Darshan: "ಅರಣ್ಯ ಉಳಿಸಿ.. ಪ್ರಾಣಿ ರಕ್ಷಿಸಿ" ಎಂದು ಕರೆ: ಚಾಲೆಂಜಿಂಗ್ ಸ್ಟಾರ್ ಹೊಸ ಫೋಟೊ ವೈರಲ್

ಇಂದು(ಮಾರ್ಚ್ 21) ವಿಶ್ವ ಅರಣ್ಯ ದಿನ. ಜಗತ್ತಿನ ಮೂಲೆ ಮೂಲೆಯಲ್ಲೂ ಅರಣ್ಯ ದಿನವನ್ನು ಆಚರಣೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿಶ್ವ ಅರಣ್ಯ ದಿನಕ್ಕೆ ಶುಭ ಹಾರೈಸಿಸಿದ್ದಾರೆ.

ದರ್ಶನ್‌ಗೆ ಕಾಡು-ಮೇಡು, ಪ್ರಾಣಿ-ಪಕ್ಷಿಗಳು ಅಂದರೆ ಬಲು ಪ್ರೀತಿ ಅನ್ನೋದು ಗೊತ್ತೇ ಇದೆ. ಈ ಕಾರಣಕ್ಕೆ ಕರ್ನಾಟಕದ ಅರಣ್ಯ ಇಲಾಖೆ ರಾಯಭಾರಿಯನ್ನಾಗಿ ಮಾಡಿತ್ತು. ಅಲ್ಲದೆ ಇತ್ತೀಚೆಗೆ ಕೃಷಿ ಇಲಾಖೆಗೂ ಚಾಲೆಂಜಿಂಗ್ ಸ್ಟಾರ್ ರಾಯಭಾರಿಯಾಗಿ ಆಯ್ಕೆ ಆಗಿದ್ದರು.

Darshan Wished International Forest Day: Called Save Forest Save Animals

ವಿಶ್ವ ಅರಣ್ಯ ದಿನದ ಅಂಗವಾಗಿ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಟ್ವೀಟ್ ಮಾಡಿದ್ದಾರೆ. "ವಿಶ್ವ ಅರಣ್ಯ ದಿನ, ಕಾಡು ಬೆಳೆಸಿ ನಾಡು ಉಳಿಸಿ, ಹಸಿರೇ ಉಸಿರು.. ಮರ ಇದ್ದರೆ ಮಳೆ.. ಮಳೆ ಇದ್ದರೆ ಬೆಳೆ.. ಬೆಳೆ ಇದ್ದರೆ ನಮ್ಮೆಲ್ಲರ ಬದುಕು. ಅರಣ್ಯ ಬೆಳೆಸಿ ಉಳಿಸುವುದು ನಮ್ಮೆಲ್ಲರ ಕರ್ತವ್ಯ" ಎಂದು ದರ್ಶನ್ ಟ್ವೀಟ್ ಮಾಡಿದ್ದಾರೆ.

ದರ್ಶನ್ ಸಿನಿಮಾದಿಂದ ಬಿಡುವು ಸಿಕ್ಕಾಗಲೆಲ್ಲಾ ಕಾಡು ಮೇಡು ಸುತ್ತುತ್ತಲೇ ಇರುತ್ತಾರೆ. ಅರಣ್ಯ ಸಿಬ್ಬಂದಿ ಜೊತೆ ಚರ್ಚೆ, ಸ್ನೇಹಿತರೊಂದಿಗೆ ಫೋಟೊಗ್ರಫಿ ಮಾಡುತ್ತಾರೆ. ಸದ್ಯ ಇದೇ ಗೆಟಪ್‌ನಲ್ಲಿಯೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಫೋಸ್ ಕೊಟ್ಟು ವಿಶ್ ಮಾಡಿದ್ದಾರೆ. ಇದು ದರ್ಶನ್ ಅಭಿಮಾನಿಗಳಿಗೆ ಸಖತ್ ಖುಷಿಕೊಟ್ಟಿದೆ.

