Darshan Birthday:ಫ್ಯಾನ್ಸ್ ನಿಯಂತ್ರಣಕ್ಕೆ 200 ಮಂದಿ ಬೌನ್ಸರ್ಸ್.. 200 ವಾಲೆಂಟಿಯರ್ಸ್.. 300 ಮಂದಿ ಪೊಲೀಸ್!

ಚಾಲೆಂಜಿಂಗ್‌ ಸ್ಟಾರ್ ದರ್ಶನ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಅಭಿಮಾನಿಗಳು ಮುಳುಗಿ ಹೀಗಿದ್ದಾರೆ. ಸಂಜೆಯಾಗುತ್ತಲೇ ಡಿ ಬಾಸ್ ಫ್ಯಾನ್ಸ್ ಮನೆಯತ್ತ ಧಾವಿಸುತ್ತಿದ್ದಾರೆ. ಮನೆ ಮುಂದೆ ತಳಿರು ತೋರಣಗಳು ಸಿಂಗಾರಗೊಂಡಿವೆ. ಪೆಂಟಲ್‌ ಹಾಕಿ ಹೂವಿನಿಂದ ಸಿಂಗಾರ ಮಾಡಲಾಗಿದೆ. ಬ್ಯಾರಿಕೇಡ್‌ಗಳನ್ನು ಹಾಕಲಾಗುತ್ತಿದೆ. ಸರದಿ ಸಾಲಿನಲ್ಲಿ ನಿಂತು ನೆಚ್ಚಿನ ನಟನಿಗೆ ವಿಶ್ ಮಾಡುವುದಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ.

ಫೆಬ್ರವರಿ 16 ದರ್ಶನ್ 47ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಈ ಸಂಬಂಧ ದೂರದೂರುಗಳಿಂದ ಬರುತ್ತಿರುವ ಅಭಿಮಾನಿಗಳಿಗಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಕಳೆದ 15 ದಿನಗಳಿಂದ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಒಂದು ದಿನ ಮುನ್ನವೇ ದರ್ಶನ್ ಮನೆ ಮುಂದೆ ಅಭಿಮಾನಿಗಳು ಜಮಾಯಿಸುವುದಕ್ಕೆ ಶುರುವಿಟ್ಟುಕೊಂಡಿದ್ದಾರೆ.

Darshans 47th birthday: seven hundred people deployed for security

ಪ್ರತಿ ವರ್ಷದಂತೆ ಮಧ್ಯರಾತ್ರಿಯಿಂದಲೇ ಅಭಿಮಾನಿಗಳನ್ನು ಭೇಟಿ ಮಾಡುವುದಕ್ಕೆ ದರ್ಶನ್ ಕಾತುರದಿಂದ ಕಾಯುತ್ತಿದ್ದಾರೆ. ಈಗಾಗಲೇ ಕೇಕ್, ಹಾರಗಳನ್ನು ತರದಂತೆ ದರ್ಶನ್ ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ಹಾಗಿದ್ದರೆ, ದರ್ಶನ್ ಬರ್ತ್‌ಡೇಗೆ ಅವರ ಆಪ್ತರು ಏನೆಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ? ಸೆಕ್ಯೂರಿಟಿ ವ್ಯವಸ್ಥೆ ಹೇಗಿದೆ? ಈ ಎಲ್ಲಾ ವಿಷಯಗಳನ್ನು ತಿಳಿಯಲು ಮುಂದೆ ಓದಿ.

ಚಾಲೆಂಜಿಂಗ್ ಸ್ಟಾರ್ ಬರ್ತ್‌ಡೇಯಲ್ಲಿ ಅವರ ಅಭಿಮಾನಿಗಳನ್ನು ನಿಯಂತ್ರಿಸುವುದೇ ಅತೀ ದೊಡ್ಡ ಸವಾಲು. ಅಲ್ಲದೆ ಊಟದ ವ್ಯವಸ್ಥೆ ಸೇರಿದಂತೆ ಬೇರೆ ಬೇರೆ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಿದೆ. ಹೀಗಾಗಿ ಸುಮಾರು 15 ದಿನಗಳಿಂದ ದರ್ಶನ್ ಸಂಗಡಿಗರು ಹುಟ್ಟುಹಬ್ಬಕ್ಕೆ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಇಂದು (ಫೆಬ್ರವರಿ 15) ರಾತ್ರಿ 11.30ರ ಬಳಿಕ ದರ್ಶನ್ ಅವರ ಅಭಿಮಾನಿಗಳನ್ನು ಭೇಟಿ ಮಾಡಲಿದ್ದಾರೆ.

