ದರ್ಶನ್‌ ಖಾಸಗಿ ಮೇಕಪ್‌ ಆರ್ಟಿಸ್ಟ್ ನಿಧನ; ಭಾವುಕರಾದ ದಾಸ

ಚಾಲೆಂಜಿಂಗ್‌ ಸ್ಟಾರ್ ದರ್ಶನ್‌ ಇಂದು (ಮೇ 20) ಸುದ್ದಿಯಲ್ಲಿದ್ದಾರೆ. ರೇಣುಕಾಸ್ವಾಮಿ ಕೇಸ್ ವಿಚಾರವಾಗಿ ಕೋರ್ಟ್‌ಗೆ ದರ್ಶನ್ ಹಾಗೂ ಪವಿತ್ರಾ ಗೌಡ ಇಬ್ಬರೂ ಹಾಜರಾಗಿದ್ದರು. ಈ ವೇಳೆ ರೇಣುಕಾಸ್ವಾಮಿ ಆರೋಪಿಗಳ ವಿಚಾರಣೆಗೆ ಹಾಜರಾಗಲು ಹೆಚ್ಚಿನ ಕಾಲಾವಕಾಶ ಕೋರಿದ್ದರು. ಈ ಹಿನ್ನೆಲೆಯಲ್ಲಿ ಅರ್ಜಿಯ ವಿಚಾರಣೆಯನ್ನು ಜುಲೈ 10 ಕ್ಕೆ ಮುಂದೂಡಲಾಗಿದೆ.

ದರ್ಶನ್‌ಗೆ ಕೋರ್ಟ್‌ಗೆ ಹಾಜರಾಗಿದ್ದು ಒಂದು ವಿಷಯವಾದರೆ, ಇನ್ನೊಂದು ಅವರ ಖಾಸಗಿ ಮೇಕಪ್‌ ಆರ್ಟಿಸ್ಟ್ ಅವರನ್ನು ಕಳೆದು ಕೊಂಡಿದ್ದಾರೆ. ದರ್ಶನ್‌ ಜೊತೆ ಸುಮಾರು 25 ವರ್ಷಗಳಿಂದ ಮೇಕಪ್‌ ಆರ್ಟಸ್ಟ್ ಆಗಿ ಕೆಲಸ ಮಾಡುತ್ತಿದ್ದ ಮೇಕಪ್ ಆರ್ಟಿಸ್ಟ್ ಹೊನ್ನೆ ಗೌಡ ಇಂದು ನಿಧನರಾಗಿದ್ದಾರೆ. ಈ ದು:ಖದ ವಿಷಯವನ್ನು ದರ್ಶನ್ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Darshan wrote emotional note on personal makeup man Honnegowda demise

ಕೋರ್ಟ್‌ಗೆ ಹಾಜರಾಗಿ ಹೊರ ಬರುತ್ತಿದ್ದಂತೆ ಅವರಿಗೆ ತಮ್ಮ ಮೇಕಪ್ ಮ್ಯಾನ್ ಅಗಲಿದ ವಿಷಯ ತಿಳಿದಿತ್ತು. ತಮ್ಮ ಪ್ರೀತಿಯ ಮೇಕಪ್ ಮ್ಯಾನ್ ನಿಧನ ವಿಷಯ ತಿಳಿಯುತ್ತಿದ್ದಂತೆ ಅವರ ಜೊತೆಗಿನ ಫೋಟೋವನ್ನು ಹಂಚಿಕೊಂಡು, ಭಾವನಾತ್ಮಕವಾಗಿ ಫೋಟೋವನ್ನು ಹಂಚಿಕೊಂಡಿದ್ದಾರೆ. ಅವರ ಕುಟುಂಬಕ್ಕೆ ಸಂತಾಪವನ್ನು ಸೂಚಿಸಿದ್ದಾರೆ. ಹಾಗಿದ್ದರೆ, ದರ್ಶನ್ ಏನು ಹೇಳಿದ್ದಾರೆ ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.

ದರ್ಶನ್ ಮೇಕಪ್ ಮ್ಯಾನ್ ನಿಧನ

ದರ್ಶನ್ ನಟಿಸಿದ ಹಲವು ಸಿನಿಮಾಗಳಿಗೆ ಹೊನ್ನೆ ಗೌಡರು ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ಮಾಡಿದ್ದರು. ಮೇಕಪ್ ಕ್ಷೇತ್ರದಲ್ಲಿ ಅವರ ಸೇವೆಯನ್ನು ದರ್ಶನ್ ನೆನಪಿಸಿಕೊಂಡಿದ್ದಾರೆ. ಅವರ ನಗು ಮುಖದ ಸೇವೆಯನ್ನು ಎಂದಿಗೂ ಮರೆಯುವುದಕ್ಕೆ ಆಗುವುದಿಲ್ಲ ಎಂದು ಹೇಳಿದ್ದಾರೆ. ಹಲವು ಸಿನಿಮಾಗಳಿಂದ ಜೊತೆಯಲ್ಲಿದ್ದು ಕೆಲಸ ಮಾಡಿದ್ದ ಹೊನ್ನೆ ಗೌಡರ ಅಗಲಿಕೆಯಿಂದ ಶೋಕ ಆವರಿಸಿದೆ ಎಂದು ದರ್ಶನ್ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಏನು ಹೇಳಿದ್ದಾರೆ ದರ್ಶನ್?