ಜಗತ್ತಿನಾದ್ಯಂತ ಪ್ರತಿ ಮಾರ್ಚ್ 21ರಂದು ವಿಶ್ವ ಅರಣ್ಯ ದಿನವನ್ನಾಗಿ ಆಚರಣೆ ಮಾಡಲಾಗುತ್ತೆ. ಈ ದಿನದ ಪ್ರಮುಖ ಉದ್ದೇಶ ಏನಂದ್ರೆ, ಅರಣ್ಯ ಇಂದಿನ ಪೀಳಿಗೆಗೆ ಸಿಕ್ಕಂತೆ ಮುಂದಿನ ಪೀಳಿಗೂ ಸಿಗಬೇಕು. ಹೀಗಾಗಿ ಅರಣ್ಯ ಸಂರಕ್ಷಣೆ ಮಾಡಬೇಕು ಅನ್ನುವ ಉದ್ದೇಶದಿಂದ ವಿಶ್ವದಾದ್ಯಂತ ಈ ದಿನ ವಿಶ್ವ ಅರಣ್ಯ ದಿನವನ್ನಾಗಿ ಆಚರಣೆ ಮಾಡಲಾಗುತ್ತೆ.

ವಿಶ್ವಸಂಸ್ಥೆ ಸಾಮಾನ್ಯ ಅಧಿಧಿವೇಶನದಲ್ಲಿ ನಡೆದ ಚರ್ಚೆಯಲ್ಲಿ ಅರಣ್ಯ ದಿನವನ್ನಾಗಿ ಆಚರಿಸುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗಿತ್ತು. 1971ರ ನವೆಂಬರ್‌ನಲ್ಲಿ ಆಹಾರ ಮತ್ತು ಕೃಷಿ ಸಂಘಟನೆಯ 16ನೇ ಸಮ್ಮೇಳನದಲ್ಲಿ ಈ ನಿರ್ಣಯ ಅಂಗೀಕಾರ ಮಾಡಲಾಯಿತು. ಹಾಗೇ 2012ರಲ್ಲಿ ಈ ದಿನಕ್ಕೆ ಹೆಚ್ಚಿನ ಮಹತ್ವನ್ನು ನೀಡಲಾಯಿತು. ಇದೇ ವೇಳೆ ಅಂತಾರಾಷ್ಟ್ರೀಯ ಅರಣ್ಯ ಸಂಶೋಧನಾ ಕೇಂದ್ರ ವಿಶೇಷ ಕಾರ್ಯಕ್ರಮಗಳನ್ನು ಮಾಡಿ,ಮಾರ್ಚ್‌ 21ರಂದು ವಿಶ್ವ ಅರಣ್ಯ ದಿನ ಆಚರಿಸಲು ನಾಂದಿ ಹಾಡಿತ್ತು.

ಇಡೀ ವಿಶ್ವದಲ್ಲಿ ಅದೆಷ್ಟೋ ಸಸ್ಯ ರಾಶಿಗಳು, ಪ್ರಾಣಿ ಪಕ್ಷಿಗಳ ತಾಣ ಅರಣ್ಯ. ಇಲ್ಲೊಂದು ಅದ್ಭುತ ಲೋಕವೇ ಇದೆ. ಆದರೆ, ಈ ಆಧುನಿಕ ಯುಗದಲ್ಲಿ ಮಾನವ ತನ್ನ ಸ್ವಾರ್ಥಕ್ಕಾಗಿ ಅರಣ್ಯಕ್ಕೆ ಕೊಡಲಿ ಹಾಕುತ್ತಿದ್ದಾನೆ. ಹೀಗಾಗಿ ಸೆಲೆಬ್ರೆಟಿಗಳ ಮೂಲವೂ ಅರಣ್ಯ ಇಲಾಖೆ ಜಾಗೃತಿ ಮೂಡಿಸಲು ಮುಂದಾಗುತ್ತೆ. ಹಾಗೇ ಪ್ರಕೃತಿ ಪ್ರಿಯರು, ಅರಣ್ಯ ಇಲಾಖೆಯ ರಾಯಬಾರಿಯೂ ಆಗಿರುವ ದರ್ಶನ್ ಜನತೆಗೆ ಕಾಡು ಹಾಗೂ ಪ್ರಾಣಿಗಳ ರಕ್ಷಣೆಗೆ ಕರೆ ನೀಡಿದ್ದಾರೆ.

More from Filmibeat

English summary
Darshan Wished International Forest Day: Called Save Forest Save Animals. Challenging Star Darshan Loves Animal And cares forests. His New photos goes viral. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X