ಇಂದು (ಫೆಬ್ರವರಿ 15) ಮತ್ತು ನಾಳೆ (ಫೆಬ್ರವರಿ 16) ಎರಡೂ ದಿನ ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಹರಿದು ಬರುವ ಸಾಧ್ಯತೆಯಿದೆ. ಈ ಕಾರಣಕ್ಕೆ ಅಭಿಮಾನಿಗಳನ್ನು ನಿಯಂತ್ರಿಸುವುದಕ್ಕೆ ಸುಮಾರು 200 ಮಂದಿ ಬೌನ್ಸರ್‌ಗಳನ್ನು ಕರೆಸಲಾಗುತ್ತಿದೆ. ಹಾಗೇ 200ಕ್ಕೂ ಅಧಿಕ ಮಂದಿ ವಾಲೆಂಟಿಯರ್ಸ್ ಇರುತ್ತಾರೆ. ಇವರ ಜೊತೆ 300 ಮಂದಿ ಪೊಲೀಸರ ನಿಯೋಜನೆ ಮಾಡಲಾಗಿದೆ. ಹೀಗಾಗಿ ಒಟ್ಟು 700 ರಿಂದ 800 ಮಂದಿ ಅಭಿಮಾನಿಗಳನ್ನು ನಿಯಂತ್ರಿಸಲಿದ್ದಾರೆ.

Darshans 47th birthday: seven hundred people deployed for security

ಇನ್ನು ಫೆಬ್ರವರಿ 16 ದರ್ಶನ್ ಹುಟ್ಟುಹಬ್ಬದ ದಿನದಂದು ಸುಮಾರು ಅಭಿಮಾನಿಗಳಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಒಂದು ಅಂದಾಜಿನ ಪ್ರಕಾರ, ರಾಜ್ಯಾದ್ಯಂತ ಸುಮಾರು 60 ರಿಂದ 70 ಸಾವಿರ ಮಂದಿ ಈ ಹುಟ್ಟುಹಬ್ಬದ ಸಮಾರಂಭದಲ್ಲಿ ಭಾಗವಹಿಸುವ ಸಾಧ್ಯತೆಯಿದೆ. ಹೀಗಾಗಿ ಅವರೆಲ್ಲರಿಗೂ ಮೈದಾನದಲ್ಲಿ ಪೆಂಡಲ್ ಹಾಕಿಸಿ ಊಟಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ.

ಊಟದ ವ್ಯವಸ್ಥೆ ಜೊತೆಗೆ ಪಾನಕ, ಮಜ್ಜಿಗೆ, ನೀರು ಕೊಡುವುದಕ್ಕೆ ವ್ಯವಸ್ಥಿತ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಇದೇ ದಿನ ರಕ್ತದಾನ ಶಿಬಿರ ಕೂಡ ನಡೆಯಲಿದೆ. ರಾತ್ರಿ 11.30 ರಿಂದ ದರ್ಶನ್ ಅವರ ಅಭಿಮಾನಿಗಳಿಗೆ ಸಿಗುತ್ತಾರೆ. ಫ್ಯಾನ್ಸ್ ಇರೋವರೆಗೂ ಅವರೊಂದಿಗೆ ಇರುತ್ತಾರೆ. ಹೆಚ್ಚು ಕಡಿಮೆ 3 ರಿಂದ 4 ಗಂಟೆವರೆಗೂ ಫ್ಯಾನ್ಸ್ ಜೊತೆ ಇರುತ್ತಾರೆ. ಹಾಗೇ ಬೆಳಗ್ಗೆ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಬಡೆದು ಬರುತ್ತಾರೆ. ನಂತರ ಬೆಳಗ್ಗೆ 8.30ರಿಂದ ಸಂಜೆ 4 ಗಂಟೆವರೆಗೂ ಅಭಿಮಾನಿಗಳೊಂದಿಗೆ ಇರುತ್ತಾರೆ. ಆ ನಂತ್ರ ಬೇರೊಂದು ಕಾರ್ಯಕ್ರಮಕ್ಕೆ ಒಪ್ಪಿಕೊಂಡಿರುವುದರಿಂದ ಆ ಮೇಲೆ ಅಭಿಮಾನಿಗಳಿಗೆ ಸಿಗುವುದು ಅನುಮಾನ.

More from Filmibeat

English summary
Darshan's 47th Birthday:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X