"25 ವರ್ಷಗಳಿಂದ ನನ್ನೊಂದಿಗೆ ಕೆಲಸ ಮಾಡಿದ ಪ್ರಿಯ ಮೇಕಪ್ ಆರ್ಟಿಸ್ಟ್ ಹೊನ್ನೆ ಗೌಡ್ರು ಇಂದು ಅಗಲಿದ ಸುದ್ಧಿ ನಮ್ಮೆಲ್ಲರನ್ನು ಶೋಕದಲ್ಲಿ ಮುಳುಗಿಸಿದೆ. ಅವರ ಕಲೆ, ನಿಷ್ಠೆ ಮತ್ತು ನಗುಮೊಗದ ಸೇವೆಯನ್ನು ಎಂದಿಗೂ ಮರೆಯಲಾಗದು. ಈ ದುಃಖದ ಸಮಯದಲ್ಲಿ ದೇವರು ಅವರ ಕುಟುಂಬಕ್ಕೆ ನೋವನ್ನು ನುಂಗುವ ಶಕ್ತಿ ನೀಡಲಿ. ಹೊನ್ನೆ ಗೌಡರ ಆತ್ಮಕ್ಕೆ ಶಾಂತಿ ದೊರೆಯಲಿ. ಓಂ ಶಾಂತಿ" ಎಂದು ದರ್ಶನ್ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ದರ್ಶನ್‌ ವಿಚಾರಣೆ ಏನಾಯ್ತು?

ರೇಣುಕಾ ಸ್ವಾಮಿ ಪ್ರಕರಣದ ಆರೋಪಿಗಳಾಗಿರುವ ದರ್ಶನ್ ಹಾಗೂ ಪವಿತ್ರಾ ಗೌಡ ಇಬ್ಬರೂ ಇಂದು ನ್ಯಾಯಾಲಯಕ್ಕೆ ಹಾಜರಾಗಿದ್ದರು. ಈ ವೇಳೆ ಪವಿತ್ರಾ ಗೌಡ ಅವರಿಂದ ದರ್ಶನ್ ಅಂತರವನ್ನು ಕಾಯ್ದುಕೊಂಡಿದ್ದರು. ಆದರೆ, ಆರೋಪಿಗಳ ಸಂಖ್ಯೆಗಳ ಆಧಾರದ ಹಿನ್ನೆಲೆಯಲ್ಲಿ ಪವಿತ್ರಾ ಗೌಡ ಪಕ್ಕದಲ್ಲಿಯೇ ಬಂದು ನಿಲ್ಲುವಂತೆ ದರ್ಶನ್‌ಗೆ ನ್ಯಾಯಾಧೀಶರು ಸೂಚಿಸಿದ್ದರು. ಆನಂತರ ಆರೋಪಿಗಳ ವಿಚಾರಣೆಗೆ ಹಾಜರಾಗುವುದಕ್ಕೆ ಕಾಲಾವಕಾಶ ಕೇಳಿದ್ದರಿಂದ ಜಲೈ 10ಕ್ಕೆ ವಿಚಾರಣೆಯನ್ನು ಮುಂದೂಡಲಾಗಿದೆ. ಆದರೆ, ಈ ಕೇಸ್ ವಿಚಾರಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಚಾರ್ಜ್‌ಶೀಟ್ ಸಲ್ಲಿಸಿದ್ದಾಗಿಯೂ ವರದಿಯಾಗಿದೆ.

'ಡೆವಿಲ್' ಶೂಟಿಂಗ್ ಎಲ್ಲಿಗೆ ಬಂತು?

ರೆಗ್ಯೂಲರ್ ಜಾಮೀನ ಮೇಲೆ ಜೈಲಿನಿಂದ ಹೊರ ಬರುತ್ತಿದ್ದಂತೆ 'ಡೆವಿಲ್' ಸಿನಿಮಾದ ಶೂಟಿಂಗ್ ಅನ್ನು ಆರಂಭಿಸಿದ್ದರು. ಜೈಲಿಂದ ಬಂದ್ಮೇಲೆ ಎರಡು ದರ್ಶನ್ ಡೆವಿಲ್ ಶೂಟಿಂಗ್ ಅನ್ನು ಮತ್ತೆ ಆರಂಭಿಸಿದ್ದರು. ಮೈಸೂರಿನಲ್ಲಿ ನಾಲ್ಕು ದಿನಗಳ ಶೂಟಿಂಗ್ ನಡೆದರೆ, ಇನ್ನೊಂದು ಶೆಡ್ಯೂಲ್ ರಾಜಸ್ಥಾನದಲ್ಲಿ ಮಾಡಲಾಗಿದೆ. ಅದಾದ ಬಳಿಕ ದರ್ಶನ್ ಮತ್ತೆ ಡೆವಿಲ್ ಶೂಟಿಂಗ್‌ ಬಗ್ಗೆ ಸುಳಿವು ಇಲ್ಲ. ಇತ್ತೀಚೆಗೆ ಪತ್ನಿಯೊಂದಿಗೆ ದರ್ಶನ್ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದರು. ಆ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು.

More from Filmibeat

Read more about: darshan sandalwood death
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X