು ಪ್ರೆಸೆಂಟ್ ಮಾಡಿದ್ದಾರೆ. ಒಂದಂತೂ ಎಲ್ಲಾ ಕನ್ನಡ ಜನತೆಗೆ ಹೇಳುವುದಕ್ಕೆ ಇಷ್ಟ ಪಡುತ್ತೇನೆ. ಈ ಸಿನಿಮಾದಲ್ಲಿ ದರ್ಶನ್ ಸರ್‌ಗೆ ರಾಷ್ಟ್ರ ಪ್ರಶಸ್ತಿ ಸಿಗೋದಂತೂ ಖಂಡಿತಾ. ಅದು ಯಾವುದೇ ಕಾರಣಕ್ಕೂ ಮಿಸ್ ಆಗೋದಿಲ್ಲ. ನಾನು ಅವರ ಫ್ಯಾನ್ ಆಗಿ ಹೇಳುತ್ತಿಲ್ಲ. ಆ ಸಿನಿಮಾದಲ್ಲಿ ನಟನೆ ನೋಡಿ ಹೇಳುತ್ತಿದ್ದೇನೆ."

"ಆ ಕಮಿಟಿಗೆ ಇಲ್ಲಿಂದನೇ ಹೇಳುತ್ತಿದ್ದೇನೆ. ಈ ಸಿನಿಮಾದಲ್ಲಿ ದರ್ಶನ್ ಎರಡು ಪಾತ್ರ ಮಾಡಿದ್ದಾರೆ. ಎರಡನೇಯದ್ದು ವಯಸ್ಸಾಗಿರೋದು ಯಾರು ಅಂತ ಹುಡುಕುವುದು ಬೇಡ. ಅದೂ ದರ್ಶನ್ ಸರ್ ಅವರೇ. ದಯವಿಟ್ಟು ಗಮನದಲ್ಲಿಟ್ಟು ನೋಡಿ. ಈ ಸಿನಿಮಾವನ್ನು ಹರಸಿ" ಎಂದು ವಿ ಹರಿಕೃಷ್ಣ ಮನವಿ ಮಾಡಿಕೊಂಡಿದ್ದಾರೆ.

More from Filmibeat

English summary
V Harikrishna says Darshan will get National award for Kaatera:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X